spot_img
spot_img

ವಚನ ವಿಶ್ಲೇಷಣೆ : ಶಿವ ಗುರುವೆಂದು ಬಲ್ಲಾತನೇ ಗುರು

Must Read

- Advertisement -

ಶಿವ ಗುರುವೆಂದು ಬಲ್ಲಾತನೇ ಗುರು                                ಶಿವ ಲಿಂಗವೆಂದು ಬಲ್ಲಾತನೇ ಗುರು                                ಶಿವ ಜಂಗಮವೆಂದು ಬಲ್ಲಾತನೇ ಗುರು                          ಶಿವ ಪ್ರಸಾದವೆಂದು ಬಲ್ಲಾತನೇ ಗುರು                            ಶಿವ ಆಚಾರವೆಂದು ಬಲ್ಲಾತನೇ ಗುರು                          ಇಂತಿ ಪಂಚವಿಧ ಪಂಚ ಬ್ರಹ್ಮವೆಂದು                          ತಿಳಿದ ಮಹಾ ಮಣಿಹ ಸಂಗನ ಬಸವಣ್ಣ                  ಎನಗೆಯೂ ಗುರು ನಿನಗೂ ಗುರು                          ಜಗಕೆಲ್ಲಾ ಗುರು ಕಾಣಾ ಗುಹೇಶ್ವರಾ ಅಲ್ಲಮ ಪ್ರಭು

ಅಲ್ಲಮರು ಬಸವಣ್ಣನವರ ವ್ಯಕ್ತಿತ್ವವನ್ನ ಮತ್ತು ಅವರೊಳಗಿನ ಅಸಾಧಾರಣ ದಾರ್ಶನಿಕತ್ವವನ್ನ ಜಗತ್ತಿಗೆ ಪರಿಚಯಿಸುವ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ.

ಬಸವಣ್ಣ ಮತ್ತು ಅವರ ಸಮಕಾಲೀನ ಶರಣರು ವೈಚಾರಿಕತೆ ವೈಜ್ಞಾನಿಕತೆ ನೈಜ ಬದುಕಿನ ಪ್ರತಿಯಾದನೇಮಾಡಿ ಸೃಷ್ಟಿ ಸಮಷ್ಟಿ ವ್ಯಕ್ತಿಯ ಜವಾಬ್ದಾರಿಗಳನ್ನು ಗೊತ್ತು ಮಾಡಿಕೊಟ್ಟಿದ್ದಾರೆ.

- Advertisement -

ಶಿವನೆಂಬುದು ಶರಣ ದೃಷ್ಟಿಯಲ್ಲಿ ಮಂಗಲ ಕಲ್ಯಾಣ ಜ್ಞಾನ ಎಂಬ ಪಾರಿಭಾಷಿಕ ಅರ್ಥಗಳು . ಶಿವ ಶಂಕರನಲ್ಲ ಶರಣರ ಶಿವ ಭಕ್ತನ ಹೃದಯದಲ್ಲಿ ಇರುವ ಅಗಾಧ ಜಂಗಮ ಚೈತನ್ಯವಾಗಿದೆ.
ಅಂತಃಪ್ರಜ್ಞೆಯೆ ಗುರು ಎಂದು ನಂಬಿರುವವನೇ ನಿಜವಾದ ಗುರು ಎಂದಿದ್ದಾರೆ. ಅರಿವಿನ ಆರಂಭವೇ ಗುರು.

ಶಿವ ಲಿಂಗವೆಂದು ಬಲ್ಲಾತನೇ ಗುರು

ಲಿಂಗ ಇದು ಸಮಷ್ಟಿ ಭಾವವು,  ಸಮಷ್ಟಿಯಲ್ಲಿ ಶಿವನಿದ್ದಾನೆ ಅದುವೇ ಕರಸ್ಥಲ ಲಿಂಗ. ಶಿವನೆನ್ನುವ ಭಾವವು ಕರಸ್ಥಲದ ಲಿಂಗದ ಕುರುಹಿನಲ್ಲಿ ಮೂರ್ತಗೊಂಡಿದ್ದಾನೆ.
ಶಿವನೇ ಲಿಂಗವೆಂದು ತಿಳಿದವ ಗುರು ಎಂದಿದ್ದಾರೆ ಅಲ್ಲಮರು.

ಶಿವ ಜಂಗಮವೆಂದು ಬಲ್ಲಾತನೇ ಗುರ

ಜಂಗಮ ಇದು ಸಮಾಜ, ಜ್ಞಾನ, ಚಲಶೀಲತೆ ಚೈತನ್ಯ ಎಂಬ ಅನೇಕ ಅರ್ಥಗಳನೊಳದೊಂಡ ಶರಣರ ವ್ಯವಸ್ಥೆ . ಶಿವನೆನ್ನುವ ಮಹಾಜ್ಞಾನ ಜಂಗಮದಲ್ಲಿ ಅಡಗಿದೆ ಸಮಾಜ ಸೇವೆಯೇ ಶಿವನ ಆರಾಧನೆ, ಶಿವನೆನ್ನುವುದು ಜಂಗಮದ ಮೂಲ, ಶಿವ ಜಂಗಮ ಒಂದೇ ಎಂದು ತಿಳಿದವನೇ ಗುರುವು.

- Advertisement -

ಶಿವ ಪ್ರಸಾದವೆಂದು ಬಲ್ಲಾತನೇ ಗುರು

ಪ್ರಸನ್ನತೆಯೇ ಪ್ರಸಾದವು ಇಂತಹ ಪ್ರಸನ್ನತೆಯಲ್ಲಿ, ಶಿವನನ್ನು ಕಂಡು ಇವೆರಡು ಒಂದೇ ಎಂದು ತಿಳಿದವನೇ ಗುರು. ಪ್ರತಿಯೊಂದು ಜೀವ ಜಾಲದಲ್ಲಿ ಪ್ರಸನ್ನತೆಯ ಭಾವವನ್ನು ಗುರುತಿಸಿ ಸಂತಸ ನೆಮ್ಮದಿ ಪ್ರೀತಿ ಭಾವವನ್ನು ಭಕ್ತನಲ್ಲಿ ಕಂಡಾಗ ಅದುವೇ ಶಿವಮಯ.

ಶಿವ ಆಚಾರವೆಂದು ಬಲ್ಲಾತನೇ ಗುರು

ಆಚಾರ ಇದು ಸತ್ಯ ಶುದ್ಧಕಾಯಕದ ಅಭಿಯಾನ. ಇಂತಹ ಆಚಾರದಲ್ಲಿ ಶಿವನನ್ನು ಕಾಣುವವನೇ ಮತ್ತು ಶಿವ ಮತ್ತು ಇಂತಹ ಆಚಾರ ಒಂದೇ ಎಂದು ತಿಳಿದವನೇ ನಿಜವಾದ ಗುರು ಅರಿವಿನ ಪರಾಕಾಷ್ಠತೆ, ಸತ್ಯ ಶುದ್ಧವಾದ ಕಾಯಕದಲ್ಲಿ ಶಿವನಿದ್ದಾನೆ.

ಇಂತಿ ಪಂಚವಿಧ ಪಂಚ ಬ್ರಹ್ಮವೆಂದು ತಿಳಿದ ಮಹಾ ಮಣಿಹ ಸಂಗನ ಬಸವಣ್ಣ ಎನಗೆಯೂ ಗುರು ನಿನಗೂ ಗುರು ಜಗಕೆಲ್ಲಾ ಗುರು ಕಾಣಾ ಗುಹೇಶ್ವರಾ

ಹೀಗೆ ಬದುಕಿನಲ್ಲಿ ಪಾರಮಾರ್ಥಿಕ ಅರ್ಥವನ್ನು ಪ್ರಾಪಂಚಿಕ ನೈಜ ನೆಲೆ ಸೆಲೆಯಲ್ಲಿಗುರುತಿಸಿದ ಇಂತಹ ಪಂಚ ವಿಧಾನಗಳನ್ನೇ ಪಂಚ ಬ್ರಹ್ಮವೆಂದು ಅರಿತ ಮಹಾ ಮಣಿಹ ಸಂಗನ ಬಸವಣ್ಣ ಎನಗೆಯೂ ಗುರು ನಿನಗೂ ಗುರು ಜಗಕೆಲ್ಲಾ ಗುರು ಕಾಣಾ ಎಂದಿದ್ದಾರೆ ಅಲ್ಲಮರು.


ಡಾ.ಶಶಿಕಾಂತ.ಪಟ್ಟಣ ರಾಮದುರ್ಗ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಬೆಳಗಾವಿ – ಮನಗೂರು ವಿಶೇಷ ರೈಲು ಅ.16 ರಿಂದ

ಬೆಳಗಾವಿ: ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಂತೆ ಬೆಳಗಾವಿ- ಮನಗೂರು ವಿಶೇಷ ಎಕ್ಸ್ಪ್ರೆಸ್ ರೈಲಿನ ಸಂಚಾರವು ಅ-16 ರಿಂದ ಪ್ರಾರಂಭವಾಗಲಿದೆ ಎಂದು ಹುಬ್ಬಳ್ಳಿ ನೈರುತ್ಯ ರೈಲ್ವೆ ಇಲಾಖೆ...
- Advertisement -

More Articles Like This

- Advertisement -
close
error: Content is protected !!
Join WhatsApp Group