ರಾಣಾ ಪ್ರತಾಪಸಿಂಹನ ವಂಶಜರ ಭೇಟಿಯಾದ ಸಂಸದ ಈರಣ್ಣ ಕಡಾಡಿ

Must Read

ಮೂಡಲಗಿ:ಮೊಘಲ್‌ ಸಾಮ್ರಾಜ್ಯದ ದೊರೆ ಅಕ್ಬರ್‌ ನ ವಿರುದ್ದ ಸತತ ಹೋರಾಟ ಮಾಡುವ ಮೂಲಕ ತನ್ನ ಪರಾಕ್ರಮಕ್ಕೆ ಹೆಸರುವಾಸಿಯಾದ ಮೇವಾರದ ರಾಜ ಮಹಾರಾಣಾ ಪ್ರತಾಪ್‌ ಸಿಂಹ ಅವರ ವಂಶಜರಾದ ಯುವರಾಜ ಲಕ್ಷರಾಜ್‌ ಸಿಂಗ್‌ ಅವರನ್ನು ಇಂದು ಮಂಗಳವಾರ ರಾಜಸ್ತಾನ ರಾಜ್ಯದ ಉದಯಪುರದ ಅರಮನೆಯಲ್ಲಿ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಸೌಜನ್ಯಯುತ ಭೇಟಿ ಮಾಡಿದರು.

ಮೇವಾರದ ರಾಜ ಪರಂಪರೆ, ಇತಿಹಾಸ, ಅವರು ನಡೆದು ಬಂದ ದಾರಿ ಹಾಗೂ ಪ್ರಸ್ತುತ ವಿದ್ಯಮಾನಗಳ ಬಗ್ಗೆ ಚರ್ಚಿಸಲಾಯಿತು.

ಯುವರಾಜ ಲಕ್ಷರಾಜ್‌ ಸಿಂಗ್‌ ಅವರು ಬದಲಾದ ಈ ಜಗತ್ತಿನ ಎಲ್ಲ ಆಯಾಮಗಳನ್ನು ಅರಿತುಕೊಂಡವರಾಗಿದ್ದು ನಮಗೆ ಒಳ್ಳೆಯ ಆದರಾತಿಥ್ಯ ನೀಡಿ ಸನ್ಮಾನಿಸಿ, ಕಾಣಿಕೆಯನ್ನು ನೀಡಿದರು ಇದೊಂದು ಅವಿಸ್ಮರಣಿಯ ಭೇಟಿಯಾಗಿತ್ತು.

ಈ ಭೇಟಿಯ ಸಂದರ್ಭದಲ್ಲಿ ಕಡಾಡಿಯವರ ಧರ್ಮಪತ್ನಿ ಶ್ರೀಮತಿ ಸುಮಿತ್ರಾ , ಸಂಸದರಾದ ಭರ್ತ್ರಹರಿ ಮೆಹತಾಬ್‌, ಶ್ರೀರಂಗ ಅಪ್ಪಾ ಬಾರ್ನೆ, ಓಂಪ್ರಕಾಶ, ನೀರಜ್ ಡಾಂಗಿ, ಶ್ರೀಮತಿ ಸಂಗೀತಾ ಯಾದವ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

Latest News

ಶಿರೀಷಗೆ ಗಡಿತಿಲಕ, ಶಶಿಗೆ ಜನ್ನಾ ಪ್ರಶಸ್ತಿ

ಬೆಳಗಾವಿ - ಇಲ್ಲಿಯ ಬಿ ಎ ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಪ್ರತಿವರ್ಷ ಕೊಡಮಾಡುವ ಕನ್ನಡ ಗಡಿತಿಲಕ ಪ್ರಶಸ್ತಿಗೆ ಶಿರೀಷ ಅವರು ಆಯ್ಕೆಯಾಗಿದ್ದಾರೆ...

More Articles Like This

error: Content is protected !!
Join WhatsApp Group