spot_img
spot_img

ಜೋಪಾನ… ಇದು ಹೃದಯಗಳ ವಿಷಯ. ಯಾಕೆ ಅಂದರೆ ಇಂದು ವಿಶ್ವ ಹೃದಯ ದಿನ !

Must Read

- Advertisement -

ಹೃದಯದ ಆರೋಗ್ಯದ ಕಾಳಜಿ ಕುರಿತು ವಿಶ್ವದ ಜನರಿಗೆ ಅರಿವು ಮೂಡಿಸಲು ವಿಶ್ವಮಟ್ಟದಲ್ಲಿ ಪ್ರತಿವರ್ಷ ಸೆಪ್ಟೆಂಬರ್ 29 ರಂದು ‘ವಿಶ್ವ ಹೃದಯ ದಿನ’ ವನ್ನು ಆಚರಿಸಲಾಗುತ್ತದೆ.

ಹೃದ್ರೋಗ ಜಾಗತಿಕ ಮಟ್ಟದಲ್ಲಿ ನಂ.1 ಮಾರಣಾಂತಿಕ ರೋಗ ಎಂಬುದರ ಬಗ್ಗೆ ಜಗತ್ತಿನಾದ್ಯಂತ ಜನರಿಗೆ ಮಾಹಿತಿ ನೀಡಲು ಮತ್ತು ಅರಿವು ಮೂಡಿಸುವ ಉದ್ದೇಶದಿಂದ ವಿಶ್ವ ಹೃದಯ ಒಕ್ಕೂಟವು ವಿಶ್ವ ಹೃದಯ ದಿನದ ಪರಿಕಲ್ಪನೆಯನ್ನು ಸೃಷ್ಟಿಸಿದೆ.

ವಿಶ್ವ ಹೃದಯ ದಿನದಂದು ಹೃದ್ರೋಗಗಳು ಮತ್ತು ಅವುಗಳಿಗೆ ಕಾರಣವಾಗುವ ಅಪಾಯಂಶಗಳ ಬಗ್ಗೆ ಜನರಿಗೆ ಅರಿವು ಒದಗಿಸುವ ಗುರಿಯನ್ನು ಹೊಂದಿದೆ. ವಿಶ್ವ ಹೃದಯ ದಿನಾಚರಣೆಯನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಜೊತೆ ಒಗ್ಗೂಡಿ ವಿಶ್ವ ಹೃದಯ ಒಕ್ಕೂಟ (ಡಬ್ಲ್ಯುಎಚ್‌ಎಫ್) 1999 ರಲ್ಲಿ ಆರಂಭಿಸಿತು.

- Advertisement -

ಈ ದಿನದ ಮೂಲ ಕಲ್ಪನೆಯನ್ನು 1997-1999 ರವರೆಗೆ ವರ್ಲ್ಡ್ ಹಾರ್ಟ್ ಫೆಡರೇಶನ್ (ಡಬ್ಲ್ಯುಎಚ್‌ಎಫ್) ಅಧ್ಯಕ್ಷ ಆಂಟೋನಿ ಬೇಯ್ಸ್ ಡಿ ಲೂನಾ ಹೊಂದಿದ್ದರು.

ಹೃದಯದ ಕಾಳಜಿಯ ಕಾರ್ಯಕ್ರಮಗಳು ಹಲವಾರು ವರ್ಷಗಳಿಂದ ನಡೆಯುತ್ತಾ ಬಂದಿದ್ದರೂ 2000 ನೇ ಇಸವಿಯಲ್ಲಿ ಮೊದಲ ಬಾರಿಗೆ ವಿಶ್ವಮಟ್ಟದ ಬೃಹತ್ ಅಭಿಯಾನದ ರೂಪದಲ್ಲಿ ವಿಶ್ವ ಆರೋಗ್ಯ ದಿನವನ್ನು ಪ್ರಾರಂಭಿಸಲಾಯಿತು. ಹೆಸರೇ ತಿಳಿಸುವಂತೆ ಸಮಾಜದಲ್ಲಿರುವ ಎಲ್ಲಾ ವರ್ಗಗಳ ಜನತೆಗೆ ಹೃದಯದ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಮೂಡಿಸುವುದು ಹಾಗೂ ಹೃದಯಸ್ತಂಭನ, ಹೃದಯಾಘಾತ ಮೊದಲಾದವುಗಳ ಬಗ್ಗೆ ಸೂಕ್ತ ಮಾಹಿತಿ ಒದಗಿಸುವುದು ಹಾಗೂ ಇವುಗಳಿಂದ ರಕ್ಷಣೆ ಪಡೆಯಲು ಸೂಕ್ತ ಕ್ರಮ ಹಾಗೂ ಮುನ್ನೆಚ್ಚರಿಕೆಗಳನ್ನು ವಹಿಸುವಂತೆ ಜನತೆಗೆ ಶಿಕ್ಷಣ ನೀಡುವುದೂ ಈ ದಿನಾಚರಣೆಯ ಉದ್ದೇಶವಾಗಿದೆ.

ಈ ದಿನವನ್ನು ವಿಶ್ವ ಹೃದಯ ಒಕ್ಕೂಟ ಸಂಸ್ಥೆ ಪ್ರಾರಂಭಿಸಿದ್ದು ಇದಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಸಹಕಾರ ನೀಡುತ್ತಿದೆ. ಇವೆರಡೂ ದಿಗ್ಗಜ ಸಂಸ್ಥೆಗಳು ವಿಶ್ವಮಟ್ಟದಲ್ಲಿ ಕಾರ್ಯನಿರ್ವಹಿಸುವ ಮೂಲಕ ಈ ಅಭಿಯಾನವನ್ನು ವಿಶ್ವಮಟ್ಟದಲ್ಲಿ ಯಶಸ್ವಿಯಾಗಿ ನಡೆಸಲು ಸಾಧ್ಯವಾಗುತ್ತಿದೆ. 2025 ನೆ ಇಸವಿಯಲ್ಲಿ ಈ ಸಾವುಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆ ಮಟ್ಟಕ್ಕೆ ಇಳಿಸುವುದು ಈ ಅಭಿಯಾನದ ಧ್ಯೇಯೋದ್ದೇಶವಾಗಿದೆ.

- Advertisement -

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಅಂದಾಜಿನ ಪ್ರಕಾರ ಪ್ರತಿವರ್ಷ 17.9 ದಶಲಕ್ಷಕ್ಕೂ ಹೆಚ್ಚು ಜನರು ಹೃಯದ ಸಂಬಂಧಿ ಕಾಯಿಲೆಗಳಿಂದ ಸಾಯುತ್ತಿದ್ದಾರೆ. ಇದು ಜಾಗತಿಕ ಸಾವಿನಲ್ಲಿ ಶೇ. 31 ಕ್ಕಿಂತ ಹೆಚ್ಚು ಇದೆ. ಸುಮಾರು 80 ಪ್ರತಿಶತದಷ್ಟು ಜನರು ಹೃದಯಾಘಾತ ಅಥವಾ ಪಾರ್ಶ್ವವಾಯುವಿನಿಂದ ಸಾಯುತ್ತಿದ್ದಾರೆ. ಶೇ. 75 ರಷ್ಟು ಪ್ರಕರಣಗಳು ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಿಂದ ವರದಿಯಾಗಿವೆ.

ವಿಶ್ವ ಹೃದಯ ಒಕ್ಕೂಟದ ಪ್ರಕಾರ ಅನಾರೋಗ್ಯಕರ ಆಹಾರ, ತಂಬಾಕು ಬಳಕೆ, ದೈಹಿಕ ಚಟುವಟಿಕೆಯ ಕೊರತೆ ಮತ್ತು ಆಲ್ಕೋಹಾಲ್ ಬಳಕೆಯಂತಹ ನಾಲ್ಕು ಪ್ರಮುಖ ಅಪಾಯಕಾರಿ ಅಂಶಗಳನ್ನು ನಿಯಂತ್ರಿಸುವ ಮೂಲಕ ಕನಿಷ್ಠ 80 % ಅಕಾಲಿಕ ಮರಣಗಳನ್ನು ( ಹೃದಯ ಸಂಬಂಧಿ ಕಾಯಿಲೆಗಳಿಂದಾಗಿ ) ರಕ್ಷಿಸಬಹುದು. ವಿಶ್ವ ಹೃದಯ ದಿನದ ಅಭಿಯಾನದಲ್ಲಿ ಜನಸಾಮಾನ್ಯರೂ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಹೃದಯ ಸಂಬಂಧಿತ ಸಮಸ್ಯೆಗಳ ಬಗ್ಗೆ ಹೆಚ್ಚಿನ ಅರಿವು ಪಡೆಯುತ್ತಾರೆ, ಹಾಗೂ ಅಕಾಲಿಕವಾಗಿ ಸಂಭವಿಸುವ ಸಾವು ಎದುರಾಗದಂತೆ ಸೂಕ್ತ ಮುನ್ನೆಚ್ಚರಿಕೆ ವಹಿಸುತ್ತಾರೆ.

ಸಿವಿಡಿ ( ಕಾರ್ಡಿಯೋ ವ್ಯಾಸ್ಕುಲರ್ ಡಿಸೀಸ್ ಅಥವಾ ಹೃದಯ ನಾಳಗಳ ಕಾಯಿಲೆ – ವಿಶ್ವದಲ್ಲಿ ಅತಿ ಹೆಚ್ಚಿನ ಸಾವುಗಳಿಗೆ ಕಾರಣವಾಗಿದೆ ) ಬಗ್ಗೆ ಜಾಗೃತಿ ಮೂಡಿಸಲು ವಿಶ್ವದಾದ್ಯಂತ ಸರ್ಕಾರೇತರ ಸಂಸ್ಥೆಗಳೂ ಸೇರಿದಂತೆ ವಿವಿಧ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ.

ಹೃದಯಾಘಾತದ ಎಚ್ಚರಿಕೆ ಸಂಕೇತಗಳು:
ದವಡೆಯಿಂದ ಕೆಳಭಾಗ ಮತ್ತು ಹೊಕ್ಕುಳಿನಿಂದ ಮೇಲು ಭಾಗದ ಯಾವುದೇ ಸ್ಥಳದಲ್ಲಿ ಅಸ್ವಸ್ಥತೆಯು ಹೃದಯ ರೋಗದ ಕಾರಣದಿಂದ ಉಂಟಾಗಬಹುದು ಮತ್ತು ಅದರ ಸಂಕೀರ್ಣ ಸಮಸ್ಯೆಗಳನ್ನು ತಡೆಯಲು ಎಷ್ಟು ಸಾಧ್ಯವೋ ಅಷ್ಟು ಬೇಗ ಪರಿಣಿತ ವೈದ್ಯಕೀಯ ಅಭಿಪ್ರಾಯವನ್ನು ಪಡೆಯಬೇಕು. ಹೃದಯಾಘಾತದ ಕೌಟುಂಬಿಕ ಚರಿತ್ರೆ ಇರುವವರು ಸಾಮಾನ್ಯ ವಯಸ್ಸುಗಳಲ್ಲಿ ಹೃದಯ ರೋಗಗಳಿಗೆ ತುತ್ತಾಗುವ ಅಪಾಯ ಇರುವುದರಿಂದ ಮತ್ತಷ್ಟು ಎಚ್ಚರಿಕೆಯಿಂದಿರಬೇಕು.

ವಿಶ್ವ ಹೃದಯ ದಿನದ ಮಹತ್ವ:
ವಿಶ್ವ ಹೃದಯ ಒಕ್ಕೂಟದ ಪ್ರಕಾರ ಅನಾರೋಗ್ಯಕರ ಆಹಾರ, ತಂಬಾಕು ಬಳಕೆ, ದೈಹಿಕ ಚಟುವಟಿಕೆಯ ಕೊರತೆ ಮತ್ತು ಆಲ್ಕೋಹಾಲ್ ಬಳಕೆಯಂತಹ ನಾಲ್ಕು ಪ್ರಮುಖ ಅಪಾಯಕಾರಿ ಅಂಶಗಳನ್ನು ನಿಯಂತ್ರಿಸುವ ಮೂಲಕ ಕನಿಷ್ಠ 80 % ಅಕಾಲಿಕ ಮರಣಗಳನ್ನು ( ಹೃದಯ ಸಂಬಂಧಿ ಕಾಯಿಲೆಗಳಿಂದಾಗಿ ) ರಕ್ಷಿಸಬಹುದು. ವಿಶ್ವ ಹೃದಯ ದಿನದ ಅಭಿಯಾನದಲ್ಲಿ ಜನಸಾಮಾನ್ಯರೂ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಹೃದಯ ಸಂಬಂಧಿತ ಸಮಸ್ಯೆಗಳ ಬಗ್ಗೆ ಹೆಚ್ಚಿನ ಅರಿವು ಪಡೆಯುತ್ತಾರೆ ಹಾಗೂ ಅಕಾಲಿಕವಾಗಿ ಸಂಭವಿಸುವ ಸಾವು ಎದುರಾಗದಂತೆ ಸೂಕ್ತ ಮುನ್ನೆಚ್ಚರಿಕೆ ವಹಿಸುತ್ತಾರೆ.

ಹೃದಯ ಕಾಳಜಿ ಅತಿ ಮುಖ್ಯ:
# ಮಧ್ಯ ವಯಸ್ಕರು ಸಾಮಾನ್ಯವಾಗಿ ಬೆಳಗ್ಗಿನ ಉಪಾಹಾರದ ಬದಲಿಗೆ ಜ್ಯೂಸ್ ಅಥವಾ ಕಾಫಿ ಸೇವಿಸಿ ಸುಮ್ಮನಾಗುತ್ತಾರೆ. ಆದರೆ, ಹಾಗೇ ಸರಿಯಾದ ಸಮಯಕ್ಕೆ ಸರಿಯಾದ ಪ್ರಮಾಣದ ಉಪಾಹಾರ ಸೇವಿಸದಿದ್ದರೆ ಹೃದಯ ಸಂಬಂಧಿ ರೋಗಗಳು ಬರುತ್ತವೆ. ಇದರ ನಿವಾರಣೆಗೆ ಸಮತೋಲನ ಆಹಾರ ಸೇವನೆ, ತೂಕದಲ್ಲಿ ಇಳಿಕೆ, ವ್ಯಾಯಾಮ, ಕಡಿಮೆ ಉಪ್ಪು – ಸಕ್ಕರೆ ಮತ್ತು ಕೊಬ್ಬಿನಾಂಶವಿರುವ ಆಹಾರ ಪದಾರ್ಥಗಳ ಮಿತಬಳಕೆ ಮಾಡಬೇಕು.
# ಧ್ಯಾನ ಮಾಡುವುದರಿಂದ ದೇಹದ ಆಯಾಸ, ಕೋಪ, ಹತಾಶೆಯನ್ನು ಕಡಿಮೆ ಮಾಡಿ ಹೃದಯದ ಆರೋಗ್ಯ ವೃದ್ಧಿಸುತ್ತಿರುತ್ತದೆ. ಜತೆಗೆ ಕಡಿಮೆ ನಿದ್ದೆ ಮಾಡುವುದು ಕೂಡಾ ಹೃದಯಕ್ಕೆ ಹಾನಿಕಾರಕ. ಜೊತೆಗೆ ನಿತ್ಯ 30 ನಿಮಿಷಗಳ ವ್ಯಾಯಾಮ ಮಾಡಬೇಕು.
# ಧೂಮಪಾನ, ಮದ್ಯಪಾನ, ತಂಬಾಕು ಸೇವನೆಯಿಂದ ದೂರವಿರುವುದು ಕೂಡಾ ಹೃದಯ ಆರೈಕೆಗೆ ಒಳ್ಳೆಯ ಮಾರ್ಗ. ಸದಾ ಚಟುವಟಿಕೆಯಿಂದ ಇರಿ, ಸಣ್ಣಪುಟ್ಟ ವಿಷಯಗಳನ್ನು ಗಂಭೀರವಾಗಿ ಪರಿಗಣಿಸದಿರಿ, ಆಗಾಗ್ಗೆ ವೈದ್ಯರ ಬಳಿ ಆರೋಗ್ಯ ತಪಾಸಣೆ ಮಾಡಿಸಿ.
# ಇನ್ನು, ನಮ್ಮ ದೇಹವನ್ನು ಸದೃಢವಾಗಿಟ್ಟುಕೊಳ್ಳುವುದು ಸಹ ಮುಖ್ಯವಾಗುತ್ತದೆ. ಪ್ರತಿದಿನ ವ್ಯಾಯಾಮ, ಯೋಗಾಸನ ಮಾಡುವುದರಿಂದ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ದಿನನಿತ್ಯ ಕನಿಷ್ಠ 45 ನಿಮಿಷ ದೇಹವನ್ನು ದಂಡಿಸಿ, ಅಂದರೆ ವ್ಯಾಯಾಮ ಮಾಡಿ, ವಾಕ್ ಮಾಡಿ. ದಿನಕ್ಕೆ 10 ಸಾವಿರ ಹೆಜ್ಜೆ ಹಾಕಿರಿ. ಇದು ಆರೋಗ್ಯಕ್ಕೆ ಒಳ್ಳೆಯದು.

ವಿಶ್ವ ಹೃದಯ ದಿನದ ಉದ್ದೇಶ:
ಜೀವನ ಶೈಲಿಯ ಬದಲಾವಣೆಗಳಿಗೆ ಜನರನ್ನು ಪ್ರೋತ್ಸಾಹಿಸುವ ಮೂಲಕ ಜಾಗತಿಕ ಹೃದಯದ ಆರೋಗ್ಯವನ್ನು ಸುಧಾರಿಸುವುದು ಮತ್ತು ಹೃದಯಕ್ಕೆ ಒಳ್ಳೆಯದಾಗುವ ಮಾರ್ಗಗಳ ಬಗ್ಗೆ ಜ್ಞಾನವನ್ನು ಪಡೆಯುವುದು ವಿಶ್ವ ಹೃದಯ ದಿನದ ಮುಖ್ಯ ಉದ್ದೇಶವಾಗಿದೆ. 2025 ಇಸವಿಯಲ್ಲಿ ಈ ಸಾವುಗಳ ಸಂಖ್ಯೆಯನ್ನು ಗಣನೀಯ ಮಟ್ಟಕ್ಕೆ ಇಳಿಸುವುದು ಈ ಅಭಿಯಾನದ ಧ್ಯೇಯೋದ್ದೇಶವಾಗಿದೆ.

ವಿಶ್ವ ಹೃದಯ ದಿನದ- ಇತಿಹಾಸ:
ವಿಶ್ವ ಹೃದಯ ದಿನ 2000 ನೇ ಇಸವಿಯಲ್ಲಿ ಪ್ರಾರಂಭವಾದಾಗ ಈ ದಿನವನ್ನು ಪ್ರತಿವರ್ಷ ಸೆಪ್ಟೆಂಬರ್ ತಿಂಗಳ ಕೊನೆಯ ಭಾನುವಾರದಂದು ಆಚರಿಸಲಾಗುತ್ತಿತ್ತು. ಈ ಕ್ರಮ ಸುಮಾರು 2010 ರ ವರೆಗೂ ಮುಂದುವರೆಯಿತು. 2011 ರಿಂದ ಈ ದಿನವನ್ನು ಕೊನೆಯ ಭಾನುವಾರದ ಕಟ್ಟುಪಾಡಿನಿಂದ ಮುಕ್ತಗೊಳಿಸಿ ಖಚಿತ ದಿನವಾಗಿ ಸೆಪ್ಟಂಬರ್ 29 ನೇ ತಾರೀಖಿಗೆ ನಿಗದಿಗೊಳಿಸಲಾಯಿತು.
ಇನ್ನು ಮುಂದಾದರೂ ನಿಮ್ಮ ನಿಮ್ಮ ಹೃದಯ ಜೋಪಾನ

ಹೇಮಂತ ಚಿನ್ನು
ಕರ್ನಾಟಕ ಶಿಕ್ಷಕರ ಬಳಗ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸಮುದ್ರ ವಿಹಾರ ತಂದಿತು ಜೀವಕ್ಕೆ ಕುತ್ತು; ನೋಡನೋಡುತ್ತಲೇ ಮುಳುಗಿದ ಬೋಟ್

ಗೋವಾದಂಥ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಭೇಟಿ ಕೊಟ್ಟಾಗ ಅಲ್ಲಿನ ಸಮುದ್ರದಲ್ಲಿ ವಿಹಾರ ಮಾಡುವುದು ಅತ್ಯಂತ ಹೆಚ್ಚಿನ ಬೇಡಿಕೆಯಾಗಿರುತ್ತದೆ. ಹಾಗೆಯೇ ಗೋವಾದಲ್ಲಿ ನಡೆದಿದೆಯೆಂದು ಹೇಳಲಾದ ಬೋಟ್ ಪಯಣ ಅದರ...
- Advertisement -

More Articles Like This

- Advertisement -
close
error: Content is protected !!
Join WhatsApp Group