spot_img
spot_img

ಭ್ರಷ್ಟ ಅಧಿಕಾರಿಯ ಮರುನೇಮಕ ; ಪ್ರತಿಭಟನೆ

Must Read

- Advertisement -

ಸಿಂದಗಿ: ಓತಿಹಾಳ ಪಿಕೆಪಿಎಸ್ ಸಂಘದಲ್ಲಿ ಹಣ ದುರುಪಯೋಗ ಮಾಡಿಕೊಂಡು ಇಲಾಖೆಯಿಂದ ಸಾಬೀತಾಗಿ ಸಂಘದಿಂದ ವಜಾಗೊಂಡ ಮಾಜಿ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿ ಅಂಬಣ್ಣ ಶಂ. ಹೂಗಾರ ಅವರನ್ನು ಕಾನೂನು ಭಾಹಿರವಾಗಿ ನೇಮಕ ಮಾಡಿಕೊಂಡ ಸದ್ಯದ ಆಡಳಿತ ಮಂಡಳಿಯವರು ಇವರನ್ನು ವಜಾಗೊಳಿಸಬೇಕು ಎಂದು ಬಾಬು ನಾಟೀಕಾರ ಆಗ್ರಹಿಸಿದರು.

ತಾಲೂಕಿನ ಓತಿಹಾಳ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಆವರಣದಲ್ಲಿ ಹಮ್ಮಿಕೊಂಡ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹದಲ್ಲಿ ಮಾತನಾಡಿದ ಅವರು, ಕಾನೂನು ಭಾಹಿರವಾಗಿ ಅವರನ್ನು ನೇಮಕ ಮಾಡಿಕೊಂಡ ವ್ಯವಸ್ಥೆಯ ವಿರುದ್ಧ ಶಿಸ್ತಿನ ಕ್ರಮಕೈಗೊಳ್ಳಬೇಕು ಎಂಬ ಉದ್ದೇಶದಿಂದ ಈ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ. ಇಲಾಖೆ ನಮ್ಮ ಧರಣಿ ಸತ್ಯಾಗ್ರಹಕ್ಕೆ ಒಗೊಟ್ಟು ಕಾನೂನಾತ್ಮಕವಾಗಿ ಸೂಕ್ತ ನ್ಯಾಯವನ್ನು ಒದಗಿಸಬೇಕು ಎಂದರು.

ಈ ವೇಳೆ ಬ್ಯಾಂಕಿನ ಆಡಳಿತ ಮಂಡಳಿಯ ಸದಸ್ಯರಾದ ಅಶೋಕ ಮಣೂರ, ಸೋಮಣ್ಣ ಪೂಜಾರಿ, ಭೀಮರಾವ ಮಕಣಾಪೂರ, ನೀಲಮ್ಮ ನಾಕೆತ್ತಿನ, ಸಂಗಮ ಕೊರಬು, ಸಿದ್ದಮ್ಮ ನಾಟೀಕಾರ, ಗ್ರಾಮ ಪಂಚಾಯತ್ ಸದಸ್ಯರಾದ ಸುವರ್ಣಾ ಮಕಣಾಪೂರ, ಜಗದೀಶ ಮಾಲೇಗಾರ, ಮಲ್ಲು ನಾಕೆತ್ತಿನ, ಆಸೀಫ್ ಗುಂಜಟ್ಟಿ, ರಾಜು ವಠಾರ, ಗ್ರಾಮದ ರೈತ ಮುಖಂಡ ಮಲ್ಲನಗೌಟ ಪಾಟೀಲ, ಶಂಕರಗೌಡ ಜುಮನಾಳ, ಶಿವಾನಂದ ಸಾಲಿಮಠ,ಮಂಜು ಮನೂರ ಸೇರಿದಂತೆ ಅನೇಕರಿದ್ದರು.

- Advertisement -
- Advertisement -

Latest News

ಪೌರಕಾರ್ಮಿಕರ ಆರ್ಥಿಕ ಹಾಗೂ ಸಾಮಾಜಿಕ ಬೆಳವಣಿಗೆಗೆ ಸಮುದಾಯ ಸಹಕರಿಸಲಿ- ಬಾಲಚಂದ್ರ ಜಾಬಶೆಟ್ಟಿ.

ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಯಲ್ಲಿ ಪರಿಸರ ಸ್ನೇಹಿ ತಂತ್ರಜ್ಞಾನಗಳ ಅಳವಡಿಕೆ ಕುರಿತ ಉಪನ್ಯಾಸ   ಧಾರವಾಡ- ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದ ವಿಜ್ಞಾನ ಮಂಟಪದ ವಿಶೇಶ ಉಪನ್ಯಾಸ...
- Advertisement -

More Articles Like This

- Advertisement -
close
error: Content is protected !!
Join WhatsApp Group