ಕವನ
ಬಸವ ಮಾಮರ
ಬಸವ ನೆಂಬ ಮಾಮರ
ಹಸಿರು ಗಿಳಿ ಕೋಗಿಲೆಗಳಿಗೆ
ತವರೂರು
ನಿತ್ಯ ವಸಂತ ಮಾಮರದಲಿ
ಕುಹೂ ಕುಹೂ
ಚೈತ್ರ ಮಾಸದ ಚಿಗುರು
ಹೂ ಹಣ್ಣು ತಂಬೆಳಲ
ಹಣ್ಣುಕಾಯಿ
ಮಿಡಿ ಹೂ
ಜೋತು ಬಿದ್ದ
ಹದ್ದು ಕಾಗೆಗಳಿಗೂ
ಹೂ ಹಣ್ಣು
ತಿಂದು ತೇಗುವ
ಅಪ್ಪನ ಮಡಿಲು
ಭುವಿ ಸ್ವರ್ಗ
ಸ್ವಾರ್ಥ ವಿಲ್ಲದ
ನಿಷ್ಕಲ್ಮಶ ಭಾವ
ಮೃದು ಧೋರಣೆಯ
ಹರಿಕಾರ ಜಂಗಮ
ಕಾಯದೊಳಗೆ ಕಾಯಕ
ಎಕ ದೇವೋಪಾಸಕ
ಅಂಗವೇ ಲಿಂಗವೆಂದ
ಗುರು ಬಸವೇಶ್ವರ
ಶರಣೆಂದು ಕುಲಕ್ಕೆ
ಶರಣು ಶರಣಾರ್ಥಿ ಹೇಳಿದ
ಹರಳಯ್ಯ ಮಧುವರಸರ
ಮುದ್ದು ಮಕ್ಕಳ ಮದುವೆ
ಚೈತ್ರ ಮಾಸ ದ ಕೋಗಿಲೆ
ಕುಕ್ಕಿ ಕೆಡವಿದವು
ರಣ ಹದ್ದು...
ಕವನ
ಮರೆಯದ ಬಾಲ್ಯ
ಆ ದಿನಗಳೇ ಹಾಗೇ
ತುಂತುರು ಮಳೆಯಂತೆ
ಬಿತ್ತರದ ಮಣಿ ಮಾಲೆಚಿಮಿಣಿ ಬೆಳಕಿನಂತೆ
ಕೊರತೆ ಇರದೆ
ಒರತೆ ಚಿಮ್ಮಿಸಿದ ಅಲೆ.ಬುಗುರಿ ಲಗೋರಿ
ಗೋಲಿ ಪಗಡೆ
ಹಳ್ಳ ಕೊಳ್ಳ ಅಲೆದಿದ್ದ ಸೆಲೆ.ಬೇಧವಿರದ ಬಾಂಧವ್ಯ
ಮಂದಹಾಸದ ಒಲುಮೆ
ನಮ್ಮವರೆಂಬ ಗತ್ತಿನ ಓಕುಳಿ.ಗಿಡ ಮರ ಬಳ್ಳಿಯ ನೋಟ
ಕಾಯಿ ಹಣ್ಣು
ತಿಂದ ಸವಿಯ ನೆಲೆ.ಕಲ್ಲು ಮಣ್ಣು ಆಟದಿ
ಅಮ್ಮನ ಬೈಗುಳದ ಸುರಿಮಳೆ
ಅಜ್ಜಿಯ ಮಡಿಲ ನಿದ್ರೆಯ ಸುಳಿ.ಈಗೆಲ್ಲಾ ಮಸುಕು
ನೆನಪಿನ ಸಾಲು
ಆಗಂತುಕನ ಬಳುವಳಿ.ಮರಳಿ ಬಾರದ ಹಾಗೆ
ತೀರದ ಮೌನ...
ಕವನ
ಕಾಮನಬಿಲ್ಲು
ಮದುವೆ ಹಂದರದಾಗ ಮದುಮಗನಾದಾಗ
ಏಟೊಂದು ಖುಷಿ ಇತ್ತ !
ಏಟೊಂದು ಖುಷಿ ಇತ್ತ ಏನೊಂದು ಖುಷಿ ಇತ್ತ
ಏನೆಂಥ ಖುಷಿ ಇತ್ತ !!
ಖುಷಿಯಿಂದ ಹೇಳು ತಮ್ಮ ಆ ಖುಷಿ ಇತ್ತಿತ್ತ
ಹೋಗೇತಿ ಎತ್ತೆತ್ತ ?ಕಣ್ಣಾಗ ಮಿಣುಕೇನ ಮಾರ್ಯಾಗ ಬೆಳಕೇನ
ಮಾತ್ನ್ಯಾಗ ಖಡಕೇನ !
ಭಾರಿ ರುಮಾಲೇನ ಬಣ್ಣ ಬಾಸಿಂಗೇನ
ಜರತಾರಿ ದೋತ್ರೇನ !ನಿಂತಲ್ಲಿ ನಿಲ್ಲಲಿಲ್ಲ ಕುಂತಲ್ಲಿ ಕೂಡಲಿಲ್ಲ
ಜಿಂಕ್ಹಾಂಗ ಜಿಗಿದೆಲ್ಲಾ !
ಕಡಗದ ಕೈಯಾಕಿ ಕೈಹಿಡಿದು...
ಕವನ
ನೆನಪಾದ ಬಸವಣ್ಣ
ನೆನಪಾದ ಬಸವಣ್ಣ
ಅಡಿಗಡಿಗೆ
ಅವರಿವರ ಆಚಾರ
ವಿಚಾರ
ಅಜ್ಞಾನದ ಪರಮಾವಧಿ
ಕಂಡು
ಎತ್ತ ಸಾಗಿದೆ ಜನರ
ಜೀವನ ಸಿದ್ಧಾಂತ
ವೈಚಾರಿಕ ನಿಲುವು
ಎಂಬ ಕಳವಳವ
ಹೊತ್ತು ನೆನಪಾದ
ಬಸವಣ್ಣ ಅಡಿಗಡಿಗೆಕಂಡ ಕಂಡಲ್ಲಿ ಮುಳುಗುವವರ
ದೇವರ ಹೆಸರಲ್ಲಿ
ಉಪವಾಸ ಮಾಡುವವರ
ಅಭಿಷೇಕ ಮಾಡಿಸಿ
ಗುಡಿಯ ಸುತ್ತುವವರ
ಅಂಧಕಾರದ ಮನವ ಕಂಡು
ನೆನಪಾದ ಬಸವಣ್ಣ
ಅಡಿಗಡಿಗೆತನ್ನೊಳಗಿನ ಪ್ರಜ್ವಲಿಸುವ
ಜ್ಯೋತಿಯ ಕಾಣದೆ
ತನ್ನ ಕೆಲಸವನ್ನು ತಾನು ಮಾಡದೆ
ಹಗಲಿರುಳು ಜಪ ಮಾಡುವ
ಭಂಡ ಭಕ್ತರ ನೋಡಿ
ನೆನಪಾದ ಬಸವಣ್ಣ
ಅಡಿಗಡಿಗೆಸಮಾನತೆಯ ಮೆರೆಯದೆ
ಭೇದ -ಭಾವ ಅರಸುವ
ವ್ಯಾಮೋಹದಲ್ಲಿ ಮಿಂದು
ಸ್ವಾರ್ಥಿಯಾಗುವ
ಗೊಡ್ಡು ಸಂಪ್ರದಾಯಗಳಿಗೆ
ಮೊರೆಹೋಗುವ ವೈದಿಕ
ಮನಸುಗಳ ಕಂಡು
ನೆನಪಾದ ಬಸವಣ್ಣ
ಅಡಿಗಡಿಗೆಸುಧಾ...
ಕವನ
ಕ್ರಾಂತಿಯೋಗಿ ಬಸವಣ್ಣ
ಕೂಡಲ ಸಂಗಮದೇವನ ನಾಮವ
ಅಂಕಿತವಾಗಿ ಬಳಸುತಲಿ
ಮೂಡಿದ ಮನಸಿನ ಜಾಡ್ಯವ ಕಳೆದನು
ಭಕ್ತಿ ಭಂಡಾರಿ ಬಸವಣ್ಣಕಾಯಕಯೋಗಿಯು,ನಾಯಕನೀತ
ವಚನದಿ ತತ್ವವ ಬಿತ್ತುತಲಿ
ಕಾವ್ಯದ ಹರಿವಿನ ಮೂಲಕ ಕಲ್ಯಾಣ
ಕ್ರಾಂತಿಯ ಸತ್ವವ ಸಾರುತಲಿದೇವನು ಒಬ್ಬ ನಾಮಗಳನೇಕ
ಎಂದನು ಐಕ್ಯತೆ ಬೋಧಿಸುತ
ಜೀವಿಗಳೆಲ್ಲರ ಮೇಲಿರೆ ದಯವು
ಮೂಲವೆ ಧರ್ಮಕೆ ದಯೆ ಎನುತಲಿಂಗದ ಮಧ್ಯೆ ಜಗತ್ ಸರ್ವಂ
ಕಾಯಕವೇ ಕೈಲಾಸವು
ಹಂಗಿನ ಅರಮನೆ ಏತಕೆ ಎನುತ
ಲಿಂಗದ ದೀಕ್ಷೆಗೆ ಮುಂದಾದಅರಿವೆಂಬುದೆ ಗುರು,ಮಾತೇ ಮಾಣಿಕ್ಯ
ನುಡಿದರೆ ಲಿಂಗವು ಅಹುದೆನಲಿ
ಗುರು...
ಕವನ
ಬಸವ ಬೆಳಗು
ಬಸವನೆಂಬ ಬೆಳಗು
ಆತ್ಮ ಪರಿಶುದ್ಧತೆಯ ಒಳಹೊರಗು
ಸಮತೆಯ ಭಾವ
ವಾಸ್ತವದ ಅನುಭವ.ಕಾಯಕನಿಷ್ಠೆಯ ಪ್ರಭಾವ
ಇಹಪರದ ಸೂಚಕ
ಬಾಳ ದೀವಿಗೆಗೆ ದಿಕ್ಸೂಚಿ
ಲಿಂಪೂಜೆಯ ಅನುಸೂಚಿ.ಮತದ ಭ್ರಮೆಯ ಹುಟ್ಟಡಗಿಸಿ
ಮಾನವೀಯತೆಯ ಝೇಂಕರಿಸಿ
ಜನಮಾನಸದಿ ಅಚ್ಚೊತ್ತಿ
ಭಕ್ತಿ ಭಂಡಾರಿಯ ರೂಪಕ.ಶರಣ ಚಳವಳಿಯ ರೂವಾರಿ
ಸಮಾಜದ ಅನನ್ಯತೆಯ ಸಿರಿ
ಅನುಭವ ಮಂಟಪದ ಚೈತನ್ಯ
ಚಿಂತನ ಮಂಥನ ಪ್ರಾಧಾನ್ಯ.ವಿಶ್ವ ಮಾದರಿಯ ವ್ಯಕ್ತಿತ್ವ
ಕೇಡು ಬಯಸದ ತತ್ವ
ಬರಡು ಭೂಮಿಯಲು ಜಿನುಗು
ಹತಾಶೆಯಾದವರ ಅಂತಃಕರಣ.ರೇಷ್ಮಾ ಕಂದಕೂರ, ಶಿಕ್ಷಕಿ
ಸಿಂಧನೂರ
ಕವನ
ಕವನ : ಸಾವಿನ ಜೊತೆ ಆಟ ಆಡುವ ಧರ್ಮ ಯಾವುದಯ್ಯ?
ಸಾವಿನ ಜೊತೆ ಆಟ ಆಡುವ ಧರ್ಮ ಯಾವುದಯ್ಯಸತಿಯ ಎದುರು ಪತಿಯನ್ನು ಕೊಂದು
ಅವಳ ಸೌಭಾಗ್ಯವನ್ನೇ ನುಂಗಿ ನೀರು ಕುಡಿದು
ಸತಿಯನ್ನು ಜೀವಂತ ಶವವಾಗಿ ಮಾಡಿದ ಈ ಧರ್ಮ ಯಾವುದಯ್ಯ?ತಾಯಿಯ ಎದುರು ಕಂದನನ್ನು ಕೊಂದು ಅವಳ ತಾಯ್ತನ ಒಡಲಿಗೆ ಬೆಂಕಿ ಇಟ್ಟು ಪುತ್ರಶೋಕ ನಿರಂತರವಾಗಿ ಇರಲು ಕಾರಣವಾದ ಈ ಧರ್ಮ ಯಾವುದಯ್ಯ?ನವ ಜೋಡಿ ಹಕ್ಕಿಗಳು ಸ್ವಚ್ಛಂದವಾಗಿ ಪ್ರಣಯದಲ್ಲಿ ಹಾರಾಡುವಾಗ
ಪ್ರಿಯಕರನ...
ಕವನ
ಕವನ : ಶಿವನೆದೆಯಲ್ಲಿ ಸಂಲಗ್ನವಾಗುವೆ
ಶಿವನೆದೆಯಲ್ಲಿ ಸಂಲಗ್ನವಾಗುವೆಸಿಂಧು ಗಂಭೀರ ಬೇಕೆನ್ನ ಬಾಳಿಗೆ
ಸಾಗು ಮನವೆ ಮಹಾಶರಣನಂತೆ
ಶುದ್ಧನಾಗು ಬುದ್ಧದೇವನಂತೆ
ಎಳೆಗರುವ ನೆನೆದೋಡುವ
ತುರುವಾತುರವಿರಲಿ
ಬಾಳ ಗೆಲ್ಲುವೆನೆಂಬ ಧೈರ್ಯವಿರಲಿ
ಜೀವ ಕೃತಿ ಮುಗಿಸುವ ಹುಚ್ಚಿರಲಿ
ಭಾವ ಬೆಟ್ಟಕ್ಕೆ ಜಿಗಿವ ಕೆಚ್ಚಿರಲಿ
ಬಾಳ ಪಯಣದಲಿ ನೊರೆಂಟು ತೊಡಕಿದ್ದರೂ ಸ್ವಾಗತಿಸುವೆ
ನದಿಯಂತೆ ಹರಿದೆಲ್ಲವನು ದಾಟುವೆ
ಸಾರಸ್ವತ ಸಾಗರದಾಲಿಂಗನದಲ್ಲಿ ನನ್ನನ್ನೆ ಮರೆತು ಸೌಮ್ಯವಾಗುವೆ!
ಯೋಗ ಬುದ್ಧನಾಗಿ, ಶಾಂತಿ ಬೋಗಿಯಾಗಿ ವಿಶ್ರಾಂತಿ ಉಯ್ಯಾಲೆಯಲ್ಲಿ ತೂಗಿ ತೊನೆವೆ
ಅದೃಶ್ಯ ಪರ್ವತದ ಶಿವನೆದೆಯಲ್ಲಿ ಸಂಲಗ್ನವಾಗುವೆ. ಎಸ್.ಎಸ್.ಪುಟ್ಟೇಗೌಡ,
ಮೈಸೂರು
ಮೊ 9972242091
ಕವನ
ಧರಿಸಿ ಬಿಡು ಮೌನದೊಡವೆ
ಮೌನದೊಡವೆ ತೊಟ್ಟು ಬಿಡು
ಶಂಕಿಸಿ ಹೀಯಾಳಿಸುವರ ಮುಂದೆ
ಬಿಂಕ ಬಿಗುಮಾನ ಬದಿಗಿಟ್ಟು
ಕೊಂಕು ಮಾತು ಕೇಳದೆ
ಸುಮ್ಮನೆ ಇದ್ದು ಬಿಡು.ತಾಳ್ಮೆಯ ಸ್ಥಿತಿಯಲಿ
ದೂಡಿದವರ ತಹಬದಿಗೆ ತರಲು
ಗುದ್ದಾಡಿ ದೂರವಾಗುವ ಬದಲು
ಮುದ್ದಾಡಿ ಕೇಡು ಬಗೆಯುವರ ತೊರೆದು
ನೋಡಿಯೂ ನೋಡದಂತೆ ಇರಲು.ಮಾತಿಗೆ ಮಾತು ಬೆರೆಸದೆ
ಮತಿಗೆ ಕೆಲಸ ಕೊಟ್ಟು
ಭೀತಿಗೆ ನಲುಗದೆ
ತಿಳಿದರೂ ತಿಳಿಯದ ರೀತಿಯಲಿ
ತಿಳಿ ಮುಗಿಲ ಹೊಕ್ಕು.ಕಾಲದ ಮಹಿಮೆ ತಿಳಿದು
ಕಲರವದ ಗೊಡವೆಗೆ ಹೋಗದೆ
ಮಾಗಿದ ಹಣ್ಣಂತೆ
ಕೂಗುವ ಕಾಗೆಯ ಕಿವಿಗೊಡದೆ
ಮೌನದ...
ಕವನ
ಮಸಣವಾದ ಪೆಹಲ್ಗಾಮ್ಮದುವೆಯಾಗಿ
ವಾರವೂ ಕಳೆದಿರಲಿಲ್ಲ
ಹಚ್ಚಿದ ಅರಿಸಿಣ ಅರಿರಲಿಲ್ಲ
ಕಾಶ್ಮೀರ ಪಯಣಕೆ
ಹೊರಟ ದಂಪತಿಅತ್ತ ಮಗ
ಹೆಂಡತಿ ಜೊತೆಗೆ
ರಜೆ ಕಳೆಯಲು
ಹೊರಟರು
ಕಣಿವೆ ನಾಡಿಗೆಅದೆಷ್ಟೋ ಪ್ರವಾಸಿಗಳು
ಕನಸು ಬಯಕೆ ಹೊತ್ತು
ಬಂದರು ಹಸಿರು ತಾಣ
ಕೊಳಗಳ ಪುಟ್ಟ ದೋಣಿ
ಮಂಜುಗಡ್ಡೆ ಮುತ್ತಿಕ್ಕಿತ್ತುನೋಡು ನೋಡುವುದರೊಳಗೆ
ಬಂದು ನಿಂತರು ಉಗ್ರಗಾಮಿಗಳು
ಕಂಡ ಕಂಡಲ್ಲಿ ಗುಂಡು
ರಕ್ತ ಸುರಿಸಿದ ರಕ್ಕಸರುಚೀರಾಟ ಕೂಗಾಟ ಅಕ್ರ೦ದನ
ಕರುಣೆ ಇಲ್ಲದ ಕಟುಕರು
ಮೂವತ್ತು ಹೆಣ ಉರುಳಿದವು
ಇರಲಿಲ್ಲ ಸೇನೆ ಕಾವಲಿಗೆ
ಮಸಣವಾದ ಪೆಹಲಗಾಮಡಾ. ಶಶಿಕಾಂತ ಪಟ್ಟಣ ಪುಣೆ
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



