ಲೇಖಕಿಯರ ಸಂಘದ ವತಿಯಿಂದ ದತ್ತಿನಿಧಿ ಕಾರ್ಯಕ್ರಮ

Must Read

ಪ್ರವಾಹದಿಂದ ಹಾನಿಗೊಳಗಾದ ಮನೆ ಹಾಗೂ ಬೆಳೆ ಹಾನಿಗೆ ಕೂಡಲೇ ಪರಿಹಾರ ಕಲ್ಪಿಸಿಕೊಡಿ : ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸೂಚನೆ

ಗೋಕಾಕ: ಕಳೆದ ಜುಲೈ ತಿಂಗಳಲ್ಲಿ ಮಳೆ ಹಾಗೂ ಪ್ರವಾಹದಿಂದಾಗಿ ಹಾನಿಗೊಳಗಾದ ನದಿ ತೀರದ ಗ್ರಾಮಗಳ ಮನೆ ಹಾಗೂ ಬೆಳೆಗಳ ಸಮೀಕ್ಷೆಯನ್ನು ಕೂಡಲೇ ಪೂರ್ಣಗೊಳಿಸಿ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ...

ನದಿ ಸ್ವಚ್ಛತೆಗೆ ಚಾಲನೆ ನೀಡಿದ ಈರಣ್ಣ ಕಡಾಡಿ

ಗೋಕಾಕ: ಪ್ರಕೃತಿ ಉಚಿತವಾಗಿ ಕೊಟ್ಟಿರುವ ನೀರನ್ನು, ಗಿಡ ಮರಗಳು ಉಚಿತವಾಗಿ ಕೊಟ್ಟಿರುವ ಆಮ್ಲಜನಕವನ್ನು ನಾಶ ಮಾಡುವ ಮೂಲಕ ಸ್ವಯಂಕೃತ ಅಪರಾಧಗೈದ ನಾವೆಲ್ಲ ನದಿ ಸ್ವಚ್ಛತೆ ಮಾಡುವ...

ಮುಷ್ಕರ ಮತ್ತು ಆರ್ಥಿಕ ಪರಿಸ್ಥಿತಿ

ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಪ್ರಚಲಿತದಲ್ಲಿರುವ ಒಂದು ವಿದ್ಯಮಾನಗಳಲ್ಲಿ ಮುಷ್ಕರ ಕೂಡ ಒಂದು. ಬಂದ್ ಬಂದ್ ಬಂದ್.ಏನಿದು?ಏಕೆ ಮಾಡಬೇಕು? ಇದರಿಂದ ಆಗುವ ಬದಲಾವಣೆಗಳೇನು? ಯಾರಿಗೆ ಲಾಭ?...

ನಮ್ಮ ಬದುಕಿನಿಂದ ಇನ್ನೊಬ್ಬರ ಬದುಕು ಬದಲಾಗುವಂತೆ ಬದುಕಬೇಕು”: ಸಾಹಿತಿ ಸುನಂದಾ ಎಮ್ಮಿ ಅಭಿಮತ.

ಸೋಮವಾರ ದಿ. 16 ರಂದು ಬೆಳಗಾವಿಯ ಕಾರಂಜಿ ಮಠದಲ್ಲಿ’ ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘ’ ಮತ್ತು ಕಾರಂಜಿಮಠ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಲಿಂ. ಉಳವೀಶ ಹುಲೆಪ್ಪನವರಮಠ ಸ್ಮರಣಾರ್ಥ ‘ದತ್ತಿನಿಧಿ ಕಾರ್ಯಕ್ರಮ’ ನಡೆಯಿತು.ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಸಾಹಿತಿ ಸುನಂದಾ ಎಮ್ಮಿ ಮಾತನಾಡಿ ಕೋಟಿಗಟ್ಟಲೆ ಇರುವ ಜೀವರಾಶಿಯಲ್ಲಿ ಮನುಷ್ಯನೇ ಪ್ರಮುಖ. ಜೀವನದ ಕಷ್ಟಸುಖ ಎಲ್ಲಾ ಆಯಾಮಗಳನ್ನು ಸ್ಥಿತಪ್ರಜ್ಞರಾಗಿ ಅನುಭವಿಸಿ ಬದುಕಬೇಕು. ನಮ್ಮ ಬದುಕಿನಿಂದ ಇನ್ನೊಬ್ಬರ ಬದುಕು ಬದಲಾಗುವಂತೆ ನಾವು ಬದುಕಬೇಕು. ಹೀಗೆ ತಮ್ಮ ವೃತ್ತಿಗೆ, ಬದುಕಿಗೆ, ಸಜ್ಜನಿಕೆಗೆ ಮಾದರಿಯಾಗಿ ಲಿಂ. ಉಳವೀಶರು ಬದುಕಿದರು.

ನಾವು ಸಹ ಬದುಕಿನಲ್ಲಿ ಸಂತೃಪ್ತಿ ಎಂಬ ಶ್ರೀಮಂತಿಕೆಯಿಂದ ಬದುಕಬೇಕು ಎಂದರು.

- Advertisement -

ದತ್ತಿ ದಾನಿಗಳು ಮತ್ತು ಹಿರಿಯ ಸಾಹಿತಿ ಬಿ. ಎಸ್.ಗವಿಮಠ ಮಾತನಾಡಿ ನಮ್ಮ ನಡೆ, ನುಡಿ ಬೇರೆ ಆದಾಗ ನಮ್ಮ ಸಾಹಿತ್ಯವು ಬೇರೆಯಾಗಿ ಯಾರು ನಂಬದಂತೆ ಆಗುತ್ತದೆ. ನಮ್ಮ ಸಾಹಿತ್ಯ ತೂಕದ್ದು ಆಗಬಾರದು. ಮೌಲಿಕ ಸಾಹಿತ್ಯ ಆಗಬೇಕು ಎಂದರು.

ದತ್ತಿ ಕಾರ್ಯಕ್ರಮ ಅಂಗವಾಗಿ ಹಮ್ಮಿಕೊಂಡಿದ್ದ ಚುಟುಕು ಸಾಹಿತ್ಯ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಕಾರಂಜಿ ಮಠದ ಗುರುಸಿದ್ಧ ಮಹಾಸ್ವಾಮಿಗಳು ವಹಿಸಿದ್ದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಹೇಮಾವತಿ ಸೋನೋಳ್ಳಿ ಮಾತನಾಡಿ ನಮ್ಮಲ್ಲಿ ಒಗ್ಗಟ್ಟು ಮತ್ತು ಶಾಂತಿ ಇದ್ದರೆ ಪ್ರಗತಿ ಸಾಧ್ಯ. ದಾನದ ಕೈಗಳು ದೇವರನ್ನು ಜಪಿಸುವ ತುಟಿಗಳಿಗಿಂತ ಮೇಲು. ದಾನಿಗಳ ಆದರ್ಶಗಳನ್ನು ನಾವು ರೂಡಿಸಿಕೊಳ್ಳೋಣ ಎಂದರು. ಕಾರ್ಯಕ್ರಮದ ಆರಂಭದಲ್ಲಿ ಡಾ. ರಾಜೇಶ್ವರಿ ಹಿರೇಮಠ ವಚನ ಪ್ರಾರ್ಥನೆ ಮಾಡಿದರು. ಕಾರಂಜಿ ಮಠದ ಅಪ್ಪಾಜಿ ಶರಣ ಬಳಗ ಮತ್ತು ಮಾತೋಶ್ರೀ ಮಹಿಳಾ ಮಂಡಳಿ ವತಿಯಿಂದ ವಚನ ಭಕ್ತಿ ಗೀತೆಗಳು ಮೂಡಿಬಂದವು.

ಕಾರ್ಯಕ್ರಮದಲ್ಲಿ ದತ್ತಿ ದಾನಿಗಳಾದ ಡಾ. ಗುರುದೇವಿ ಹುಲೆಪ್ಪನವರಮಠ , ಸಾಹಿತಿ ಹಮಿದಾಬೇಗಂ ದೇಸಾಯಿ ವಿಶೇಷ ಅತಿಥಿಗಳಾಗಿ ಆಗಮಿಸಿದ್ದರು. ಹಿರಿಯ ಸಾಹಿತಿಗಳಾದ ಆಶಾ ಯಮಕನಮರಡಿ,ಜ್ಯೋತಿ ಬದಾಮಿ,ಪ್ರೇಮಕ್ಕ ಅಂಗಡಿ, ಅನ್ನಪೂರ್ಣ ಹಿರೇಮಠ,ಶಾಲಿನಿ ಚಿನಿವಾಲರ್, ಉಮಾದೇವಿ ಹುದಲಿಮಠ,ಬಸವರಾಜ ಗಾರ್ಗಿ,ಎಂ. ವೈ. ಮೆಣಸಿನಕಾಯಿ,ರಮೇಶ ಮಗುದುಮ್, ಅನ್ನಪೂರ್ಣ ಹಿರೇಮಠ್, ಶಿವಾನಂದ ತಲ್ಲೂರ,ಬಸವರಾಜ್ ಮಠದ ಸೇರಿದಂತೆ ಮಠದ ಅನೇಕ ಭಕ್ತರು ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಡಾ. ನಿರ್ಮಲಾ ಬಟ್ಟಲ ಸ್ವಾಗತಿಸಿದರು, ವಿದ್ಯಾ ಹುಂಡೇಕರ್ ವಂದಿಸಿದರು, ರಾಜೇಶ್ವರಿ ಹಿರೇಮಠ ಕಾರ್ಯಕ್ರಮವನ್ನು ನಿರೂಪಿಸಿದರು.

- Advertisement -
- Advertisement -

Latest News

ಪ್ರವಾಹದಿಂದ ಹಾನಿಗೊಳಗಾದ ಮನೆ ಹಾಗೂ ಬೆಳೆ ಹಾನಿಗೆ ಕೂಡಲೇ ಪರಿಹಾರ ಕಲ್ಪಿಸಿಕೊಡಿ : ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸೂಚನೆ

ಗೋಕಾಕ: ಕಳೆದ ಜುಲೈ ತಿಂಗಳಲ್ಲಿ ಮಳೆ ಹಾಗೂ ಪ್ರವಾಹದಿಂದಾಗಿ ಹಾನಿಗೊಳಗಾದ ನದಿ ತೀರದ ಗ್ರಾಮಗಳ ಮನೆ ಹಾಗೂ ಬೆಳೆಗಳ ಸಮೀಕ್ಷೆಯನ್ನು ಕೂಡಲೇ ಪೂರ್ಣಗೊಳಿಸಿ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ...
- Advertisement -

More Articles Like This

- Advertisement -
close
error: Content is protected !!