ಕವನ

ಕವನ: ಅಕ್ಷಯ ತೃತೀಯ

ಅಕ್ಷಯ ತೃತೀಯ ಕ್ಷಯವಾಗದ ಪಾತ್ರೆಯ ಪಡೆದ ದ್ರೌಪದಿ ಕೃಷ್ಣನ ಅನುಗ್ರಹದ ಅಕ್ಷಯ ತೃತೀಯ ಸವಿ ಶುಭದಿನವಾಯಿತು ಭಗೀರಥ ಪ್ರಯತ್ನದ ಫಲದಿ ಭುವಿಗವತರಿಸಿದಳು ಗಂಗೆ ಪವಿತ್ರ ಪಾವನವಾಯಿತು ಭರತಖಂಡ ಅಕ್ಷಯ ತೃತಿಯ ದಿನದಿ ಕ್ಷಯವಾಗದ ಮಹತ್ವದ ಕಾರ್ಯವು ವೈಶಾಖ ಮಾಸದ ಶುಕ್ಲ ಪಕ್ಷದ ಶುಭದಿನವು ಅಕ್ಷಯ ತೃತೀಯ ಜಗಜ್ಯೋತಿ ಬಸವೇಶ್ವರರ ಜನುಮ ದಿನದ ಸಡಗರದ ದಿನ ಶ್ರೇಷ್ಠವಾದ ಕಾರ್ಯಗಳ ಮಾಡಿರಿ ಈ ದಿನ ಎನುವ ಹಿರಿಯರ ವಾಣಿಯಂತೆ ಮಹತ್ವದ ದಿನವಾಗಿಹದು ಅಕ್ಷಯ ತೃತೀಯ ಮಹಾತ್ಮರರ ಜನ್ಮದಿನವು ಸಕಲ ಕಾರ್ಯಕೆ ಶುಭ ದಿನವು ಬಂಗಾರ ಖರೀದಿಗೆ ಶುಭವು ಶುಭ ಕಾರ್ಯವ ಈ...

ಕವನ: ಸೈರಿಸು ಮನವೇ

ಸೈರಿಸು ಮನವೇ ಸೈರಿಸು ಮನವೇ ಸೈರಿಸು ಜೀವನದ ಜೋಕಾಲಿ ಜೀಕು ನೀ ಸುವ್ವಿ ಸುವ್ವಾಲಿ ಇರಲಿ ಮೊದಲು ನಿಧಾನ ಸಿಗುವುದು ನಿನಗೆ ಸಮಾಧಾನ ಅವಸರವೇಕೆ ಮನವೇ ತಡೆದುಕೊಂಡಷ್ಟು ಇದೆ ಸುಖಕರ ತಣ್ಣನೆಯ ಗಾಳಿ ಹಿತಕರ ನೀ ಜೊತೆಗಿದ್ದರೆ ಎಲ್ಲಿಯ ಭಯ ಇರಲಿ ನಮ್ಮ ಮೇಲೆ ದೇವರ ಅಭಯ ಜೊತೆಯಲ್ಲಿಯೇ ಗಗನಕ್ಕೆರುವಾ ಬಾ ಬಾರ ಅಲ್ಲಿದೆ ನೋಡು ಒಲವಿನ ಚಿತ್ತಾರ ಶುಭ್ರ ಬಿಳಿ ಮೋಡಗಳ ನೀಲಾಕಾಶ ಮತ್ತೆ ಮತ್ತೆ ಸಿಗದು ಈ ಅವಕಾಶ ಸೈರಿಸು ಮನವೇ...

ಕವನ: ಮಣ್ಣು ತೂರುತ್ತೇವೆ ನಾವು ಮಣ್ಣು ತೂರುತ್ತೇವೆ

ಮಣ್ಣು ತೂರುತ್ತೇವೆ ನಾವು ಮಣ್ಣು ತೂರುತ್ತೇವೆ ಜಾತಿ ಗೋಡೆಯ ಮೇಲೆ ಪ್ರೀತಿ ಹಣತೆಯ ಹಚ್ಚಿ ಎಣ್ಣೆಯಲ್ಲಿ ನೀರು ಬೆರೆಸಿದವರ ಮೇಲೆ ಮಣ್ಣು ತೂರುತ್ತೇವೆ ನಾವು, ಮಣ್ಣು ತೂರುತ್ತೇವೆ. ಗಡಸು ಧ್ವನಿಯಲ್ಲಿ ಗಂಡಸಾಗಿ ಗುಡಿಸಲಿನ ಬೆಂಕಿಯಲ್ಲಿ ಚಳಿ ಕಾಯಿಸಿಕೊಂಡವರ ಮೇಲೆ ಮಣ್ಣು ತೂರುತ್ತೇವೆ ನಾವು ಮಣ್ಣು ತೂರುತ್ತೇವೆ. ಪಡಿ ಅಕ್ಕಿ, ಅಚ್ಚು ಬೆಲ್ಲದ ಬದಲಾಗಿ ರೂಪಾಲಿಯ ರೂಪಕ್ಕೆ ರೂಪಾಯಿ ಬೇಡಿಕೆ...

ಕವನ: ದುಂಡುಮಲ್ಲಿಗೆ

ದುಂಡುಮಲ್ಲಿಗೆ ಅರಳಲು ಬೇಕು ನಿನಗೆ ಕಾಲ ಬೇಸಿಗೆ. ಮುಂಜಾನೆ ಅರಳುವೆ ನೀ ಮೆಲ್ಲಗೆ. ಕಾಣುವೆ ನೋಡಲು ನೀ ಬೆಳ್ಳಗೆ. ತೋರಿಸುವೆ ನಿನ್ನ ಮೊಗದಲ್ಲಿ ಸದಾ ಮುಗುಳ್ನಗೆ. ಮುಂಜಾನೆ ಅರಳಿ ಸಾಯಂಕಾಲ ಬಾಡಿದರೂ ನಿನಗಿಲ್ಲ ಯಾವ ಹಗೆ. ಹೇಳು ನೀ ಏರುವೆ ಯಾರ ಮುಡಿಗೆ. ಮುತ್ತೈದೆಯರ ಮುಡಿಗೆ ಅಥವಾ ದೇವರ ಮುಡಿಗೆ. ಕಲಿಸು ನಮಗೆ ನಿನ್ನೀ ಸಾರ್ಥಕ ಜೀವನದ ಬಗೆ.ಉಮಾದೇವಿ. ಯು. ತೋಟಗಿ. ಸ. ಶಿ. ಸ. ಕ. ಹಿ. ಪ್ರಾ....

ಕವನ: ಕಾಲ್ಗೆಜ್ಜೆ

ಕಾಲ್ಗೆಜ್ಜೆ ಮನೆಯ ಒಳಗೆ ಹೊರಗೆ ಮನದ ಕೋಣೆಯೊಳಗೆ ಸದ್ದು ಮಾಡುತ್ತಿದೆ ಏನ್ ಒಡತಿಯ ಕಾಲ್ಗೆಜ್ಜೆ... ಮಾಧುರ್ಯದ ಸವಿಗಾನ ಮನೆಯ ಒಳಗೆ ಹೊರಗೆ ಮನದ ಕೋಣೆಯೊಳಗೆ ಸದ್ದು ಮಾಡುತ್ತಿದೆ ಏನ್ ಕಂದನ ಕಾಲ್ಗೆಜ್ಜೆ... ತಂಪನೆಯ ಸುಳಿಗಾಳಿ ಸೂಸುತ್ತಿದೆ ಮನೆಯ ಒಳಗೆ ಹೊರಗೆ ಮನದ ಕೋಣೆಯೊಳಗೆ ಸದ್ದು ಮಾಡುತ್ತಿದೆ ನನ್ ಮಡದಿಯ ಕಂದನ ಕಾಲ್ಗೆಜ್ಜೆ... ಬಾಣ ಬಿರುಸಿನ ಮಳೆಯು ಸೀಳುತ್ತಿದೆ ರಸ್ತೆಯ ಹಾದಿಯಲ್ಲಿ ಮಲೆನಾಡಿನ ಮಡಿಲಲ್ಲಿ ಮನೆಯ ಒಳಗೆ ಹೊರಗೆ ಮನದ ಕೋಣೆಯೊಳಗೆ ಸದ್ದು ಮಾಡುತ್ತಿದೆ ಕಾಲ್ಗೆಜ್ಜೆ... ಬಾಳ ಸಂಗಾತಿ ನೀಡಿಹಳು ಏನ್ ಬದುಕಿಗೆ ಬಂಗಾರದ ಕಳಶ ಮನೆಯ ಒಳಗೆ ಹೊರಗೆ ಮನದ ಕೋಣೆಯೊಳಗೆ ಸದ್ದು ಮಾಡುತ್ತಿದೆ ನನ್ ಕೂಸಿನ ಕಾಲ್ಗೆಜ್ಜೆ...ತೀರ್ಥಹಳ್ಳಿ ಅನಂತ, ಕಲ್ಲಾಪುರ

ಕವನ: ಹಣ್ಣುಗಳರಾಜ

ಹಣ್ಣುಗಳರಾಜ ಮರದಲಿ ಜೋತು ಬಿದ್ದಿರುವ ಹಣ್ಣು/ ಹಣ್ಣಿನ ಮೇಲೆ ಎಲ್ಲರ ಕಣ್ಣು/ ಹಸಿರು,ತಿಳಿಗೆಂಪು,ಹಳದಿ ಬಣ್ಣದ ಹಣ್ಣು/ ಎಷ್ಟು ತಿಂದರೂ ಬೇಕೆನಿಸುವ ರಸಪೂರಿಹಣ್ಣು//1// ಹಣ್ಣುಗಳ ರಾಜಾ ಮಾವಿನ ಹಣ್ಣು/ ಬೇಸಿಗೆಗೆ ಸಿಗುವುದು ಭರಪೂರ ಹಣ್ಣು/ ಪೇಟೆಯ ತುಂಬ ಘಮಘಮ ಹಣ್ಣು/ ವ್ಯಾಪಾರಿಗೆ ಲಾಭವ ತರುವ ಹಣ್ಣು//2// ಹಲವು ತಳಿಯ ಮಾವಿನ ಹಣ್ಣು/ ಗೊಜ್ಜು,ಚೆಟ್ನಿ,ಉಪ್ಪಿನಕಾಯಿಗೆ ಹಣ್ಣು/ ಜಾಮ್ ಜೆಲ್ಲಿ ಜ್ಯೂಸಿಗೆ ಹಣ್ಣು/ ಮಾರುಕಟ್ಟೆಯಲಿ ಭರ್ಜರಿ ಬೇಡಿಕೆಯ ಹಣ್ಣು//3// ದೇಶ ವಿದೇಶದಲಿ ಬೇಡಿಕೆ ಹಣ್ಣು/ ಉದ್ಯೋಗ ಮೇಳ ವ್ಯಾಪಾರ ಸೃಷ್ಟಿಸಿದ...

ಕವನ: ಚೈತ್ರಮಾಸ

ಚೈತ್ರಮಾಸ ಸಂಸ್ಕೃತಿಯ ಸಾರಿದ ಹೊಸ ವರುಷದ ಹರಿಕಾರ ಯುಗಾದಿಯ ಸಿಂಗಾರ ಚೈತ್ರಮಾಸದ ಚಿತ್ತಾರ...... ತಳಿರು ತೋರಣದ ಸಿಂಗಾರ ಮನೆಯ ಬಾಗಿಲಿಗೆ ಬಂಗಾರ ರಂಗೋಲಿ ಬಣ್ಣದ ಚಿತ್ತಾರ ಎಲ್ಲಿಯೂ ಹಬ್ಬದ ಸಡಗರ...... ಕೋಗಿಲೆಯ ಇಂಪು ಮಾವಿನ ತಂಪು ಬೇವಿನ ಕಂಪು ಚಿಗುರಲೆಯ ಸಡಗರವು..... ಮಾವು ಬೇವಿನ ತಳಿರು ತೋರಣ ಹಬ್ಬದ ದಿಬ್ಬಣ ಎಲ್ಲರ ಮನೆಯಲ್ಲಿ ಹೂರಣ.... ಮಾಸದ ನೆನಪುಗಳು ಇಂದಿಗೆ ಅಳಿಸಿ ಹೋಗಲಿ ಎಂದಿಗೂ ನವಮಾಸದ ಚಿಗುರಿಗೆ ನಗೆಯ ಹೂವಿನ ಸ್ವಾಗತಕ್ಕೆ.......ರೇಣುಕ.ಶಿವಪ್ಪ ಶಿವಮೊಗ್ಗ

ಕವನ: ಮೊರೆ ಕೇಳು ಮಹಾದೇವ

ಮೊರೆ ಕೇಳು ಮಹಾದೇವ ವರುಷದ ಮೊದಲ ಹಬ್ಬ ಯುಗಾದಿ ತರಲಿ ನಮಗೆಲ್ಲ ಹರುಷ ಅನುದಿನದಿ ಕೋಪ ತಾಪ ದ್ವೇಷ ಅಸೂಯೆ ತನುಮನಗಳಿಂದ ‌ ಮಹಾದೇವ|| ಚಿಗುರೆಲೆಗಳು ಚಿಗುರುವಂತೆ ತರುಲತೆಗಳು ಬೆಳೆಯುವಂತೆ ನವ ಯುಗದಿ ನವ ತರುಣರು ಸತ್ಕಾರ್ಯಗಳಲಿ ತೊಡಗಲಿ ಮಹಾದೇವ|| ಮಾವಿನ ಸಿಹಿ ಬೇವಿನ ಕಹಿ ಜೀವನದ ಸಮರಸಕೆ ಮಾದರಿ ಸಿಹಿಕಹಿಯ ಸಮಾನತೆಯಲಿ ಸ್ವೀಕರಿಸುವಂತೆ ಮಾಡು ಮಹಾದೇವ || ದುಶ್ಚಟಗಳು ದೂರಾಗಲಿ ಕಷ್ಟಗಳು ಮಾಯವಾಗಲಿ ಹೊಸ ವರುಷಕೆ ಹುಮ್ಮಸ್ಸಿನಲಿ ದುಡಿದುಣ್ಣುವ ಶಕ್ತಿ ನೀಡು ಮಹಾದೇವ|| ಕಾಲ ಸದ್ದಿಲ್ಲದೆ ಸರಿಯುತಿದೆ ಸಾಧನೆ...

ಕವನ: ಆತ್ಮ ವಿಮರ್ಶೆ ಆಗಬೇಕಿದೆ

ಆತ್ಮ ವಿಮರ್ಶೆ ಆಗಬೇಕಿದೆ ಕವನ ಬರೆಯುವ ಭರದಲ್ಲಿ ಬುರುಡೆಯ ಬರಡನ್ನೂ ಭುವನವನವೆಂದು ಬಿಂಬಿಸುತ್ತೇವೆ ಇದು ನಮಗೆ ಸರಿಯೇ. ಬೂಟಿನ ಬತ್ತಳಿಕೆಯ ಮಿತಿ ಅರಿಯದೆ ಬೂಟಾಟಿಕೆಯಲ್ಲಿ ವರ್ಣಿಸಿ ಬರೆಯುತ್ತೇವೆ ಇದು ನಮಗೆ ಸರಿಯೇ. ರೂಪಕಗಳ ಬಣ್ಣಿಸುವ ತರಾತುರಿಯಲ್ಲಿ ಅಂತರಂಗ ಅರಿಯದೆ ಬಾಹ್ಯಾಂಶಕ್ಕೆ ಮಣೆ ಹಾಕುವುದು ಇದು ನಮಗೆ ಸರಿಯೇ. ಹಳ್ಳದ ದಂಡೆಯ ಮೇಲೆ ಕುಳಿತು ನೀರಿನ ಆಳಕ್ಕೆ ಕಲ್ಪನೆಯ ಮೇಳೈಸಿ ಪರಾಮರ್ಶಿಸದೆ...

ರಂಗಿನ ಹಬ್ಬದ ಕವನಗಳು

(ಸಾವಿತ್ರಿ ಕಮಲಾಪೂರ, ಶಿವಯೋಗಿ ಕುಸುಗಲ್ಲ, ಪುಷ್ಪಾವತಿ, ಡಾ.ಜಯಾನಂದ, ಸಂತೋಷ ಬಿದರಗಡ್ಡೆ, ಗಿರಿಜಾ ಹಿರೇಮಠ)ಆಡೋಣ ಬಾ ಬಣ್ಣ ತಿಳಿಯೋಣ ಬಾ ಆಡೋಣ ಬಾ ನಲಿಯೋಣ ಬಾ ಗೆಳೆಯ ಬಣ್ಣ ಬಣ್ಣದಲಿ ಮುಳುಗಿ ಏಳೋಣ ಬಾ ಕೂಡಿ ನಲಿಯೋಣ ಬಾ ಬಾಳಿನ ಲಗೋರಿ ಕಟ್ಟಿ ಹೊಡೆಯೋಣ ಬಾ ಗುರಿ ಮುಟ್ಟೋಣ ಬಾ ಹೃದಯ ತಟ್ಟೋಣ ಬಾ ಆಟ ಆಡೋಣ ಬಾ ಗೋಲಿ ಎಸೆಯೋಣ ಬಾ ಬಣ್ಣ ಕಳೊಚೋಣ ಬಾ ಮುಖವಾಡ ಬಯಲು ಮಾಡೋಣ ಬಾ ಹೋಗೋಣ ಬಾ ಕೇಕೆ ಹಾಕೋಣ ಬಾ ಹಸ್ತ ಮೂಡಿಸೋಣ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group