ಸಿಂದಗಿ: ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿಯವರ 72ನೇ ಜನ್ಮದಿನದ ಪ್ರಯುಕ್ತ ಭಾರತೀಯ ಜನತಾ ಪಾರ್ಟಿ ಯುವಮೋರ್ಚಾ ಮಂಡಲ ಡಾ. ಗೌಡರ ರಕ್ತ ಸಂಗ್ರಹಣ ಘಟಕದ ಸಹಯೋಗದಲ್ಲಿ ಬಸವೇಶ್ವರ ವೃತ್ತದಲ್ಲಿ ಹಮ್ಮಿಕೊಂಡ 72 ರಕ್ತದಾನಿಗಳ ಬೃಹತ್ ರಕ್ತದಾನ ಶಿಬಿರಕ್ಕೆ ಶಾಸಕ ರಮೇಶ ಭೂಸನೂರ ಹಾಗೂ ಮಂಡಲದ ಅಧ್ಯಕ್ಷ ಈರಣ್ಣ ರಾವೂರ ಅವರು ಚಾಲನೆ ನೀಡಿದರು.
ಮಂಡಲದ ಪ್ರಭಾರಿ ಚಿದಾನಂದ ಚಲವಾದಿ ಮಾತನಾಡಿ, ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಪ್ರಯಕ್ತ ಸೆ.17 ರಿಂದ ಅ.02 ರವರೆಗಿನ 15 ದಿನದ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು.
ಈ ಸಂದರ್ಭದಲ್ಲಿ ಹಿರಿಯ ದುರೀಣ ಎಂ.ಎಸ್.ಮಠ, ಸಿ.ಎಸ್.ನಾಗೂರ, ಅಶೋಕ ಅಲ್ಲಾಪುರ, ಬಿ.ಎಚ್.ಬಿರಾದಾರ, ಸಿದ್ದರಾಮ ಪಾಟೀಲ, ರಾಜಶೇಖರ ಪೂಜಾರ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರಾಜಕುಮಾರ ಗೌಂಡಿ, ಮಂಡಲ ಪ್ರಧಾನ ಕಾರ್ಯದರ್ಶಿ ಗುರು ತಳವಾರ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅರವಿಂದ್ ಹಡಗಲಿ, ಪ್ರಕಾಶ್ ಶೇರಕಾನೆ , ಸಿದ್ದರಾಮ ಆನಗೊಂಡ, ವಿಶ್ವನಾಥ್ ಹಿರೇಮಠ, ಸುನೀಲ ತಳವಾರ, ಬೀರಪ್ಪ ಪೂಜಾರಿ, ಸೇರಿದಂತೆ ಮೋದಿಜೀ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು, ರಕ್ತದಾನಿಗಳು, ಭಾಗವಹಿಸಿದ್ದರು.