spot_img
spot_img

ಪಾಲಕರು ಮಕ್ಕಳಿಗೆ ಧಾರ್ಮಿಕ ಪ್ರಜ್ಞೆ ಮೂಡಿಸಬೇಕು: ವೀರೇಶ ಶಾಸ್ತ್ರಿಗಳು

Must Read

spot_img
- Advertisement -

ತಿಮ್ಮಾಪೂರ :- ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಚಿತ್ತರಗಿಯ ವಿಜಯ
ಮಹಾಂತೇಶ್ವರ ಮೂಲಮಠದ ಪರಮತಪಸ್ವಿ ಲಿಂ. ಶ್ರೀ ವಿಜಯ ಮಹಾಂತೇಶ ಶಿವಯೋಗಿಗಳ ೧೩೩ ನೇ ಸ್ಮರಣೋತ್ಸವ ಹಾಗೂ ಶರಣ ಸಂಸ್ಥತಿ ಮಹೋತ್ಸವದ ಅಂಗವಾಗಿ ಚಿತ್ತರಗಿ ಮಠದಲ್ಲಿ ಗ್ರಾಮದ ಅಕ್ಕನ ಬಳಗದವರಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಒಂದರಿಂದ 8ನೇ ತರಗತಿಯ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರವನ್ನು .ಆಯೋಜಿಸಲಾಗಿತ್ತು

ಕಾರ್ಯಕ್ರಮದ ಸಾನ್ನಿಧ್ಯವನ್ನು ಶ್ರೀಮಠದ ಗುರುಮಹಾಂತ ಶ್ರೀಗಳು ವಹಿಸಿದರು, ಮುಖ್ಯ ಅತಿಥಿಗಳಾಗಿ ಪ್ರವಚನಕಾರರಾದ ವಿರೇಶಶಾಸ್ತ್ರಿಗಳು ವಹಿಸಿ ಮಾತನಾಡಿ ಮಕ್ಕಳಿಗೆ ಶಿಕ್ಷಣ ಜೊತೆ ಜೊತೆಗೆ ಮನೋವಿಕಾಸ, ಬೌತಿಕ ವಿಕಾಸಗಳು ತುಂಬುವದರೊ0ದಿಗೆ ಸಾಂಸ್ಕೃತಿಕ  ಕ್ರೀಡೆಗಳಲ್ಲಿ ಭಾಗವಹಿಸಿದಾಗ ಮಾತ್ರ ಮಕ್ಕಳು ಪ್ರಭುದ್ಧತೆಗೆ ಬರಲು ಸಾಧ್ಯವಾಗುತ್ತದೆ. ಕಾರಣ ಮಕ್ಕಳನ್ನು ಆಚಾರ, ವಿಚಾರವಂತರನ್ನಾಗಿಸಲು ಪಾಲಕರು ಪ್ರಯತ್ನಿಸಬೇಕಾಗಿದೆ. ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೇಣುಕಾ ಬೇವೂರ ವಹಿಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷ ರೇಣುಕಾ ಮಾಚಾ ಕಾರ್ಯದರ್ಶಿ ವೆಂಕಮ್ಮ ಬೇವೂರ, ಖಚಾಂಚಿ ಈರಮ್ಮ ಕಲಾದಗಿಮಠ ಉಪಸ್ಥಿತರಿದ್ದರು.

- Advertisement -

ಸಾಂಸ್ಕೃತಿಕ ಕಾರ್ಯಕ್ರಮ ಬಗ್ಗೆ ಮಕ್ಕಳಿಗೆ ಗೌರಮ್ಮ ನಾಲತವಾಡ , ರಕ್ಷಿತಾ ಮಳೆಣ್ಣವರ ಭಾಗ್ಯ ನಾಗರಡ್ಡಿ, ರತ್ನಾ ಪಾಟೀಲ,ಇವರುಗಳು ಚೈತನ್ಯ ತುಂಬಿದರು. ಸವಿತಾ ಸುಧೀರ ಪಾಟೀಲ ಸ್ವಾಗತಿಸಿದರು ವಂದಿಸಿದರು. ಪ್ರಕೃತಿ ಹನಮಂತ ಪಾಟೀಲ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು. ವೈಶಾಲಿ ಮಹೇಶ ಬೇವೂರ ನಿರೂಪಿಸಿದರು.

ಪ್ರೇಕ್ಷಕರ ಮನ ಗೆದ್ದ ಹಾಡುಗಳು:- ಈ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಚಿತ್ತರಗಿ ಗ್ರಾಮದ ವಿವಿಧ ಶಾಲೆಗಳ ಮಕ್ಕಳು ಜಾನಪದ, ಧಾರ್ಮಿಕ, ವಚನಗಳು, ಹಾಡುಗಳಾದ ಮಹಾಂತ ಜೋಳಿಗೆ (ಧಾರ್ಮಿಕ) ಉಘೇ ಉಘೇ ಮಹಾದೇವ, ವಿಜಯ ಮಹಾಂತನ ವಿಮಲ ಪಾದಕೆ ಧಾರ್ಮಿಕ ಗೀತೆ, ಭಾಗ್ಯದ ಬಳೆಗಾರ, ಹಸಿರು ಕಡ್ಡಿಯ ಸೀರೆ (ಜಾನಪದ) ಧರ್ಮವ ಬೆಳಗಿದೆ ಅಣ್ಣಾ ಬಸವಣ್ಣ (ಭಕ್ತಿಗೀತೆ ಜಾನಪದ) ಏನು ಕೊಡ ಏನು ಕೊಡಾವ ಹುಬ್ಬಳ್ಳಿ ಮಾಟದೆಂತಾ ಚಂದುಳ್ಳಿಕೊಡವಾ, ಚಲುವಯ್ಯ ಚೆಲ್ಲಿದರ ಮಲ್ಲಿಗೆಯ ಬಾಣ ಸುರೇರಿ ಮ್ಯಾಲೆ , ಇನ್ನೂ ಇತರ ಹಾಡುವುದರ ಮೂಲಕ ಜನಮನ ರಂಜಿಸಿದರು.

- Advertisement -
- Advertisement -

Latest News

ನಾಗೂರಲ್ಲಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ

ಹುನಗುಂದ: ತಾಲೂಕಿನ ನಾಗೂರ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಎಫ್ಎಲ್ಎನ್ ಮಕ್ಕಳ ಕಲಿಕಾ ಹಬ್ಬ ನಡೆಯಿತು. ಕ್ಲಸ್ಟರಿನ ಹನ್ನೆರಡು ಶಾಲೆಗಳಿಂದ ಆಗಮಿಸಿದ 100ಕ್ಕೂ...
- Advertisement -

More Articles Like This

- Advertisement -
close
error: Content is protected !!
Join WhatsApp Group