- Advertisement -
ಬಸವ ಪಥಕೆ ಹೆಜ್ಜೆ
ನಾವಿಬ್ಬರು ಕೂಡಿ
ಕೊಂಡೆವು
ಇದು ದೇವರ ಇಚ್ಛೆಯು
ಬಳಸಿ ಸ್ನೇಹ ಪ್ರೀತಿ
ಒಲುಮೆ
ಬಾಳ ಬಾಂದಾರ ಕಟ್ಟಲು
ಬಾನ ತುಂಬ
ಶಶಿಯ ನಗೆಯು
ಚಕೋರಿ ಹಾಡಿತು
ಕತ್ತಲು
ಪ್ರೇಮವೊಂದೇ ಭಾಷೆ
ಹಾಲು ಜೇನಿನ ಬಟ್ಟಲು
- Advertisement -
ಬಿಸಿಲು ಮರೆತು
ಮೋಡ ಕವಿಯಿತು
ಹಗಲು ಇರುಳು
ಮಳೆಯ ಹನಿಯು
ಹದ ಗೊಂಡಿತು ನೆಲ
ಗಿಡ ಮರ ನೆಟ್ಟಲು
ಬಾರೆ ನೀನು
ನನ್ನ ಜೀವ
ಮುಗುಳು ಚೆಲುವಿನ
ಮಲ್ಲಿಗೆ
ಇಕೋ ನಿನಗೆ ಸಮಯ
ಬಂದು ಹೃದಯ ತಟ್ಟಲು
ಜೋಡಿ ಜೀವ
ದೂರ ಪಯಣ
ಬೇಡ ಬಳಲಿಕೆ
ಜೀವವು
ಬಸವ ಪಥಕೆ ಹೆಜ್ಜೆ
ನಮ್ಮ ಗುರಿ ಮುಟ್ಟಲು
________________________
- Advertisement -
*ಡಾ ಶಶಿಕಾಂತ ಪಟ್ಟಣ ರಾಮದುರ್ಗ*