spot_img
spot_img

ಅಂಕಲಗಿ ಸಾಹಿತ್ಯ ಸಮ್ಮೇಳನದಲ್ಲಿ ಕಲಾವಿದರ ಕಡೆಗಣನೆ

Must Read

- Advertisement -

 ನಮ್ ಬೆಳಗಾವಿ ಹಾಡಿನ ಹುಡುಗನಿಗೆ ಆಹ್ವಾನ ಕೂಡ ಇಲ್ಲ ; ಮಲ್ಲಿಕಾರ್ಜುನ ಚೌಕಾಶಿ ವಿಷಾದ

ಗೋಕಾಕ ತಾಲೂಕಿನ ಅಂಕಲಗಿಯಲ್ಲಿ ನಡೆಯುತ್ತಿರುವ ಗೋಕಾಕ ತಾಲೂಕಾ ಸಾಹಿತ್ಯ ಸಮ್ಮೇಳನದಲ್ಲಿ ಸ್ಥಳೀಯ ಕಲಾವಿದರನ್ನು ಸಂಪೂರ್ಣ ಕಡೆಗಣಿಸಲಾಗಿದೆ ಎಂಬ ಅಪಸ್ವರಗಳು ಎದ್ದಿದ್ದು ಕನ್ನಡ ಜಾತ್ರೆಯ ಸಂಭ್ರಮಕ್ಕೆ ಕಪ್ಪು ಚುಕ್ಕೆ ತಗುಲಿದಂತಾಗಿದೆ.

ಅಪರೂಪಕ್ಕೆ ಕನ್ನಡ ಸಾಹಿತ್ಯದ ಅಭಿಮಾನಿಗಳನ್ನು, ಓದುಗರನ್ನು ಒಂದುಗೂಡಿಸಿ ತಾಲೂಕಿನ ಅದರ ಜೊತೆಗೇ ನಾಡಿನ ಸಾಹಿತ್ಯಿಕ ದಿಗ್ಗಜರನ್ನು ನೆನಪಿಸಿಕೊಳ್ಳುವ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿಗಳ ಜೊತೆಗೆ ಕಲಾವಿದರನ್ನು ಸಾಂಸ್ಕೃತಿಕ ಜಗತ್ತಿಗೆ ಪರಿಚಯಿಸಬೇಕಾದದ್ದು ಸಾಹಿತ್ಯ ಸಮಾರಾಧನೆ ಕೈಗೊಂಡವರ ಜವಾಬ್ದಾರಿಯಾಗಿರುತ್ತದೆ. ಕೇವಲ ರಾಜಕಾರಣಿಗಳ ಹಿಂಬಾಲಿಸುತ್ತ ಸಾಹಿತಿ ಕಲಾವಿದರನ್ನು ಕಡೆಗಣಿಸುವುದು ತೀರಾ ವಿಷಾದಕರ ಸಂಗತಿ.

- Advertisement -

ಪ್ರಸ್ತುತ ಅಂಕಲಗಿಯಲ್ಲಿ ನಡೆಯುತ್ತಿರುವ ಗೋಕಾಕ ತಾಲೂಕಾ ಸಾಹಿತ್ಯ ಸಮ್ಮೇಳನದಲ್ಲಿ  ‘ನಮ್ ಬೆಳಗಾವಿ ನಮ್ ಬೆಳಗಾವಿ’ ಎಂಬ ಮೈನವಿರೆಳಿಸುವ ಹಾಡಿ ಮೂಲಕ ಬೆಳಗಾವಿ ನೆಲದ ಬಗೆಗಿನ ಅಭಿಮಾನವನ್ನು ಪುಟಿದೆಬ್ಬಿಸಿದ್ದ ಸ್ಯಾಕ್ಸೋಫೋನ್ ಕಲಾವಿದ ಅಶೋಕ ಭಜಂತ್ರಿಯವರಿಗೆ ಸಮ್ಮೇಳನಕ್ಕೆ ಆಹ್ವಾನ ಕೂಡ ನೀಡದೆ ಅವಮಾನಿಸಲಾಗಿದೆ

ಬೆಳಗಾವಿಯ ರಾಜ್ಯೋತ್ಸವ ಕಾರ್ಯಕ್ರಮ ಅಂದರೆ ಸಾಕು ನಮ್ ಬೆಳಗಾವಿ, ನಮ್ ಬೆಳಗಾವಿ ಎಂಬ ಹಾಡು ಎಲ್ಲ ಕನ್ನಡಿಗರನ್ನು ಒಂದುಗೂಡಿಸುತ್ತದೆ. ಈ ಹಾಡು ಮಾಡಿದವನನ್ನು ಝಾಲಾಛ್ ಪಾಹಿಜೆ ಪುಂಡರು ಹಾನಿ ಮಾಡುವ ಉದ್ದೇಶದಿಂದ ಹುಡುಕದಿರುವ ಜಾಗಗಳಿಲ್ಲ. ಅಂಥ ಕಠಿಣ ಸಮಯದಲ್ಲಿ ತಾಯಿ ಚಾಮುಂಡೇಶ್ವರಿಯ ಆಶೀರ್ವಾದದಿಂದ ಬಚಾವಾದ ಯುವಕ ಈ ಅಶೋಕ ಭಜಂತ್ರಿ. ಇವರಿಗೆ ಸರ್ಕಾರ ಹಾಗೂ ಅನೇಕ ಸಂಘಸಂಸ್ಥೆಗಳು ಬೆಳಗಾವಿ ಕೋಗಿಲೆ. ತೇಜ ರತ್ನ, ವಿಶ್ವ ಜೋತ್ಯಿ, ರೇಣುಕ ಶ್ರೀ, ನಮ್ಮೂರ ಹೈದ, ಗೋಲ್ಡನ್ ಇಂಡಿಯನ್ ಆಫ್ ದಿ ಇಯರ್, ಕಾಯಕ ಶ್ರೀ ಸೇರಿದಂತೆ ಅನೇಕ ಪ್ರಶಸ್ತಿ ನೀಡಿ ಗೌರವಿಸಿವೆ. ಇಂಥ ಕಲಾವಿದನನ್ನು ಅಂಕಲಗಿಯಲ್ಲಿ ನಡೆಯುತ್ತಲಿರುವ ತಾಲೂಕಾ ಸಾಹಿತ್ಯ ಸಮ್ಮೇಳನದಲ್ಲಿ ಆಹ್ವಾನ ನೀಡದೆ ಕಡೆಗಣಿಸಲಾಗಿದೆ ಎಂದು ಗೋಕಾಕದ ವಕೀಲ ಹಾಗೂ ಸಾಮಾಜಿಕ ಕಾರ್ಯಕರ್ತ ಮಲ್ಲಿಕಾರ್ಜುನ ಚೌಕಾಶಿ ವಿಷಾದ ವ್ಯಕ್ತಪಡಿಸಿದ್ದಾರೆ

ಅಶೋಕ ಭಜಂತ್ರಿ ತಳ ಸಮುದಾಯದ ಬಡ ಕುಟುಂಬದ ಒಬ್ಬ ಯುವಕ ಆತನ ಕುಟುಂಬ ಶಹನಾಯಿ ನುಡಿಸುತ್ತಾ ತಮ್ಮ ಜೀವನ ನಡೆಸುತಿದ್ದರು. ಆಧುನಿಕತೆಯ ಭರಾಟೆಯಲ್ಲಿ ಅಂತಹ ಬಡ ಕಲಾವಿದರನ್ನ ಕರೆಯಿಸುವುದು ಬಿಟ್ಟು ಆಧುನಿಕ ಸಂಗೀತ ವಾದ್ಯಗಳತ್ತ ಹೊರಳಿ ಅವರನ್ನು ಕರೆಸುವುದನ್ನು ನಿಲ್ಲಿಸಿದೆವು. ಯಾವ ಶಹನಾಯಿಯ ಮಧುರ ಸಂಗೀತದಡಿಯಲ್ಲಿ ನಮ್ಮ ಅಪ್ಪ ಅಜ್ಜ ಮುತ್ತಜ್ಜ ತಮ್ಮ ಮದುವೆ ಸೇರಿದಂತೆ ಊರಿನ ಪ್ರತಿ ಜಾತ್ರೆ ಹಬ್ಬ ಹರಿದಿನಗಳನ್ನು ಕಳೆಗಟ್ಟಿಸುವದರೊಂದಿಗೆ ಅವಿಸ್ಮರಣೀಯ ಕ್ಷಣ ಕಳೆಯುವುದಕ್ಕೆ ಕಾರಣರಾಗಿದ್ದರೋ ಅವರನ್ನೆ ಮರೆಯಾಗುವ ಅಶೋಕನಂತ ಯುವಕ ಶಹನಾಯಿ ಊಟ ಹಾಗೂ ಬದುಕಿನ ಬಂಡಿ ಎಳೆಯಲು ಸಾಧ್ಯವಿಲ್ಲ ಎಂದಾಯಿತೊ ಆಗಲೆ ಅಪ್ಪ ಹಾಕಿದ ಆಲದ ಮರ ಅಂತ ಶಹನಾಯಿಗೆ ಜೋತು ಬೀಳದೆ ಅಧುನಿಕ ಸ್ಯಾಕ್ಸೋಪೋನ್ ಹಿಡಿದು ಇಂದು ಸಂಗೀತ, ಚಿತ್ರರಂಗ, ಹಂಸಲೇಖ, ಸಾಧುಕೋಕಿಲ ಸೇರಿದಂತೆ ಅನೇಕಾನೇಕ ಸಂಗೀತ ನಿರ್ದೇಶಕರು ತಾವು ಸಂಗೀತ ನೀಡುವಾಗ ಸೋನು ಸಂಗೀತ ಅಕಾಡೆಮಿಯ ಅಶೋಕನೆ ಬೇಕು ಎಂಬ ಮಟ್ಟಕ್ಕೆ ಬೆಳೆದ.

- Advertisement -

ಯಾವ ಅಡವಿ ಸಿದ್ಧನ ಅಡಿದಾವರೆಗಳಿಗೆ (ಮಠದ ಕಾರ್ಯಕ್ರಮ) ತಮ್ಮ ಕಲೆ ಅರ್ಪಿಸಿದ್ದರೊ ಅವರಿಂದಲೆ ಅದೆ ಅಂಕಲಗಿಯಲ್ಲಿ ನಡೆಯುವ ಕನ್ನಡ ಸಮ್ಮೇಳನದಲ್ಲಿ ಕಡೆಗಣಿಸಲ್ಪಟ್ಟರು. ಇನ್ನು ಅಂಕಲಗಿ ಅಡವಿ ಸಿದ್ಧೇಶ್ವರರ ಕುರಿತಾದ ಪ್ರಥಮ ಧ್ವನಿ ಸುರುಳಿ ಹೊರತಂದ ರಾಷ್ಟ್ರ ಪ್ರಶಸ್ತಿ ವಿಜೇತ ಶರಣ ಸುರೇಶ ಉರುಬಿನಟ್ಚಿ ಅವರನ್ನು ಕೂಡ ಕಡೆಗಣಿಸಲಾಗಿದೆ.ಹಿತ್ತಲ ಗಿಡ ಮದ್ದಲ್ಲ ಎನ್ನುವಂತೆ ಸ್ಥಳಿಯ ಕಲಾವಿದರನ್ನ ಕಡೆಗಣಿಸುವ ಅವಶ್ಯಕತೆಯಾದರು ಎನಿತ್ತು? ಎಂದು ಚೌಕಾಶಿಯವರು ಪ್ರಶ್ನೆ ಮಾಡುತ್ತಾರೆ.

ಈ ಕಾರ್ಯಕ್ರಮ ಒಂದು ಸಾಹಿತ್ಯ ಕಾರ್ಯಕ್ರಮ ಎನ್ನುವುದಕಿಂತ ರಾಜಕೀಯ ಕಾರ್ಯಕ್ರಮವಾಗಿದೆ. ಕಲೆ ಸಾಹಿತ್ಯ ಸಂಸ್ಕೃತಿಯ ಗಂಧಗಾಳಿ ತಿಳಿಯದವರನ್ನ ಸಾಧಕರೊಂದಿಗೆ ಸಾಧಕರ ಸೋಗಿನಲ್ಲಿ ಮೆರೆಸುವುದು ಅಕ್ಷಮ್ಯ. ಮುಂದೆ ಇಂತಹ ತಪ್ಪುಗಳಾಗಬಾರದು.

ಈಗಲೂ ಕಾಲ ಮಿಂಚಿಲ್ಲ ಈ ಇಬ್ಬರು ಕಲಾವಿದರು ಸೇರಿದಂತೆ ಬಾಕಿ ಉಳಿದಿರುವ ಶ್ರೀಮಂತ ಸಂಸ್ಕೃತಿಯ ಕುಂದರನಾಡಿನ ಯಾವ ಯಾವ ಕಲಾವಿದರು ಉಳಿದಿದ್ದಾರೊ ಅವರನ್ನ ಗೌರವಯುತವಾಗಿ ವೇದಿಕೆಗೆ ಆಹ್ವಾನಿಸಿ ಸನ್ಮಾನಿಸಿ ನಾಳೆಯ ದಿನಪತ್ರಿಕೆಗಳಲ್ಲಿ ಅವರ ಹೆಸರು ಅಚ್ಚಾಗುವಂತೆ ಆಯೋಜಕರು ನೋಡಿಕೊಂಡು ಮುಂದಿನ ದಿನಗಳಲ್ಲಿ ಇಂತಹ ಎಡವಟ್ಟು ಆಗದಿರುವಂತೆ ನೋಡಿಕೊಳ್ಳುವುದುದು ಉತ್ತಮ.

ಗೋಕಾಕ ನಾಡು ಕಲಾವಿದರ ತವರು. ಇನ್ನೂ ಅನೇಕ ಕಲಾವಿದರನ್ನು ಈ ಸಂದರ್ಭದಲ್ಲಿ ಕಡೆಗಣಿಸಲಾಗಿದೆ. ನನಗೆ ತಿಳಿದಂತೆ ಬಸವರಾಜ ಕಟ್ಟಿಮನಿಯವರ ಜೊತೆಗೆ ಕೃಷ್ಣಮೂರ್ತಿ ಪುರಾಣಿಕರನ್ನೂ ಸ್ಮರಿಸಿಕೊಳ್ಳಬೇಕಾಗಿತ್ತು. ಹಿರಿಯ ಸಾಹಿತಿ ಮಹಾಲಿಂಗ ಮಂಗಿ, ಸಿ ಕೆ ನಾವಲಗಿ, ಮಾಳಗಿಯವರ ಹೆಸರುಗಳು ಪತ್ರಿಕೆಯಲ್ಲಿ ಕಾಣಲಿಲ್ಲ. ಅದರಲ್ಲೂ ನಮ್ ಬೆಳಗಾವಿಯಂಥ ಹಾಡು ಹಾಡಿ ಕನ್ನಡತನ ಹಾಗೂ ಬೆಳಗಾವಿಯ ಮಹತ್ವವನ್ನು ಸಾರಿ ಹೇಳಿದ ಹುಡುಗನನ್ನು ಸಮ್ಮೇಳನಕ್ಕೆ ಆಹ್ವಾನ ಕೂಡ ನೀಡದೆ ನಿರ್ಲಕ್ಷ್ಯ ಧೋರಣೆ ತಾಳಿದ್ದು ಅಕ್ಷಮ್ಯ.ಕಸಾಪ ಜಿಲ್ಲಾ ಅಧ್ಯಕ್ಷರು ಇಂಥ ಅಪಸವ್ಯ, ಆಭಾಸಗಳಾಗದಂತೆ ಮುತುವರ್ಜಿ ವಹಿಸಬೇಕಾಗಿತ್ತು

ಉಮೇಶ ಬೆಳಕೂಡ, ಮೂಡಲಗಿ

- Advertisement -
- Advertisement -

Latest News

ಕನ್ನಡಕ್ಕಾಗಿ ಇನ್ನೂ ಹೋರಾಡಬೇಕಾಗಿರುವುದು ವಿಷಾದನೀಯ – ಚಂದ್ರಶೇಖರ ಅಕ್ಕಿ

ಬೆಳಗಾವಿ ಜಿಲ್ಲಾ ೧೬ ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಸಂದರ್ಶನ ಮೂಡಲಗಿ - ಬೆಳಗಾವಿ ಜಿಲ್ಲಾ ೧೬ ನೇ ಸಾಹಿತ್ಯ ಸಮ್ಮೇಳನವು ಇದೇ ದಿ. ೨೩ , ೨೪...
- Advertisement -

More Articles Like This

- Advertisement -
close
error: Content is protected !!
Join WhatsApp Group