spot_img
spot_img

ಬಾರಿಸು ಕನ್ನಡದ ಡಿಂಡಿಮವ ತಲೆ ಎತ್ತಿ ಹಾರಿಸು ಕನ್ನಡದ ಬಾವುಟವ

Must Read

spot_img
- Advertisement -

ಕಪ್ಪು ಮಣ್ಣಿನ ಫಲವತ್ತತೆಯ ನಾಡು , ನೂರಾರು ರಾಜ್ಯ ವಂಶ ಪರಂಪರೆ ಆಳ್ವಿಕೆಯ ಬೀಡು,ಬೆಲ್ಲದ ಸಿಹಿಯ ಹೂರಣದ ಕರುನಾಡು, ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ನಾಡು, ಲಕ್ಷಾಂತರ ಕವಿ ಸಾಹಿತಿಗಳ ಪದಪುಂಜಗಳಲ್ಲಿ ಕಲೆ , ಸಂಸ್ಕೃತಿ , ವೈಭವದ ಚಿತ್ತಾರವನ್ನು ವರ್ಣಿಸಿದ ನಾಡು, ಕೋಟ್ಯಂತರ ಜನರ ಪ್ರೀತಿ ಅಭಿಮಾನ ಗೌರವದ ನಾಡು, ಪುಣ್ಯ ನದಿಗಳ ಸಂಗಮದ ನಿರಂತರತೆ ಬೀಡು, ಸರ್ವ ಧಾರ್ಮಿಕ ಕ್ಷೇತ್ರಗಳ ನಾಡು, ಪುಣ್ಯ ಮಣ್ಣಿನ ಹಲವು ಬಣ್ಣದ ನಾಡು ,ಭವ್ಯ ಭಾರತದ ಅತಿ ಪ್ರಿಯವಾದ ನಾಡು ಈ ನಮ್ಮ ಅರಿಷಿಣ ಕುಂಕುಮದ ಕರುನಾಡು.

ಏಷ್ಯಾ ಖಂಡದಲ್ಲಿ ಭಾರತ ದೇಶವು ಹೇಗೆ ಎಲ್ಲಾ ದೇಶಗಳಿಗಿಂತ ವಿಭಿನ್ನವಾಗಿ ಬೆಳಗುವ ದೀಪದಂತೆ , ಸಾಂಸ್ಕೃತಿಕ ವೈಭವದ ಸಂಪ್ರದಾಯ ತವರಂತೆ ಇದೆಯೋ ಹಾಗೆ ಕನ್ನಡ ನಾಡು ಕೂಡ ಎಲ್ಲಾ ರಾಜ್ಯಗಳಿಗಿಂತ ಅತಿ ಹೆಚ್ಚಿನ ಪ್ರೀತಿ ಪ್ರೇಮ ,ಸರ್ವ ಧರ್ಮಗಳು , ಸಾವಿರಾರು ಭಾಷೆಗಳು, ಧಾರ್ಮಿಕ ಕ್ಷೇತ್ರಗಳು, ನದಿಗಳು, ಮೈದುಂಬಿ ಧುಮುಕುವ ಜಲಪಾತಗಳು , ಅರಣ್ಯ ಸಂಪತ್ತು,ಎಲ್ಲಾ ಏಕತೆಯ ಜನತೆಯ ಹೃದಯಗಳು,ಸರ್ವ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರು ಕೂಡ ಕನ್ನಡ ರಾಜ್ಯದಲ್ಲಿ ಇರುವರು , ಇನ್ನು ೧೨ ನೇ ಶತಮಾನದ ವಚನ ಸಾಹಿತ್ಯದ ಬಗ್ಗೆ ನೋಡಿದರೆ ಕನ್ನಡ ಸಾಹಿತ್ಯ ಯಾವ ಮಟ್ಟದಲ್ಲಿ ಇದೆ ಎಂದು ಗೊತ್ತಾಗುತ್ತದೆ, ಬಸವಣ್ಣ , ಅಕ್ಕಮಹಾದೇವಿ,ಅಲ್ಲಮ ಪ್ರಭು, ಅಂಬಿಗರ ಚೌಡಯ್ಯ, ಸಿದ್ದರಾಮೇಶ್ವರ, ಗುಹೇಶ್ವರ, ಸಾವಿರಾರು ವಚನ ಸಾಹಿತ್ಯದ ಶರಣರು ಅನುಭವ ಮಂಟಪದಲ್ಲಿ ಇರುವುದು ಇಡೀ ವಿಶ್ವಕ್ಕೆ ಗೊತ್ತು , ತದನಂತರ ದಾಸ ಸಾಹಿತ್ಯದ ಬಗ್ಗೆ ನೋಡಿದರೆ ಸಾವಿರಾರು ಕೀರ್ತನೆಗಳ ಮೂಲಕ ಸಮಾಜದ ಅಂಕು ಡೊಂಕು ತಿದ್ದಿರುವ ಪುರಂದರದಾಸರು, ಕನಕದಾಸರು, ದೊಡ್ಡ ದೊಡ್ಡ ಗ್ರಂಥಗಳನ್ನು ಸಹ ಕನ್ನಡ ನಾಡಿಗೆ ಕೊಡುಗೆಯಾಗಿ ನೀಡಿದ ಮಹಾತ್ಮರು ಇರುವರು , ಸುಮಾರು ೨೦೦೦ ಆಸುಪಾಸಿನಲ್ಲಿ ದಕ್ಷಿಣ ಭಾರತದಕ್ಕೆ ಆರ್ಯರ ಆಗಮನದಿಂದ ಕರುನಾಡು ಎನ್ನುವ ಪುಣ್ಯ ಭೂಮಿ ಜನ್ಮ ತಾಳಿತು ಎಂದು ಕೆಲವು ಸಂದೇಶಗಳು ,ಇಲ್ಲಿ ಕಲೆ , ಸಂಸ್ಕೃತಿ, ಸಾಹಿತ್ಯ, ವಾಸ್ತು ಶಿಲ್ಪ , ಧಾರ್ಮಿಕತೆ, ರಾಜಕೀಯ, ಸಮಾಜಿಕ, ಆರ್ಥಿಕವಾಗಿ ಕರುನಾಡು ಶ್ರೀಮಂತ ಪುಣ್ಯಭೂಮಿ, ಪ್ರಸ್ತುತ ತಂತ್ರಜ್ಞಾನ ಕ್ಷೇತ್ರದಲ್ಲಿ ಅತಿ ಹೆಚ್ಚು ಮೇರು ಮಟ್ಟದಲ್ಲಿ ಕರುನಾಡು ಇದೆ , ದೊಡ್ಡ ದೊಡ್ಡ ಪಟ್ಟಣಗಳು ,ಕಟ್ಟಡಗಳು , ಶಿಕ್ಷಣ ಸಂಸ್ಥೆಗಳು ಕೂಡ ಕನ್ನಡ ರಾಜ್ಯದಲ್ಲಿ ಇವೆ , ಕನ್ನಡ ನಾಡಿನ ಶ್ರೀ ಮಠಗಳಾದ ಶ್ರೀ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಗಳು, ಆದಿಚುಂಚನಗಿರಿ ಮಠ, ಸುತ್ತೂರು ಶ್ರೀಗಳು, ಮುರುಘಾ ಶರಣರು,ಕೊಪ್ಪಳ ಶ್ರೀಗಳು ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಗಳು , ಸಿರಿಗೆರೆಯ ಶಿವಕುಮಾರ ಸ್ವಾಮೀಜಿಗಳು,ಶ್ರೀ ಸಿದ್ದೇಶ್ವರ ಗುರುಗಳು ಇನ್ನು ಮುಂತಾದ ಕ್ಷೇತ್ರಗಳು ಎಷ್ಟೋ ಅನಾಥ ಮಕ್ಕಳಿಗೆ,ಉಚಿತ ಶಿಕ್ಷಣ ಮತ್ತು ವಸತಿ , ದಾಸೋಹವನ್ನು ನೀಡುತ್ತಾ ಕನ್ನಡ ನಾಡಿನ ಜನತೆಯಲ್ಲಿ ಶಾಶ್ವತವಾಗಿ ಮನದಲಿ ನೆಲೆಸಿವೆ.

ಇನ್ನು ರಾಜವಂಶದ ಬಗ್ಗೆ ನೋಡಿದ್ರೆ ,ಮೌರ್ಯರು, ಶಾತವಾಹನರು, ಕದಂಬರು, ಗಂಗರು, ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಹೊಯ್ಸಳರು, ಕಲ್ಯಾಣ ಚಾಲುಕ್ಯರು, ವಿಜಯನಗರ ಸಾಮ್ರಾಜ್ಯ ಮತ್ತು ಹಲವಾರು ಪಾಳೇಗಾರ ಮನೆತನದ ವಂಶಸ್ಥರು ಕೂಡ ಕರ್ನಾಟಕ ರಾಜ್ಯವನ್ನು ಆಳ್ವಿಕೆ ಮಾಡಿ ಅವರ ಕಲೆ ಸಂಸ್ಕೃತಿ ಸಾಹಿತ್ಯ ವಾಸ್ತು ಶಿಲ್ಪ ಧಾರ್ಮಿಕತೆಯನ್ನು ಇನ್ನು ಹೆಚ್ಚಿನ ಮಟ್ಟದಲ್ಲಿ ಕೊಟ್ಟು ಹೋಗಿರುವರು.


ಬಾರಿಸು ಡಿಂಡಿಮವ.

- Advertisement -

ಹಾರಿಸು ಕನ್ನಡದ ಬಾವುಟ
ಸ್ಮರಿಸು ಎದೆ ಗೂಡಿನಲ್ಲಿ ಕನ್ನಡದ ಭೂಪಟ
ರನ್ನ ಪೊನ್ನ ಪಂಪರ ಸಾಲುಗಳ
ಕನ್ನಡಾಂಬೆಯ ಮಡಿಲ ಚಿತ್ರಗಳು
ಮಲೆನಾಡಿನ ಹಸಿರ ವನಸಿರಿಯು
ಸವಿ ಬೆಲ್ಲದ ಮಾತಿನ ನುಡಿಯು.

ಕೆಚ್ಚೆದೆಯ ಕಲಿಗಳ ನಾಡು
ಶರಣರು ಜನಿಸಿದ ಬೀಡು
ನೇಗಿಲ ಯೋಗಿಯ ಬಲವು
ಹಸಿವು ನೀಗಿಸುವ ಛಲವು
ಬಾರಿಸು ಡಿಂಡಿಮವ
ಹಾರಿಸು ಕನ್ನಡದ ಬಾವುಟವ.

ಕನ್ನಡ ಮಾತೆಯ ನಂಟು
ನುಡಿಸಿರಿಗೆ ಜ್ಞಾನಪೀಠಗಳು ಎಂಟು
ಕಾವೇರಿ ತುಂಗಭದ್ರಾ ಹರಿಯುವ ಚೆಲುವು
ಕನ್ನಂಬಾಡಿಯ ಕಟ್ಟಿದ ಕೈಗಳ ಬಲವು.

- Advertisement -

ಅರಿಶಿನ ಕುಂಕುಮದ ಸಿಂಧೂರ
ಕನ್ನಡ ಬಾವುಟಕ್ಕೆ ಸೊಬಗಿನ ಆಧಾರ
ಚಿನ್ನದ ಗಣಿಯ ಬೆಳಗುವ ಹೊನಲು
ಕನ್ನಡಾಂಬೆಯ ಸೇವೆಯ ಕಾವಲು
ಬಾರಿಸು ಡಿಂಡಿಮವ
ತಲೆ ಎತ್ತಿ ಹಾರಿಸು ಕನ್ನಡದ ಬಾವುಟವ.


ಭೋವಿ ರಾಮಚಂದ್ರ


ಭಾರತದ ದೇಶ ಬ್ರಿಟಿಷ್ ದಬ್ಬಾಳಿಕೆಯಿಂದ ಸ್ವಾತಂತ್ರ್ಯ ಪಡೆದಾಗ ಸುಮಾರು ೫೭೨ ಸ್ವಾತಂತ್ರ್ಯ ಸಾಮ್ರಾಜ್ಯಗಳ ರಾಜರನ್ನು ಸರ್ದಾರ್ ವಲ್ಲಭಭಾಯ್ ಪಟೇಲ್ ಅವರು ದೇಶಕ್ಕೆ ವಿಲೀನವಾಗುವಂತೆ ಮಾಡುವ ಸಂದರ್ಭದಲ್ಲಿ ಮೈಸೂರಿನ ಒಡೆಯರು ಭಾರತದ ಭಾಗವಾಗಲು ಸಮ್ಮತಿಸಿದರು ,ಕ್ರಿಶ೧೯೫೦ ರಲ್ಲಿ ಮೈಸೂರು ಭಾರತದ ರಾಜ್ಯವಾಯಿತು ,ರಾಜರ ಆಳ್ವಿಕೆಯನ್ನು ಕೊನೆಗೊಳಿಸಿ ಪ್ರಜಾಪ್ರಭುತ್ವದ ಆಳ್ವಿಕೆಯನ್ನು ನಡೆಸಲು ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರು ಯೋಚನೆ ಮಾಡಿದರು , ನೆಹರೂ ಅವರ ಮುಂದೆ ರಾಜ್ಯದ ಸ್ವಾತಂತ್ರ್ಯಕ್ಕಾಗಿ ಕರ್ನಾಟಕ ಏಕೀಕರಣ ಚಳುವಳಿಯನ್ನು ಆರಂಭಿಸಿದರು ಏಕೀಕರಣ ೧೯ ನೇ ಶತಮಾನದಲ್ಲಿ ಶುರುವಾಗಿ ಕ್ರಿಶ ೧೯೫೬ ರಲ್ಲಿ ರಾಜ್ಯದ ಪುನರ್ ಸಂಘಟನೆ ಕಾಯಿದೆಯೊಂದಿಗೆ ಮುಕ್ತಾಯವಾಯಿತು ,ಕ್ರಿಶ ೧೯೭೩ ರಲ್ಲಿ ಕರ್ನಾಟಕವೆಂದು ನಾಮಕರಣವಾಗಿತು,ನವೆಂಬರ್ ೧,೧೯೭೮ ರಲ್ಲಿ ರಾಜ್ಯ ರಚನೆಯಾಗಿ ಅಂದಿನಿಂದ ಇಂದಿನವರೆಗೂ ಕನ್ನಡ ರಾಜ್ಯೋತ್ಸವ ಹಬ್ಬವನ್ನು ಆಚರಿಸುತ್ತಾ ಬಂದಿದ್ದಾರೆ, ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಆಲೂರು ವೆಂಕಟರಾಯರು, ಸಿದ್ಧಪ್ಪ ಕಂಬಳಿ, ಕನ್ನಡ ನಾಡಿನ ಗಾಂಧಿ ಮಂಜಪ್ಪನರು ಮುಂತಾದ ಹೋರಾಟಗಾರು ತಮ್ಮ ಸೇವೆಯನ್ನು ಮಾಡಿದರು , ಕನ್ನಡದ ಗೀತೆಗಳು ಸಹ ಏಕೀಕರಣದಲ್ಲಿ ಕವಿಗಳು ರಚಿಸಿ ಹಾಡಿದರು.

ಕನ್ನಡ ನಾಡಿನ ಬಗ್ಗೆ ಹೇಳಲು ಪದಗಳೇ ಸಾಲದು ವಿಜಯನಗರ ಸಾಮ್ರಾಜ್ಯದಲ್ಲಿ ಶ್ರೀಕೃಷ್ಣ ದೇವರಾಯ ಕನ್ನಡಕ್ಕೆ ಅತಿ ಹೆಚ್ಚು ಪ್ರಾಮುಖ್ಯತೆಯನ್ನು ನೀಡಿದವ, ಪ್ರಸ್ತುತ ಸಾವಿರಾರು ಗಂಧ್ರಗಳು,ಕವಿ ಸಾಹಿತಿಗಳು ಕನ್ನಡ ವೈಭವವನ್ನು ರಾಷ್ಟ್ರಕ್ಕೆ ಸಾರುತ್ತಿರುವವರು,ಕನ್ನಡದ ರಾಷ್ಟ್ರಕವಿ ಕುವೆಂಪು, ಗೋವಿಂದ ಪೈ, ಅನಂತಮೂರ್ತಿ, ವಿನಾಯಕ ಕೃಷ್ಣ ಗೋಕಾಕ್, ಬೇಂದ್ರೆ ತಾತ, ಗಿರೀಶ್ ಕಾರ್ನಾಡ್ , ಚಂದ್ರಶೇಖರ್ ಕಂಬಾರ , ಬರಗೂರು ರಾಮಚಂದ್ರಪ್ಪ , ದೇವನೂರು ಮಹಾದೇವ, ಇನ್ನೂ ಮುಂತಾದ ಮಹಾ ಸಾಹಿತಿಗಳು ಕೂಡ ಇರುವರು ,ಕರುನಾಡಿನ ಮುತ್ತುರಾಜ್ ಡಾ, ರಾಜಕುಮಾರ ಅವರು ಕನ್ನಡಕ್ಕಾಗಿ ಸೇವೆ ಸಲ್ಲಿಸಿದವರು ,ನಮ್ಮ‌ ಭಾಗದ ಕುಂಬಾರ ವೀರಭದ್ರಪ್ಪ ಅವರು ಕೂಡ ಕನ್ನಡಕ್ಕಾಗಿ ಹೆಚ್ಚು ಸೇವೆ ಸಲ್ಲಿಸಿದ ಮಹನೀಯರು, ಚನ್ನವೀರ ಕಣವಿ,ಬಿ,ಟಿ ಲಲಿತಾ ನಾಯ್ಕ್ ಮುಂತಾದ ಕವಿಗಳು ರಚಿಸಿದ ಕಾವ್ಯಗಳು ಇನ್ನು ಜನರ ಮನದಲ್ಲಿ ಅಚ್ಚಾಗಿ ಉಳಿದಿವಿ ನನ್ನ ನೆಚ್ಚಿನ ಕವಿಗಳಾದ ಪೂರ್ಣಚಂದ್ರ ತೇಜಸ್ವಿ ಅವರು ವೈಚಾರಿಕತೆಯ ಸಾಹಿತಿಗಳು , ಎಸ್ ,ಎಲ್ ಭೈರಪ್ಪನವರು ಕೂಡ ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ,ಈ ವರ್ಷದ ಕನ್ನಡ ರಾಜ್ಯೋತ್ಸವಕ್ಕೆ ಕನ್ನಡ ನಾಡಿನ ಮುತ್ತು ರಾಜ್ , ಪುಟ್ಟ ರಾಜಕುಮಾರ ಪುನೀತ್ ರಾಜ್ ಕುಮಾರ್ ಅವರನ್ನು ಕಳೆದುಕೊಂಡು ದುಃಖದಲ್ಲಿ ಕನ್ನಡದ ಹಬ್ಬವನ್ನು ಆಚರಣೆ ಮಾಡುವುದು ಎಂದು ಹೇಳಲು ನೋವಿನ ಸಂಗತಿ ,ಏನೇ ಇರಲಿ ಎಲ್ಲಾ ಆರು ಕೋಟಿ ಕನ್ನಡದ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು .


ಭೋವಿ ರಾಮಚಂದ್ರ
ಹರಪನಹಳ್ಳಿ
8861588118.

- Advertisement -
- Advertisement -

Latest News

ಜತ್ತ-ಜಾಂಬೋಟಿ ರಸ್ತೆ ಮೇಲ್ದರ್ಜೆಗೇರಿಸಲು ಮನವಿ ಸಲ್ಲಿಸಿದ ಈರಣ್ಣ ಕಡಾಡಿ

ಬೆಳಗಾವಿ: ಜತ್ತ-ಜಾಬೋಂಟಿ ಹೆದ್ದಾರಿ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೆ ಏರಿಸಬೇಕು. ಬೆಳಗಾವಿ ವಿಮಾನ ನಿಲ್ದಾಣದಿಂದ ಸಿಟಿ ಬಸ್ ನಿಲ್ದಾಣದವೆರೆಗೆ ಮೇಲ್ಸೇತುವೆ ನಿರ್ಮಾಣ ಮಾಡಿ ಸುಗಮ ಸಂಚಾರಕ್ಕೆ...
- Advertisement -

More Articles Like This

- Advertisement -
close
error: Content is protected !!
Join WhatsApp Group