Homeಸುದ್ದಿಗಳುಬೀದರ್ ಪೊಲೀಸರ ಭರ್ಜರಿ ಕಾರ್ಯಾಚರಣೆ

ಬೀದರ್ ಪೊಲೀಸರ ಭರ್ಜರಿ ಕಾರ್ಯಾಚರಣೆ

ಬೀದರ: ಬೀದರ ಪೊಲೀಸರು ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ  ಗಾಂಜಾ ಹಾಗೂ ಗಾಂಜಾ‌ಕೋರರನ್ನು ಹಡೆಮುರಿ ಕಟ್ಟಿದ ಪೊಲೀಸರು ೩೫ ಲಕ್ಷ ರೂ. ಮೌಲ್ಯದ ಗಾಂಜಾ ಜಪ್ತಿ ಮಾಡಿದ್ದಾರೆ.

ಮೂರು ಸಲ ಗಾಂಜಾ ಸಾಗಾಟಗಾರರ ಮೇಲೆ ದಾಳಿ ಮಾಡಿದ ಪೊಲೀಸರು ಒಟ್ಟು ೩೫೮ ಕೆಜಿ, ರೂ. ೩೫ ಲಕ್ಷ ಮೌಲ್ಯದ ಗಾಂಜಾ ಜಪ್ತಿ‌ ಮಾಡಿದ್ದಾರೆ.

ಮೂರು‌ ಗಾಂಜಾ ಕೇಸ್‌ನಲ್ಲಿ ಒಟ್ಟು ೭ ಜ‌ನ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದು ಒಂದು ಕಾರು, ಒಂದು ಲಾರಿ, ನಾಲ್ಕು ಮೊಬೈಲ್ಸ್ ಹೀಗೇ ಒಟ್ಟು ೪೧ ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಜಪ್ತಿ ಮಾಡಿದ್ದಾರೆ. ಗಾಂಜಾಕೋರರನ್ನು ಹೆಡೆಮುರಿ ಕಟ್ಟಿದ ಪೊಲೀಸರಿಗೆ ಒಂದು ಲಕ್ಷ ಬಹುಮಾನವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಿಶೋರ ಬಾಬು ಘೋಷಣೆ ಮಾಡಿದ್ದಾರೆ.


ವರದಿ: ನಂದಕುಮಾರ ಕರಂಜೆ, ಬೀದರ

RELATED ARTICLES

Most Popular

error: Content is protected !!
Join WhatsApp Group