ಅಸಹಾಯಕ ತಂದೆಗೆ ನೆರವಾಗಲು ಹೋಗಿ ಸಂಕಷ್ಟಕ್ಕೀಡಾಗುವ ಮಕ್ಕಳ ಕತೆಯೇ “ಆಪತ್ಬಾಂಧವ”

Must Read

ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಯೇ ನನ್ನ ಪರಮ ಗುರಿ : ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ

ನಿಪ್ಪಾಣಿಯಲ್ಲಿ ಎಲ್ಲ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳನ್ನು ಉದ್ಧೇಶಿಸಿ ಪ್ರಚಾರ ಮಾಡಿದ ಲಖನ್ ನಿಪ್ಪಾಣಿ: ಜಿಲ್ಲೆಯ ಸರ್ವತೋಮುಖ ಏಳ್ಗೆಗಾಗಿ ಹಾಗೂ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗಾಗಿ ಸೇವೆ ಸಲ್ಲಿಸಲು ಪ್ರಥಮ ಪ್ರಾಶಸ್ತ್ಯದ...

ಸುನಿಲಗೌಡ ಪಾಟೀಲ್ ಅವರ ಪರವಾಗಿ ಕಾಂಗ್ರೆಸ್ ಮುಖಂಡರ ಮತಯಾಚನೆ

ಸಿಂದಗಿ: ವಿಜಯಪುರ-ಬಾಗಲಕೋಟೆ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯ ಅಭ್ಯರ್ಥಿ ಸುನಿಲಗೌಡ ಪಾಟೀಲ್ ಅವರ ಪರವಾಗಿ ಕಾಂಗ್ರೆಸ್ ನಾಯಕರು ಯರಗಲ್, ಗಬಸಾವಳಗಿ, ಮೋರಟಗಿ, ಬಗಲೂರ ಗ್ರಾಮ...

ರಾಜಕೀಯ ದ್ವೇಷ; ಮಾಜಿ ಪಟ್ಟಣ ಪಂಚಾಯಿತಿಯ ಸದಸ್ಯನ ಭೀಕರ ಹತ್ಯೆ

ಸಿಂದಗಿ: ನೂತನ ತಾಲೂಕು ಆಲಮೇಲ ಪಟ್ಟಣದ ಗಣೇಶ ನಗರದಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹತ್ತಿರ ರಾತ್ರಿ 1.30 ಗಂಟೆಯ ಸುಮಾರಿಗೆ ಮಾಜಿ ಪಟ್ಟಣ ಪಂಚಾಯತಿ...

ಲಾಕ್ ಡೌನ್ ಸಂದರ್ಭದಲ್ಲಿ ಕೆಲಸವಿಲ್ಲದೆ ಒದ್ದಾಡಿದ ದಿನಗೂಲಿ ಕಾರ್ಮಿಕನು ಮಾತೃವಾತ್ಸಲ್ಯ ಕಾಣದ ತನ್ನ ಮಕ್ಕಳಿಬ್ಬರನ್ನು ಸಾಕಲು ಪಟ್ಟ ಕಷ್ಟ ಹಾಗೂ ತಂದೆಯ ಕಷ್ಟ ನೋಡಲಾಗದೆ ಮಕ್ಕಳು ತಂದೆಗೋಸ್ಕರ ಪಡುವ ಕಷ್ಟಗಳ ವಿಶಿಷ್ಟ ಕಿರುಚಿತ್ರವೇ “ಆಪತ್ಬಾಂಧವ”.

ಮನೆಯಲ್ಲಿ ತಿನ್ನಲು ಊಟವಿಲ್ಲದೆ ನರಳಾಡುವ ಕರಳುಬಳ್ಳಿಗಳ ಪರಿಸ್ಥಿತಿ ಹಾಗೂ ಬರಿ ನೀರನ್ನೇ ಕುಡಿಸಿ ಅವರ ಹೊಟ್ಟೆ ತುಂಬಿಸುವ ತಂದೆಯ ಅಸಹಾಯಕತೆಯ ವೇದನೆ ವೀಕ್ಷಕರ ಮನಸ್ಸನ್ನು ಕಲಕುತ್ತದೆ. ತಿನ್ನಲು ಊಟವಿಲ್ಲ, ಮಾಡಲು ಕೆಲಸವಿಲ್ಲದ ಅಪ್ಪನು ಮಕ್ಕಳಿಗಾಗಿ ಏನು ಮಾಡಲಾಗದೆ ಅಸಹಾಯಕನಾಗಿ ನೊಂದು ಅಳುತ್ತಾ ಆತ್ಮಹತ್ಯೆಗೆ ಯತ್ನಿಸುವ ಸಂದರ್ಭದಲ್ಲಿ ಚಿತ್ರದ ನಾಯಕನಟನ ಪ್ರವೇಶವಾಗುತ್ತದೆ. ತಂದೆಯ ವ್ಯಥೆಯ ಕಣ್ಣೀರನ್ನು ನೋಡಲಾಗದೆ, ಇಬ್ಬರು ಮಕ್ಕಳು ಮತ್ತೊಬ್ಬರ ಬಳಿ ಕೈಕಾಲು ಹಿಡಿದು ಕೆಲಸಗಿಟ್ಟಿಸಿಕೊಂಡು ದುಡಿದು ಸಂಪಾದನೆಯನ್ನು ಅಪ್ಪನಿಗೆ ಕೊಡಲು ಹೋದಾಗ, ಕುಡಕರು ಹಲ್ಲೆಮಾಡಿ ಬಾಲಕರಿಬ್ಬರ ಹತ್ತಿರ ಇದ್ದ ಹಣವನ್ನು ಕಿತ್ತುಕೊಂಡು ಕುಡಿಯಲು ಬಾರಿಗೆ ಹೋಗುತ್ತಾರೆ. ಇತ್ತ ಬಾರದ ಮಕ್ಕಳ ಬರುವಣಿಗೆಗೆ ಕಾಯುತ್ತಿದ್ದ ತಂದೆ, ಜಮೀನ್ದಾರರ ಸಹಾಯದಿಂದ ಮಕ್ಕಳನ್ನು ಹುಡುಕಿ ತನಗಾಗಿ ಮಕ್ಕಳು ಆಪತ್ತು ತಂದುಕೊಂಡಿದ್ದನ್ನು ನೋಡಿ ನೊಂದುಕೊಳ್ಳುತ್ತಾನೆ. ಇನ್ಮೇಲೆ ದುಡಿಯಬಾರದೆಂದು ಮಕ್ಕಳ ಹತ್ತಿರ ಪ್ರಮಾಣ ಸ್ವೀಕರಿಸಿದ ತಂದೆಗೆ ಸಂಕಷ್ಟಗಳು ಮಾತ್ರ ತಪ್ಪಲ್ಲ. ಸಾಲಗಾರರ ಉಪಟಳ ಒಂದು ಕಡೆಯಾದರೆ, ನಿರ್ಗತಿಕ ಬದುಕು ಮತ್ತೊಂದು ಕಡೆ, ಇಂಥದರಲ್ಲಿ ಸಾಲಗಾರರು ಕರುಳಕುಡಿಗಳನ್ನೇ ಕಿತ್ತುಕೊಂಡು ಹೋಗಿ ಜೀತಪದ್ಧತಿಯನ್ನನುಸರಿಸಿ ಮಾನಸಿಕ ಹಾಗೂ ದೈಹಿಕ ದೌರ್ಜನ್ಯದೊಂದಿಗೆ ದುಡಿಸಿಕೊಳ್ಳುತ್ತಾರೆ. ಅಸಹಾಯಕನಾದ ತಂದೆ ತನ್ನ ಮಕ್ಕಳನ್ನು ಬಿಡಿಸಿಕೊಂಡು ಬರಲು ಜಮಿನ್ದಾರರ ಬಳಿ ಅಂಗಲಾಚಿದಾಗ ಸಹಾಯಮಾಡುವುದಾಗಿ ತಿಳಿಸಿ ಮಕ್ಕಳ ಬಳಿ ತೆರಳುತ್ತಾರೆ. ಆದರೆ ಅದಾಗಲೇ ಚಿತ್ರದ ಖಳನಾಯಕರೊಂದಿಗೆ ಮತ್ತೊಬ್ಬ ಅನಾಮಿಕ ಕ್ರೂರಿ ಹೋರಾಡಿ ಎಲ್ಲರನ್ನೂ ಕೊಂದಿರುತ್ತಾನೆ. ಆದರೆ ಮಕ್ಕಳನ್ನು ಕಾಪಾಡಲು ಹೋಗುವ ಜಮಿನ್ದಾರರಿಗಾಗಲಿ, ತಂದೆಗಾಗಲಿ ಮತ್ತು ಖಳನಟರಿಗಾಗಲಿ ಮಕ್ಕಳು ಸಿಗುವುದಿಲ್ಲ, ಆದರೆ ಆ ಮಕ್ಕಳು ಎಲ್ಲಿಗೋದರು ಎಂಬುದು ಕುತೂಹಲ ತಾಳುವಂತೆ ಮಾಡುತ್ತದೆ. ಬಡತನದ ನೋವು-ಸಂಕಷ್ಟಗಳನ್ನು ಈ ಚಿತ್ರದಲ್ಲಿ ತೋರಿಸಿರುವುದು ಸ್ವಾರಸ್ಯಕರವಾಗಿದೆ. ಈ ಚಿತ್ರದ ಕತೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನದ ಹೊಣೆಗಾರಿಕೆಯನ್ನು ಕು. ಹನಮಂತ ಐಹೊಳೆಯವರು ಹೊತ್ತಿದ್ದು. ನಾಗಲಿಂಗ ಪಾಟೀಲ್ ಅವರು ನಿರ್ಮಾಣದ ವೆಚ್ಚವನ್ನು ಬರಿಸಿದ್ದಾರೆ. ತಂದೆಯ ಪಾತ್ರದಲ್ಲಿ ಭೀಮಪ್ಪ ರಾಮಥಾಳ, ಮಕ್ಕಳ ಪಾತ್ರದಲ್ಲಿ ಪೃಥ್ವಿರಾಜ್ ಬಳಿಮಾಡು ಮತ್ತು ರಾಘವೇಂದ್ರ ನಾಯ್ಕರ್ ಹಾಗೂ ವಿಲನ್ ಗಳಾಗಿ ಪರಶುರಾಮ ಬೇವಿನಮಟ್ಟಿ, ಸಚಿನ್ ಮಿಕ್ಕಲ್, ಹನಮಂತ ಮಾದರವರು ನಟಿಸಿದ್ದಾರೆ.

ಈ ಕಿರುಚಿತ್ರಕ್ಕೆ ಮಹೇಶ್ ಅದ್ಧೂರಿವರು ಎಡಿಟರ್ ಆಗಿ, ಹನಮಂತ ಐರಾವತ ಅವರು ಕ್ಯಾಮೆರಾಮನ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಕು. ಹನಮಂತ ಐಹೊಳೆಯವರು ಕೂಡ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಚಿತ್ರವು ಎಸ್. ಪಿ. ಬಿ. ಮೆಲೋಡೀಸ್ ಎಂಬ ಯುಟ್ಯೂಬ್ ವಾಹಿನಿಯಲ್ಲಿ ಬಿಡುಗಡೆಯಾಗುತ್ತಿದೆ.


ರಂಗಪ್ಪ ಮ ಗೌಡರ
ಬರಹಗಾರರು, ಬಾಗಲಕೋಟೆ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಯೇ ನನ್ನ ಪರಮ ಗುರಿ : ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ

ನಿಪ್ಪಾಣಿಯಲ್ಲಿ ಎಲ್ಲ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳನ್ನು ಉದ್ಧೇಶಿಸಿ ಪ್ರಚಾರ ಮಾಡಿದ ಲಖನ್ ನಿಪ್ಪಾಣಿ: ಜಿಲ್ಲೆಯ ಸರ್ವತೋಮುಖ ಏಳ್ಗೆಗಾಗಿ ಹಾಗೂ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗಾಗಿ ಸೇವೆ ಸಲ್ಲಿಸಲು ಪ್ರಥಮ ಪ್ರಾಶಸ್ತ್ಯದ...
- Advertisement -

More Articles Like This

- Advertisement -
close
error: Content is protected !!