ಬೆಳಗಾವಿ – ಶಕ್ತಿನಗರದ ಕ್ಯಾಷುಟೆಕ್ ನಿರ್ಮಿತಿ ಕೇಂದ್ರದಲ್ಲಿ ಅಕ್ಷಯ ಊರ್ಜಾ ದಿವಸ ವನ್ನು ಯಶಸ್ವಿಯಾಗಿ ಆಚರಿಸಲಾಯಿತು.
ನವೀಕರಿಸಬಹುದಾದ ಇಂಧನ ಮೂಲಗಳಾದ ಜಲ ವಿದ್ಯುಚ್ಛಕ್ತಿ, ಪವನಯಂತ್ರಾಧಾರಿತ ವಿದ್ಯುಚ್ಛಕ್ತಿ, ಸೂರ್ಯಕಿರಣಾಧಾರಿತ ವಿದ್ಯುಚ್ಛಕ್ತಿ, ಹಸಿರು ಜಲಜನಕ, ಸಸ್ಯಾಧಾರಿತ ಇಂಧನ, ಬಯೋಗ್ಯಾಸ್ ಉತ್ಪಾದನೆ ಕುರಿತು ಕಾರ್ಯಕ್ರಮದಲ್ಲಿ ಚರ್ಚಿಸಲಾಯಿತು.
ಶರಣಬಸಪ್ಪ ಪಟ್ಟೇದ ಪ್ರಾಸ್ತಾವಿಕವಾಗಿ ಮಾತನಾಡಿ, ಸಮುದ್ರದ ಅಲೆಗಳಿಂದ ದೊರೆಯುವ ಶಕ್ತಿ ಬಳಸಿ ವಿದ್ಯುಚ್ಛಕ್ತಿ ಉತ್ಪಾದಿಸುವ ನಿಟ್ಟಿನಲ್ಲಿನ ಪ್ರಯೋಗಗಳು ಯಶಸ್ವಿಯಾಗಿದ್ದು ಆ ಮೂಲದಿಂದ ಹೆಚ್ಚಿನ ವಿದ್ಯುಚ್ಛಕ್ತಿ ಉತ್ಪಾದನೆಯನ್ನು ನಿರೀಕ್ಷಿಸಲಾಗಿದೆಯೆಂದರು.
ಮುಖ್ಯ ಸಂಪನ್ಮೂಲ ವ್ಯಕ್ತಿ ಬಾಲಚಂದ್ರ ಜಾಬಶೆಟ್ಟಿ ಇಂಧನ ಸ್ವಾವಲಂಬನೆಗಾಗಿ ನವೀಕರಿಸಬಲ್ಲ ಇಂಧನಗಳ ಉತ್ಪಾದನೆ ಮತ್ತು ಬಳಕೆಯನ್ನು ಹೆಚ್ಚಿಸಲು ಅನೇಕ ನೂತನ ಯೋಜನೆಗಳನ್ನು ಸರಕಾರ ಹಮ್ಮಿಕೊಳ್ಳುತ್ತಿರುವುದು ಶ್ಲ್ಯಾಘನೀಯ. ಸೂರ್ಯಘರ ಯೋಜನೆಯಡಿಯಲ್ಲಿ ದೊರೆಯುವ ಸಹಾಯಧನ ಸೌಲಭ್ಯಗಳನ್ನು ಪಡೆದು ಅಕ್ಷಯ ಊರ್ಜಾ ಯೋಜನೆಯನ್ನು ಯಶಸ್ವಿಗೊಳಿಸಲು ಕರೆ ನೀಡಿದರು.
ಇತ್ತೀಚಿನ ಬೆಳವಣಿಗೆಯಲ್ಲಿ ಗ್ರೀನ ಹೈಡ್ರೋಜನ್ ಉತ್ಪಾದಿಸಿ ಇಂಧನ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ಆರಂಭಗೊಂಡಿವೆ. ಭಾರತದ ಲಢಾಕ ಪ್ರದೇಶದಲ್ಲಿ 13 ಗಿಗಾವ್ಯಾಟ ಸಾಮರ್ಥ್ಯ ದ ಸೋಲಾರ ಪಾರ್ಕಗಳನ್ನು ಸ್ಥಾಪಸಿ ದೇಶಾದ್ಯಂತ 5 ಲಕ್ಷ 40 ಸಾವಿರ ಟನ್ ಹಸಿರು ಜಲಜನಕವನ್ನು ಉತ್ಪಾದಿಸಲು ರೂ. 74000 ಕೋಟಿ ಬಂಡವಾಳ ಹೂಡುವ ಯೋಜನೆ ಸಿದ್ಧಗೊಂಡಿದೆಯೆಂದು ತಿಳಿಸಿದರು.
ಪಿ.ಡಬ್ಲೂ.ಡಿ ಇಲಾಖೆಯ ಅಭಿಯಂತರ ನಬಿಯವರು ವೇದಿಕೆ ಮೇಲಿದ್ದರು.
ಫ್ಲ್ಯಾಯ್ ಆ್ಯಶ್ ಆಧಾರಿತ ಕಟ್ಟಡ ನಿರ್ಮಾಣ ಸಾಮಗ್ರಿಗಳ ಉತ್ಪಾದನಾ ಸಿಬ್ಬಂದಿ ಮತ್ತು ಕ್ಯಾಷುಟೆಕ್ ನ ಅಭಿಯಂತರರು ಹಾಗೂ ಕಛೇರಿ ಸಿಬ್ಬಂದಿ ಭಾಗವಹಿಸಿದ್ದರು.
ಕ್ಯಾಷುಟೆಕ್ ನ ಯೋಜನಾ ನಿರ್ದೇಶಕ ವೆಂಕಟೇಶಸಿಂಘ ಹಜಾರೆ ಸ್ವಾಗತಿಸಿದರು, ಸುರೇಂದ್ರ ಪಾಟೀಲ ನಿರೂಪಿಸಿದರು.