ಬೈಲಹೊಂಗಲ: ಬೈಲಹೊಂಗಲ ತಾಲ್ಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಪಟ್ಟಣದ ಸೊಗಲ ರಸ್ತೆಯಲ್ಲಿರುವ ತಾಲ್ಲೂಕಾ ಪಂಚಾಯತಿ ಸಭಾಭವನದಲ್ಲಿ ಮೇ ಕೊನೆಯ ವಾರದಲ್ಲಿ ಕವಿಗೋಷ್ಠಿ ಏರ್ಪಡಿಸಲು ನಿರ್ಧರಿಸಲಾಗಿದೆ.
ಈ ನಿಮಿತ್ತ ಉದಯೋನ್ಮುಖ ಹಾಗೂ ಪ್ರತಿಭಾವಂತ ಕವಿಗಳಿಂದ ಕನ್ನಡ ನಾಡು, ನುಡಿ, ಇತಿಹಾಸ, ಸಂಸ್ಕೃತಿ, ಪರಂಪರೆ, ಪರಿಸರ ಪ್ರೇಮ, ರಾಷ್ಟ್ರಪ್ರೇಮ, ಮಾನವೀಯ ಮೌಲ್ಯಗಳು ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತೆ ಕವನಗಳನ್ನು ಆಹ್ವಾನಿಸಲಾಗಿದೆ.
ಕವನ 30 ಸಾಲುಗಳಿಗೆ ಮಿಕ್ಕದಂತೆ ಕಾಗದದ ಒಂದೇ ಮಗ್ಗುಲಲ್ಲಿ ಬರೆದು ಅಥವಾ ಡಿಟಿಪಿ ಮಾಡಿಸಿ ಸ್ವವಿಳಾಸ, ಕಿರುಪರಿಚಯ, ಭಾವಚಿತ್ರ, ವಾಟ್ಸಪ್ ಮೊಬೈಲ್ ಸಂಖ್ಯೆಯೊಂದಿಗೆ ಮೇ 25 ರ ಒಳಗಾಗಿ ಶ್ರೀಮತಿ ಮಂಜುಳಾ ಶೆಟ್ಟರ್, ಗೌರವ ಕಾರ್ಯದರ್ಶಿಗಳು, ಬೈಲಹೊಂಗಲ ತಾಲ್ಲೂಕಾ ಕನ್ನಡ ಸಾಹಿತ್ಯ ಪರಿಷತ್ತು, c/o ರಾಜು ಹಕ್ಕಿ, ಮೆಳೆಪ್ಪನವರ ಚಾಳ, ಬೈಲಹೊಂಗಲ- 591102, ಬೆಳಗಾವಿ ಜಿಲ್ಲೆ ಈ ವಿಳಾಸಕ್ಕೆ ಕಳಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ 9945326808/ 9844491490 ಸಂಪರ್ಕಿಸಬೇಕೆಂದು ಬೈಲಹೊಂಗಲ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎನ್.ಆರ್.ಠಕ್ಕಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.