ಕವನ

ಸರಳ..ಸುಂದರ ದಸರಾ ವಿಶ್ವಕ್ಕೇ ಮಾದರಿ…..

ಚಾಮುಂಡೇಶ್ವರಿಗೆ ಅರ್ಚನೆ ಮಾಡಿ, ಸ್ವಾರ್ಥಕಾಗಿ ಏನನೂ ಕೇಳಲಿಲ್ಲ, ನನ್ನ ಕೋರಿಕೆ ಕೇವಲ ಮೂರು.. ಕರೋನಾದಿಂದ ಜನತೆಯ ರಕ್ಷಿಸು.. ಕರೋನಾ ಲಸಿಕೆಗೆ ದಾರಿ ತೋರು.. ಕನ್ನಡ ನಾಡಿನ ಜನರ ಪ್ರವಾಹದಿಂದ ರಕ್ಷಿಸು... ಎಂತಹ ವ್ಯಕ್ತಿತ್ವ; ನಿಸ್ವಾರ್ಥ ಪ್ರಾರ್ಥನೆ ವಿಶ್ವಕೇ ಮಾದರಿಯಾದರು.. ದಸರಾ ಉದ್ಘಾಟಕ ಡಾ.ಸಿ.ಎನ್.ಮಂಜುನಾಥರು.... ಅಂದು ವಿಜಯನಗರದ ಅರಸರು ಆರಂಭಿಸಿದರು ದಸರಾ ಉತ್ಸವವ ಶತ್ರುಗಳ ಮೇಲಿನ ದಿಗ್ವಿಜಯದ ಸಂಕೇತವಾಗಿ, ಭಕ್ತಿ-ಶಕ್ತಿ-ಶೌರ್ಯಗಳ ಪ್ರತೀಕ ವಾಗಿತ್ತು ಅಂದಿನ ದಸರಾ.... ಮೈಸೂರು ಅರಸರು ಆರಂಭಿಸಿದರು, ಸಂಸೃತಿಯ ಪೋಷಿಸಲು ಮೈಸೂರು ದಸರಾ, ಆಟೋಟ,ಕ್ರೀಡಾ...

ಎ ಪಿ ಜೆ ಕಲಾಂ ಅವರ Life without Aim is a crime ಕವನದಅನುವಾದ

ಅಪರಾಧ : ಗುರಿ ಇಲ್ಲದ ಜೀವನ ಅಪರಾಧವದು ಗುರಿ ಇಲ್ಲದ ಜೀವನ ಭಾರತದ ನವಯುವ ಪ್ರಜೆಗಳೇ ಸುಸಜ್ಜಿತ ತಂತ್ರಜ್ಞಾನದ ಅಪಾರ ಪ್ರೀತಿಯುಳ್ಳ ನನ್ನ ದೇಶ ಪ್ರೇಮಿಗಳೇ ಮನಗಾಣಿದ್ದೇನೆ ನಾನೂ ಗುರಿಇಲ್ಲದ ಜೀವನ ಅಪರಾಧವೆಂದು ಶ್ರಮ ಪಡುವೆ ನಾನೂ ಬೆವರು ಹನಿ ನೀರಾಗಿಸಿ ದಿವ್ಯ ದೃಷ್ಟಿ ಬೆಳಗಿಸಿ ಭಾರತವು ಅಭಿವೃದ್ಧಿಯದೇಶ ವನ್ನಾಗಿಸಿ ಪರಿವರ್ತಿಸಲು ಕೋಟಿ ಜನ ಪ್ರಜೆಗಳು ಅವರಲ್ಲೊಬ್ಬ ನಾನು ಒಂದು ತೀಕ್ಷ್ಣ (ಸೂಕ್ಷ್ಮ) ದೂರ ದೃಷ್ಟಿ ಸಾಕು ಕೋಟಿ ಆತ್ಮ ಗಳು ತಟ್ಟಲು ಅದು ನನ್ನನ್ನೂ ತಟ್ಟಿದೆ ಒಂದು ಹುಟ್ಟು ಶವದ ಆತ್ಮ ಬಲಶಾಲಿ ಎಲ್ಲಕ್ಕಿಂತಲೂ...

ಅಂಚೆ ಸಪ್ತಾಹದ ಕವನ

ಅಂಚೆ ಅಣ್ಣನಿಗೆ ನಮೋ... ಶಾಕುಂತಲೆಗೆ ಕಾಳಿದಾಸನ ಸಂದೇಶ ಅರುಹಿದ ಮೇಘದ ಪ್ರತಿರೂಪ ನೀನು, ಸಾಮ್ರಾಜ್ಯದಿಂದ ಸಾಮ್ರಾಜ್ಯಕೆ, ರಾಜಮನೆತನದಿಂದ ರಾಜಮನೆತನಕೆ ಸಂದೇಶ ಅರುಹಿದ ಶ್ವೇತಪಾರಿವಾಳದ ಪ್ರತಿರೂಪ ನೀನು..ನಾಡು ನುಡಿಯ ಹೃದಯದ ಬಡಿತ ನೀನು..... ಗೆಜ್ಜೆ ಕೋಲು ಹಿಡಿದು..ಅನುದಿನ ಹಳ್ಳಿಯ ರಸ್ತೆಗಳಲಿ ಓಡುತ್ತಾ ಪತ್ರಸಂದೇಶವ ತಲುಪಿಸುತ್ತಿದ್ದೆ ನೀ.. ಓದು-ಬರಹ ಬಾರದ ಮುಗ್ಧ ಜನಕೆ, ಸಂದೇಶ ವಾಚಿಸುವ ಗುರುವಾಗಿದ್ದೆ ನೀ.... ನಾಗರೀಕತೆಯ ಚಕ್ರ ಉರುಳಿದಂತೆ ಓಟವ ಬಿಟ್ಟು..ಸೈಕಲ್ಲೇರಿದೆ.. ನೂರಾರು..ಸಾವಿರಾರು ಜನರ ಪ್ರೀತಿ ಗಳಿಸಿದೆ.. ಹಳ್ಳಿಹಳ್ಳಿಗಳಲಿ ಅಂಚೆಕಛೇರಿಗಳ ಆರಂಭ, ಜನರ ಸಂದೇಶ ವಾಹನೆಗೆ ಕಛೇರಿಯ...

ಕವನ: ಓ ರೈತಾ..ಸಿಡಿದೇಳು..ಪುಟಿದೇಳು..

ಓ ರೈತಾ...ಕುಣಿಯ ತೋಡುವ ಆಸೆ ಬಿಡು... ನಿನ್ನ ಶೋಷಣೆಯ ಪ್ರತಿಭಟಿಸಿ ಸಿಡಿದೇಳು,ಪುಟಿದೇಳು, ಜಗದ ಜನಕೆಲ್ಲಾ ಅನ್ನದಾತ, ನಿನ್ನ ಕುಣಿಯ ನೀನೇ ತೋಡುವ ಕ್ರೂರ ದುರ್ಗತಿ ನಿನಗೇಕೆ ಬಂತು ? ಜನಿಸಿದಂದಿನಿಂದ ಕೊನೆಯುಸಿರುವವರೆಗೂ ಕಾಡುತಿಹ ಕಷ್ಟಗಳ ಸರಮಾಲೆಯ ಸಹಿಸದಾದೆಯಾ ??? ಜಗವೆಲ್ಲಾ ಹಣ,ಆಸ್ತಿ, ಅಂತಸ್ತುಗಳ ಹಿಂದೆ ಗಿರಕಿ ಹೊಡೆಯುತ್ತ ಕುಣಿಯುತ್ತಿರುವಾಗ, ಜಮೀನಿನ ಬಳಿ ಏಕಾಂಗಿ ವೀರನಾದ ನಿನಗೆ, ಉಳುಮೆ ಮಾಡಿ,ಬೆಳೆ ಬೆಳೆವುದೇ ನಿನ್ನ ಕಾಯಕ, ಬಸವನ ಕಾಯಕ ತತ್ವ ನಿನ್ನ ಉಸಿರು , ನಿನಗೇಕೆ...

ಕವನ: ಪ್ರೇಮದ ದೇವತೆ

ಪ್ರೇಮದ ದೇವತೆ!! ಕೇಳದ ದನಿಯೊಂದು ಕೂಗಿ ಕರೆದ ಭಾವಾನುರಾಗದಿ ಮೆರೆದ ಒಲವ ಮದ.. ನನ್ನವಳೇ ಕರೆದಂತೆ ನನ್ನ ಒಳಮನವ.. ಒಲವ ಧಾರೆಯು ಮಳೆಯ ಸುರಿಸಿದಂತೆ! ಕಾಣದ ಪ್ರೇಮದ ಸಾಗರದಿ ವಿಹರಿಸಿದಂತೆ.. ಸವೆದ ಪ್ರೀತಿಯ ನೆನಪು ಹಾಡಿದಂತೆ!! ಇರುಳ ಮೇಘದ ಅಡಿಯಲಿ, ಸಿಡಿಸಿದೆ ನೀ ಪ್ರೇಮದ ಕಿಡಿ.. ಆಹುತಿಯಾಗಿದೆ ನನ್ನೀ ಹೃದಯ, ಅಪ್ಪುಗೆಯೊಂದಿಗೆ ನಿನ್ನ ಉದಯ.. ಅವಿತುಕೊಳ್ಳಲೇ ನಾ ಈಗ ನಿನ್ನಲಿ, ಮರೆಯಾಗಲೇ ನಿನ್ನದೇ ಉಸಿರಲಿ!! ಲೀನವಾಗಲೇ ನಿನ್ನ ಎದೆ ಬಡಿತದಲಿ!! ನಯನ. ಎನ್ 1st...

ಕವನಗಳು

ಜೀವನದ ಪಯಣ ಸಾಗುತ್ತಿದೆ ಜೀವನದ ಪಯಣ ಬಾಳ ದೋಣಿ ಪಥದಲ್ಲಿ ಹುಟ್ಟು ಹಾಕಿ ಸಾಗಿಸುವ ಪಯಣಿಗನು ಆ ನಾವಿಕನು ಈ ದಡದಿಂದ ಆ ದಡಕ್ಕೆ ಸಾಗುವುದರೊಳಗೆ ಯೌವನದಿಂದ ಮುಪ್ಪು ಆವರಿಸುತ್ತದೆ ಬಾಳ ದೋಣಿಯ ಪಥದಲ್ಲಿ ಕಷ್ಟ ಕಾರ್ಪಣ್ಯಗಳು ಬಂದರೂ ಕೂಡ ಜೀವಿಗಳು ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡುತ್ತಿವೆ ಮೈಮರೆತು ಈ ಬಾಳ ದೋಣಿಯ ಜೀವದ ಪಯಣದಲ್ಲಿ ನಾನು ಒಬ್ಬ ಪಯಣಿಗ ಪಯಣ ಮುಗಿಯುವುದರೊಳಗೆ...

ಕವನ

( ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ಹತ್ಯಾಚಾರಕ್ಕೊಳಗಾದ ಮನಿಷಾ ಎಂಬ ಬಾಲಕಿಯ ಕುರಿತು ಶರಶ್ಚಂದ್ರ ತಳ್ಳಿ ಕವನ ) ಮನಿಷಾ! ಮುಂದಿನ ಜನುಮಗಳಲಿ...? ನಿನ್ನ ದೇಹವು ಕತ್ತಲೆಯ ಚಾಪೆಯಾಗುತ್ತದೆ ಎಂದೆನಿಸಿದಾಗ- ಅವರ ಕೊರಳ ಕೊಳವೆ ಕಡಿಬೇಕಿತ್ತು ನಿನ್ನ ಚಿತೆಯ ಬೆಂಕಿ ಕೆನ್ನಾಲಿಗೆ ಚಾಚುತಿದೆ ಎಂದೆನಿಸಿದಾಗ- ಕೈಗೆ ಸಿಕ್ಕ ಕಲ್ಲಿನಲಿ ಹಲ್ಲಿಗೆ ಜಜ್ಜಬೇಕಿತ್ತು ಮನಿಷಾ!ನಿನ್ನೆದೆಗೂಡನು ಕುಲುಮೆಯಲಿ ಬೇಯಿಸುತ್ತಾರೆ ಎಂದೆನಿಸಿದಾಗ- ಪೆನ್ನನು ಆಯುಧ ಮಾಡಿ, ಒಂದಿಬ್ಬರ ಕಣ್ಣಿಗಿರಿಯಬೇಕಿತ್ತು ನಿನ್ನ ಜೀವದ ಕಥೆ ಮುಗಿದೇ ಹೋಯಿತು ಎಂದೆನಿಸಿದಾಗ- ಅಬ್ಬಕ್ಕನಂತೆ ಅಬ್ಬರಿಸಿ ಒಂದೆರಡು ಹೆಣವಾದರೂ ಉರುಳಿಸಬೇಕಿತ್ತು ನಿನ್ನ ಬದುಕಿನ ವಿದಾಯ ಹರಾಜಾಗುತಿದೆ ಎಂದೆನಿಸಿದಾಗ- ಹುರಿಗೊಂಡ ಅವರ ಅಂಗಗಳನು...

ಕವನ: ಅಕ್ಷರದಾಂಜಲಿ

ಅಕ್ಷರದಾಂಜಲಿ ಆಗಸದಂಚಿನ ನೇಸರನೆಲ್ಲಿ ಮರೆಯಾದನು ಮಗುವಿನಂತಹ ಮನಸಿನ ಗಾನ ಗಂಧರ್ವನು ಮರೆಯಾದ ಸುಕೋಮಲ ಸುಮವೊಂದು ದೇವನೊಲುಮೆಯ ಚರಣಕಮಲಗಳಿಗೆ ಮುಡಿಪಾಯಿತೇ ಗಡಿಗಳಾಚಿನ ಸ್ನೇಹ ಪ್ರೇಮ ಕರೆಯು ಕೇಳಿತು ಗಾನಲಹರಿಯ ಸ್ವರ ಮಾಧುರ್ಯವ ಮನ ಬಯಸಿತು ಆಕಾಶದೀಪವು ಮರೆಯಾಗಿ ಕತ್ತಲಾವರಿಸಿತು ಭಾರತ ಮಾತೆಯ ಮಡಿಲಲಿ ಚಿರನಿದ್ರೆಗೈದಿತು ಸ್ವರ ಸಾಮ್ರಾಟನ ಅಪಧಮನಿಗಳಲಿ ಸಂಗೀತದ ಸ್ವರ ಲಾಲಿತ್ಯವು ತುಂಬಿರಲು ಏರಿದೆತ್ತರದಲೂ ನಮ್ರತೆಯ ಸಾಕಾರವು ಎಷ್ಟು ಜನರ ಮನವ ಕದ್ದ ಗಾರುಡಿಗನು ನಾದದ ತಪಸ್ವಿಯಾಗಿ ಅರಳಿದಂತೆ ಸಾಗರವೇ ತಾನಾದರೂ ಬಿಂದುವಿನಂತೆ ತುಂಬಿದ ಕೊಡ...

ಕವನ: ಗಾಂಧಿ ಬೀಜ

ಗಾಂಧಿ ಬೀಜ ಸರ್ಕಲ್ ಗಳಲಿ ನಿಲ್ಲಿಸಿದ ಪಂಚಲೋಹದ ಪುತ್ಥಳಿ ಕಂಡು ಧೂಳು ಮೆತ್ತಿದ ಕೋಲು ಕನ್ನಡಕ ಊದಲು ಉಸಿರಿಲ್ಲದೆ ನಿತ್ರಾಣಗೊಂಡ ಮುದುಕ ಮಮ್ಮಲ ಮರುಗಿದ್ದಾನೆ ಶತಮಾನದ ಹಿಂದೆ ಉಪವಾಸ ಸತ್ಯಾಗ್ರಹ ಕೈಗೊಂಡರೂ ದೇಶವಾಸಿಗಳ ನೆತ್ತಿಗೆ ನೆರಳು ಹೊಟ್ಟೆಗೆ ಕೂಳು ಸಿಗದಿದ್ದಕ್ಕಾಗಿ ಲೊಚಗುಡುತ್ತಿದ್ದಾನೆ ಗಲ್ಲಿ ಗಲ್ಲಿಗಳಲ್ಲಿ ಮಚ್ಚು-ಲಾಂಗು ಗಸ್ತು ತಿರುಗುವುದನ್ನು ಕಂಡು ಬೊಚ್ಚು ಬಾಯಿಯ ಮುದುಕ ಬೆಚ್ಚಿಬಿದ್ದಿದ್ದಾನೆ ಅರಮನೆ ಗುರುಮನೆ ಸೆರೆಮನೆಗಳಲೂ ಕಿಡಿನುಡಿ ಕೆನ್ನಾಲಿಗೆ ಚಾಚಿ...

ಗಾಂಧಿ ತಾತನ ಕವನಗಳು: ಡಾ.ಭೇರ್ಯ ರಾಮಕುಮಾರ್, ರೇಷ್ಮಾ ಕಂದಕೂರ, ಪುಷ್ಪಾ ಮುರಗೋಡ,ಶರಶ್ಚಂದ್ರ,ರಾಧಾ ಶಾಮರಾವ, ಗಿರಜಾ ಮಾಲಿಪಾಟೀಲ, ಬಸಮ್ಮ ಹಿರೇಮಠ….ಕವನಗಳು

ಇವರೇ ಗಾಂಧಿ ಅಜ್ಜ ಕೈಲಿ ಕೋಲು, ಬಿರುಸು ನಡಿಗೆ ಬಾಯಲ್ಲಿ ಸತ್ಯ, ಶಾಂತಿ ಮಂತ್ರ ರಾಷ್ಟ್ರದ ಒಳಿತಿಗಾಗಿ ಹೋರಾಡಿಯೂ, ಅಧಿಕಾರ ಕೈಬೀಸಿ ಕರೆದಾಗ, ನಿರ್ಲಿಪ್ತವಾಗಿ ಕುಳಿತವರು... ಇವರೇ ನಮ್ಮ ಗಾಂಧಿ ಅಜ್ಜ. ರಾಷ್ಟ್ರಮಾತೆಯ ಕಣ್ಣು,ಕಿವಿ,ಬಾಯಿ ಮುಚ್ಚಿ ಠೇಂಕರಿಸುತ್ತಿದ್ದ ಕೆಂಪು ಜನರಿಗೆ ಸತ್ಯಾಗ್ರಹದಿಂದ ಪಾಠ ಕಲಿಸಿದವರು , ಸರಳ ನಡೆ-ನುಡಿ- ಜೀವನದಿಂದ ವಿಶ್ವಕ್ಕೇ ಮಾದರಿಯಾದವರು ಇವರೇ ನಮ್ಮ ಗಾಂಧಿ ಅಜ್ಜ.... ಪತ್ನಿ,ಪುತ್ರರ ಮರೆತು, ಹೊಣೆಯರಿತು ಸ್ವಾತಂತ್ರ್ಯ ಹೋರಾಟ ಸಂಘಟಿಸಿ, ಕಾಯ್ದೆ ಮುರಿದು, ಚಳವಳಿ ತೆಗೆದು ಲಕ್ಷಾಂತರ ಜನರಿಗೆ ಕೆಚ್ಚು...
- Advertisement -

Latest News

10 ನೆಯ ತರಗತಿ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ಧೈರ್ಯ ನೀಡಿದ ತಾಲೂಕಾಧಿಕಾರಿಗಳು

ಮೂಡಲಗಿ:- ಮಾರ್ಚ್ ನಲ್ಲಿ ನಡೆಯುವ 10 ನೆಯ ತರಗತಿ ವಿದ್ಯಾರ್ಥಿಗಳ ಪರೀಕ್ಷೆ, ಅದರ ಪೂರ್ವ ತಯಾರಿ ನಡೆಸುತ್ತಿರುವ ತಾಲೂಕಾ ಅಧಿಕಾರಿಗಳು ಪೂರ್ವಭಾವಿಯಾಗಿ ವಿದ್ಯಾರ್ಥಿಗಳ ಮನೆಗೆ ಭೇಟಿ...
- Advertisement -
close
error: Content is protected !!
Join WhatsApp Group