spot_img
spot_img

ಲಿಂಗಾಯತ ಸಂಘಟನೆಯಿಂದ ಅಕ್ಕಮಹಾದೇವಿ ಜಯಂತಿ ಆಚರಣೆ

Must Read

- Advertisement -

ಬೆಳಗಾವಿ – ದಿನಾಂಕ 28-04-2024 ರಂದು ಮಹಾಂತೇಶ ನಗರದ ಹಳಕಟ್ಟಿ ಭವನದಲ್ಲಿ ರವಿವಾರದ ಸತ್ಸಂಗ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಬೆಳಗಾವಿಯ ಖ್ಯಾತ ವಾಗ್ಮಿಗಳು, ಚಿಂತಕರು ಆದ ಪ್ರಾಧ್ಯಾಪಕಿ ಡಾ. ಮೈತ್ರೇಯಿನಿ ಗದಿಗೆಪ್ಪಗೌಡರ ಅವರಿಂದ ಅಕ್ಕನ ಜಯಂತಿ ಕುರಿತಾದ ಉಪನ್ಯಾಸ ಕಾರ್ಯಕ್ರಮ ಜರುಗಿತು.

12 ನೇ ಶತಮಾನದ ಶರಣ ಕ್ರಾಂತಿಯ ಪ್ರತಿರೂಪವೇ ಆದ ಅಕ್ಕಮಹಾದೇವಿ ಪ್ರಭುತ್ವ ಮತ್ತು ಪತಿತ್ವವನ್ನು ಪ್ರಶ್ನೆ ಮಾಡುತ್ತಾ ತನ್ನ ಅರಿವಿನ, ಜ್ಞಾನದ ಬೆಳಕಿನಲ್ಲಿ ತನ್ನದೇ ಆದ ಹೊಸ ಹಾದಿ ನಿರ್ಮಿಸಿ ವೈರಾಗ್ಯದ ಮೇರುಗಿರಿಯಾದಳು. ತನ್ನ ಅಧ್ಯಾತ್ಮದ ಗುರಿಯೆಡೆಗೆ ಸಾಗುವಲ್ಲಿ ಎದುರಾದ ಸವಾಲುಗಳನ್ನು ಸಮರ್ಥವಾಗಿ ಸ್ವೀಕರಿಸಿ, ಪ್ರಶ್ನೆ ಮಾಡುವ ಹಕ್ಕು ಹೆಣ್ಣಿಗೂ ಇದೆ ಎನ್ನುವದನ್ನು ತನ್ನ ಉಡುತಡಿಯಿಂದ ಕಲ್ಯಾಣದ ಮೂಲಕ ಕದಳಿಯವರೆಗಿನ ಪಯಣದಲ್ಲಿ ಸಾಕ್ಷಿಯಾದಳು. ತಾತ್ವಿಕ ಮತ್ತು ಪ್ರಾಯೋಗಿಕ ನೆಲೆಗಟ್ಟಿನಲ್ಲಿ ಶರಣರ ಬದುಕು ಮತ್ತು ಬರಹ ರೂಪದ ವಚನಗಳು ನಮಗೆ ಶರಣ ಕ್ರಾಂತಿಯ ಮೂಲ ಆಶಯಗಳನ್ನು ಪ್ರತಿಬಿಂಬಿಸುತ್ತವೆ ಎನ್ನುವುದನ್ನು ಅಕ್ಕನ ಯೋಗಾಂಗ ತ್ರಿವಿದಿ ಮತ್ತು ಶೂನ್ಯ ಸಂಪಾದನೆಯ ಹಲವಾರು ಸಾಂದರ್ಭಿಕ ಪ್ರಸಂಗಗಳ ಮೂಲಕ ಮನಮುಟ್ಟುವಂತೆ ಪ್ರಾಧ್ಯಾಪಕಿ ಡಾ. ಮೈತ್ರೇಯಿನಿ ಗದಿಗೆಪ್ಪಗೌಡರ ವಿವರಿಸಿದರು.

- Advertisement -

ಸಂಘಟನೆಯ ಅಧ್ಯಕ್ಷರಾದ ಶರಣ  ಈರಣ್ಣ ದೆಯನ್ನವರ ಮಾತನಾಡುತ್ತಾ ಮುಂಬರುವ ಬಸವ ಜಯಂತಿ ಆಚರಣೆ ಕುರಿತು ಲಿಂಗಾಯತ ಸಂಘಟನೆ ಹಮ್ಮಿಕೊಳ್ಳುವ ಹಲವಾರು ವಿಧಾಯಕ ಕಾರ್ಯಗಳ ಕುರಿತಾಗಿ ಪ್ರಸ್ತಾಪಿಸಿದರು.

ಡಾ. ದಿನೇಶ ಪಾಟೀಲ ಅವರ ಮೂಲಕ ಪಾರಂಪರಿಕ ವೈದ್ಯ ಪದ್ಧತಿ ಕುರಿತಾಗಿ ಮಾರ್ಗದರ್ಶನ ಮತ್ತು ಚಿಕಿತ್ಸೆಯನ್ನು ಕೂಡ ಹಮ್ಮಿಕೊಳ್ಳಲಾಗಿತ್ತು. ಡಾ. ಶುಭಾಷ ಮಾರಿಹಾಳ ಅವರ ನೇತೃತ್ವದಲ್ಲಿ ಕಣ್ಣಿನ ಸುರಕ್ಷಾ ಹನಿ ಹಾಕುವದರ ಜೊತೆಗೆ, ಅದರ ಪ್ರಯೋಜನಗಳನ್ನು ಕೂಡ ವೇದಿಕೆಯಲ್ಲಿ ತಿಳಿಸಲಾಯಿತು.

ಶರಣರಾದ ಓಂಕಾರ ಶಿವಾನಂದ ಚಾವಲಗಿ ಕುಟುಂಬದವರಿಂದ ಪ್ರಸಾದ ಸೇವೆ ನೆರವೇರಿತು.ಮಹಾದೇವಿ ಅರಳಿ ಅವರ ನೇತೃತ್ವದಲ್ಲಿ ವಚನ ಪ್ರಾರ್ಥನೆ ನೆರವೇರಿತು. ಏಪ್ರಿಲ್ ತಿಂಗಳಲ್ಲಿ ಹುಟ್ಟುಹಬ್ಬ ಮತ್ತು ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಎಲ್ಲಾ ಶರಣರನ್ನು ಹಾಗೂ ಶರಣ ದಂಪತಿಗಳನ್ನು ವೇದಿಕೆಯ ಮೂಲಕ ಗೌರವಿಸಿ ಶುಭಾಶಯ ಕೋರಲಾಯಿತು. ಶರಣೆ ಕಮಲಾ ಗಣಾಚಾರಿ ನಿರೂಪಣೆ ನೆರವೇರಿಸಿದರು. ಶಶಿಭೂಷಣ ಪಾಟೀಲ, ವಿ.ಕೆ.ಪಾಟೀಲ, ವಿ. ಬಿ. ದೊಡಮನಿ, ಸಂಗಮೇಶ ಅರಳಿ, ಸುರೇಶ ನರಗುಂದ, ಬಾಬಣ್ಣ ತಿಗಡಿ, ಅನಸೂಯಾ ಬಶೆಟ್ಟಿ, ಮಂಗಲಾ ಕಾಕತಿಕರ್, ಸತೀಶ ಕಲಸನ್ನವರ, ರಾಜು ಪದ್ಮಣ್ಣವರ, ಆನಂದ ಕರ್ಕಿ, ಸತೀಶ ಚೌಗಲಾ ಒಳಗೊಂಡಂತೆ ಲಿಂಗಾಯತ ಸಂಘಟನೆಯ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಕಾರ್ಯಕ್ರಮದ ಆಯೋಜನೆ ಮತ್ತು ಯಶಸ್ವಿಗೆ ಸಾಕ್ಷಿಯಾದರು.ಮೂಲಕ ಪಾರಂಪರಿಕ ವೈದ್ಯ ಪದ್ಧತಿ ಕುರಿತಾಗಿ ಮಾರ್ಗದರ್ಶನ ಮತ್ತು ಚಿಕಿತ್ಸೆಯನ್ನು ಕೂಡ ಹಮ್ಮಿಕೊಳ್ಳಲಾಗಿತ್ತು.

- Advertisement -

ಡಾ. ಶುಭಾಷ ಮಾರಿಹಾಳ ಅವರ ನೇತೃತ್ವದಲ್ಲಿ ಕಣ್ಣಿನ ಸುರಕ್ಷಾ ಹನಿ ಹಾಕುವದರ ಜೊತೆಗೆ, ಅದರ ಪ್ರಯೋಜನಗಳನ್ನು ಕೂಡ ವೇದಿಕೆಯಲ್ಲಿ ತಿಳಿಸಲಾಯಿತು. ಶರಣರಾದ ಓಂಕಾರ ಶಿವಾನಂದ ಚಾವಲಗಿ ಕುಟುಂಬದವರಿಂದ ಪ್ರಸಾದ ಸೇವೆ ನೆರವೇರಿತು.ಮಹಾದೇವಿ ಅರಳಿ ಅವರ ನೇತೃತ್ವದಲ್ಲಿ ವಚನ ಪ್ರಾರ್ಥನೆ ನೆರವೇರಿತು. ಏಪ್ರಿಲ್ ತಿಂಗಳಲ್ಲಿ ಹುಟ್ಟುಹಬ್ಬ ಮತ್ತು ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಎಲ್ಲಾ ಶರಣರನ್ನು ಹಾಗೂ ಶರಣ ದಂಪತಿಗಳನ್ನು ವೇದಿಕೆಯ ಮೂಲಕ ಗೌರವಿಸಿ ಶುಭಾಶಯ ಕೋರಲಾಯಿತು. ಶರಣೆ ಕಮಲಾ ಗಣಾಚಾರಿ ನಿರೂಪಣೆ ನೆರವೇರಿಸಿದರು.

ಶಶಿಭೂಷಣ ಪಾಟೀಲ, ವಿ.ಕೆ.ಪಾಟೀಲ, ವಿ. ಬಿ. ದೊಡಮನಿ, ಸಂಗಮೇಶ ಅರಳಿ, ಸುರೇಶ ನರಗುಂದ, ಬಾಬಣ್ಣ ತಿಗಡಿ, ಅನಸೂಯಾ ಬಶೆಟ್ಟಿ, ಮಂಗಲಾ ಕಾಕತಿಕರ್, ರಮೇಶ ಕಲಸನ್ನವರ,ಶಂಕರ ಶೆಟ್ಟಿ,ರಾಜು ಪದ್ಮಣ್ಣವರ, ಆನಂದ ಕರ್ಕಿ, ಸತೀಶ ಚೌಗಲಾ ಒಳಗೊಂಡಂತೆ ಲಿಂಗಾಯತ ಸಂಘಟನೆಯ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಕಾರ್ಯಕ್ರಮದ ಆಯೋಜನೆ ಮತ್ತು ಯಶಸ್ವಿಗೆ ಸಾಕ್ಷಿಯಾದರು.

- Advertisement -
- Advertisement -

Latest News

ಕನ್ನಡಕ್ಕಾಗಿ ಇನ್ನೂ ಹೋರಾಡಬೇಕಾಗಿರುವುದು ವಿಷಾದನೀಯ – ಚಂದ್ರಶೇಖರ ಅಕ್ಕಿ

ಬೆಳಗಾವಿ ಜಿಲ್ಲಾ ೧೬ ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಸಂದರ್ಶನ ಮೂಡಲಗಿ - ಬೆಳಗಾವಿ ಜಿಲ್ಲಾ ೧೬ ನೇ ಸಾಹಿತ್ಯ ಸಮ್ಮೇಳನವು ಇದೇ ದಿ. ೨೩ , ೨೪...
- Advertisement -

More Articles Like This

- Advertisement -
close
error: Content is protected !!
Join WhatsApp Group