spot_img
spot_img

ಶೋಧನೆ ಸತ್ಯದ ಪರವಾಗಿದ್ದರೆ ಉತ್ತಮ

Must Read

- Advertisement -

Search research; ಒಂದು ಜ್ಞಾನ ಇನ್ನೊಂದು ವಿಜ್ಞಾನ. ಹುಡುಕುವುದು ಜ್ಞಾನ ಹುಡುಕಿದ್ದನ್ನು ಪರಿಶೀಲಿಸೋದು ವಿಜ್ಞಾನ. ಭೂಮಿಯ ಮೇಲಿರುವ ಇವೆರಡರಲ್ಲಿ ಒಂದನ್ನು ಬಿಟ್ಟು ಇನ್ನೊಂದು ಇಲ್ಲ. ಸತ್ಯವನ್ನು ಹುಡುಕುವುದು ಸರಿ. ಸತ್ಯ ತಿಳಿದ ಮೇಲೆ ಮತ್ತೆ ಮತ್ತೆ ಪರಿಶೀಲನೆ ಮಾಡುತ್ತಿದ್ದರೆ ಅದು ಗೊಂದಲವಾಗಿ ಮಿಥ್ಯವಾಗಬಹುದು.

ಹೀಗಾಗಿ ಹುಡುಕಾಟವಿರಬೇಕು. ಹುಡುಕಾಟವೇ ಜೀವನವಾದರೆ ಕಷ್ಟವಾಗುತ್ತದೆ. ಇದರಲ್ಲಿ ಎರಡು ರೀತಿಯ ಹುಡುಕಾಟವಿದೆ.ಒಂದು ನಮ್ಮ ಒಳಗಿನ ಸತ್ಯದ ಹುಡುಕಾಟ, ಇನ್ನೊಂದು ಭೌತಿಕ ಸತ್ಯ. ಒಳಗಿರುವ ಸತ್ಯಕ್ಕೆ ಹೊರಗಿನ ಸತ್ಯದ ಪರವಿದ್ದರೆ ಹುಡುಕುವುದನ್ನು ನಿಲ್ಲಿಸಬಹುದು.

ಇಲ್ಲವಾದರೆ ಅದನ್ನು ವಿರೋಧಿಸುತ್ತಾ ಮುಂದೆ ಮುಂದೆ ನಡೆದಂತೆ ಹಿಂದಿನ ಸತ್ಯ ಹಿಂದುಳಿಯುತ್ತದೆ. ಹಾಗಾದರೆ ನಮ್ಮೊಳಗಿನ ಸತ್ಯ ಬಿಟ್ಟು ಹೊರಗೆ ನಡೆದಂತೆಲ್ಲಾ ನಮಗೆ ಸತ್ಯ ಸಿಕ್ಕಿತೆ? ಇಲ್ಲವಾದರೆ ನಾವು ಕಳೆದುಕೊಂಡಿದ್ದು ನಮ್ಮನ್ನೇ.

- Advertisement -

ಹೀಗೆ ಆಂತರಿಕವಾಗಿ ಸತ್ಯದ ಬೆನ್ನತ್ತಿ ಒಳಗೆ ಒಳಗೆ ನಡೆದವರೂ ಭೂಮಿಯ ಮೇಲಿದ್ದ ಸತ್ಯವನ್ನು ಒಪ್ಪದೆ ಮರೆಯಾದರು. ಈಗ ಮನುಕುಲ ಇವರಿಬ್ಬರ ಸತ್ಯಾಸತ್ಯತೆಯನ್ನು ಮಧ್ಯದಲ್ಲಿಟ್ಟುಕೊಂಡು ವ್ಯವಹಾರ ನಡೆಸಿ ಜೀವನದಲ್ಲಿ ಕಷ್ಟ ಸುಖದ ಸರಮಾಲೆಯಲ್ಲಿದೆ.

ಯಾವುದೇ ಸತ್ಯವಾಗಿರಲಿ ಅದರಿಂದ ಸಮಾಜಕ್ಕೆ, ಸಂಸಾರಕ್ಕೆ ಅಗತ್ಯವಿದ್ದರೆ ಒಪ್ಪಲೇಬೇಕು.ನನಗೆ ಅದರ ಅನುಭವವಾಗಿಲ್ಲವೆಂದಾಗಲಿ, ನನಗೆ ಒಪ್ಪಿಗೆಯಿಲ್ಲ ಎಂದಾಗಲಿ ಅದನ್ನು ತಡೆಯಲು ಹೋದರೆ ಸತ್ಯ ಒಂದೆ ಇರೋವಾಗ ತಡೆದವರು ಮರೆಯಾದರೂ ಸತ್ಯ ಬೆಳಕಿಗೆ ಬರುತ್ತದೆ.

ಹೀಗಾಗಿ ಶೋಧನೆ ಸಂಶೋಧನೆ ಎರಡೂ ಇರಬೇಕು. ಶೋಧಿಸಿದ್ದು ಸ್ವಚ್ಚವಾಗಿಲ್ಲವಾದರೆ ಸಂಶೋಧನೆ ಮಾಡಬೇಕು. ಇದರಲ್ಲಿ ಆಂತರಿಕ ಶೋಧನೆ ಬಹಳ ಮುಖ್ಯ. ಭೌತಿಕ ಶೋಧನೆಯು ಅಗತ್ಯ ಇದ್ದರೆ ಮಾತ್ರ ಮಾಡಬೇಕಿದೆ. ಅತಿಯಾದ ಶೋಧನೆ ಮಾನವನಿಗೆ ಇಕ್ಕಟ್ಟಿಗೆ ಸಿಲುಕಿಸುತ್ತದೆ.

- Advertisement -

ಕಾರಣವಿಷ್ಟೆ ಮನುಕುಲದ ಉದ್ದೇಶ ಭೂಮಿಯಲ್ಲಿ ಧರ್ಮದಿಂದ ಸತ್ಯದಿಂದ ನಡೆದು ಜೀವನ್ಮುಕ್ತಿಗಾಗಿ ತನ್ನ ತಾನು ಶೋಧಿಸಿಕೊಂಡು ಜೀವನ ನಡೆಸೋದಾಗಿತ್ತು. ಇದನ್ನು ಮಹಾತ್ಮರಾದವರಷ್ಟೆ ಮಾಡಲು ಸಾಧ್ಯವಾಗಿದೆ. ಅವರು ಅಂದಿನ ಕಾಲಮಾನ, ದೇಶ,ಪರಿಸರ,ಸಮಾಜ ಧರ್ಮತತ್ವಗಳ ಆಧಾರದ ಶಿಕ್ಷಣದಿಂದ ಈ ಸಾಧನೆ ಮಾಡಿದ್ದರು.

ಆದರೆ, ಈಗ ವಿಜ್ಞಾನ ಯುಗದ ಮಾನವ ಸಂಶೋಧಕನಾಗಿ ಬೌತಿಕದಲ್ಲಿ ಹೆಚ್ಚು ಹೆಚ್ಚು ಆಸಕ್ತಿ ಪಡೆದು ಆಂತರಿಕ ಸತ್ಯಶೋಧನೆ ಬಿಟ್ಟು ಹೊರಬಂದು ಹಿಂದಿನ ಮಹಾತ್ಮರು ನಡೆಸಿದ ಆಧ್ಯಾತ್ಮಿಕ ಸಾಧನೆಯ ಬಗ್ಗೆ ವಾದ ವಿವಾದಗಳಿಂದ ಸತ್ಯ ಶೋಧನೆ ಮಾಡಿದರೆ ಸತ್ಯದ ಅನುಭವ ಸಿಗದೆ ಸತ್ಯ ಹಿಂದುಳಿಯುವುದು ಸರಿ.

ಹೀಗಾಗಿ ಶೋಧಕರಾದವರು ಮೊದಲು ನಮ್ಮ ಒಳಗೆ ಅಡಗಿರುವ ತತ್ವದ ಮೂಲಕ ಸತ್ಯವನ್ನರಿಯಲು ನಮ್ಮ ಒಳಗೇ ಶೋಧಿಸಿಕೊಂಡರೆ ಹೊರಗಿನ ಸಂಶೋಧನೆಗೆ ಅನುಕೂಲವಾಗುತ್ತದೆ. ಇಲ್ಲಿ ಯಾವುದೇ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಒಳಗಿರುವ ಜ್ಞಾನಕ್ಕೆ ತಕ್ಕಂತೆ ಶಿಕ್ಷಣ ಸಿಗಬೇಕು. ಅದು ವಿಶೇಷಜ್ಞಾನ ವಿಜ್ಞಾನವಾಗಿ ಸಂಶೋಧನೆಯು ಉತ್ತಮವಾಗಿರುತ್ತದೆ.

ಇದನ್ನು ನಾವು ನಮ್ಮ ಮೂಲ ಧರ್ಮ, ದೇವರು, ಜಾತಿ, ಕರ್ಮ,ಶಿಕ್ಷಣ ಇವುಗಳಿಂದ ಪ್ರಾರಂಭ ಮಾಡಿ ನಿಧಾನವಾಗಿ ಭೌತಿಕ ವಿಜ್ಞಾನ ವನ್ನು ನಮ್ಮ ಒಳಗಿನ ಜ್ಞಾನಕ್ಕೆ ತಕ್ಕಂತೆ ತಿಳಿದು ನಡೆದಾಗ ಅದ್ವೈತ ವಾಗುತ್ತದೆ. ಏಕವಾಗುತ್ತದೆ. ಸತ್ಯ ಸತ್ಯವಾಗಿರುತ್ತದೆ. ಸತ್ಯದ ಜೊತೆಗೆ ಮಿಥ್ಯ ಸೇರಿಸಿದರೆ ಗೊಂದಲ ವೇ ಹೆಚ್ಚು. ಯಾವುದೇ ವಿಚಾರವಾದರೂ ನಮ್ಮಲ್ಲಿ ಗೊಂದಲ ವಿದ್ದರೆ ಆ ವಿಚಾರದಲ್ಲಿ ಸ್ಪಷ್ಟತೆ ಇರುವ ಗುರುಗಳನ್ನು, ಜ್ಞಾನಿಗಳನ್ನು ಬೇಟಿಮಾಡಿ ಸತ್ಯ ಅರ್ಥ ಮಾಡಿಕೊಳ್ಳಬೇಕೇ ಹೊರತು ಅದಕ್ಕೆ ವಿರುದ್ದ ನಡೆಯೋ ವ್ಯಕ್ತಿ ಯೊಡನೆ ವಾದಕ್ಕೆ ನಿಂತರೆ ಇನ್ನಷ್ಟು ಭಿನ್ನಾಭಿಪ್ರಾಯ ಬೆಳೆದು ಸತ್ಯ ಹಿಂದುಳಿಯಬಹುದು. ಮಕ್ಕಳ ವಯಸ್ಸು ಒಂದೆ ಇದ್ದರೂ ಅವರವರ ಮೂಲ ಶಕ್ತಿ ಬೇರೆಯಾದಾಗ ಜ್ಞಾನದಲ್ಲಿ ವ್ಯತ್ಯಾಸವಿರುತ್ತದೆ.

ಹೀಗಾಗಿ ಮೂಲ ಶಿಕ್ಷಣದಲ್ಲಿಯೇ ಅವರ ಜ್ಞಾನವನ್ನು ಪೋಷಕರೆ ಗುರುತಿಸಿ ,ತಮ್ಮೊಳಗಿನ ಜ್ಞಾನದಿಂದ ಬೆಳೆಸಿ ಅದಕ್ಕೆ ತಕ್ಕಂತೆ ಶಿಕ್ಷಣ ನೀಡಿದರೆ ಮಕ್ಕಳ ಜ್ಞಾನ ಪರಿಪಕ್ವ ಆಗೋದಕ್ಕೆ ಹೆಚ್ಚು ವರ್ಷಗಳು ಹಿಡಿಯುವುದಿಲ್ಲ. ಆದರೆ ವಿಪರ್ಯಾಸವೆಂದರೆ, ನಮ್ಮ ಭಾರತದಲ್ಲಿರುವ‌ ಶಿಕ್ಷಣದಲ್ಲಿ ಮಕ್ಕಳ ಜ್ಞಾನ ಗುರುತಿಸದೆ ವಿಶೇಷಜ್ಞಾನ ನೇರವಾಗಿ ತುಂಬಿ ಎಲ್ಲಾ ಮಕ್ಕಳೂ ಬುದ್ದಿವಂತರಾಗಲು ಬಯಸುತ್ತಾರೆ.

ಒಂದೊಂದು ವಿಷಯದಲ್ಲಿ ಒಂದೊಂದು ಮಕ್ಕಳಿಗೆ ಆಸಕ್ತಿಯಿರುತ್ತದೆ. ಎಲ್ಲಾ ವಿಷಯದಲ್ಲೂ ಆಸಕ್ತಿ ಇರಬೇಕೆನ್ನುವುದರಿಂದ ಅವರಲ್ಲಿದ್ದ ಮೂಲ ಜ್ಞಾನ, ಪ್ರತಿಭೆ ಆಸಕ್ತಿ ಕಳೆದುಕೊಳ್ಳುವ ಸಾಧ್ಯತೆಗಳಿವೆ. ಹೀಗಾಗಿ ಪೋಷಕರು, ಶಿಕ್ಷಕರು ಮೊದಲು ಮಕ್ಕಳ ಒಳಗೆ ಇರುವ ಆಸಕ್ತಿ, ಜ್ಞಾನ,ಪ್ರತಿಭೆ ಯನ್ನು ನಿದಾನವಾಗಿ ತಿಳಿದು ಯಾವುದೇ ಒತ್ತಡವಿಲ್ಲದ ಶಿಕ್ಷಣ ನೀಡುತ್ತಾ ಬಂದರೆ ಮುಂದೆ ಅದರಲ್ಲಿಯೇ ಸಂಶೋಧನೆ ನಡೆಸಿ ಮಹಾಜ್ಞಾನಿ ಅಥವಾ ವಿಜ್ಞಾನಿ ಆಗಬಹುದು.

ಕಂಡುಹಿಡಿದಿದ್ದು ಸರಿಯಾಗೆ ಇರುತ್ತದೆ.ಆದರೆ ಕಾಲಕ್ರಮೇಣ ಅದರಲ್ಲಿ ಕೆಲವು ಬದಲಾವಣೆ ಕಂಡಾಗ ಸಂಶೋಧನೆ ಮಾಡೋದರಲ್ಲಿ ತಪ್ಪಿಲ್ಲ. ಆದರೆ ಮೂಲದ ಶೋಧನೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿ ಮುಂದೆ ನಡೆದರೆ ಅಪಾಯ.

ಭಾರತೀಯರು ಭಾರತದ ಮೂಲ ಶಿಕ್ಷಣವನ್ನು ಬಿಟ್ಟು ವಿದೇಶದವರೆಗೆ ಹೋಗಿರುವುದು ಭಾರತೀಯತೆಗೆ ಆದ ಅವಮಾನ, ಅಪಚಾರವೆಂದರೂ ಇಲ್ಲಿ ಬಿಟ್ಟು ಹೊರ ನಡೆಯುವಂತೆ ಮಾಡಿರುವುದು ಶಿಕ್ಷಣದ ಜೊತೆಗೆ ಪೋಷಕರ ಸಹಕಾರ. ಹೀಗಾಗಿ ಅದರ ಪ್ರತಿಫಲ ಅವರಿಗೇ ತಿರುಗಿ ಬರೋವಾಗ ಸರ್ಕಾರದ ಸಹಾಯ ಪಡೆದು ಕಷ್ಟದಿಂದ ತಪ್ಪಿಸಿಕೊಂಡರೆ ಅದನ್ನು ಮುಂದಿನ ಪೀಳಿಗೆಯೂ ಮಾಡುತ್ತದೆ. ನಮ್ಮನ್ನು ನಾವು ಅರ್ಥ ಮಾಡಿಕೊಂಡು ನಂತರ ಹೊರಗಿನವರನ್ನು ಅರ್ಥ ಮಾಡಿಕೊಳ್ಳುವುದು ಸರಿಯಾದ ಮಾರ್ಗ.

ನಮ್ಮನ್ನು ನಮ್ಮವರ ಸತ್ಯವನ್ನು ಬಿಟ್ಟು ಹೊರಗಿನಿಂದ ವಿಶೇಷಸತ್ಯ ಒಳಗೆ ಹಾಕಿಕೊಂಡರೆ ಒಳಗೆ ನಡೆದ ಮೇಲೆ ಹೊರಗೆ ತಳ್ಳುವುದಕ್ಕೆ ಕಷ್ಟವಿದೆ. ಹೀಗಾಗಿ ಬಂದವರ ಜೊತೆಗೆ ಒಪ್ಪಂದ ಮಾಡಿಕೊಂಡು ಇರೋದು ಉತ್ತಮ. ಶೋಧನೆಯಿಲ್ಲದ ಸಂಶೋಧನೆ ಅರ್ಧ ಸತ್ಯವಾಗುತ್ತದೆ. ಭೂಮಿ ಮೇಲಿರುವ ಸತ್ಯ ತಿಳಿಯದೆ ಆಕಾಶದೆತ್ತರ ಹಾರಿ ಸತ್ತರೆ ಜೀವಕ್ಕೆ ಪೂರ್ಣಸತ್ಯ ತಿಳಿಯೋದಿಲ್ಲ. ಅರ್ಧ ಸತ್ಯವೆ ಅತಂತ್ರಸ್ಥಿತಿಗೆ ಕಾರಣವಾಗಬಹುದು. ಶೋಧನೆ ಸತ್ಯದ ಪರವಾಗಿದ್ದರೆ ಉತ್ತಮ.


ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಉಚಿತ ಕಣ್ಣು ತಪಾಸನೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರ

ಸಿಂದಗಿ; ಪೂಜ್ಯ ಶ್ರೀ ಚೆನ್ನವೀರಸ್ವಾಮೀಜಿ ಪ್ರತಿಷ್ಠಾನ, ಸಿಂದಗಿ, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ವಿಜಯಪುರ ಹಾಗೂ ಅನುಗ್ರಹ ವಿಜನ್ ಫೌಂಡೇಶನ್ ಟ್ರಸ್ಟ್, ವಿಜಯಪುರ, ಜಿ.ಪಿ. ಪೋರವಾಲ...
- Advertisement -

More Articles Like This

- Advertisement -
close
error: Content is protected !!
Join WhatsApp Group