Times of ಕರ್ನಾಟಕ
ಕವನ
ಪರಿಸರ ಕವನ
ನಮ್ಮುಸಿರನುಳಿಸಿ
ಆಲದ ಮರನೆಟ್ಟ ಕಾಲವೆ ಗತಿಸ್ಯಾವ
ಮೇಲಾದ ನೆರಳ ನೀಡ್ಯಾದ //ಕೇಳಿರಿ
ಸಾಲಿಯ ಮಕ್ಕಳ ಹಾಡೊಂದ//ಪ//
ಉಸಿರಿನ ದ್ಯಾವರು ಹಸಿರಾಗ ಬೆರೆತಾನ
ಕೆಸರು ಕೈಗಿಂದು ನೀಡ್ಯಾನ // ಕೇಳಿರಿ
ಮೊಸರನ್ನ ತಿನ್ನೋ ಭಾಗ್ಯವ//1//
ಮಳೆರಾಯ ಬಂದಾನ ಹೊಳೆಯಾಗಿ ಹರಿದಾನ
ಕಳೆದಾನ ಬಿಸಿಲ ಬೇಗೆಯ// ಕೇಳಿರಿ
ಕೊಳೆಯ ಮಾಡ್ಬೇಡಿ ಹೊಳೆಯನ್ನ//2//
ಕಾಡು ಬೆಳೆಸ್ಯಾರಲ್ಲ ನಾಡಿನ ಹಿರಿಯಾರು
ಮೋಡ ಮಣ್ಣನು ಕಟ್ಟಾಕ// ಕೇಳಿರಿ
ಬಾಡ್ಯಾವ ಕಾಡ ಹಸಿರುಸಿರ//3//ಶ್ರೀಮತಿ ಬಸಮ್ಮ ಏಗನಗೌಡ್ರ
(ವಿಶ್ವ ಪರಿಸರ ದಿನಾಚರಣೆ ಶುಭಾಶಯಗಳೊಂದಿಗೆ)
ಜೋತಿಷ್ಯ
ಇಂದಿನ ರಾಶಿ ಭವಿಷ್ಯ ರವಿವಾರ 05-06-2022
✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕
ಮೇಷ ರಾಶಿ:
ಪರಸ್ಪರ ಸಂಪರ್ಕದಲ್ಲಿ ನಿಮ್ಮ ಮಾತುಕತೆಗೆ ನಿಮಗೆ ಹೆಚ್ಚಿನ ಸ್ವಾಭಾವಿಕತೆ ಮತ್ತು ಸ್ವಾತಂತ್ರ್ಯ ನೀಡುತ್ತದೆ. ಕೆಲವು ಪ್ರಮುಖ ಯೋಜನೆಗಳನ್ನು ಕಾರ್ಯಗತಗೊಳಿಸಲಾಗುತ್ತದೆ ಹಾಗೂ ಅವು ನಿಮಗೆ ಹೊಸ ಆರ್ಥಿಕ ಲಾಭ ತರುತ್ತವೆ. ನಿಮ್ಮ ಮಕ್ಕಳೂ ಕೂಡ ಮನೆಯಲ್ಲಿನ ಶಾಂತಿ ಸಾಮರಸ್ಯದ ವಾತಾವರಣವನ್ನು ಆವಾಹಿಸಿಕೊಳ್ಳುತ್ತಾರೆ.ಅದೃಷ್ಟದ ದಿಕ್ಕು: ಆಗ್ನೇಯ
ಅದೃಷ್ಟದ...
ಕವನ
ಕವನ: ಕದ್ದು ತಂದೆ ಪ್ರೀತಿ
ಕದ್ದು ತಂದೆ ಪ್ರೀತಿ
ಓ ನನ್ನ ಒಲವೇ.
ನೋಡಿದೆ ನಾ ನಿನ್ನ ಮೊದಲ ದಿನವೇ.
ಒಪ್ಪಿಕೊಂಡವು ನನ್ನ ನಯನಗಳೆರಡು.
ನೀನೆ ನನ್ನ ಪತಿ ನೀನೆ ನನ್ನ ನಲ್ಲ ಎಂದು.
ಹೃದಯದಲ್ಲಿ ತುಂಬಿತು ಅದಮ್ಯ ಪ್ರೀತಿ.
ಬದುಕಲ್ಲಿ ಬಂದಿತು ಸತಿ ಸಾವಿತ್ರಿಯ ನೀತಿ.
ಉತ್ಸಾಹದಿಂದ ಮಾಡಿದೆ ನಿನ್ನ ಜೋಕೆ.
ಬದುಕಲ್ಲಿ ಹಾರಿಸಿದೆ
ಸುಂದರ ಸಂಸಾರದ ಪತಾಕೆ.
ಮನಸ್ಸಲ್ಲಿ ಬಾರದು ಚಂಚಲತೆಯ ಭಾವ.
ನೀವಾಗಿರುವಿರಿ ನನ್ನ ಬಾಳಿನ ಸುದೈವ.
ಯಾರೇನೇ ಅಂದರು ತಲೆಕೆಡಿಸಿಕೊಳ್ಳದ ಜೀವ.
ಗೊತ್ತಿದೆ...
ಸುದ್ದಿಗಳು
ಟ್ರಾವೆಲರ್ ಮತ್ತು ಟ್ರಕ್ ಮಧ್ಯೆ ಅಪಘಾತ; ಕರ್ನಾಟಕದ ಏಳು ಜನರ ಸಾವು
ಬೀದರ - ಉತ್ತರ ಪ್ರದೇಶದ ಲಖಿಂಪುರ ಖೇರಿ ಮತ್ತು ಮೋತಿಪುರ ನಡುವಿನ ಪ್ರದೇಶವಾದ ನೌನಿಹಾಲ್‌ನ ಖೇರಿ-ನನ್‌ಪಾರಾ ಹೆದ್ದಾರಿಯಲ್ಲಿ ಟೆಂಪೋ ಟ್ರಾವೆಲರ್ (ಕೆಎ 03-ಎಎ-7654) ಮತ್ತು ಟ್ರಕ್ (ಯುಪಿ 21-ಸಿಟಿ-4120) ನಡುವೆ ಬೆಳಗಿನ ಜಾವ ಭೀಕರ ಅಪಘಾತ ಸಂಭವಿಸಿದ್ದು ಏಳು ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.ಅಪಘಾತದಲ್ಲಿ ಕರ್ನಾಟಕ ಬೀದರ್ ಜಿಲ್ಲೆಗೆ ಸೇರಿದ ಒಟ್ಟು 16 ಜನರು ಸೇರಿದ್ದು...
ಸುದ್ದಿಗಳು
ಅಡುಗೆ ಮನೆಯಲ್ಲಿ ವಿಜ್ಞಾನ ಚಟುವಟಿಕೆ
ಮುನವಳ್ಳಿ: ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಯ ಮಹತ್ವಾಕಾಂಕ್ಷೆಯ ಯೋಜನೆಯಾದ 'ಮಳೆಬಿಲ್ಲು' ಕಾರ್ಯಕ್ರಮವು ಮಕ್ಕಳಲ್ಲಿರುವ ಸೃಜನಾತ್ಮಕತೆಯನ್ನು ಗುರುತಿಸುವ ಪ್ರಯತ್ನವಾಗಿದೆ. ಆಟದ ಮೂಲಕ ಮಕ್ಕಳಿಗೆ ಪಾಠವನ್ನು ತಿಳಿಸುವ ಈ ಕಾರ್ಯಕ್ರಮವು ತುಂಬಾ ಉಪಯುಕ್ತವಾಗಿದೆ. ಈ ಸಂದರ್ಭದಲ್ಲಿ 'ಅಡುಗೆ ಮನೆಯಲ್ಲಿ ವಿಜ್ಞಾನ' ಎನ್ನುವ ಚಟುವಟಿಕೆಯನ್ನು ಮಕ್ಕಳಿಂದ ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಕನ್ನಡ ಶಾಲೆ. ಮುನವಳ್ಳಿ ಯಲ್ಲಿ ಮಾಡಿಸಲಾಯಿತು.ಈ...
ಸುದ್ದಿಗಳು
ಋತುಚಕ್ರ ನೈರ್ಮಲ್ಯ ದಿನಾಚರಣೆ
ದಿನಾಂಕ 27/05/2022 ರಂದು ಜಿಲ್ಲಾ ಪಂಚಾಯತ ಬೆಳಗಾವಿ, ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಚಿಕ್ಕೋಡಿ ವಿಭಾಗ , ರೂರಲ್ ಡೆವಲಪಮೆಂಟ್ ಸೋಸೈಟಿ (RDS) ಸಂಸ್ಥೆ ಮುರಗೋಡ, ಇವರ ಸಹಯೋಗದೊಂದಿಗೆ ಹುಕ್ಕೇರಿ ತಾಲೂಕಿನ ದಡ್ಡಿ ಗ್ರಾಮ ಪಂಚಾಯತ ಇವರ ಸಂಯೋಗದಲ್ಲಿ ಋತು ಚಕ್ರ ನೈರ್ಮಲ್ಯ ದಿನಾಚರಣೆಯನ್ನೂ ಆಚರಿಸಲಾಯಿತು.ಸಂದರ್ಭದಲ್ಲಿ ಜಿಲ್ಲಾ ಯೋಜನಾ ವ್ಯವಸ್ಥಾಪಕರಾದ ದೀಪಕ್...
ಸುದ್ದಿಗಳು
ದರ್ಗಾನೋ ಅನುಭವ ಮಂಟಪವೋ? ಎಲ್ಲರ ಚಿತ್ತವೀಗ ಬೀದರನತ್ತ
ಬೀದರ - ಬಸವಣ್ಣನವರ ಕರ್ಮಭೂಮಿ ಬೀದರ್ ಜಿಲ್ಲೆಯಲ್ಲಿ ಮೂಲ ಅನುಭವ ಮಂಟಪ ಬಗ್ಗೆ ಬಾರಿ ಚರ್ಚೆ ನಡೆಯುತ್ತಿದೆ ಎಂದು ಹೇಳಬಹುದು.ಮೂಲ ಅನುಭವ ಮಂಟದ ಜಾಗದಲ್ಲಿ ದರ್ಗಾ ಇದೆಯಾ..? ಎಂಬ ಕುತೂಹಲಕಾರಿ ಪ್ರಶ್ಬೆ ಎದ್ದಿದ್ದು ಮಸೀದಿ ವರ್ಸಸ್ ಮಂದಿರದ ವಾರ್ ನಡುವೆ ಈಗ ಗಡಿ ಜಿಲ್ಲೆಯಲ್ಲಿ ಮೂಲ ಅನುಭವ ಮಂಟಪದ ಸಂರಕ್ಷಣೆಯ ಕೂಗು ಕೇಳಿ ಬರುತ್ತಿದೆ......
ಲೇಖನ
International Brother’s Day: ಸಹೋದರರ ದಿನ
ಇಂದು ಬ್ರದರ್ಸ್ ಡೇ, ಅಂದರೆ ಸಹೋದರರ ದಿನ. ಸಹೋದರನ ಪ್ರೀತಿ, ತ್ಯಾಗ, ಪರಿಶ್ರಮವನ್ನು ಗೌರವಿಸುವುದೇ ಈ ಬ್ರದರ್ಸ್ ಡೇ. ತನ್ನ ಕುಟುಂಬದ ಮೇಲಿರುವ ಪ್ರೀತಿಯನ್ನು ಸದ್ದಿಲ್ಲದೇ ತೋರುವ ತಂಗಿಗೆ ಕಾವಲಾಗಿ, ಅಕ್ಕನಿಗೆ ಹೆಗಲಾಗಿ ಇರುವವನೇ ಈ ಸಹೋದರ. ಇಂತಹ ಸಹೋದರನಿಗೂ ಒಂದು ದಿನವಿದೆ. ಹಾಗಾದರೆ ಬನ್ನಿ ಇದರ ಹಿನ್ನಲೆಯೇನು ?ಈ ಆಚರಣೆಯ ಮಹತ್ವವೇನು ಎಂಬುದನ್ನು...
ಕವನ
ವಿಶ್ವ ಸೋದರ ದಿನದ ಕವನ
ಮಧುರ ಸೋದರ ಬಂಧವು
ರಕ್ತದಿಂದಲೆ ಬಂಧವಾದರೆ
ಸ್ನೇಹಕೆಲ್ಲಿದೆ ಅರ್ಥವು
ಸಿಕ್ತವಾಗಲು ಸೋದರತೆಯೇ
ಮುಖ್ಯವಾದರೆ ತೀರ್ಥವು
ಭಕ್ತಿಯಿಂದಲಿ ಕಾಯ್ದುಕೊಂಡರೆ
ಸೋದರತೆಯಾ ನಿತ್ಯವು
ಮುಕ್ತವಾಗಿಸಿ ತ್ವೇಷವನ್ನೇ
ಉಕ್ತ ಬಂಧುರ ಸತ್ಯವು
ಹುಟ್ಟಿನಿಂದಲೆ ಮೆಟ್ಟಿ ನಿಲ್ಲುವ
ಎರೆದು ಪ್ರೀತಿಯ ಬಂಧವ
ಗಟ್ಟಿಯಾಗಿಸಿ ನೆಟ್ಟ ಮನದೊಳ್
ಅಣ್ಣ ತಮ್ಮರ ಬಂಧುರ
ತ್ಯಾಗವಿದ್ದರೆ ಸೋದರತೆಗೇ
ಅರ್ಥ ಬಪ್ಪುದು ತಪ್ಪದೆ
ಭೋಗವಿದ್ದರೆ ಅರ್ಥಹೀನವು
ಅಳಸಿ ಹೂರಣ ತೀಡದೆ
ಜನ್ಮ ಜನ್ಮದ ಪುಣ್ಯವಾಗಿದೆ
ಅಣ್ಣ ತಮ್ಮರ ಜೀವನ
ಹಮ್ಮಿನಿಂದಲೆ ಮೆಚ್ಚಿ ನೆಚ್ಚಿದೆ
ಅಕ್ಕ ತಂಗಿಯ ಭಾವನ
ಸೋದರೆಲ್ಲರು ಕೂಡಿ ಬಾಳಲು
ನವ್ಯವಾಗಿಪ ತಾಣವು
ತೀಡಿ ತಿದ್ದಿದ ನತ್ತಿನಂದದಿ
ಮಧುರ...
ಸುದ್ದಿಗಳು
ಸಚಿವರ ವಿರುದ್ಧವೇ ಗರಂ ಆದ ಪಶು ವೈದ್ಯಾಧಿಕಾರಿ
ಬೀದರ - ಪ್ರಗತಿ ಪರಿಶೀಲನ ಸಭೆ ನಡೆಯುವ ಸಂದರ್ಭದಲ್ಲಿ ಪಶು ವೈದ್ಯಾಧಿಕಾರಿ ಡಾ. ಶಿಲ್ಪಾ ಅವರು ಪಶು ಸಂಗೋಪನಾ ಸಚಿವರ ಮೇಲೆಯೇ ಗರಂ ಆದ ಪ್ರಸಂಗ ನಡೆದಿದೆ.ಗುರುವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಪ್ರಭು ಚವ್ಹಾಣ ಅವರು ಡಾ. ಶಿಲ್ಪ ಅವರಿಗೆ ಪ್ರಶ್ನೆ ಕೇಳಿದರು .ಡಾ ಶಿಲ್ಪ ಅವರು ಉತ್ತರ ನೀಡಿದರು. ಉತ್ತರದಿಂದ...
About Me
12281 POSTS
1 COMMENTS
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



