ಕವನ

ಕವನ : ಚರಮಗೀತೆ

ಚರಮ ಗೀತೆ ದಮನದ ನೆರಳಿನಲಿ ನ್ಯಾಯಕ್ಕೆ ಹುಡುಕಾಟ ಸಾವು ನೋವಿನ ಲೆಕ್ಕ ಮಸಣ ಮನೆಯುದರ್ಪದ ತುಳಿತದಲಿ ಸತ್ಯಕ್ಕೆ ಹೋರಾಟ ಶೂಲಕ್ಕೇರುವ ಗೋಣು ನೂರು ನೂರುಹಿರಿಯಣ್ಣ ದೊಡ್ಡಣ್ಣ ಹೊಸಕಿ ಹಾಕಿದ ದ್ವೀಪ ಬದುಕು ದುಸ್ತರವಾತು ಹಗಲಿನಲಿ ಕೈ ಕೊಳವುಜಗವಿಂದು ನಲಗುತಿದೆ ಅಲ್ಲ ದುಷ್ಟರ ದಾಳಿ ಶಿಷ್ಟರ ಮೌನ ಎಲ್ಲೆಡೆ ಹರಡಿ ಕಣ್ಣೀರು ಕನಿಕರ ಹಿಂಸೆ ಕೊಲೆಗೆರಾಷ್ಟ್ರ ರಾಷ್ಟ್ರಗಳ ಯುದ್ಧ ವಾಯು ನೆಲೆ ಕ್ಷಿಪಣಿ ಸದ್ದು ಸಾಯುತಿದೆ ಜೀವ ಸೆಲೆ ಮರಣ ಚರಮ ಗೀತೆಡಾ ಶಶಿಕಾಂತ ಪಟ್ಟಣ...

ಕವನ : ಭಾವೈಕ್ಯತೆಯ ಗುಟ್ಟು

ಭಾವೈಕ್ಯದ ಗುಟ್ಟುಕಲ್ಲು ಮಣ್ಣಿಗೆ ಕಂತೆ ಕೊಟ್ಟು ಅದಕೆ ನೂರು ನಾಮವಿಟ್ಟು ಜಾತಿಯೆಂಬ ಕಳಸವಿಟ್ಟು ಮನುಜ ಪಥದ ದಾರಿ ಬಿಟ್ಟು ಮೌಲ್ಯ ತತ್ವಗಳನು ಸುಟ್ಟು ಮೃದು ಭಾವಗಳಿಗೆ ಪೆಟ್ಟು ದೂರ ತಳ್ಳು ಕ್ರೋಧ ಸಿಟ್ಟು ಬದುಕ ಬೇಡ ದ್ವೇಷ ನೆಟ್ಟು ಅಪ್ಪಿಕೋ ಎಲ್ಲರನ್ನೂ ಇಷ್ಟ ಪಟ್ಟು ಬೆಳೆಸು ಭಾವೈಕ್ಯದ ಗುಟ್ಟು ಸ್ನೇಹ ಪ್ರೀತಿಗೆ ಕೈ ಕಟ್ಟು ಸುಖದ ಯಶಕೆ ಬೆನ್ನ ತಟ್ಟು ________________________ಡಾ. ಗೀತಾ ದಾನಶೆಟ್ಟಿ ಬಾಗಲಕೋಟೆ

ಕವನ : ಬದುಕು ಕಟ್ಟಿಕೊಂಡೆ

ಬದುಕು ಕಟ್ಟಿಕೊಂಡೆನನ್ನ ಜೊತೆಗಿದ್ದವರೆ ನನ್ನನ್ನು ನೀರಿಗೆ ತಳ್ಳಿದರು ನಾನು ಅನಿವಾರ್ಯ ಈಜು ಕಲಿತು ಬಿಟ್ಟೆನಾನು ನಡೆವ ದಾರಿಗೆ ಅವರು ಎಸೆದರು ಕಲ್ಲು ದಿಮ್ಮಿ ಬಂಡೆಗಳು ನಾನು ಮನೆಯ ಕಟ್ಟಿಕೊಂಡೇನನ್ನನ್ನೊಬ್ಬನೇ ಮಾಡಿದರು ನಾನು ಅವರಿಂದ ದೂರವಾದೆ ನನಗೆ ನಾನು ಹತ್ತಿರವಾದೆ ನಾನು ಪ್ರೀತಿಸುವುದ ಕಲಿತುಬಿಟ್ಟೆಒಂಟಿತನ ನನಗೆ ಗುರು ನೋವು ಅಪಮಾನ ನನ್ನ ಪಠ್ಯ ಕ್ರಮಗಳು ನಾನು ಬದುಕು ಕಟ್ಟಿಕೊಂಡೆ __________________________ ಡಾ.ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

ಕವನ : ಹೊಸತೇನಿದೆ ?

ಹೊಸತೇನಿದೆ ?ಹೊಸತೇನಿದೆ ಏನಿದೆ ಹೊಸತು ಈ ಮುಂಜಾವಿನಲ್ಲಿ ಅದೇ ಹಳೆಯ ಬಗೆಹರಿಯದ ನೂರು ಕಂಟಕ ಆತಂಕಗಳು ರಾತ್ರಿ ಕಚ್ಚಿದ ಕಹಿ ಸುದ್ದಿ ನಿನ್ನೆಯನೇ ಮತ್ತೆ ಮತ್ತೆ ಬಿಚ್ಚಿಡುವ ಆ ನಾಳೆಯಲ್ಲಿ...? ಹೊಸತೇನಿದೆಹೊಸತೇನಿದೆ ಮುಂದುವರೆದ ಈ ನಿನ್ನೆಯಲ್ಲಿ? ಯುದ್ಧ ಸಾವು ನೋವು ಬಡತನ ಹಸಿವಿಗೆ ತತ್ತರಿಸಿದವರ ನಡುವೆ ಕುಡಿದು ತೂರಾಡುವವರ ಸಂಭ್ರಮಹೊಸತೇನಿದೆ ? ಬುದ್ಧ ಬಸವರ ಬೇಸಾಯವೇ ಮರೆತು ನಿತ್ಯ ಕೊಲೆ ಸುಲಿಗೆಯಲಿ ಸತ್ಯ ಹುಡುಕುವ ನಾಟಕ ಮತದಾನ ಮಾಡಲು ಜನರು ಹೊರಗೆ ಟಿವಿ ಪತ್ರಿಕೆ ನೆಲದ ಭವಿಷ್ಯ ಬರೆಯುತ್ತಿವೆಹೊಸತೇನಿದೆ? ಶಾಂತಿ ಸಮತೆ ಸಮಾಧಿಯಾಗಿ ದಮನಗಳು ಹಿಂಸೆಯೇ...

ಕವನ : ಕುವೆಂಪು ಹೇಗೆ ನಾ ಮರೆಯಲಿ

ಕುವೆಂಪು ಹೇಗೆ ನಾ ಮರೆಯಲಿವಸಂತ ಕಾಲ ನನ್ನೇ ನಾ ಮರೆವೆ ರಾಷ್ಟ್ರಕವಿಯು ಕುವೆಂಪು ನೆನಪು ಹೇಗೆ ನಾನು ಮರೆಯಲಿಕವಿಯೇ ನಿಮ್ಮ ಕವಿತೆಯಲ್ಲಿ ವಿಶ್ವ ಮಾನವ ಸಂದೇಶ ಇರುವಲ್ಲಿ ನಾಡ ಗೀತೆ ಬರೆದ ಕವಿಯ ಹೇಗೆ ನಾನು ಮರೆಯಲಿಮಳೆಗಾಲದ ದಟ್ಟ ಅನುಭವ ಕಟ್ಟಿ ಬರೆದರು ಕಥೆಗಳಲ್ಲಿ ಮಲೆನಾಡಿನ ಜನರ ಜೀವನ ಕಣ್ಣು ಮುಂದೆ ತೇಲಿ ಬರುತಲಿ ಹೇಗೆ ನಾನು ಮರೆಯಲಿದೃಶ್ಯ ಕಾವ್ಯ ರಮ್ಯ ನಾಟಕ ಜಲಗಾರ ರಕ್ತಾಕ್ಷಿ ರುದ್ರನಾಟಕ ಪುರಾಣ ಕಾವ್ಯ...

ಕವನ : ಹೊಸ ವರ್ಷದ ಕೋರಿಕೆ

ಹೊಸ ವರ್ಷದ ಕೋರಿಕೆ ಓ ಮನುಜ ಜೀವನ ಪೂರ ಹಣ, ಅಧಿಕಾರ, ಕೀರ್ತಿಗಳ ಹಿಂದೆ ಓಡಿದ್ದು ನಿನ್ನ ತಪ್ಪಲ್ಲ, ಪ್ರತಿ ಕ್ಷಣ ಬದಲಾಗುತ್ತಿರುವ ಜನಜೀವನ ಅಧಿಕಾರ, ಅಂತಸ್ತು, ಹಣದ ಬೆಲೆ ಕಟ್ಟುವುದು ವಾಸ್ತವ ದುರಂತಓಡಿದ್ದು ಸಾಕು ನಿನ್ನ ಸಾಕಿ - ಸಲಹಿದ ನಿನಗೆ ನೆಲೆ - ಬೆಲೆ ನೀಡಿದ ಸಮಾಜಕ್ಕೆ ಏನಾದರೂ ನೀಡು..ರಕ್ತದಾನ ಮಾಡು ನೂರಾರು ಜನರಿಗೆ ಪ್ರಾಣ - ತ್ರಾಣ ನೀಡು, ನೇತ್ರದಾನ ಮಾಡು ನಾಲ್ಕಾರು ಅಂಧರಿಗೆ ಬೆಳಕು ನೀಡುವ ತಾರೆಯಾಗು, ಅಂಗಾಂಗ ದಾನ ಮಾಡುನೂರಾರು ರೋಗಿಗಳಿಗೆ, ಆಶಕ್ತರಿಗೆ ಜೀವದಾನ...

ಕವನ : ಓ ಭಗವಂತ ನಾನೆಷ್ಟು ಪುಣ್ಯವಂತ

ಓ ಭಗವಂತ ನಾನೆಷ್ಟು ಪುಣ್ಯವಂತಹೃದಯವಂತರ ಮನೆಯಲಿ ಜನಿಸಿ ಪ್ರೀತಿಯ ಹೊದರಿನಲಿ ಬೆಳೆಸಿ ವಾತ್ಸಲ್ಯದ ಕಡಲಿನಲಿ ಮುಳುಗಿಸಿ ಬದುಕಿನ ದಾರಿ ತೋರಿಸುತಿಹೆ ಓ ಭಗವಂತ ನಾನೆಷ್ಟು ಪುಣ್ಯವಂತಕಷ್ಟ ಸುಖದಲಿ ಕೈ ಹಿಡಿದು ನಡೆಸುವ ಗೆಳೆಯರು ಸರಿದಾರಿ ತೋರುವ ಗುರುವರ್ಯರು ಭ್ರಾತೃತ್ವದ ಬಾಂಧವ್ಯಸುಖ ನೀಡುವ ಸಹೋದರ/ರಿಯರು ದಾಂಪತ್ಯದ ಗುಟ್ಟನರಿತು ಬಾಳುವ ಧರ್ಮಪತ್ನಿ ಎಲ್ಲಾ ಸುಖವ ದಯಪಾಲಿಸುತಿಹೆ ಓ ಭಗವಂತ ನಾನೆಷ್ಟು ಪುಣ್ಯವಂತಬಾಂದಳದಿ...

ಕವನ : ಮತ್ತೆ ಹುಟ್ಟಿ ಬಂದಿರುವೆ

ಮತ್ತೆ ಹುಟ್ಟಿ ಬಂದಿರುವೆ ಕೊರೆವ ಚಳಿ ಡಿಸೆಂಬರ್ ೨೫ ದಲಿತಸೋಗೆಯ ಬಿಲಗಳಲಿ ವಾಸವಾಗಿರುವ ಜೀಸಸ್ ಹುಟ್ಟಿ ಬಂದಿದ್ದಾನೆ ಮತ್ತೆ ಪುಟ್ಟ ಹುಡುಗ ಲಾಬೋ ಮಡಕೆಯಲ್ಲಿ ಹಿಡಿದು ತಂದ ಗಿಡದ ಟೊಂಗೆ ಹುಟ್ಟು ಹಬ್ಬದ ಸಂಕೇತವಾಯಿತು ಕ್ರಿಸ್ಮಸ್ ಟ್ರೀ ಗೋಲ್ಗೋಥಾ ಗುಡ್ಡದ ಮೇಲೆ ತೈಬಿರಿಯಸ್ ಚಕ್ರವರ್ತಿಯ ಆಜ್ಞೆಯಹೂದಿಗಳ ಪ್ರತ್ಯೇಕ ರಾಜ್ಯ ರೋಮ್ ಸಾಮ್ರಾಜ್ಯದ ವಿರುದ್ಧ ಆರೋಪ ಹೊಸ ಸಾಮ್ರಾಜ್ಯದ ಬಯಕೆ ಮುಗ್ಧ ಹೃದಯಕ್ಕೆ ಇಟ್ಟ ಬೆಂಕಿ ಮುಳ್ಳಿನ ಕಿರೀಟ ಹಬ್ಬಿಸಿದ ಸುಳ್ಳು ಬಡಿದ...

ಕವನ : ರೈತನಿವನು

ರೈತನಿವನು ರೈತನಿವನು ಮೊದಲ ತಾಯಿಯ ಧರೆಯ ಮಗನು ತಾಯ ಒಡಲಲ್ಲಿ ಬಿತ್ತಿ ಬೆಳೆವ ಬಲು ಸೊಗಡುಗಾರನು ವಸುಧೆಯೊಳು ಜನಿಸಿ ವಸುಧೆಯೊಳು ಸೇರುವ ಮಣ್ಣಿನ ಮಗನುಮಮತೆಯಿಂದಲೇ ಸಾಕಿ ಸಲವುವ ಜೋಡೆತ್ತು ಹೊಡೆವ ಕುಂಟೆಗೆ ತಲೆಯ ಕೊಟ್ಟವು ಭಾರ ಎಳೆಯುವ ಮೂಕ ಪ್ರಾಣಿಗಳುನೆಲವ ಹದಗೊಳಿಸಿ ನೀರು ಹಾಸಿ ಬೆಳೆವ ಬಂಗಾರ ಮಣ್ಣು ಕಣ ರಾಶಿ ಅವರೆ ಅಲಸಂದಿ ಜೋಳ ಗೋದಿ ಹೆಸರು ಕಡಲೆ ತೊಗರಿ ಮಡಿಕೆ ಶೇಂಗಾ ಹತ್ತಿ ಗೊಂಜಾಳ ರಾಗಿ ನಮ್ಮ ರೈತನ ಬದುಕು...

ಕವನ : ದೂರಾದ ಚೆಲುವೆ

ದೂರಾದ ಚೆಲುವೆ ಮನಸಿನಾಳದಲಿ ಬೇರುಬಿಟ್ಟು ಹೃದಯದಲಿ ಆಸೆಯ ಹಂದರ ಹಚ್ಚಿ ಕನಸು ಕೈಗೂಡುವ ಮುನ್ನ ಗಗನ ಕುಸುಮವಾಗಿ ಚಿತ್ತಚೋರನಿಂದ ದೂರವಾದ ಒಲವೇ ನಿನ್ನಿನಿಯನ ಬದುಕು ಬೇಡವಾಯಿತೇ?ಗಾಳಿ ಬೀಸಿದಾಗೊಮ್ಮೆ ನೆನಪು ಉಮ್ಮಳಿಸಿ ಬಿಕ್ಕುತಿದೆ ಮನ ಮೋಡ ಕವಿದಾಗೆಲ್ಲಾ ನೆನಪಾಗುತಿದೆ ಮೌನ ಸಾನ್ನಿಧ್ಯ ಬಯಸಿದೆ ಹೃದಯ ಹಗುರಾಗಲು ನಿನ್ನೆಯ ನೆನಪಿಗಿಂತ ಬಲು ಕಷ್ಟವಿಂದು ತಾಳಲಾರೆ ವಿರಹ ಕಣ್ಣಂಚಿನಲಿ ಜಾರುತಿದೆ ಬಿಂದು ಅಂಬರದ ಹೂವಿಗೆ ಭುವಿಯ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group