spot_img
spot_img

ದಿನಕ್ಕೊಬ್ಬ ಶರಣ ಮಾಲಿಕೆ

Must Read

- Advertisement -

ಶರಣ ಅಂಬಿಗರ ಚೌಡಯ್ಯ 

ಚೌಡದಾನಪುರದಲ್ಲಿ ಕಂಡು ಬರುವ ಶಾಸನಗಳಲ್ಲಿ ಮಣ0ಬೆ ನಾಯಕನ ಹೆಸರಿದ್ದು ಆತನೆ ಅಂಬಿಗರ ಚೌಡಯ್ಯ ಎಂದು ತಿಳಿದು ಬರುತ್ತದೆ. ಚೌಡದಾನಪುರದ ನದಿಯ ದಡದಲ್ಲಿ ಚೌಡಯ್ಯನವರ ಗದ್ದುಗೆ ಇದೆ ಎನ್ನಲಾಗಿದೆ.

ಈತನ ಹೆಂಡತಿಯ ಹೆಸರು ಕರಿಯವ್ವ. ಮಗನ ಹೆಸರು ಪುರವಂತ. ಚೌಡಯ್ಯನವರ ಕಾಲ 12ನೆ ಶತಮಾನವಾಗಿದ್ದು ಒಟ್ಟು 273 ವಚನಗಳು ಲಭ್ಯವಿವೆ.ಸಾಮಾನ್ಯವಾಗಿ ಕೆಳ ವರ್ಗದ ಶೋಷಿತ ವರ್ಗಗಳಿಂದ ಬಂದು ಶರಣ ತತ್ವಕ್ಕೆ ಆಕರ್ಷಿತರಾಗಿ ಅಂದಿನ ಜಾತಿ ವ್ಯವಸ್ಥೆಯ ವಿರುದ್ಧ, ಒಡೆದು ಹೋದ ಸಮಾಜವನ್ನು ಒಂದುಗೂಡಿಸುವ ಶರಣರ ಚಳವಳಿಯಲ್ಲಿ ಎಲ್ಲ ವರ್ಗದವರು ಕೈಜೋಡಿಸಿದರು. ಅದರಲ್ಲಿ ಅಂಬಿಗರ ಚೌಡಯ್ಯ ಒಬ್ಬರು. ಶೋಷಣೆಗೆ ಒಳಪಟ್ಟ ಸಮುದಾಯವನ್ನು ಧೈರ್ಯ ಮತ್ತು ಸ್ಥೈರ್ಯ ತಂದುಕೊಟ್ಟ ವಚನಕಾರರಲ್ಲಿ ಚೌಡಯ್ಯನವರದು ಪ್ರಮುಖ ಪಾತ್ರ. ಚೌಡಯ್ಯನವರು ತಮ್ಮ ಹೆಸರು ಮತ್ತು ಜಾತಿಯನ್ನೆ ತಮ್ಮಅಂಕಿತನಾಮವಾಗಿರಿಸಿಕೊಂಡಿದ್ದಾರೆ.

- Advertisement -

ಸ್ವಾಭಿಮಾನಿಯಾದ ಚೌಡಯ್ಯನವರಲ್ಲಿ, ತನ್ನನ್ನು ತಾನು ತಿಳಿಯುವುದರ ಮೂಲಕ ಬೇರೆಯವರನ್ನು ತಿಳಿಯಬೇಕು. ಅನ್ಯರನ್ನು ಗೌರವದಿಂದ ಕಾಣಬೇಕು. ಅನ್ಯರ ಬದುಕಿಗೆ ಆಸರೆಯಾಗಿ ನಿಲ್ಲಬೇಕು ಎನ್ನುವ ಉದಾತ್ತ ವಿಚಾರಗಳನ್ನು ಕಾಣಬಹುದು. ವಿಶ್ವ ಶ್ರೇಷ್ಠ, ಅರಿವೆ ಗುರು, ಆಚಾರವೆ ಲಿಂಗ, ಅನುಭವವೆ ಜಂಗಮ ಎಂದು ಜಗತ್ತಿಗೆ ಸಾರಿದ ಚೌಡಯ್ಯ ಉಳಿದ ವಚನಕಾರರಿಗಿಂತ ಭಿನ್ನವಾಗಿದ್ದಾರೆ. ಸಾತ್ವಿಕ ಸಿಟ್ಟು, ಆಕ್ಷೇಪ ಗುಣ, ವಿಡಂಬನೆ, ಕಠೋರ ಟೀಕೆಗೆ ಶರಣ ಗಣದಲ್ಲಿ ಅಗ್ರಗಣ್ಯರೆನಿಸುತ್ತಾರೆ. ಗುಮ್ಮಳಾಪುರದ ಸಿದ್ದಲಿಂಗರು ತಮ್ಮ ಶೂನ್ಯ ಸಂಪಾದನೆಯಲ್ಲಿ ಚೌಡಯ್ಯನವರಿಗೆ ಸ್ಥಾನ ನೀಡಿದ್ದಾರೆ. ಶರೀಫ್ ಸಾಹೇಬರು ರಚಿಸಿದ ಶಿವದೇವ ವಿಜಯ ಗ್ರಂಥದಲ್ಲಿ ಚೌಡಯ್ಯನವರು ಕುರುವತ್ತಿಯಲ್ಲಿ ಜನಿಸಿದರು ಎನ್ನಲಾಗಿದೆ. ಇದರ ಬಗ್ಗೆ ಆಳವಾಗಿ ಅಧ್ಯಯನ ನಡೆಸಿದ ಡಾ.ಎಂ ಎಂ ಕಲಬುರ್ಗಿ ಅವರು ಮತ್ತು ಡಾಕ್ಟರ್ ಬಸವರಾಜ್ ಸಿದ್ದಾಶ್ರಮದವರು ಚೌಡಯ್ಯನವರು ಚೌಡದಾನಪುರದಲ್ಲಿ ಜನಿಸಿದರು ಎನ್ನುತ್ತಾರೆ.

ಒಂದು ಸಲ ಮಳೆಗಾಲದಲ್ಲಿ ಹರಿಗೋಲಲ್ಲಿ ಜನರನ್ನು ದಾಟಿಸುವಾಗ ಜೋರಾದ ಬಿರುಗಾಳಿಗೆ ಸಿಕ್ಕು ದೋಣಿ ಅಪಾಯದಲ್ಲಿದ್ದಾಗ ಭಕ್ತಿಯಿಂದ ಧ್ಯಾನಿಸಿ ಎಲ್ಲರನ್ನೂ ಪ್ರಾಣಭೀತಿಯಿಂದ ಪಾರು ಮಾಡುತ್ತಾರೆ. ಆ ದೋಣಿಯಲ್ಲಿ
ಗುತ್ತಲ ರಾಜನ ಮಗನಿದ್ದು ಆತನ ಪ್ರಾಣವನ್ನು ಕಾಪಾಡಿದ್ದಕ್ಕೆ ರಾಜನು ಚೌಡಯ್ಯನವರಿಗೆ ಶಿವಪುರದ ಹೊಲವನ್ನು ದಾನವಾಗಿ ನೀಡಿದರು ಎನ್ನಲಾಗಿದೆ.

1 ವಚನ

- Advertisement -

ಕಟ್ಟಿದ ಲಿಂಗವ ಬಿಟ್ಟು
ಬೆಟ್ಟದ ಲಿಂಗಕ್ಕೆ ಹೋಗಿ
ಅಡಿ ಮೇಲಾಗಿ ಬೀಳುವ
ಲೊಟ್ಟೆ ಮೂಳರ ಕಂಡೆಡೆ
ಕಟ್ಟಿ ಪಾದರಕ್ಷೆಯ ತೆಗೆದು
ಕೊಂಡು ಲೊಟ ಲೊಟನೆ
ಹೊಡೆ ಎಂದಾತ ನಮ್ಮ ಅಂಬಿಗರ ಚೌಡಯ್ಯ.

ಅಂಬಿಗರ ಚೌಡಯ್ಯನವರು ಲಿಂಗ ತತ್ವ ನಿಷ್ಠರು, ಏಕದೇವೋಪಾಸಕರು, ಇಷ್ಟಲಿಂಗ ಆರಾಧಕರು, ದೇವಾಲಯ ಗುಡಿಗುಂಡಾರಗಳ ಕಟು ವಿರೋಧಿಗಳು, ಇಷ್ಟಲಿಂಗ ಯೋಗ ಪ್ರತಿಯೊಬ್ಬ ಶರಣ ಧರ್ಮಿಗೆ ಕಡ್ಡಾಯವಾಗಬೇಕು ಯಾವ ಭೇದ ಭಾವವೂ ಇರಕೂಡದು ದೇಹವನ್ನೇ ದೇಗುಲ ಮಾಡಿಕೊಂಡಿರಬೇಕು.
ಬೆಟ್ಟದ ಸ್ಥಾವರ ಲಿಂಗಕ್ಕೆ ಹೋಗಿ ಅಡ್ಡ ಬೀಳುವವರನ್ನು ಕಂಡು ಕಟುವಾಗಿ ನುಡಿಯುತ್ತಾರೆ.

2 ವಚನ

ಅಂಬಿಗ ಅಂಬಿಗ ಎಂದು
ಕುಂದ ನುಡಿಯದಿರು
ನಂಬಿದರೆ ಒಂದೇ ಹುಟ್ಟಲ್ಲಿ
ಕಡೆಯ ಹಾಯಿಸುವವ ನಂಬಿಗರ ಚೌಡಯ್ಯ

ನೆರೆಹೊರೆ ಕೆರೆಯಲ್ಲಿ ಪ್ರವಾಸ ಮಾಡುವಾಗ ಪ್ರಯಾಣಿಕರು ಭಯದಿಂದ ಸಾವಿಗೆ ಹೆದರುತ್ತ ಅಂಬಿಗ ಅಂಬಿಗ ಎಂದು ನಂಬಿ ಕರೆದರೆ ಸಾಕು ಒಂದೇ ಹುಟ್ಟಿನಲ್ಲಿ ದಡ ಸೇರಿಸುವುದಾಗಿ ಧೈರ್ಯದಿಂದ ಹೇಳುವ ದಿಟ್ಟ ಗಣಾಚಾರಿ ಅಂಬಿಗರ ಚೌಡಯ್ಯ. ಬಸವಣ್ಣನವರು ಕೂಡಲಸಂಗಮದಿಂದ ಮಂಗಳವೇಡೆಗೆ ಹೋಗುವಾಗ ಅವರೊಂದಿಗೆ ಚೌಡಯ್ಯನವರು ಬಸವಣ್ಣನವರ ಪ್ರಭಾವಕ್ಕೆ ಒಳಗಾಗಿ ತಮ್ಮ ಹುಟ್ಟೂರನ್ನು ಬಿಟ್ಟು ಕಲ್ಯಾಣಕ್ಕೆ ಬಂದು ಶಿವಶರಣರಾಗಿ ವಚನಗಳನ್ನು ರಚಿಸಿದ್ದಾರೆ. ಚೌಡಯ್ಯನವರು ಕಲ್ಯಾಣದ ಹತ್ತಿರದಲ್ಲಿ ತಪಸ್ಸು ಗೈದ ಗವಿಮಠವಿದ್ದು ಆ
ತ್ರಿಪುರಾಂತಕ ಕೆರೆಯ ಗ್ರಾಮವೆ
ಚೌಡಯ್ಯನವರ ಕಾಯಕಕ್ಕೆ ಆಧಾರವಾಗಿತ್ತು ಎನ್ನುತ್ತಾರೆ.

ಸತ್ಯ ಪ್ರತಿಪಾದಕ ನೇರ ನಡೆ-ನುಡಿಗಳ ಪಾರದರ್ಶಕ ಭಾವದ ಶರಣ ಅಂಬಿಗರ ಚೌಡಯ್ಯ ಶರಣರ ಕ್ರಾಂತಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಕೊನೆಗೆ ಇಂದಿನ ರಾಣೆಬೆನ್ನೂರು ತಾಲೂಕಿನ ಚೌಡದಾನಪುರದಲ್ಲಿ ಲಿಂಗೈಕ್ಯರಾದರು ಎಂದು ತಿಳಿದು ಬರುತ್ತದೆ.

ಶ್ರೀಮತಿ ಗೌರಮ್ಮ ನಾಶಿ
ವಚನ ಅಧ್ಯಯನ ವೇದಿಕೆ
ಅಕ್ಕನ ಅರಿವು ಬಸವಾದಿ
ಶರಣರ ಚಿಂತನ ಕೂಟ.

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಯಾರವನು ನೀನೆಂದು ಜನ‌ ನಿನ್ನ ಕೇಳಿದರೆ ಆ ಪ್ರಶ್ನೆಗುತ್ತರವ ಹೀಗೆ ಹೇಳು ಕ್ರಿಸ್ತನವ ಕೃಷ್ಣನವ ಬುದ್ಧನವ ಬಸವನವ ಎಲ್ಲರವ ನಾನೆನ್ನು‌- ಎಮ್ಮೆತಮ್ಮ ಶಬ್ಧಾರ್ಥ ಯಾರವನು = ಯಾವ ಕುಲಜಾತಿಮತಪಂಥಕ್ಕೆ ಸೇರಿದವನು ತಾತ್ಪರ್ಯ ಜನಗಳು ನಿನ್ನ ಕುಲ‌...
- Advertisement -

More Articles Like This

- Advertisement -
close
error: Content is protected !!
Join WhatsApp Group