ಮೂಡಲಗಿ: 2024ರ ಲೋಕಸಭಾ ಚುನಾವಣೆ ದೇಶದ ಹಿತ ದೃಷ್ಟಿಯಿಂದ ಅತ್ಯಂತ ಮಹತ್ವವಾದದ್ದು. ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಲ್ಯಾಣದೊಂದಿಗೆ ಜಗತ್ತಿನಲ್ಲಿ ದೇಶದ ಘನತೆ ಗೌರವವನ್ನು ಎತ್ತಿ ಹಿಡಿಯುವಂತ ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡ ಪ್ರಧಾನಿ ನರೇಂದ್ರ ಮೋದಿ ಅವರ ಬಿಜೆಪಿ ಸರ್ಕಾರವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ಅನಿವಾರ್ತೆಯ ಬಗ್ಗೆ ಜನಜಾಗೃತಿಗೊಳಿಸಬೇಕಾದ ಜವಾಬ್ದಾರಿ ನಮ್ಮದಾಗಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕರಾಡಿ ಹೇಳಿದರು.
ಬೆಳಗಾವಿ ಲೋಕಸಭೆಯ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರ ಕಲ್ಲೋಳಿ ಪಟ್ಟಣದ ನಿವಾಸಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ಶತಮಾನಗಳ ಇತಿಹಾಸವುಳ್ಳ ಕಾಂಗ್ರೆಸ್ ಪಾರ್ಟಿ ಲೋಕಸಭಾ ಚುನಾವಣೆಗೆ ನಿಲ್ಲುವ ಸಮರ್ಥ ಕಾರ್ಯಕರ್ತರುಗಳನ್ನು ಬೆಳೆಸುವಲ್ಲಿ ವಿಫಲವಾಗಿದ್ದು ಅದರ ಪರಿಣಾಮ ಸಚಿವರುಗಳ ಮಕ್ಕಳಿಗೆ ಅಭ್ಯರ್ಥಿಗಳನ್ನಾಗಿ ಮಾಡುವ ಅನಿವಾರ್ಯತೆಗೆ ಸಿಲುಕಿರುವುದು ಕಾಂಗ್ರೆಸ್‌ನ ದಯನೀಯ ಸ್ಥಿತಿಯನ್ನು ತೋರಿಸುತ್ತದೆ ಎಂದು ಹೇಳಿದರು.
ರಾಜ್ಯ ಸರ್ಕಾರದ ಗ್ಯಾರಂಟಿಗಳ ವೈಫಲ್ಯ, ರೈತರ ಸಮಸ್ಯೆಗಳ ಪರಿಹಾರಕ್ಕೆ ನಿರಾಸಕ್ತಿ, ಸಚಿವರುಗಳ ಭ್ರಷ್ಟಾಚಾರ, ಅಲ್ಪಸಂಖ್ಯಾತರ ತುಷ್ಟೀಕರಣ, ಬಹುಸಂಖ್ಯಾತರ ಹಿತವನ್ನು ಕಡೆಗಣಿಸುವ ಕಾಂಗ್ರೆಸ್ಸಿನ ನಡೆಯಿಂದಾಗಿ ಜನ ಬೇಸತ್ತು ಹೋಗಿದ್ದಾರೆ. ಈ ಎಲ್ಲವುಗಳಿಗೆ ಪರಿಹಾರ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಕೇಂದ್ರದಲ್ಲಿ ಪ್ರತಿಷ್ಠಾಪಿಸುವದೇ ನಮ್ಮೆಲ್ಲರ ಗುರಿಯಾಗಬೇಕು ಎಲ್ಲ ಸಮಸ್ಯೆಗಳಿಗೂ ಮೋದಿ ಗ್ಯಾರಂಟಿಯೇ ಪರಿಹಾರವಾಗಿದೆ ಎಂದರು.
ಲೋಕಸಭಾ ಚುನಾವಣೆ ಪ್ರಜಾಪ್ರಭುತ್ವದ ಹಬ್ಬವಿದ್ದಂತೆ, ಈ ಹಬ್ಬದಲ್ಲಿ ಎಲ್ಲ ಜನತೆಯು ಪಾಲ್ಗೊಳ್ಳುವ ಮೂಲಕ ಸದೃಢ ಸರ್ಕಾರದ ಆಯ್ಕೆಗಾಗಿ ಸಂಕಲ್ಪ ಮಾಡಬೇಕೆಂದು ಜನತೆಗೆ ವಿನಂತಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನಿಲ ಬೆನಕೆ, ಜಿಲ್ಲಾಧ್ಯಕ್ಷ ಸುಭಾಸ ಪಾಟೀಲ, ರಾಜ್ಯ ಯುವಮೋರ್ಚಾ ಉಪಾಧ್ಯಕ್ಷ ಈರಣ್ಣ ಅಂಗಡಿ, ವಿಜಯ ಗುಡದರಿ ಪ್ರಮುಖರಾದ ಪ್ರಕಾಶ ಮಾದರ, ಶ್ರೀಶೈಲ ಪೂಜಾರಿ, ಮಾರುತಿ ತೋಳಮರಡಿ, ಶ್ರೀಕಾಂತ ಕೌಜಲಗಿ, ಪ್ರಭು ಕಡಾಡಿ, ಹಣಮಂತ ಸಂಗಟಿ, ಬಸವರಾಜ ಹಿಡಕಲ್, ಡಾ. ಬಿ.ಎಂ. ಪಾಲಭಾಂವಿ, ಮಲ್ಲಪ್ಪ ನೇಮಗೌಡರ, ಈರಪ್ಪ ಢವಳೇಶ್ವರ, ಅಡಿವೆಪ್ಪ ಕುರಬೇಟ, ಮಹಾದೇವ ಮಸರಗುಪ್ಪಿ, ಬಸವರಾಜ ಗಾಡವಿ, ರಾಯಪ್ಪ ಬಾಣಸಿ, ಬಸವರಾಜ ನಿಡಗುಂದಿ, ಸುನೀಲ ಈರೇಶನವರ, ಭಗವಂತ ಪಾಟೀಲ, ಕೆಂಪಣ್ಣ ಗಡಹಿಂಗ್ಲೆಜ್, ಪುಂಡಲಿಕ ಅರಭಾಂವಿ, ಭಗವಂತ ಧರ್ಮಟ್ಟಿ, ಲಗಮಣ್ಣ ಕುಳ್ಳೂರ, ಸಿದಾರ್ಥ ಅಥಣಿ, ಆನಂದ ಮೂಡಲಗಿ, ರಾಮಪ್ಪ ಕಾಪಸಿ, ಬಾಳೇಶ ಸಕ್ರೆಪ್ಪಗೊಳ, ಯಮನಪ್ಪ ಬಾಗಾಯಿ, ದಶಗೀರ ಕಮತನೂರ ಸೇರಿದಂತೆ ಸ್ಥಳೀಯ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.