spot_img
spot_img

ಭಜನಾ ಪದ್ಧತಿಯ ಪುನರುತ್ಥಾನ ಸಮಾರೋಪ ಸಮಾರಂಭ

Must Read

ನಶಿಸಿ ಹೋಗುತ್ತಿರುವ ಭಜನಾ ಪದ್ಧತಿಯ  ಪುನರುತ್ಥಾನಕ್ಕಾಗಿ ವಿಶ್ವಶಾಂತಿ ಗಾಗಿ ವಿಶ್ವಕ್ಕೆ ಜ್ಞಾನದ ಬೆಳಕನ್ನು ಹರಡಿದ ಹಿಂದೂ ಧರ್ಮದ ಸಂಘಟನೆಯ  ನಿಟ್ಟಿನಲ್ಲಿ ಅಖಿಲ ಕರ್ನಾಟಕ ಭಜನಾ ಪರಿಷತ್ತು (ರಿ ) ಗಿರಿನಗರ, ವತಿಯಿಂದ ಬೆಂಗಳೂರಿನ ಕೆಂಗೇರಿ- ಉತ್ತರಹಳ್ಳಿ ಮುಖ್ಯರಸ್ತೆಯಲ್ಲಿರುವ ಶ್ರೀನಿವಾಸಪುರದ ಓಂಕಾರ ಆಶ್ರಮದಲ್ಲಿ( ಜೆ ಎಸ್ ಎಸ್ ಇಂಜಿನಿಯರಿಂಗ್ ಕಾಲೇಜು ಹಿಂಭಾಗ) ನಿರಂತರ ಭಜನೋತ್ಸವದ ಸಮಾರೋಪ ಸಮಾರಂಭವನ್ನು ಆಯೋಜಿಸಲಾಗಿತ್ತು
 ಓಂಕಾರಾಶ್ರಮದ ಪೂಜ್ಯ ಶ್ರೀ ಮಧುಸೂದನಂದಪುರಿ ಸ್ವಾಮಿಗಳು,  ಕೆ ಆರ್ ಪುರಂ ರಾಮಕೃಷ್ಣ ವಿವೇಕಾನಂದ ಸಾಧನ ಕೇಂದ್ರದ ಚಂದ್ರೇಶಾನಂದ ಜಿ ರವರ ದಿವ್ಯ ಸಾನ್ನಿಧ್ಯ ದಲ್ಲಿ, ಕರ್ನಾಟಕ ದಕ್ಷಿಣ ಪ್ರಾಂತ ಸಂಘ ಚಾಲಕರಾದ ಜಿ.ಎಸ್ ಉಮಾಪತಿ ದಿಕ್ಸೂಚಿ ಭಾಷಣ ಮಾಡಿದರು.
 ಆಯೋಜಕರಾದ   ಅಧ್ಯಕ್ಷ ಡಾ.ಕೆ ವಿ ಮುರಳಿಧರ ಶರ್ಮ ಪ್ರಾಸ್ತವಿಕ ಮಾತುಗಳನ್ನು ಆಡುತ್ತ  ಸತ್ಸಂಗ ಭಜನಾ ಮಹಾ ಮಂಡಳಿ ಸಭಾ ರಾಷ್ಟ್ರಮಟ್ಟದಲ್ಲಿ ಭಜನಾಮೇಳ ಆಯೋಜಿಸುವಲ್ಲಿ ಒಂದು ದಿಟ್ಟ ಹೆಜ್ಜೆ ಇಟ್ಟು 365 ದಿನಗಳ  ನಿರಂತರ ಭಜನೋತ್ಸವ ವನ್ನು ಆರಂಭಿಸಿ, ನಶಿಸಿ ಹೋಗುತ್ತಿರುವ ಭಜನಾ ಪದ್ಧತಿಯ  ಪುನರುತ್ಥಾನಕ್ಕಾಗಿ ವಿಶ್ವಶಾಂತಿ ಗಾಗಿ ವಿಶ್ವಕ್ಕೆ ಜ್ಞಾನದ ಬೆಳಕನ್ನು ಹರಡಿದ ಹಿಂದೂ ಧರ್ಮದ ಸಂಘಟನೆಯ  ನಿಟ್ಟಿನಲ್ಲಿ  ಆಯೋಜಿಸಿ ಬೆಂಗಳೂರು ಮಹಾನಗರದ ಹಲವಾರು ಭಜನಾ ಮಂಡಳಿಗಳನ್ನು ಒಂದೇ ವೇದಿಕೆಯಲ್ಲಿ ತರುವ ಉದ್ದೇಶದಿಂದ 2019-20 ರಲ್ಲಿ 365 ದಿನಗಳ ನಿರಂತರ ಭಜನಾ ಉತ್ಸವವನ್ನು ಏರ್ಪಡಿಸಲಾಗಿತ್ತು.ಅದರ ಸಮಾರೋಪ ಸಮಾರಂಭ ಇದಾಗಿದ್ದು ಮುಂದಿನ ದಿನಗಳಲ್ಲಿ ನಗರದ ನಾನಾ ಭಾಗಗಳಲ್ಲಿ ನಾನಾ ಭಜನಾ ಮಂಡಳಿಗಳ ಓಕೆನಾ, ಧರ್ಮ ಜಾಗೃತಿ ಮಾಡಲು ಸಂಕಲ್ಪ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
 ಸಮಾರಂಭದ ವೇದಿಕೆಯಲ್ಲಿ ಅಖಿಲ ಭಾರತ ಬ್ರಾಹ್ಮಿನ್ ಫೆಡರೇಷನ್ ಮಾಲಿನಿ, ಗ್ಲೋಬಲ್ ವಿಷ್ಣು ಸಹಸ್ರನಾಮ ಫೆಡರೇಶನ್  ನಿರ್ದೇಶಕಿ ಮಂಗಳ ಭಾಸ್ಕರ್, ಏಕೆ ಬಿಎಮ್ಎಸ್ ಉಪಾಧ್ಯಕ್ಷ ಎಂಆರ್ ಶಿವಶಂಕರ್, ಕೊಟ್ಟೂರು ಅಮರನಾಥ ಯಾತ್ರಾ ಸೇವಾ ಸಮಿತಿಯ ಕಾರ್ಯದರ್ಶಿ ಸಾಯಿ ಸತೀಶ್ ಕೋರಗಲ್  ಮತ್ತು ಏಕೆ ಬಿಪಿಯ ಕಾರ್ಯದರ್ಶಿ ಮಲ್ಲಿಕಾರ್ಜುನ ಟಿ ಎಸ್ ಉಪಸ್ಥಿತರಿದ್ದರು
ಹಿರಿಯ ಭಜನಾ ಸಂಘಟಕ ಕೀರ್ತಿಶೇಷ ಡಾ ಬ್ರಹ್ಮತೇಜ ವೆಂಕಟರಾಮಯ್ಯ ಮಾರ್ಗದರ್ಶನದಲ್ಲಿ ಅಖಿಲ ಕರ್ನಾಟಕ ಸತ್ಸಂಗ ಭಜನಾ ಮಹಾಮಂಡಳಿಯ ವತಿಯಿಂದ  ವರ್ಷಾದ್ಯಂತ ನಡೆದ ಭಜನಾೋತ್ಸವದಲ್ಲಿ ಪಾಲ್ಗೊಂಡ ಅನೇಕ ಭಜನಾ ಮಂಡಳಿಗಳಿಗೆ ಪ್ರಶಸ್ತಿ ಪತ್ರ ಮತ್ತು ಸ್ಮರಣೆಕೆಯನ್ನು ವಿತರಿಸಲಾಯಿತು. ವಿದ್ವಾನ್ ಖಾಸಿಂಮಲ್ಲಿಗೆ  ಮಡುವು   ನೇತೃತ್ವದ ತಂಡದ ಮಕ್ಕಳಿಂದ ವಿಶೇಷ ಶಿವ ತಾಂಡವ ಸ್ತೋತ್ರದ ಪ್ರಸ್ತುತಿ ನಡೆಯಿತು.
ವಿವರಗಳಿಗೆ 94491 54928/9742154928.
- Advertisement -

LEAVE A REPLY

Please enter your comment!
Please enter your name here

- Advertisement -

Latest News

ರೈತ ಆತ್ಮಹತ್ಯೆ ; ಶಾಸಕರ ಸಾಂತ್ವನ

ಸಿಂದಗಿ; ಸಾಲದ ಬಾಧೆಗೆ ಆತ್ಮಹತ್ಯೆ ಪರಿವಾರವಲ್ಲ. ಕಾಲದ ವೈಪರೀತ್ಯದಿಂದ ಮಳೆಯಾಗದೇ ಇಂತಹ ದುಸ್ತರ ಪರಿಸ್ಥಿತಿ ಬಂದೊದಗಿದ್ದು ರೈತರ ಕಷ್ಟಗಳಿಗೆ ಸರಕಾರ ಸ್ಪಂದಿಸುತ್ತದೆ ಅಲ್ಲದೆ ನಿಮ್ಮ ಕಷ್ಟಕ್ಕೆ...
- Advertisement -

More Articles Like This

- Advertisement -
close
error: Content is protected !!
Join WhatsApp Group