ಕಸ್ತೂರಿ ಕನ್ನಡದ ಸೊಬಗು
ಏನೆಂದು ವರ್ಣಿಸಲಿ ನಿನ್ನನ್ನು ತಾಯೇ
ಪ್ರತಿ ಜನ್ಮವೂ ಬೇಕೆನಗೆ ಕನ್ನಡ ನಾಡೇ
ಕಸ್ತೂರಿ ಕನ್ನಡವ ಹೊಗಳಲು ಪದಗಳೆಲ್ಲಿ
ಸ್ವರ್ಗವೆಂದರೆ ಕರುನಾಡೇ ಈ ಭುವಿಯಲ್ಲಿ
ನಿನ್ನ ಅಗಾಧ ಸಂಪನ್ಮೂಲಕೆ ಲೆಕ್ಕವೆಲ್ಲಿ
ಸಕಲ ಶೇಷ್ಠ ಸಂಪತ್ತು ನಿನ್ನ ಮಡಿಲಲ್ಲಿ
ಖನಿಜ ಅದಿರು ಮುತ್ತು ರತ್ನ ನಿನ್ನ ಸೆರಗಲ್ಲಿ
ಅಪಾರ ಪ್ರಾಣಿ ಸಂಕುಲ ನಿನ್ನಂತರಂಗದಲ್ಲಿ
ಜ್ಞಾನಿ,ಕವಿಜನರು ನಿನ್ನಲ್ಲಿ ನೆಲೆಸಿರುವರು
ವಾಸ್ತುಶಿಲ್ಪದ ಕಲೆ ನಿನ್ನಲ್ಲಿ ಬೆರೆತಿರುವುದು
ಸುಜಲ ಜಲಧಾರೆ ನಿನ್ನಲ್ಲಿ ಹರಿಯುತಿಹಳು
ಹಸಿರು...
ಕಿತ್ತೂರಿನ ಚೆನ್ನಮ್ಮನಂತೆ, ಅದರಲ್ಲೂ ಚೆನ್ನಮ್ಮನಿಗಿಂತಲೂ ಒಂದು ಶತಮಾನದ ಹಿಂದೆಯೇ ತನ್ನ ದಕ್ಷತೆ, ಕ್ಷಾತ್ರದಿಂದ ಔರಂಗಜೇಬನನ್ನೇ ಮಂಡಿಯೂರುವಂತೆ ಮಾಡಿದ "ಕೆಳದಿಯ ಚೆನ್ನಮ್ಮ" ಯಾಕೋ ಕಾಣೆ ಕಿತ್ತೂರ ಚೆನ್ನಮ್ಮನೆದುರು ಮಂಕಾಗಿ ಬಿಡುತ್ತಾಳೆ.ಮತ್ತು ನೆನಪಿನಿಂದಲೂ..!!
ಇರಲಿ ಬನ್ನಿ..
ಹಾಗೇ ತಿರುಗಾಡಿ ಕೊಂಡು ಕೆಳದಿಯ ಕಡೆ ಕೊಂಚ ಇಣುಕಿ ಬರೋಣು.
ಮೊದಲಿಗೆ ಕೆಳದಿಯ ರಾಜರು ವಿಜಯನಗರದರಸರ ಅಧೀನದಲ್ಲಿದ್ದ ಸಾಮಂತರು.ವಿಜಯನಗರದ ಪತನಾನಂತರ ಸ್ವತಂತ್ರವಾಗಿ ರಾಜ್ಯ ವಿಸ್ತರಿಸುತ್ತಾ...
ಮೂಡಲಗಿ: ‘ಭಾರತ ದೇಶವು ವಿವಿಧತೆಯಲ್ಲಿ ಏಕತೆ ಸಾಧಿಸಿರುವುದು ಇಡೀ ವಿಶ್ವಕ್ಕೆ ಮಾದರಿಯಾಗಿದೆ’ ಎಂದು ಸಾಹಿತಿ ಬಾಲಶೇಖರ ಬಂದಿ ಹೇಳಿದರು.
ಇಲ್ಲಿಯ ಮಂಜುನಾಥ ಶಿಕ್ಷಣ ಸಂಸ್ಥೆಯ ಆತಿಥ್ಯದಲ್ಲಿ ಮೂಡಲಗಿ ಪೊಲೀಸ್ ಇಲಾಖೆಯಿಂದ ಆಚರಿಸಿದ ರಾಷ್ಟ್ರೀಯ ಏಕತಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಏಕತೆಯು ಯಾರದೇ ಒತ್ತಾಯಕ್ಕಾಗಿ ಇರದೆ ಪ್ರತಿಯೊಬ್ಬ ಭಾರತೀಯ ಪ್ರಜೆಯ ಅಂತರಾತ್ಮದ ಬದ್ಧತೆಯಾಗಿರಬೇಕು ಎಂದರು.
ಏಕತೆ...
ಕವಯಿತ್ರಿ ಆಗಿಬಿಟ್ಟೆ
ಸ್ನೇಹಿತರೆ
ನಾನೂ ಕವಯಿತ್ರಿ ಆಗಬೇಕೆಂದಿದ್ದೆ
ಬೇಗ ಬೇಗನೆ ಮದುವೆ
ಪುಟ್ಟ ಪುಟ್ಟ ಮಕ್ಕಳು
ಅವರ ಪಾಲನೆ.
ಬರೆಯಬೇಕೆಂದಾಗಲೆಲ್ಲ
ಬರೆಯಲಾಗದೆ ನೀರಸ ಮೌನ
ನಮ್ಮವರು ಬಚ್ಚಲಲ್ಲಿ
ಇಳಿದಿದ್ದಾರೆ.
ಅವರಿಗೆ ಕೊಡಬೇಕು
ಬನಿಯನ್ನು ಟವೆಲು ಚಡ್ಡಿ
ಮೊದಲೇ ಕೊಡಲಾಗದ
ನಾನೆಂತ ದಡ್ಡಿ ?
ಶಾಲೆಯ ಮಕ್ಕಳಿಗೆ
ಟಿಫನ್ ಕಟ್ಟಬೇಕು.
ಒಲೆಯ ಮೇಲೆ ಹಾಲು
ಕಿರುಚುತ್ತಿದೆ ಕಾಲಿಂಗ್ ಬೆಲ್ಲು
ಕಟ್ಟಬೇಕಂತೆ
ಇಂದೇ ಕರೆಂಟ್ ಬಿಲ್ಲು
ಇಂದೂ ಕೆಲಸದವಳು
ಕೈ ಕೊಟ್ಟಳು .
ತಿಕ್ಕ ಬೇಕು ಪಗಡೆ ಪಾತ್ರೆ
ತೊಳೆಯಬೇಕು ಬಟ್ಟೆ
ಒರೆಸಬೇಕು ನೆಲದ ಕಟ್ಟೆ .
ಚಹಾ ತಡವಾದರೆ
ಯಜಮಾನರ ಗುಡುಗು
ವರ್ಣಿಸಬೇಕೆಂದಿದ್ದೆ
ಭೂಮಿ ನೆಲ...
ನವತರುಣ ತರುಣಿಯರೇ, ಏಳಿ ಎದ್ದೇಳಿ
ಕನ್ನಡಕಾಗಿ ಹೋರಾಡಿ ಕನ್ನಡ ಭಾಷೆ ಮಾತಾಡಿ ಕನ್ನಡದಲೇ ಉಸಿರಾಡಿ ಕನ್ನಡ ತಾಯಿಗೆ ಪ್ರಾಣ ನೀಡಿರಿ
ಜಗಜ್ಯೋತಿ ಬಸವಣ್ಣ ವಿಶ್ವಗುರು,ಅಲ್ಲಮಪ್ರಭು ಅಕ್ಕಮಹಾದೇವಿ, ಗುಡ್ಡಾಪುರದ ದಾನಮ್ಮ ಇತಿಹಾಸದ ಮಹಾಸಾಧಕರಂತಾಗಿರಿ.
ಪಂಪ ರನ್ನ ರಾಘವಾಂಕ ಹರಿಹರ ಕುಮಾರವ್ಯಾಸರು ಕನ್ನಡದ ಕವಿ ರತ್ನಗಳoತಾಗಿರಿ
ಕುವೆಂಪು ಬೇಂದ್ರೆ ವಿ. ಕೃ ಗೋಕಾಕರು ಮಾಸ್ತಿ ಕಾರಂತರು ಕನ್ನಡದ ಸರಸ್ವತಿ ಪುತ್ರ ಇವರು ಇವರoತಾಗಿರಿ...
ನಮ್ಮ ದಿನದಿತ್ಯದ ಭರಾಟೆಯಲ್ಲಿ ನಿರ್ಲಕ್ಷ್ಯ ಕ್ಕೊಳಗಾಗುವ ಅಂಗವೆಂದರೆ ಕಣ್ಣು. ಅದರಲ್ಲೂ ಮೊದಲು ಕಂಪ್ಯೂಟರ್ ಆದ ನಂತರ ಈಗ ಮೊಬೈಲ್ ಉಪಯೋಗದಿಂದಾಗಿ ಕಣ್ಣುಗಳ ಮೇಲೆ ಭಾರೀ ಒತ್ತಡ ಬೀಳುತ್ತಿದೆ. ಅತಿಯಾದ ಮೊಬೈಲ್ ಬಳಕೆಯಿಂದ ಕಣ್ಣುಗಳು ಹಾನಿಯಾಗುವುದು ಗೊತ್ರಿದ್ದರೂ ಮೊಬೈಲ್ ಅನಿವಾರ್ಯ ಅನ್ನಿಸಿರುವುದರಿಂದ ಯಾರೂ ಕಣ್ಣುಗಳ ಆರೋಗ್ಯದ ಕಡೆಗೆ ಗಮನ ಕೊಡುತ್ತಿಲ್ಲ.
ದೇಹ ಅತ್ಯಂತ ಪ್ರಮುಖ ಅಂಗವೆಂದರೆ ಕಣ್ಣುಗಳು....
ಸಂಕ್ಷಿಪ್ತ ಇತಿಹಾಸ :
ಕನ್ನಡದ ಕುಲಪುರೋಹಿತರಾದ ಆಲೂರು ವೆಂಕಟರಾವ್, ಕರ್ನಾಟಕ ಏಕೀಕರಣ ಚಳವಳಿಯನ್ನು ೧೯೦೫ ರಲ್ಲಿ ಪ್ರಾರಂಭಿಸಿದರು. ೧೯೫೦ರಲ್ಲಿ, ಭಾರತವು ಗಣರಾಜ್ಯವಾದ ನಂತರ ಭಾರತದ ವಿವಿಧ ಪ್ರಾಂತ್ಯಗಳು, ಭಾಷೆಗಳ ಆಧಾರದ ಮೇಲೆ ರಾಜ್ಯಗಳಾಗಿ ರೂಪುಗೊಂಡವು. ಈ ಹಿಂದೆ ರಾಜರ ಆಳ್ವಿಕೆಯಲ್ಲಿ ದಕ್ಷಿಣ ಭಾರತದಲ್ಲಿ ಹಲವಾರು ಸಂಸ್ಥಾನಗಳನ್ನು ಒಳಗೊಂಡಂತೆ ರಾಜ್ಯಗಳು ರೂಪುಗೊಂಡಿದ್ದವು. ಹಲವು ಮಹನೀಯರ ಪ್ರಯತ್ನದ ಜೊತೆ...
ಏನೆಂದು ಹೇಳಲಿ....
ಬಹಳಷ್ಟು ಸಲ ಎದುರಾದವರೆಲ್ಲ ಕೇಳುತ್ತಾರೆ ಯಾಕೆ ಬರೆಯುತ್ತಿಲ್ಲ ಈಗೀಗ
ಅವರ ಪ್ರಶ್ನೆಗಳಿಗೆಲ್ಲ ಉತರಿಸಲು ಉತ್ತರಗಳಿಲ್ಲ ನನ್ನಲ್ಲಿ
ಬರೆಯಲು ಭಾವನೆಗಳು ತುಂಬಿ ಬರಬೇಕು
ಖಾಲಿ ಹಾಳೆಯ ಜೊತೆಗೆ ಪೆನ್ನು...