ಅರೆರೆ! ಇದೇನಪ್ಪಾ ನಮ್ಮೊಳಗು ಶತ್ರು ಇದಾನ, ನಮ್ಮೊಳಗೊಕ್ಕ ಆ ಶತ್ರುವೆಂಬ ರಕ್ಕಸ ಯಾರೆಂದು ಯೋಚಿಸ್ತಿದೀರಾ? ಬೇಡವೇ ಬೇಡ ಯೋಚಿಸೋದು. ಇದಾರೆ ನಮ್ಮೊಳಗೊಕ್ಕ ಶತ್ರು. ಸಾಮಾನ್ಯವಾಗಿ ಯಾರಾದರೂ ಬೆಳಿತಿದ್ದಾರೆ, ಏನೂ ಇಲ್ಲದವರು ಏನೋ ಸಾಧನೆ ಮಾಡ್ತಿದಾರೆ, ಹೊಸತೇನನ್ನೋ ಮಾಡಲು ಹೆಜ್ಜೆಗಳನ್ನು ಇರಿಸ್ತಿದ್ದಾರೆ ಅಂದ್ರೆ ಸಾಕು ಅಲ್ಲಿ ನಮಗೆ ಗೊತ್ತಿಲ್ಲದೇ ಶತ್ರುಗಳು ಹುಟ್ಟಿಕೊಳ್ತಾರೆ. “ಅಕ್ಕರೆ ತೋರದವರು ಸಕ್ಕರೆ...
ಪ್ರತಿಯೊಂದು ಗ್ರಾಮವು ತಮ್ಮದೇಯಾದ ಗ್ರಾಮದ ಆರಾಧ್ಯದೈವ, ದೇವರನ್ನು ಹೊಂದಿರುವುದು ವಾಡಿಕೆ.ಅದರ ಮೂಲಕವೇ ಉತ್ಸವ, ಜಾತ್ರೆಗಳನ್ನು ಹಮ್ಮಿಕೊಂಡ ಧಾರ್ಮಿಕ, ಸಾಂಸ್ಕೃತಿಕ,ಸಾಹಿತ್ಯಿಕ ವಾತಾವರಣವನ್ನು ನಿರ್ಮಾಣ ಮಾಡಲು ಪ್ರಯತ್ನ ಮಾಡುತ್ತಾರೆ." ಜಾತ್ರೆ" ಅಂದರೆ ಕೇವಲ ತೊಟ್ಟಿಲು ತೂಗುವುದು,ಗೊಂಬೆ ಮಾರಾಟ ಮಾಡುವುದು,ಬಲೂನ್ ಮಾರಾಟ ಮಾಡುವುದು, ರಥೋತ್ಸವ ಕ್ಕೆ ಕಬ್ಬು, ಕಾರೀಖ,ಚುರುಮರಿ ಹಾರಿಸುವುದು,ಜೈ ಜೈ ಕಾರ ಮಾಡುವುದು,ಮೈಯಲ್ಲಿ ದೆವ್ವ ಬಂದವರಂತೆ ಹಾರಾಡುವುದು...
ಟೈಟಾನಿಕ್
1912 ರಲ್ಲಿ ಇಂಗ್ಲೆಂಡಿನ ಸೌತ್ಹ್ಯಾಂಪ್ಟನ್ನಿಂದ ಅಮೆರಿಕಾದ ನ್ಯೂಯಾರ್ಕ್ಗೆ ಹೊರಟು, ತನ್ನ ಮೊದಲ ಯಾನದಲ್ಲೇ ಅಪಘಾತಕ್ಕೀಡಾಗಿ ಮುಳುಗಿಹೋದ ಬೃಹತ್ ಹಡಗು. 'ಮುಳುಗಲಾರದ ಹಡಗು' ಎಂದು ಭಾರೀ ಪ್ರಚಾರ ಪಡೆದು ವಿಶ್ವಪ್ರಖ್ಯಾತವಾಗಿದ್ದ ಟೈಟಾನಿಕ್ನ ದಾರುಣ ಅಂತ್ಯ ಮಾನವ ಇತಿಹಾಸದ ಅತ್ಯಂತ ಭೀಕರ ದುರ್ಘಟನೆಗಳಲ್ಲೊಂದು.
'ಸ್ಟಾರ್ ಲೈನ್' ಎಂಬ ಸಾರಿಗೆ ಸಂಸ್ಥೆಯ ಒಡೆತನದಲ್ಲಿದ್ದ ಟೈಟಾನಿಕ್ ಅನ್ನು ಬೆಲ್ಫಾಸ್ಟ್ನ ಹಾರ್ಲಂಡ್ ಅಂಡ್...
"ಒಂದು ದೇಶದ ಪ್ರಗತಿಯನ್ನು , ಆ ದೇಶದಲ್ಲಿರುವ ಮಹಿಳೆಯರ ಸಾಮರ್ಥ್ಯ ಹಾಗೂ ಅವರ ಪ್ರಗತಿಯ ಮೇಲೆ ಅಳೆಯುತ್ತೇನೆ" ಎನ್ನುವ ಮಾತು ಹೇಳಿದ ಏಕೈಕ ವ್ಯಕ್ತಿ ಅದು ಡಾ.ಬಾಬಾ ಸಾಹೇಬ್ ಅಂಬೇಡ್ಕರ್.
ಪ್ರಕೃತಿಯು ತೋರದ ವ್ಯತ್ಯಾಸ ಭೇದ ಭಾವವನ್ನು ಪುರುಷ ವರ್ಗ ಮಾಡುತ್ತಿದ್ದ ಹೆಣ್ಣು ಗಂಡು ಎಂಬ ಭೇದ ಭಾವ ಹಾಗೂ ತಾರತಮ್ಯಕ್ಕೆ ತೆರೆ ಎಳೆದು ಕಾಲಾಂತರಗಳಿಂದ...
ದವನದ ಹುಣ್ಣಿಮೆ ಹನುಮ ಜಯಂತಿಯ ಸಡಗರ. ನಾಡಿನ ಎಲ್ಲ ಹನುಮಾನ್ ಮಂದಿರಗಳಲ್ಲಿ ಹನುಮಾನ್ ಹುಟ್ಟಿದ ಕ್ಷಣ ಗಳನ್ನು ಅವನನ್ನು ತೊಟ್ಟಿಲಲ್ಲಿ ಹಾಕುವ ಮೂಲಕ ಪೂಜೆ ಕಾರ್ಯಗಳು ನಡೆಯುವುದನ್ನು ಗಮನಿಸಬಹುದು.
ಎಲ್ಲಿ ಹನುಮ ದೇವಾಲಯಗಳಿವೆಯೊ ಅಲ್ಲೆಲ್ಲ ಹನುಮ ಜಯಂತಿ ಆಚರಣೆ ಜರುಗುತ್ತದೆ.ಹನುಮಂತ ಹಿಂದೂ ಧರ್ಮಗ್ರಂಥಗಳಲ್ಲೊಂದಾದ ರಾಮಾಯಣದಲ್ಲಿನ ಪ್ರಮುಖ ಪಾತ್ರಗಳಲ್ಲೊಬ್ಬ.ಹನುಮಂತನು ಕಿಷ್ಕಿಂದೆ ಯಲ್ಲಿ ಸುಗ್ರೀವನ ಜೊತೆಯಲ್ಲಿರುವಾಗ ಸೀತೆಯನ್ನು ಹುಡುಕಿಕೊಂಡು...
ಹೌದು, ಯಾರೋ ಇದ್ದಕ್ಕಿದ್ದಂತೆ ನಮ್ಮನ್ನು ಉದ್ದಾರ ಮಾಡ್ತಾರೆ ಅಥವಾ ಯಾರೋ ನನ್ನನ್ನು ಕೈಲಿಡಿದು ನಡೆಸುತ್ತಾರೆ ಎಂಬ ಒಣ ಆಲೋಚನೆಗಳನ್ನು ತ್ಯಜಿಸಿಬಿಡಬೇಕು. ಯಾರೂ ಯಾರನ್ನು ನಂಬಿ ಕೂರುವ ಹುಂಬರಾಗಬಾರದು. ಇನ್ನ್ಯಾರೋ ಬಂದು ಬದುಕನ್ನು ಜಾದುಗೊಳಿಸುವುದಿಲ್ಲ. ನಮ್ಮ ಬದುಕನ್ನು ನಾವೇ ಬೆರಗಾಗುವಂತೆ ಬದುಕಲು ಕಾಯಕ ನಿಷ್ಠೆ, ಪ್ರಾಮಾಣಿಕತೆ, ಸೋಲುಂಡರು ಮತ್ತೆ ಎದ್ದು ನಿಂತು ಗುರಿ ತಲುಪಿಯೇ ತೀರುತ್ತೇನೆ...
(ಅಧ್ಯಕ್ಷರ ಭಾಷಣ -೨೦೧೭, ಜುಲೈ ೧ -ಸುನ್ನಾಳದಲ್ಲಿ ನಡೆದ ರಾಮದುರ್ಗ ತಾಲೂಕಿನ ೫ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಪ್ರೊ.ವೆಂಕಟೇಶ ಹುಣಶೀಕಟ್ಟಿ -ಹಿರಿಯ ಸಾಹಿತಿಗಳು,ಹಲಗತ್ತಿ -೯೮೮೦೧೨೧೨೬೧ ಇವರ ಭಾಷಣದ ಸಾರ)
"ದರ್ಪಣ"ದ ಬಿಡುಗಡೆ ಕುರಿತು ಒಂದೆರಡು ಮಾತು ಹೇಳಲೇಬೇಕು. ಸಮ್ಮೇಳನದ ಉದ್ಘಾಟನೆಯ ಹಿಂದಿನ ದಿನವೂ ಸ್ಮರಣ ಸಂಚಿಕೆ ಕೈಸೇರಿರಲಿಲ್ಲ.ಪ್ರೆಸ್ ನವರಿಗೆ ಇನ್ನೂ ಒಂದಿಷ್ಟು...
ಭಗವಾನ ಮಹಾವೀರ ಜಿನನನ್ನು ನಂಬಿದವರು ಜೈನರು. ಅಹಿಂಸೆಯನ್ನು ಮೂಲಮಂತ್ರವಾಗಿರಿಸಿಕೊಂಡ, ಅಹಿಂಸಾ ಪರಮೋಧರ್ಮ ಎನ್ನುವ ಮೂಲಮಂತ್ರವನ್ನು ಇರಿಸಿ ಪಾಲಿಸಿಕೊಂಡು ಹೋಗುತ್ತಿರುವ ಧರ್ಮವೇ ಜೈನ ಧರ್ಮ. ತ್ಯಾಗವೇ ಜೈನ ಧರ್ಮದ ಮೂಲ ಮಂತ್ರ. ಅತ್ಯಂತ ವಿಶಾಲ ಸೂಕ್ಷ್ಮ ಮನೋಭಾವದ ಅತ್ಯಂತ ಪ್ರಾಚೀನ ಧರ್ಮವೂ ಜೈನ ಧರ್ಮವಾಗಿದೆ ಇಂತಹ ಧರ್ಮವು ಪ್ರಥಮ ತೀರ್ಥಂಕರರಾದ ವೃಷಭನಾಥ ಭಗವಾನರಿಂದ ಪ್ರಾರಂಭವಾಗಿ 24ನೇ...
ಉ ತ್ಸಾಹ ಮಲಗಿಸಕೊಡುವದಿಲ್ಲ. ಆಲಸ್ಯ ಏಳಿಸಿಕೊಡುವದಿಲ್ಲ. ಎನ್ನುವ ಗಾದೆ ಮಾತು ನಿತ್ಯ ಜೀವನದಲ್ಲಿ ಅದೆಷ್ಟು ಸತ್ಯ ಎನಿಸುತ್ತದೆ. ಉತ್ಸಾಹ ನಮ್ಮ ಜೀವನಕ್ಕೆ ಪೆಟ್ರೊಲ್ ಇದ್ದಂತೆ ನಂದಾ ದೀಪದಂತೆ ಉರಿಯುವ ದೀಪಕ್ಕೆ ಆಲಸ್ಯತನವು ಬಿರುಗಾಳಿಯಿದ್ದಂತೆ. ಪ್ರತಿಯೊಂದಕ್ಕೂ ಗೊಣಗುಡುವ ನಮ್ಮ ಚಟಕ್ಕೆ ಮೂಲ ಕಾರಣ ಯಾವುದರಲ್ಲಿಯೂ ಉತ್ಸಾಹ ಇಲ್ಲದಿರುವದೇ ಆಗಿದೆ.
ನಿರುತ್ಸಾಹವು ಅನೇಕ ಸಮಸ್ಯೆಗಳನ್ನು ಸಾಲು ಸಾಲಾಗಿ ನಮ್ಮೆದುರಿಗೆ...
ಭಾರತದ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಮಂಗಳ ಪಾಂಡೆ ಅಗ್ರರು (ದಿ. ೮ ಎಪ್ರಿಲ್ ೧೮೫೭ ) ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಹುತಾತ್ಮ ಎಂದೇ ಪ್ರಖ್ಯಾತರು. ಈಸ್ಟ್ ಇಂಡಿಯಾ ಕಂಪನಿ ಯ ಬ್ರಿಟಿಷರ ಸೈನ್ಯದಲ್ಲಿ ಸಿಪಾಯಿಯಾಗಿದ್ದರು. ೧೮೫೭ ರಲ್ಲಿ ಬ್ರಿಟಿಷರ ಮೇಲೆ ಮಾಡಿದ ಆಕ್ರಮಣವು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ರೂಪವನ್ನು ಪಡೆಯಿತು.ಅವರು ಭಾರತದ ಮೊದಲ...