spot_img
spot_img

ಭಾರತೀಯರಿಗೊಂದು ಸಂದೇಶ

Must Read

- Advertisement -

ನಾವು ಹಿಂದೂಗಳಾಗಿ ಮಾಡಿದ್ದೇನು? ಕೊಟ್ಟಿದ್ದು ಯಾರಿಗೆ? ಪಡೆದದ್ದು ಯಾರಿಂದ? ನಾವ್ಯಾರು? ಈ ಪ್ರಶ್ನೆಗೆ ಉತ್ತರ ನಮ್ಮ ವ್ಯವಹಾರದಲ್ಲಿ ಸಿಗಬಹುದು. ಕೊರೊನವನ್ನು ಈಗಲಾದರೂ ಆಧ್ಯಾತ್ಮಿಕವಾಗಿ ಅರ್ಥ ಮಾಡಿಕೊಂಡರೆ ಧರ್ಮದ ಜೊತೆಗೆ ಸತ್ಯವನ್ನೂ ರಕ್ಷಣೆ ಮಾಡಬಹುದು.

ಮೊದಲಿಂದಲೂ ಧಾರ್ಮಿಕ ಕ್ಷೇತ್ರದವರಿಗೆ ಮಾನವೀಯತೆಯ ಸತ್ಯ ತಿಳಿಸುವ ಆಧ್ಯಾತ್ಮದ ವಿಚಾರವನ್ನು ಕಳಿಸಿದರೂ ಈವರೆಗೆ ಬಾಯಿಮುಚ್ಚಿಕೊಂಡು ತಮ್ಮ ವ್ಯವಹಾರವೇ ದೊಡ್ಡದು ಎಂದರೆ ವ್ಯವಹಾರದಿಂದ ಪಡೆದ ಲಾಭವನ್ನು ಕಕ್ಕುವ ಕಾಲವೂ ಬರುತ್ತದೆ. ಸತ್ಯಕ್ಕೆ ಬೆಲೆಕೊಡದ ಧರ್ಮದಿಂದ ಪಡೆದದ್ದುಎಷ್ಟು?

ಕಳೆದುಕೊಳ್ಳುವುದು ಎಷ್ಟು? ಸತ್ಯವೇ ದೇವರಾದಾಗ ಅದರ ವಿರುದ್ದ ನಿಲ್ಲುವುದು ಧರ್ಮವೆ? ಸಾಮಾನ್ಯರನ್ನು ಅಸತ್ಯದಿಂದ ಹೊರಗೆಳೆದು ತಮ್ಮ ಜೀವನ ನಡೆಸಬಹುದು. ಆದರೆ ನಮ್ಮ ಜೀವಕ್ಕೆ ಮುಕ್ತಿ ಸಿಗೋದು ಸತ್ಯದಿಂದ ಎನ್ನುವ ಸಾಮಾನ್ಯಜ್ಞಾನ ನಮಗಿದ್ದರೆ ಉತ್ತಮ. ಕೊರೊನ ರೂಪದಲ್ಲಿರುವ ಮಹಾಮಾರಿಯು ಧರ್ಮದ ಜೊತೆಗೆ ಸತ್ಯ ಬೇಡವೆ?.

- Advertisement -

ಈವರೆಗೆ ಕಳುಹಿಸಿದ ಲೇಖನಗಳನ್ನು ದೇಶದ ಸಾಮಾನ್ಯಪ್ರಜೆಗಳಾಗಿ ಓದಿದರೆ ಮಾತ್ರ ನಮ್ಮ ಇಂದಿನ ಪರಿಸ್ಥಿತಿಗೆ ಕಾರಣದ ಜೊತೆಗೆ ಪರಿಹಾರವನ್ನು ನಮ್ಮಲ್ಲಿ ಕಂಡುಕೊಳ್ಳಲು ಸಾಧ್ಯ.ಮುಚ್ಚಿ ಹಾಕೋದರಲ್ಲಿ ಅರ್ಥ ಇಲ್ಲ. ಯಾರ ಭವಿಷ್ಯ ಯಾರ ಕೈಯಲ್ಲೂ ಇಲ್ಲ. ನಮ್ಮ ಸತ್ಯದಲ್ಲಿದೆ. ಜೀವನ ಎಂದರೆ ಜೀವಿಗಳ ವನ.ಎಲ್ಲರಿಗೂ ಜೀವಿಸುವ ಅಧಿಕಾರ ವಿದೆ ಎಂದಾಗ ಎಲ್ಲರಿಗೂ ಸತ್ಯದ ಅಗತ್ಯವಿದೆ. ಅದ್ವೈತದಲ್ಲಿ ದ್ವೈತ ದ ರಾಜಕೀಯವಿದ್ದರೆ ಧರ್ಮವೆಲ್ಲಿದೆ? ಸತ್ಯವೆಲ್ಲಿದೆ?  ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಶೂದ್ರ ವರ್ಣದ ಪ್ರಕಾರ ಇಂದು ಎಲ್ಲರಿಗೂ ಮೂರನೆಯ ಅಂಗವಾದ ವ್ಯವಹಾರವೇ ಮುಖ್ಯ.

ಹಾಗಾದರೆ ಮೇಲಿನ ಎರಡೂ ಬಿಟ್ಟ ಜೀವಕ್ಕೆ ಮುಕ್ತಿ ಸಿಗುವುದೆ? ಹಿಂದಿನ ಪುರಾಣ,ಇತಿಹಾಸವು ರಾಜರ ಕಾಲದಲ್ಲಿದ್ದ ಸತ್ಯ. ಈಗ ಪ್ರಜಾಪ್ರಭುತ್ವದಲ್ಲಿ ನಾವ್ಯಾರು? ಈ ಪ್ರಶ್ನೆ ಹಾಕಿಕೊಳ್ಳುವ ಬದಲಾಗಿ ನಾನೇ ದೇವರು ಎನ್ನುವ ಅಹಂಕಾರ, ಸ್ವಾರ್ಥ ದಲ್ಲಿ ಜನಸಾಮಾನ್ಯರ ಸಾಮಾನ್ಯಜ್ಞಾನವನ್ನು ಹಿಂದಕ್ಕೆ ತಳ್ಳಿ ಕಾಣದ ದೇವರ ಹೆಸರಲ್ಲಿ ವ್ಯವಹಾರ ನಡೆಸಿದರೆ ಹಣದ ಲಾಭ ಹೆಚ್ಚಾದರೂ ಜ್ಞಾನದ ನಷ್ಟ ತುಂಬುವುದು ಸಾಧ್ಯವೆ?

ಸಾಮಾನ್ಯಜ್ಞಾನ ದಿಂದ ಮಾನವನಾಗಿ ನಂತರ ಮಹಾತ್ಮರಾಗಲು ತಿಳಿಸಿದ ಶಿವ ಶರಣರ ಕಾಯಕವೆ ಕೈಲಾಸ ಇಂದು ಕೈಲಾಸವನ್ನೇ ಕಾಯಕ  ಮಾಡಿಕೊಂಡರೆ ಸೋಮಾರಿಗಳ ಸಂಖ್ಯೆ ಬೆಳೆದಾಗ ಮಾರಿಯ ದರ್ಶನ ಸಹಜ. ಈಗಲೂ ಭಿನ್ನಾಭಿಪ್ರಾಯ ದಲ್ಲಿ ಕಾಲಹರಣಮಾಡಿಕೊಂಡು ರಾಜಕೀಯದೆಡೆಗೆ ಮುಖ ಮಾಡಿಕೊಂಡರೆ ಒಮ್ಮೆ ಜೀವ ಹೋಗೋದೆ. ಆದರೆ ಜೀವಾತ್ಮ ಪರಮಾತ್ಮನೆಡೆಗೆ ಸಾಗಲು ರಾಜಕೀಯದ ಅಗತ್ಯವಿದೆಯೆ? ರಾಜಯೋಗದ ಅಗತ್ಯವಿದೆಯೆ

- Advertisement -

ಸಾಮಾನ್ಯಪ್ರಜೆಯಾಗಿದ್ದು ಈ ವಿಚಾರ ಬರೆದಾಗ ಯಾರೂ ಇದಕ್ಕೆ ಬೆಲೆಕೊಡುವುದಿಲ್ಲ. ಹಾಗಂತ ಸತ್ಯಕ್ಕೆ ಬೆಲೆಕೊಡದೆ ಉಚಿತವಾಗಿ ತಿಳಿದರೂ ಸತ್ಯಜ್ಞಾನವಾಗೋದಿಲ್ಲ. ಮಿಥ್ಯಕ್ಕೆ ಕೊಡುವ ಕೋಟ್ಯಾಂತರ ಹಣದಿಂದ ಭಾರತ ಪಡೆದದ್ದು ಏನು? ಕಳೆದುಕೊಂಡದ್ದು ಏನು? ಸ್ತ್ರೀ ಜ್ಞಾನವನ್ನು ಭಾರತೀಯರೆ ಹಿಂದಕ್ಕೆ ತಳ್ಳಿ ಆಳೋದರಲ್ಲಿ ಧರ್ಮವೇ ಇಲ್ಲ.

ಹಿಂದೂ ಧರ್ಮ ಹಿಂದುಳಿದಿರೋದು ಇದೇ ಕಾರಣಕ್ಕೆ. ಇದನ್ನು ಪ್ರಶ್ನೆ ಮಾಡಿದರೆ ಹಿಂದೂ ವಿರೋಧಿಗಳು ಆಗುತ್ತಾರೆಯೆ?  ನಿನ್ನ ನೀ ತಿಳಿದು ನಡೆ, ಎಲ್ಲರೊಳಗೊಂದಾಗು, ಪರಮಾತ್ಮನ ಸತ್ಯವನ್ನು ತಿಳಿದು ನಡೆ, ಒಗ್ಗಟ್ಟಿನಿಂದ ಅದ್ವೈತ. ರಾಜಯೋಗದೊಳಗಿದೆ ಜ್ಞಾನ, ದೇಶ ಒಂದೆ, ಧರ್ಮ ಒಂದೇ ಜಾತಿ ಒಂದೇ, ಜನ್ಮವೂ ಒಂದೇ ಆಗಬೇಕಾದರೆ ಇವುಗಳ ಒಳಗಿನ ಸತ್ಯವನ್ನು ಒಂದಾಗಿ ತಿಳಿಯಬೇಕಿತ್ತು. ಕಾಲದ ಪ್ರಭಾವ ಅನುಭವದ ಕೊರತೆ,ಜನರನ್ನು ಹೊರಗಿನ ಸತ್ಯದ ಕಡೆಗೆ ನಡೆಸಿ, ಒಳಗಿನ ಸತ್ಯವನ್ನು ಬಿಟ್ಟು ನಡೆಯುವಂತಾಯಿತು.

ಇದಕ್ಕೆ ತಕ್ಕಂತೆ ಸಹಕಾರವೂ ಜನ ನೀಡಿದಾಗ ಅದರ ಪ್ರಭಾವ ಬೆಳೆಯಿತು. ಈಗ ಕೊರೊನ ಮಹಾಮಾರಿ ಹೊರಗಿನಿಂದಲೇ ಬಂದು ಸವಾಲಾಗಿ ಜೀವ ತೆಗೆದುಕೊಂಡು ಹೋಗುವಾಗ ಯಾರು ಬರುತ್ತಾರೆ? ಜೀವ ಹೋಗುವುದು ಸಹಜ.ಅದರೊಡನೆ ಅಸತ್ಯ,ಅಧರ್ಮ, ಅನ್ಯಾಯ, ಭ್ರಷ್ಟಾಚಾರವೂ ಹೊತ್ತು ಹೋದರೆ ಮತ್ತೆ ಬಂದಾಗ ಅದೇ ಭೂಮಿ ಆಳೋದಲ್ಲವೆ? ಇದಕ್ಕೆ ಈಗಲೇ ನಮ್ಮ ಮಕ್ಕಳಿಗೆ ಸದ್ಗುಣ,ಸತ್ಯ,ಧರ್ಮ, ಸದಾಚಾರ, ಸಾತ್ವಿಕತೆ, ಸತ್ಸಂಗ, ಸಾಮಾನ್ಯಜ್ಞಾನದ ಶಿಕ್ಷಣ
ಮನೆಯೊಳಗಿದ್ದವರು ಕೊಟ್ಟರೆ ಸದ್ಗತಿ.

ಇದನ್ನು ಹೊರಗಿನ ಶಿಕ್ಷಣವಾಗಲಿ,ಸರ್ಕಾರ ವಾಗಲಿ ನೀಡುವುದೆಂದರೆ ಸಮಯ ವ್ಯರ್ಥ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಬದಲಾಗಬೇಕಿದೆ. ಧಾರ್ಮಿಕ ಕ್ಷೇತ್ರದಲ್ಲಿ ಮುಖ್ಯವಾಗಿ ಬದಲಾವಣೆ ಆಗಬೇಕು. ಜನರ ಹಣದಿಂದ ತಮ್ಮ ಜೀವನ ನಡೆಸುತ್ತಿರುವಾಗ ಅವರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಜ್ಞಾನವಿಲ್ಲವೆ? ಜ್ಞಾನಕ್ಕೆ ಹಣ ಬೇಕೆ? ಕೆಲವರು ಈಗ ಈ ಕಾರ್ಯ ಮಾಡುತ್ತಿದ್ದಾರೆ.

ಆದರೆ, ಅಜ್ಞಾನಕ್ಕೆ ಮದ್ದಿಲ್ಲ ಎನ್ನುವ ಹಾಗೆ ಎಷ್ಟೋ ಜನರಿಗೆ ಇದರ ಬಗ್ಗೆ ತಿಳುವಳಿಕೆಯಿಲ್ಲದೆ ವಿರೋಧಿಗಳಾಗಿದ್ದರೂ ತಿಳಿದವರಿಗೆ ಸಹಕರಿಸಿದರೆ ಧರ್ಮ. ಆದರೆ ಇದರಲ್ಲಿ ಬೇಧಭಾವದ ಕಿಡಿ,ರಾಜಕೀಯದ ಅಹಂಕಾರ, ಸ್ವಾರ್ಥ ಬೆರೆಸಿ ಆಳೋದಕ್ಕೆ ಹೋದರೆ ಪರಿಣಾಮ ಕೆಟ್ಟದಾಗಿರುತ್ತದೆ. ಇಷ್ಟಕ್ಕೂ ನಾವು ಬಂದಿರುವುದು ಯಾಕೆ? ಕೊಟ್ಟು ಹೋಗುವುದಕ್ಕೋ  ಪಡೆದು ಹೋಗುವುದಕ್ಕೋ? ಇದರಲ್ಲಿ ಹಣವೂ ಇದೆ,ಜ್ಞಾನವೂ ಇದೆ.

ಸತ್ಯವಿಲ್ಲದಿರೋದೆ ನಮ್ಮ ಹಿಂದೂಳಿಯುವಿಕೆಗೆ ಕಾರಣವಾಗಿದೆ. ಬ್ರಾಹ್ಮಣ ಕನ್ಯೆಯರು ವಿಜಾತಿಯವರನ್ನು ಮದುವೆ ಮಾಡಿಕೊಂಡು ನಡೆಯಲು ಅಜ್ಞಾನದ ರಾಜಕೀಯತೆಯೇ ಕಾರಣ. ಇದರ ಬಗ್ಗೆ ನಿಜವಾದ ಬ್ರಾಹ್ಮಣವರ್ಗ ಎಚ್ಚರವಾದರೆ ಉತ್ತಮ ಬ್ರಹ್ಮಜ್ಞಾನ.

ಸಾಮಾನ್ಯಜ್ಞಾನವಿಲ್ಲದೆ ಬ್ರಹ್ಮಜ್ಞಾನ ಓದಿ ಪಡೆಯಬಹುದು. ಆದರೆ ಅದನ್ನು ಒಳಗೆ ಅಳವಡಿಸಿಕೊಳ್ಳಲು ಸಾಮಾನ್ಯಜ್ಞಾನವಿಲ್ಲದೆ ಕಷ್ಟ.
ಹಿಂದೂಧರ್ಮವನ್ನು ಯಾರೂ ಹಿಂದುಳಿಸಿಲ್ಲ. ಹಿಂದೂಗಳ ಭಿನ್ನಾಭಿಪ್ರಾಯ ದ ರಾಜಕೀಯವೆ ಇದಕ್ಕೆ ಕಾರಣವಷ್ಟೆ.

ಸ್ತ್ರೀ ಶಕ್ತಿಯನ್ನು ಮನಸ್ಸಿಗೆ ಬಂದಹಾಗೆ ಬಳಸಿದರೆ ಸಿಡಿದ ಸ್ತ್ರೀ ಜೀವ ತನ್ನ ಜೀವಕ್ಕಾಗಿ ಹೊರ ನಡೆದಾಗ ನಷ್ಟ ಯಾರಿಗೆ?ಭೂಮಿ ಬಿಟ್ಟು ಆಕಾಶದಲ್ಲಿ ಜೀವನ ನಡೆಸಬಹುದೆ? ಹಿಂದಿನ ಜನ್ಮದ ಕರ್ಮಕ್ಕೆ ತಕ್ಕಂತೆ ಜನ್ಮ ಎಂದಾಗ ಇಂದಿನ ಕರ್ಮಕ್ಕೆ ತಕ್ಕಂತೆ ಮುಂದಿನ ಜನ್ಮವಿದೆ. ಸತ್ಯದ ಜೊತೆಗೆ ಧರ್ಮ ವಿದ್ದರೆ ಸಮಾನತೆ.

ತಕ್ಕಡಿಯಲ್ಲಿ ವಸ್ತು ಗಳನ್ನು ತೂಕ ಮಾಡಿ ವ್ಯವಹಾರ ನಡೆಸಿದಂತೆ ಮಾನವನ ಜ್ಞಾನದಲ್ಲಿಯೂ ಸಮಾನತೆಯನ್ನು ಕಾಣೋ ಪ್ರಯತ್ನವಿದ್ದರೆ ಇಲ್ಲಿ ಮೇಲು ಕೀಳು ಇಲ್ಲವಲ್ಲ. ಸ್ವತಂತ್ರ ಭಾರತದಲ್ಲಿ ಪ್ರಜೆಗಳ ಸ್ವತಂತ್ರ ಜ್ಞಾನಕ್ಕೆ ಬೆಲೆಕೊಡದೆ ವಿಶೇಷಜ್ಞಾನಕ್ಕೆ ಬೆಲೆಕೊಟ್ಟು ಅತಂತ್ರಸ್ಥಿತಿಗೆ ಜೀವ ತಲುಪಿದೆ.

ನನ್ನ ಪ್ರಕಾರ ಇಲ್ಲಿ ತಪ್ಪು ನಡೆದಿರೋದು ಸಹಕಾರ ನೀಡಿದ ಪ್ರಜೆಗಳಿಂದಲೇ. ನಮ್ಮ ಬೌತಿಕಾಸಕ್ತಿ ಬೆಳೆದು ನಿಂತಾಗ ಹೊರಗಿನ ಸತ್ಯವೇ ನಮ್ಮನ್ನು ನಡೆಸುತ್ತದೆ. ಆದರೆ ಒಳಗಿನ ಸತ್ಯದಿಂದ ದೂರಬಂದ ಮನಸ್ಸು ನಮ್ಮೊಳಗೇ ಇರೋವಾಗ ಅದನ್ನು ಹಿಡಿದಿಟ್ಟುಕೊಳ್ಳುವ ಬದಲು ಹೊರಗಿನ ಜನರನ್ನು ಹಿಡಿದಿಟ್ಟು ಕೊಳ್ಳಲು ರಾಜಕೀಯಕ್ಕೆ ಇಳಿದರೆ ಧರ್ಮವೆ?

“ಮಾತೃಭಾಷಾಶಿಕ್ಷಣದ ಮಹತ್ವ”, “ಪ್ರಜಾಪ್ರಭುತ್ವ ಮತ್ತು ಧರ್ಮ”, ಇತ್ತೀಚೆಗೆ ಬಿಡುಗಡೆ ಯಾದ” ರಾಜಕೀಯ ಮತ್ತು ಮಾಧ್ಯಮ” ಈ ಮೂರೂ ಪುಸ್ತಕಗಳಲ್ಲಿ ರಾಜಯೋಗದ ವಿಚಾರಗಳು ಸಾಮಾನ್ಯರಿಗೆ ಅರ್ಥ ಆಗುವ ಹಾಗೆ ಸರಳವಾಗಿ ತಿಳಿಸಿದೆ. ಇದನ್ನು ಪ್ರತಿಷ್ಟಿತರು ತಡೆದು ತಮ್ಮ ವ್ಯವಹಾರ,ಅಧಿಕಾರ, ಹಣವೇ ಮುಖ್ಯವೆಂದರು.

ಸಾಮಾನ್ಯರು ಪ್ರತಿಷ್ಟಿತರ ಹಿಂದೆ ನಡೆದರು. ಇದರಿಂದಾಗಿ ಆದ ಲಾಭ ನಷ್ಟ ಯಾರಿಗೆ? ಇದನ್ನು ನಾವೇ ತಿಳಿದರೆ ಉತ್ತಮ. ತತ್ವಜ್ಞಾನವನ್ನು ವ್ಯವಹಾರಕ್ಕೆಳೆದು ತಂತ್ರಜ್ಞಾನದ ಜೀವನ ನಡೆಸಿರುವಾಗ ಜ್ಞಾನವಿಜ್ಞಾನವೆರಡೂ ನಮ್ಮನ್ನು ಆಳುತ್ತದೆ. ಆಳಾಗಿ ದುಡಿಯುವುದಷ್ಟೆ ಸತ್ಯ.”ಕುಳಿತು ತಿನ್ನುವವನಿಗೆ ಕುಡಿಕೆ ಹಣ ಸಾಲದು” ಭಾರತೀಯರ ಕಥೆ ವ್ಯಥೆಯಾಗಿರೋದು ಇದರಲ್ಲಿಯೇ. ಒಂದು ಸತ್ಕರ್ಮದಿಂದ ದುಡಿದು ಸಾಲ ತೀರಿಸಬೇಕು.

ಇನ್ನೊಂದು ಸತ್ಯವೇ ದೇವರಾಗಬೇಕು. “ಮಾಡಿದ್ದುಣ್ಣೋ ಮಹಾರಾಯ” ಎನ್ನುವುದು ಇದಕ್ಕೆ. ಉತ್ತರ ಕೊಡದೆ ಸುಮ್ಮನಿರುವುದರಿಂದ ಸತ್ಯ ಅಸತ್ಯ ಆಗೋದಿಲ್ಲ. ಅದರ ಪ್ರಭಾವ ಹೆಚ್ಚಾಗುತ್ತದೆ. ತಪ್ಪಿದ್ದರೆ ತಿದ್ದಬಹುದು. ತಪ್ಪನ್ನೇ ಮಾಡುತ್ತಿದ್ದರೆತಿದ್ದುವವರು ಯಾರು? ಕಾಲಪ್ರಭಾವನಾವು ಮಾಡಿದ್ದೆಲ್ಲಾ ಸರಿ ಆಗಿದ್ದರೆ ಈ ಕೊರೊನ ಮೂಲಕ ಆ ತಾಯಿ ಬರುತ್ತಿರಲಿಲ್ಲ. ಕಾಣದ ಶಕ್ತಿಯನ್ನುಕಾಣೋ ಪ್ರಯತ್ನ‌ ಮಾಡಿದರೆ ಉತ್ತಮ.🙏

ಮಧ್ಯವರ್ತಿಗಳು, ಮಾಧ್ಯಮಗಳು, ಮಾನವರಷ್ಟೆ.ಮಹಾತ್ಮ ಆಗೋದಕ್ಕೆ ಮುಂದೆ ಸತ್ಯದಲ್ಲಿ ನಡೆಯಬೇಕು. ಇಲ್ಲಿ ಧಾರ್ಮಿಕ, ರಾಜಕೀಯ, ಆರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿ ವ್ಯವಹಾರಜ್ಞಾನ ಮಿತಿಮೀರಿ ರಾಜಕೀಯ ನಡೆಸಿ,ಜನರನ್ನು ಆಳಲು ಹೊರಟು ಅಜ್ಞಾನ ಬೆಳೆದಿದೆ ಎನ್ನಬಹುದಷ್ಟೆ.

ಇದನ್ನು ಯಾರಿಗೆ ತಿಳಿಸಿರುವುದೆಂದು ಯಾರೂ ತಿಳಿಯೋ ಅಗತ್ಯವಿಲ್ಲ. ಕಾರಣ ಸತ್ಯ ಎಲ್ಲರಿಗೂ ತಲುಪಬೇಕಷ್ಟೆ. ನಮ್ಮ ಸತ್ಯಕ್ಕೆ ನಾವೇ ರಾಜರು. ಅಸಹಕಾರ ಚಳುವಳಿ ಈಗ ಯಾರ ವಿರುದ್ದ ನಡೆಸಬೇಕು? ನಮ್ಮೊಳಗೇ ಇರುವ ರಾಜಕೀಯದ ವಿರುದ್ದವಲ್ಲವೆ?

ದಿನಕ್ಕೊಂದು ಸಾಮಾನ್ಯಜ್ಞಾನ.

ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ರಾಜಕೀಯದತ್ತ ಮುಖಮಾಡಿಕೊಂಡು ನಮ್ಮ ಜೀವ,ಜೀವನವನ್ನು ಸರ್ಕಾರ ನೋಡಿಕೊಳ್ಳುತ್ತದೆ ಎನ್ನುವುದರಲ್ಲಿಯೇ ಕಾಲಹರಣ ಮಾಡಿದರೆ ಜೀವ,ಸರ್ಕಾರ ಎರಡೂ ಶಾಶ್ವತವಲ್ಲ. ನಮ್ಮೊಳಗಿನ ಸತ್ಯವಷ್ಟೆ ಶಾಶ್ವತ.

ಯಾವ ಜೀವ ಯಾವ ದೇವರೊಳಗಿದೆಯೋ ಅಸುರರೊಳಗಿದೆಯೋ ಕಂಡವರು ಯಾರು? ರಾಜಯೋಗವೆಂದರೆ ಇದನ್ನು ಕಂಡುಕೊಳ್ಳಲು ಪ್ರಯತ್ನಪಡುವುದು.ಇದು ಒಳಗಿದೆ ಹೊರಗಿಲ್ಲ. ಯಾರೂ ಶಾಶ್ವತವಲ್ಲ. ಕೊರೊನ ಮರುಕಳಿಸಲು ಇದೇ ಕಾರಣ.ಸಾಧ್ಯವಾದಷ್ಟು ಶಾಶ್ವತದೆಡೆಗೆ ಹೆಜ್ಜೆ ಇಟ್ಟರೆ ಸದ್ಗತಿ.

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ರೈತ ಆತ್ಮಹತ್ಯೆ ; ಶಾಸಕರ ಸಾಂತ್ವನ

ಸಿಂದಗಿ; ಸಾಲದ ಬಾಧೆಗೆ ಆತ್ಮಹತ್ಯೆ ಪರಿವಾರವಲ್ಲ. ಕಾಲದ ವೈಪರೀತ್ಯದಿಂದ ಮಳೆಯಾಗದೇ ಇಂತಹ ದುಸ್ತರ ಪರಿಸ್ಥಿತಿ ಬಂದೊದಗಿದ್ದು ರೈತರ ಕಷ್ಟಗಳಿಗೆ ಸರಕಾರ ಸ್ಪಂದಿಸುತ್ತದೆ ಅಲ್ಲದೆ ನಿಮ್ಮ ಕಷ್ಟಕ್ಕೆ...
- Advertisement -

More Articles Like This

- Advertisement -
close
error: Content is protected !!
Join WhatsApp Group