spot_img
spot_img

ಮುದ್ದು ಕೃಷ್ಣ…

Must Read

spot_img
- Advertisement -

ಬಾರೋ ನನ್ನ ಬಾಳ ಕುಸುಮ

ಮಡಿಲ ತುಂಬೋ ಮುದ್ದು ಕೃಷ್ಣ//

ನಿನ್ನ ನಡೆಯಾ, ತೊದಲು ನುಡಿಯಾ
ಮುಗುಳು ನಗೆಯಾ, ಮುಗ್ಧ ಅಳುವಾ
ನೋಡುತಿರಲು ಮನವೇ ಮರುಳ//

- Advertisement -

ನಿನ್ನ ಕೆನ್ನೆಯಂದ ಮುಂಗುರುಳ ಚೆಂದ
ಹವಳದುಟಿಗಳ ಮೂಕ ಬಂಧ
ಮುತ್ತನಿಟ್ಟರೆ ಮೈಮನಗಳು ಹದುಳ//

ಕರುಳ ಬಳ್ಳಿ ನೀ ಚೆಲುವ ಚೆಂದುಳ್ಳಿ
ಕೆನ್ನೆಗುಳಿಯು ಪದ್ಮನಾಭನಂತೆ
ಪವಡಿಸುವ ಕಂದ ನಾ ಪರವಶಳು//

ಕೃಷ್ಣನಾಟ ,ಶಿವನ ನೋಟ, ಭರತನ ಕೂಟ
ಸೃಷ್ಟಿಕರ್ತನ ಬೆಡಗ ನೋಡುತಿರೆ
ಮುಚ್ಚಲೆಂಗ ನನ್ನ ಕಣ್ಣುಗಳ//

- Advertisement -

ಮಗ್ಗುಲು ಮಲ್ಲಿಗೆ, ಮನೆಯ ಸಂಪಿಗೆ,
ಬಳಗದ ಮಂದಾರವೇ ನೀ
ಕಂದ ನಾ ಧನ್ಯ ನಿನ್ನೊಳಗ//

*ಅನ್ನಪೂರ್ಣ ಹಿರೇಮಠ

- Advertisement -
- Advertisement -

Latest News

ಧೂಮ್ ಚಲನಚಿತ್ರ ಮೀರಿಸಿದ ಬೀದರ ಶೂಟೌಟ್ ಪ್ರಕರಣ

ಬೀದರ - ಸಂಕ್ಷಿಪ್ತವಾಗಿ ಹೇಳಬೇಕೆಂದರೆ ನಗರದಲ್ಲಿ ದರೋಡೆ ಘಟನೆ ಬಗ್ಗೆ.. ರಾಜಕಾರಣಿಯಿಂದ ಹಿಡಿದು ಎಡಜಿಪಿ ತನಕ ಎಲ್ಲರೂ ವಿಭಿನ್ನ ದೃಷ್ಟಿಕೋನದ ಅಭಿಪ್ರಾಯ ವ್ಯಕ್ತಪಡಿಸಿದ್ದು ಘಟನೆ ತೀವ್ರ...
- Advertisement -

More Articles Like This

- Advertisement -
close
error: Content is protected !!
Join WhatsApp Group