ಕವನ
ಇ ಲ್ಲಿವೆ ಎಳ್ಳು-ಬೆಲ್ಲದ ಸ್ವಾದ-ಮೋದ ಅನಾವರಣದ ಸಪ್ತ ಹನಿಗವಿತೆಗಳು. ಸಂಕ್ರಾಂತಿಯ ನಾದ-ನಿನಾದ ರಿಂಗಣಿಸುವ ಗುಪ್ತ ಭಾವಪ್ರಣತೆಗಳು. ಇಲ್ಲಿ ಒಲವಿನ ಲಾಸ್ಯವಿದೆ. ತಿಳಿನಗೆಯ ಹಾಸ್ಯವಿದೆ. ಹಬ್ಬದ ಸವಿ ಸಂವೇದನೆಗಳ ಹೃದ್ಯ ಭಾಷ್ಯವಿದೆ. ಒಲುಮೆಯ ಅಕ್ಷರಬಂಧುಗಳಿಗೆ ವರ್ಷದ ಮೊದಲ ಹಬ್ಬಕ್ಕೆ ಮುಂಗಡವಾಗಿ Honey ಹನಿ ಕಾವ್ಯದ ಉಡುಗೊರೆಯಿದು...ಎಳ್ಳು-ಬೆಲ್ಲದ ಹನಿಗಳು.. ರಂಗೀಲ..!ನನ್ನ ಕೈಗಿಡುವಾಗ ಎಳ್ಳುಬೆಲ್ಲ
ಅದೇಕೋ ಮೆಲ್ಲ.. ಮೆಲ್ಲ..
ಕೆಂಪಾಯಿತು ಅವಳ ಗಲ್ಲ.!*******************ಸಂಕ್ರಾಂತಿ...
ಕವನ
ಸುಗ್ಗಿಯ ಸಂಕ್ರಾತಿ ಬಂತುಸುಗ್ಗಿಯ ಸಂಕ್ರಾತಿಯು ಬಂತು
ಸಂಭ್ರಮದ ಸಡಗರವನ್ನು ತಂತು
ಎಲ್ಲಿ ನೋಡಿದರೂ ಸಂತಸ
ಎಲ್ಲಿ ನೋಡಿದರೂ ಸಂಭ್ರಮ
ಸುಗ್ಗಿಯ ಸಂಕ್ರಾತಿಯು ಬಂತು !!ಎಳ್ಳು ಬೆಲ್ಲದ ಸಿಹಿಯನ್ನು ಸವಿಯೋಣ
ಎಲ್ಲರೂ ಸೇರಿ ಒಟ್ಟಾಗಿ ಬಾಳೋಣ
ಪ್ರೀತಿ ಪ್ರೇಮದ ಭಾವನೆಗಳನ್ನು ಅರಳಿಸೋಣ
ಈ ನಾಡಿನ ಬಾವುಟವನ್ನು ಬಲು ಎತ್ತರಕ್ಕೆ
ಬೆಳೆಸೋಣ...!!ನೋವು ನಲಿವು ಕಷ್ಟ ನಷ್ಟಗಳ ಬೆಲೆಯನ್ನು
ಎಲ್ಲಾರೂ ಒಟ್ಟಾಗಿ ಸೇರಿ ತಿಳಿಯೋಣ
ಈ ಬದುಕಿನ ದಾರಿಯಲ್ಲಿ ಎಡವಿ ಬೀಳದಂತೆ
ಸರಿಯಾಗಿ ಎಲ್ಲರೂ...
ಕವನ
ಏಳಿ, ಎದ್ದು ಬಿಡಿಏಳಿ, ಎದ್ದುಬಿಡಿ
ತಡಮಾಡದೆ ನಡೆದು ಬಿಡಿ
ಸಾಧನೆಯ ಶಿಖರ ಏರಲು
ಕನಸು ನನಸಾಗಿಸಲು.ಗೀಳಿನ ಬಾಳೇಕೆ
ಹಪಹಪಸಿ ಕೊರಗೇಕೆ
ನಾಳೆಯ ನಿರೀಕ್ಷೆಯಲಿ
ದಾಳ ಹೂಡುವ ಬಯಕೆಯಲಿ.ತಾಳ ಮೇಳ ಸೇರುವಂತೆ
ಬಿಸಿ ಉಸಿರು ಕಟ್ಟುವಂತೆ
ಓರೆ ಕೋರೆ ಸರಿಪಡಿಸುತ
ಬಿರುಕಿಗೆ ಗಾರೆ ತುಂಬುತ.ರಣ ಕಹಳೆ ಮೊಳಗಿಸಿ
ಕರಣ ಹರಿಸಿ
ಚಾರಣದ ಸ್ಥಿತಿಯಲಿ
ಪರಿಶ್ರಮದ ಸ್ತುತಿಯಲಿ.ಆವಕಾಶದಲಿ ತೂರಿಬಿಡು
ಹುಸಿ ನಿದ್ರೆ ಸರಿಸಿಬಿಡು
ಘಾಸಿ ತರುವವರ ಮುಂದೆ
ತಾರೆ ಬೆಳಕು ಬೀರುವಂತೆ.ಕಡಿದಾದ ದಾರಿ
ಮೊನಚು ತೋರಿ
ಜಾಗೃತಿಯ ಕಹಳೆ ಊದಿ
ಸುಕೃತಿಯ ಸರದಿ.ಕಾಲದ...
ಕವನ
ಬಿಟ್ಟು ಬಿಡಿ ಬಸವನನ್ನು ಬಿಟ್ಟು ಬಿಡಿ ಬಸವನನ್ನು .
ಕಟ್ಟಿ ಹಾಕಬೇಡಿರಿ.
ಜಾತಿ ಮತ ಕಡಿವಾಣವು
ಗಟ್ಟಿಗೊಂಡಿವೆ ಸಂಕೋಲೆಗಳು
ಬಂಧಿಯಾದ ಧೀರ ಶರಣ
ಮಠ ಆಶ್ರಮ ಮಂಟಪದಿ
ಒಲ್ಲೆನೆಂದ ವಸ್ತ್ರ ಒಡವೆ
ಏಕೆ ಇವರಿಗೆ ಕಿರೀಟವು ?
ಗುಡಿ ಗುಂಡಾರ ಧಿಕ್ಕರಿಸಿದ
ಅವನಿಗೇಕೆ ಮೂರ್ತಿಯು ?
ಭಿಕ್ಷೆ ಎತ್ತುವರು ಧೂಪ ದೀಪದಿ
ಬಸವನೆಸರಲಿ ಉದ್ಯಮ
ಮೌಲ್ಯ ಮೆಟ್ಟಿ ಮೌಢ್ಯ ಬೆಳೆಸಿ
ತತ್ವ ಗೋರಿ ಕಟ್ಟುತಿಹರು.
ಕೊನೆಗೊಳ್ಳಲಿ ಸುಲಿಗೆ ಶೋಷಣೆ
ವೇಷಧಾರಿಯ ಉದರ ಪೋಷಣೆ
ಬಸವ ಸೇನೆ ಎದ್ದು ನಿಂತಿದೆ
ಕ್ರಾಂತಿ...
ಕವನ
ಭೂತಾಯಿ ನಕ್ಕಳುಬದಲಾದ ಕ್ಯಾಲೆಂಡರ
ಬದಲಾಗದ ಬದುಕು
ಹೊಸ ಭರವಸೆ ನೂರು
ಕನಸಾದವು ಚೂರು
ಕಾಣದಾಗದ ಬಾಳು
ಸಂಭ್ರಮದ ಗೀಳು
ದ್ವೇಷ ದಳ್ಳುರಿ ಬೇಗೆ
ಸೌಹಾರ್ದವು ಹೋಳು
ಭ್ರಷ್ಟ ನಾಯಕರ ದರ್ಪ
ದೇಶವಾಗಿದೆ ಹಾಳು
ಹಸಿವಿನಲ್ಲಿ ತತ್ತರಿಸಿವೆ
ದಿಕ್ಕಿಲ್ಲದ ಮಕ್ಕಳು
ರೈತ ಶ್ರಮಿಕರ ಸಾವು
ಸಾಲ ಸೂಲದ ನೋವು
ಹೊಸ ವರುಷದ ಅಬ್ಬರಕೆ
ಭೂತಾಯಿ ನಕ್ಕಳು.ಡಾ. ಶಶಿಕಾಂತ.ಪಟ್ಟಣ -ಪೂನಾ
ಕವನ
ಕವನ : ಮೂಡಿ ಬರಲಿ ಹೊಸ ವರುಷಕೆ ಸಂತಸ
ಮೂಡಿ ಬರಲಿ ಹೊಸ ವರುಷಕೆಸಂತಸನಗು ಒಮ್ಮೆ ಅಳುವ ಮರೆತು
ನಿತ್ಯ ಸಂತಸದ ನಗೆ ಹೊತ್ತು
ಮೂಡಿ ಬರಲಿ
ಹೊಸ ಗಳಿಗೆ ಹೊಸ ವರುಷ
ತರಲಿ ನೂರು ಹರುಷಬರೆದ ಭಾವ ಪುಟದ ಅಕ್ಷರಗಳು
ಮುತ್ತಾಗಿ ಪೋಣಿಸಲಿ
ಬದುಕಿನಾಗಸದ ನಿತ್ಯ ನೂತನಕೆ
ಹೊಸ ಕನಸಿಗೆ ಹಳೆಯ ತೆರೆಯನು
ಸರಿಸಿ ನಡೆಯಲಿಅನುಮಾನದ ಕಸ ಕಡ್ಡಿ
ಕೊರೆಯುವ ಚಳಿಯ ನಡುವಲಿ
ಕೊಚ್ಚಿ ಹೋಗಲಿ
ಹರಿ ಬಿಟ್ಟ ಒಡಕು ಮಾತುಗಳು
ಮುಚ್ಚಿ ನಗಲಿಹೊಸ ಕಾಲ ಹೊಸ ದಿಗಂತ
ಕಾಲ ಕರೆಯುವ...
ಕವನ
ಭ್ರೂಣವು.ಹೊಸ ಬಸುರಿನ
ಒಡಲೊಳಗೆ
ಚಿಗುರೊಡೆದ
ಭ್ರೂಣವುಒಡಲಾಚೆ ವಿಶ್ವದಿ
ಮೊಟ್ಟೆಯೊಡೆದು
ಹುಟ್ಟ ಬಯಸುವ
ಪಕ್ಷಿಯುಕಡಲೊಳಗೆ
ಕಣ್ಣ್ತೆರೆದು
ಕನಸು ಕಾಣುವ
ಪುಟ್ಟ ಮೀನುಜೀವಜಾಲದ ಮಧ್ಯೆ
ನಗೆಯ ಪರಿಮಳ
ಕಂಪು ಸೂಸುವದು
ಮುಗ್ಧ ಭಾವಮೊಳಕೆಯೊಡೆವ
ಜೀವಕೆ ಗೊತ್ತಿಲ್ಲ
ಹೆಣ್ಣೋ ಗಂಡೋ?
ಸಮಕಳೆ ಶಾಂತಿ ಮಂತ್ರ
________________________ನೆಲವನಾಳುವನೆಲವನಾಳುವ
ನೀಚ ಮನುಜರೆ
ಏಕೆ ಕಾಡು
ಕೊಲ್ಲುತಿರಿ
ಮರದ ಪೊದರಲಿ
ಪುಟ್ಟ ಪಕ್ಷಿ
ನಗುವ ಕಲೆಗೆ
ಏಕೆ ಕಲ್ಲು
ಹೊಡೆಯುವಿರಿ
ನದಿಯೊಳಗೆ
ಕನಸು ಬಯಕೆ
ಜೀವ ಜಾಲದ
ಜಲಚರಗಳಿಗೆ
ವಿಷವನೇಕೆ
ಉಣಿಸುವಿರಿ
ಹಸಿರು ಮೇಯುವ
ಹಸು ಕರುಗಳು
ಜಿಂಕೆ ಆನೆ ಒಂಟೆ
ಅಡವಿಯ ಹುಲ್ಲು ಹಾಸಿಗೆ
ಏಕೆ ಬೆಂಕಿ ಹಚ್ಚುವಿರಿ
ನೆಲವ ಅಗಿದು
ಗಣಿಯ ಬಗೆದು
ಅದಿರು ಮಾರುವ
ಲೂಟಿ ಕೋರರೆ
ಮುಗಿಲು ಮುಟ್ಟುವ
ಫೋನ್ ಟವರ್
ಹದ್ದು ಗುಬ್ಬಿ
ಸಾಯುತಿವೆ
ಅಣು ಪರೀಕ್ಷೆ
ಬಾಂಬ್ ಗುಂಡು
ಯುದ್ಧ...
ಕವನ
ಸತ್ತ ಹೆಣದ ಬೂದಿ !ಸಿದಿಗೆಯ ಮೇಲೆ ಹೆಣ
ಹೆಣದ ಮೇಲೆ ಹಣ
ಹಣದ ಮೇಲೆ ನೊಣ
ಸುತ್ತಲೂ ಹತ್ತಾರು ಜನ
ಗೋಗರೆಯವರು ಯಾರೋ
ಒಳಗೊಳಗೆ ನಗುವವರು ಯಾರೋ ?ಹೆಗಲು ಸೋತು
ಚಕ್ರವು ಹೆಣವನ್ನು ಸಾಗಿಸುತ್ತಿದೆ ,
ಹೂವಿನ ಹಾರ ಹೆಣದೊಳಗೆ
ಬದುಕಿದೆ ,
ಬದುಕಿ ಒಳಗೊಳಗೆ ನಗುತ್ತಿದೆ
ಸತ್ತಿರುವನು ಸತ್ವದ ಗೊಬ್ಬರವೇ !
ಇಲ್ಲವೇ ಕೊಳೆಯಲಾಗದೆ
ಇಳೆಗೆ ಹೊರೆಯೇ .ಸೂರ್ಯನು ಮುಳುಗುವ ಹೊತ್ತು
ಹೆಣವ ಕುಣಿಗೆ ಇಳಿಸಿದಾಗ
ಮೆರೆದ ನಾಲಿಗೆ ಕುಣಿಯೊಳಗೆ ಇತ್ತು...
ಕವನ
ಮರೆತು ಮನದಲ್ಲಿ ಬಸವನ
------------------------------------
ಮರೆತು ಮನದಲ್ಲಿ ಬಸವನ
ವನವ ಸುತ್ತಿದರೇನು ?
ಜಡಗೊಂಡ ಕಾಯವು
ಕಲ್ಯಾಣಕೆ ಹಾತೊರೆಯೇ
ಕುರಿ ಹಿಂಡು ಮೇಯಲು
ಕಬ್ಬಿನ ತೋಟ ಹೊಕ್ಕಂತೆ
ಅರಿವು ಆಚಾರ ಅನುಭಾವ
ಗುರು ಲಿಂಗ ಜಂಗಮವು
ಶ್ರಮ ದುಡಿಮೆಕಾಯಕ
ಧರ್ಮ ಸಾಧನ ದೀಕ್ಷೆಯು
ದಾಸೋಹ ಸಮಪಾಲು
ಸಹ ಬಾಳ್ವೆಯ ಜೀವನ
ಅಪ್ಪ ಬಸವನ ವಚನ
ಮನುಕುಲದ ಪಾವನ
ಅಷ್ಟ ಮದಗಳ ಸುಟ್ಟು
ಅಷ್ಟಾವರಣ ಧರಿಸುತ
ಶಿವನೊಲುಮೆಯ ಪರಿಯು
ಶಿವಾಚಾರದ ನಡೆಯು
ಭವಿ ಬಿಟ್ಟ ಭಕ್ತನು
ನರನೋಗಿ ಹರನಾದ
ಮನುಜನೆ ಮಹದೇವ
ಕಲ್ಯಾಣವೇ ಕೈಲಾಸ
ಉಳವಿ ಹೆಬ್ಬಾಗಿಲು
ವಚನಗಳ ಕ್ರಾಂತಿಗೆ
ಜಗವೆಲ್ಲಾ ನಡುಗಿಹುದು
ಅನುಭಾವದ...
ಕವನ
ನೀನು ನನ್ನ ಜೀವನನೀನು ಜೀವ
ನೀನು ಭಾವ
ನೀನು ಕಾವ್ಯ
ಕವನ
ನೀನು ನನ್ನ
ಜೀವನನೀನು ಒಲವು
ನೀನು ಗೆಲುವು
ನೀನು ಸ್ಫೂರ್ತಿ
ನಂದನ
ನೀನು ಬಾಳು
ಬಂಧನನೀನು ಪ್ರೀತಿ
ನೀನು ಪ್ರಜ್ಞೆ
ನೀನು ಸಮತೆ
ಚಿಂತನ
ನೀನು ನನ್ನ
ತನು ಮನನೀನು ಹೆಜ್ಜೆ
ನೀನು ಗುರಿ
ನೀನು ಮೌಲ್ಯ
ಮಂಥನ
ನೀನು ಸತ್ಯ
ಶೋಧನ
______________________*ಡಾ ಶಶಿಕಾಂತ ಪಟ್ಟಣ ರಾಮದುರ್ಗ*
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



