ಇದನ್ನು ಒನಿಸ್ಕಿಡೆ (Oniscidae) ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಇವುಗಳನ್ನು ಇಟ್ಟಿಗೆ ಅಥವಾ ಒದ್ದೆಯಾದ ವಸ್ತುವಿನ ಅಡಿಯಲ್ಲಿ ಕಾಣಬಹುದು. ಬಹಳಷ್ಟು ಜನ ಅವುಗಳನ್ನು ಕಂಡಾಗ ಅಸಹ್ಯ ಪಟ್ಟುಕೊಂಡು, ಇಂಥವುಗಳೆಲ್ಲಾ ಪ್ರಕೃತಿಯಲ್ಲಿ ಏಕೆ ಅಸ್ತಿತ್ವದಲ್ಲಿವೆಯೋ ಎಂದುಕೊಂಡಿರಬಹುದು. ಹಾಗಾದರೆ ಇವುಗಳು ಭೂಮಿಗೆ ಏಕೆ ಬೇಕು ಎನ್ನುವುದನ್ನು ತಿಳಿಯೋಣ ಬನ್ನಿ…
Cochineal ಎಂದೂ ಸಹ ಕರೆಯಲ್ಪಡುವ ಒನಿಸ್ಕಿಡೆ, ಕಠಿಣ ಚರ್ಮಿಗಳ ಗುಂಪಿನ ಜೀವಿಯಾಗಿವೆ. ಇವುಗಳು ಪಾದರಸ, ಕ್ಯಾಡ್ಮಿಯಮ್ ಮತ್ತು ಸೀಸದಂತಹ ಹಾನಿಕಾರಕ ಭಾರ ಲೋಹಗಳನ್ನು ಭೂಮಿಯಿಂದ ಸ್ವಾಭಾವಿಕವಾಗಿ ತೆಗೆದು ಮಣ್ಣಿನ ಆರೋಗ್ಯವನ್ನು ಸಮತೋಲನದಲ್ಲಿಡುತ್ತವೆ. ಜೊತೆಜೊತೆಗೆ ನಮ್ಮಗಳ ಪ್ರಮುಖ ನೀರಿನ ಮೂಲವಾದ ಅಂತರ್ಜಲವನ್ನು ಹಾನಿಕಾರಕ ರಾಸಾಯನಿಕಗಳಿಂದ ರಕ್ಷಿಸುತ್ತವೆ.
ಇಂತಹ ಹಲವು ಜೀವಿಗಳು ಪರಿಸರ ಸಮತೋಲನದಲ್ಲಿ ತಮ್ಮ ಅಮೂಲ್ಯ ಕೊಡುಗೆ ನೀಡುತ್ತವೆ. ಹಾಗಾಗಿಯೇ ಪರಿಸರ ಸಮತೋಲನದಲ್ಲಿ, ಭೂಮಿಯ ಆರೋಗ್ಯದಲ್ಲಿ, ಮಾನವ ಸೇರಿ ಭೂಮಿಯ ಮೇಲಿನ ಪ್ರತಿಯೊಂದು ಜೀವಿಯ ಆರೋಗ್ಯದಲ್ಲಿ ‘ಜೀವವೈವಿಧ್ಯತೆ’ ಪ್ರಧಾನ ಪಾತ್ರ ವಹಿಸುತ್ತದೆ. ಹಾಗಾಗಿ ಜಮೀನುಗಳಲ್ಲಿ ಅನಗತ್ಯವಾಗಿ ಕಳೆನಾಶಕ / ಕ್ರಿಮಿನಾಶಕಗಳ ಸಿಂಪಡಣೆ, ಬೇಸಿಗೆಯಲ್ಲಿ ಎಲ್ಲೆಂದರಲ್ಲಿ ಅನಗತ್ಯವಾಗಿ ಬೆಂಕಿ ಹಚ್ಚಿ ಸ್ಥಳೀಯ ಸಸ್ಯವರ್ಗ ಸುಟ್ಟು ಹಾಳಾಗುವಂತಹ ಕಾರ್ಯಗಳಿಗೆ ನಾವೆಲ್ಲರೂ ಕಡಿವಾಣ ಹಾಕಬೇಕಿದೆ.
ಹೇಮಂತ ಚಿನ್ನು
ಕರ್ನಾಟಕ ಶಿಕ್ಷಕರ ಬಳಗ
ಪರಿಸರ ಪರಿವಾರ
Source: David Attenborough