Homeಸುದ್ದಿಗಳುಬಹುದಿನದ ಬೇಡಿಕೆ ಈಡೇರಿಸಿದ ಅರಭಾವಿ ಶಾಸಕರು

ಬಹುದಿನದ ಬೇಡಿಕೆ ಈಡೇರಿಸಿದ ಅರಭಾವಿ ಶಾಸಕರು

ಮೂಡಲಗಿ : ಪಟ್ಟಣದ ನಾಗಲಿಂಗ ನಗರ ನಿವಾಸಿಗಳ ಬಹುದಿನ ಬೇಡಿಕೆಯಾದ ಮೂಡಲಗಿ ಪಟ್ಟಣದ ಗುರ್ಲಾಪುರ ಮುಖ್ಯ ರಸ್ತೆಯಿಂದ ನಾಗಲಿಂಗ ನಗರಕ್ಕೆ ಸಂಪರ್ಕ ಕೊಡುವ ಕೋರ್ಟ್ ಪಕ್ಕದಲ್ಲಿರುವ ರಸ್ತೆಯನ್ನು  ಶಾಸಕ ಮತ್ತು ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉನ್ನತ ಮಟ್ಟದ ಅಧಿಕಾರಿಗಳಿಗೆ ಮಾತನಾಡಿ ಯಾರಿಗೂ ತೊಂದರೆ ಆಗದಂತೆ ದುರಸ್ತಿಗೊಳಿಸಿ ಜನರಿಗೆ ಸಂಚರಿಸಲು ವ್ಯವಸ್ಥೆ ಕಲ್ಪಿಸಿಕೊಟ್ಟರು.

ಮೂಡಲಗಿ ಪುರಸಭೆ ವತಿಯಿಂದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಕೊಡಲು ಸ್ಥಳದಲ್ಲಿಯೇ ಮುಖ್ಯಾಧಿಕಾರಿಗೆ ಸೂಚನೆ ನೀಡಿದರು. ಬರುವ ದಿನಗಳಲ್ಲಿ ನಾಗಲಿಂಗ ನಗರದ ದೇವಸ್ಥಾನಗಳಿಗೆ ಅನುದಾನ ತರುತ್ತೇವೆ ಈ ಭಾಗದಲ್ಲಿ ಇರುವಂಥ ಮುಖ್ಯ ಬೇಡಿಕೆ ರಸ್ತೆ ಈ ಇತ್ತು ಸಮಸ್ಯೆಯನ್ನು ಬಗೆ ಹರಿಸಿ ಕೆಲಸ ಮಾಡಿದ್ದೇವೆ. ನಿಮ್ಮಲ್ಲಿ ಏನೇ ಸಮಸ್ಯೆ ಇದ್ದರು ಎನ್ ಎಸ್ ಎಫ್ ಗೆ ಬಂದು ಕೆಲಸ ಮಾಡಿಕೊಳ್ಳಿ ಎಂದು ಹೇಳಿದರು.

ಇದೆ ಸಂದರ್ಭದಲ್ಲಿ ಅರಭಾವಿ ಕ್ಷೇತ್ರದ ಶಾಸಕರನ್ನು ನಾಗಲಿಂಗ ನಗರದ ಎಲ್ಲ ಸಾರ್ವಜನಿಕರ ಪರವಾಗಿ ಸನ್ಮಾನಿಸಿ ತುಂಬು ಹೃದಯದ ಧನ್ಯವಾದಗಳು ಅರ್ಪಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ರೇಣುಕಾ ಹಾದಿಮನಿ, ಮುಖ್ಯಾಧಿಕಾರಿ ತುಕಾರಾಮ ಮಾದರ, ಮೂಡಲಗಿ ಸಿಪಿಐ ಶ್ರೀಶೈಲ ಬ್ಯಾಕೂಡ, ಶಾಸಕರ ಆಪ್ತ ಸಹಾಯಕರಾದ ಮಲ್ಲಿಕಾರ್ಜುನ ಯಕ್ಷಂಬಿ, ಮರೆಪ್ಪ ಮರೆಪ್ಪಗೊಳ, ಅನ್ವರ ನಧಾಫ, ಪುರಸಭೆ ಸದಸ್ಯ ಸಂತೋಷ ಸೊನವಾಲ್ಕರ,ಈರಪ್ಪ ಮುನ್ಯಾಳ ನಾಗಲಿಂಗ ನಗರದ ಮುಂಖಡರಾದ ಲಕ್ಷ್ಮಣ ಅಡಿಹುಡಿ, ಭೀಮಸಿ ಢವಳೇಶ್ವರ, ಶ್ರೀಶೈಲ ಗಾಣಿಗೇರ, ಸರ್ಮಥ ಕಟ್ಟಡ ಕಾರ್ಮಿಕ ಸಂಘದ ಕಾರ್ಯದರ್ಶಿ ಸುಭಾಸ ಗೊಡ್ಯಾಗೋಳ, ಪಿ.ಕೆ.ಪಿ.ಎಸ್ ನಿರ್ದೆಶಕ ಈಶ್ವರ ಕಂಕಣವಾಡಿ, ಅಡಿವೆಪ್ಪ ಶಿರಸಂಗಿ,ಶಿವಲಿಂಗ ಹಾದಿಮನಿ, ಪ್ರಕಾಶ ಶೇಗುನಶಿ, ರತ್ನಪ್ಪ ಬಗಾಡಿ ಮುಂತಾದವರು ಉಪಸ್ಥಿತರಿದ್ದರು

RELATED ARTICLES

Most Popular

error: Content is protected !!
Join WhatsApp Group