ಕವನ
ಸಹ್ಶಾದ್ರಿ
ಸಹ್ಶಾದ್ರಿ ಶ್ರೇಣಿ ಮುಗಿಲಿಗೆ ಏಣಿ
ಹಸಿರು ಹೆಮ್ಮರ ಛತ್ರಿ ಚಾಮರ
ದಟ್ಟ ಕಾನನ ಸುಂದರ ಗಿರಿ ಕಂದರ
ಅಲೆಗಳ ಕಲರವ ಅಂದದ ಕಡಲ ತೀರ
ಸಾಹಸದ ಏರಿಳಿವಿನ ರಹದಾರಿ
ಹೆಜ್ಜೆ ಹೆಜ್ಜೆಗೂ ತಿರುವು-ಮುರುವು
ನಳನಳಿಸುವ ತರು-ಲತೆಗಳ ರಿಂಗಣ
ಹರಿದ್ವರ್ಣ ಹೃದಯಂಗಮ ಅಂಗಣ
ಶ್ರೇಣಿ ಶ್ರೇಣಿ ಶಿಖರಗಳ ಅಂದ ಚೆಂದ
ಪಾತಾಳಕೆ ಇಳಿವ ಕೊಳ್ಳ ರುದ್ರ-ರಮಣೀಯ
ಧುಮ್ಮಿಕ್ಕುವ ಝರಿ ಜಲಪಾತಗಳು
ಲಗುಬಗೆಯಿಂದೋಡುವ ದಭೆದಭೆಗಳು
ವರ್ಷಧಾರೆಗೆ ಉಬ್ಬಿ ಓಡೋಡುತಲಿ
ಕಣ್ದುಂಬುವ ಸಂತಸದ ಜಲಧಾರೆ
ಕಂಗಳಿಗೆ ಕಾನನದ ನಿಬಿಡ...
ಕವನ
ಹೋಗುವ ದಾರಿಯಲಿ ಬೆಕ್ಕು ಬಂದರೆ ಅಪಶಕುನ ಅಂತೀವಿ., ರಾತ್ರಿ ವೇಳೆ
ಶಕುನದ ಹಕ್ಕಿ ಕೂಗಿದರೆ,
ಭಯಪಡುತೀವಿ
ನಾವುಗಳೇ ಹಿಂಗ್ಯಾಕೆ?
ಗಂಡು ಹೆಣ್ಣು ಸೇರುವ ಹೊತ್ತಲಿ ಘಳಿಗೆ ಮೂಹೂರ್ತ ನೋಡ್ತೀವಿ ಸೇರುವ ಸಮಯ ಸರಿಯಿರದಿರೆ, ಅಪಶಕುನ ಅಂತೀವಿ
ರಾಹುಕಾಲ,ಗುಳಿಕಕಾಲ ಅಂತಾ,ಪರದಾಡ್ತೀವಿ ನಾವುಗಳೇ ಹಿಂಗ್ಯಾಕ?
ಮೂರು ದಿನದ ಬದುಕಿನಲಿ ನಾನು ನನ್ನದು ಅಂತೀವಿ
ಮರಣಿಸಿದಾಗ
ಎಲ್ಲವನೂ ಬಿಟ್ಟು ಹೋಗ್ತೀವಿ ನೇರವಾಗಿ ನುಡಿಯುವವರೆದುರು
ಉದಾಸೀನವಾಗ್ತೀವಿ
ನಯವಂಚಕರೆದುರು
ಹಲ್ಕಿರಿದು ಸಾಗ್ತೀವಿ,
ನಾವುಗಳೇ ಹಿಂಗ್ಯಾಕ ?
ಬೆಳ್ಳಿ ಬಂಗಾರದ
ವ್ಯಾಮೋಹದಲಿ
ಅವರಿವರಿಗೆ ಮೋಸ...
ಕವನ
ತಾರತಮ್ಯ
ಅಳುವ ಕಂದನಾ
ಧ್ವನಿಯು ಕೇಳಿತು
ತಾಯಿಯ ಮೊಗವು ಅರಳಿತ್ತು
ಹೆಣ್ಣೋ ಗಂಡೋ
ಭೇದವೆ ಇರದು
ತಾಯಿಯ ಮನದಲಿ ಕಿಂಚಿತ್ತೂ ||೧||
ಮನೆಯ ಹಿರಿಯರಿಗೆ
ಮೊಮ್ಮಗ ಬೇಕು
ಕುಲ ದೀಪಕನು ಬೇಕಿತ್ತು
ಬಾಲ ಗೋಪಾಲನೇ
ಬಂದಿಹನೆನ್ನುತ
ಕುಟುಂಬ ಸ್ವಾಗತ ಕೋರಿತ್ತು ||೨||
ವಠಾರ ತುಂಬಾ
ಪೇಢೆಯ ಹಂಚುತ
ಸಂತಸ ಪಟ್ಟರು ಜನರೆಲ್ಲ
ದೂರದಿ ಬಾಲೆ
ಅವರನೇ ನೋಡಲು
ಸಂಭ್ರಮವೇಕೆ ತಿಳಿದಿಲ್ಲ ||೩||
ಮನೆಯ ಭಾಗ್ಯವದು
ತೆರೆಯಿತು ಎನ್ನುತ
ಅಜ್ಜಿಯು ಭರದಲಿ ಸಾಗಿಹಳು
ಬಾಲೆಯ ಕರೆದು
ತಮ್ಮನ ತೋರುತಾ
ಹೇಗಿಹನೆಂದು ಕೇಳಿಹಳು ||೪|
ದಿನೆ ದಿನೆ ಅವನದೆ
ಸಡಗರ ಹೆಚ್ಚಿದೆ
ಎನ್ನುತ ಬಾಲೆ ಕೊರಗಿಹಳು
ಅಜ್ಜಿಯು...
ಕವನ
ದೇಶ-ಭಾಷೆ
ನಮ್ಮ ದೇಶ ಭಾರತ
ನಮ್ಮ ಭಾಷೆ ಕನ್ನಡ
ಭಾರತ ಮಾತಾ ಕಿ ಜೈ !
ಕನ್ನಡಾಂಬೆಗೂ ಜೈ !
ದೇಶ ಭಾಷೆ ನಮ್ಮ ಬದುಕು
ನಮಗದು ಬೇಕೇ ಬೇಕು
ಮತ್ತೆ ತಗಾದೆ ತೆಗೆಯುವದ್ಶಾಕೆ
ಹಿಂದಿ ಹೇರುವ ಬಾಬೂಗಳೆ
ನಮ್ಮದು ಒಂದಷ್ಟು ನೀವೂ ಕೇಳಿ
ಕನ್ನಡವೂ ರಾಷ್ಟ್ರೀಯ ಭಾಷೆ
ನಮ್ಮ ಭಾಷೆಗಿದೆ ಪರಿಪಕ್ವತೆ.
ಒಳ ಹೊರ ಆಂದ ಚಂದ
ಕೇಳಬೇಕೆ ಅದೇನು ಆನಂದ
ಪ್ರಾಚೀನದ ಪಾವಿತ್ರ್ಶ ಹೊಂದಿ
ಶ್ರೀಗಂಧ ಲೇಪಿತ, ಪರಿಮಳ ಭೂಷಿತ
ಶಾಸ್ತ್ರೀಯ ಜಾತ ನಮ್ಮ...
ಕವನ
ಹೂವ ಮನಸಿನ ದೀಪಾವಳಿ
ದೀಪ ಬೆಳಗುವ ಪಾಪ ತೊಳೆಯುವ
ಹಬ್ಬ ದೀಪಾವಳಿಯಿದು/ಪ
ಕೋಪ ಮರೆಸುವ ತಾಪ ಕಳೆಯುವ
ಹಬ್ಬ ದೀಪಾವಳಿಯಿದು//ಅ.ಪ
ಮಕ್ಕಳೆಲ್ಲರು ಸೇರಿ ಹಾಡುತ
ಕುಡಿಕೆ ಪಟಾಕಿ ಸಿಡಿಸುವ
ನಕ್ಕುನಲಿಯುತ ಲಲನೆಯರೆಲ್ಲರು
ತೈಲ ದೀಪವ ಬೆಳಗುವ/೧
ಹೆಂಗಳೆಯರಿದೊ ಮನೆಯ ಮುಂದೆ
ರಂಗವಲ್ಲಿಯ ಬಿಡಿಸುವ
ಮಂಗಳಾರುತಿ ಬೆಳಗಿ ಹಟ್ಟಿಯ
ಲಕ್ಕದವ್ವನ ಬೇಡುವ/೨
ಎತ್ತು ಹಸುಗಳ ಸಿಂಗರಿಸುತಲಿ
ಕರುವ ಹೆಜ್ಜೆಯ ಬಿಡಿಸುವ
ಮತ್ತೆ ಸಿಹಿಯನು ಸವಿಯುತೆಲ್ಲರು
ನೋವನೆಲ್ಲವ ಮರೆಯುವ/೩
ಬಂಧು ಬಾಂಧವರೆಲ್ಲಸೇರುತ
ಬೆಳಗಿ ನಂದಾ ದೀಪವ
ಕೊಂದುಕಲ್ಮಶ ಭಾವಶುದ್ಧದಿ
ಹೂವ ಮನಸಿನ ರೂಪವೇ/೪ಶ್ರೀಮತಿ ಬಸಮ್ಮ ಏಗನಗೌಡ್ರ
ಶಿಕ್ಷಕಿ...
ಕವನ
ಸಾರ್ಥ
ಸ್ವಾಭಿಮಾನಿಗೆ ಯಾವ ನಿರೀಕ್ಷೆ
ಸರ್ವ ದಿಕ್ಕಿನಿಂದಲೂ ಉಪೇಕ್ಷೆ
ಹಸಿದವ ಉಂಡವ ಉಭಯತ
ರಲ್ಲಿ ಸಿಲುಕಿ ಕೌತುಕದಿ ಕಣ್ಬಿಟ್ಟವ
ಯಾರ ಯಾವ ಪರಿಗಣನೆಗೆ
ಬಾರದ ವ್ಶಕ್ತಿತ್ವ ಭಾವಜೀವ
ಅತ್ತ ಹಸಿದವ ಇತ್ತ ತುಂಬಿದವ
ನೆತ್ತಿಗೇರಿದವರ ಮಧ್ಶ ಒದ್ದಾಡುವವ
ಯಾರದೆ ಕೊಂಕು ಕುಚೇಷ್ಟೆಗೆ
ತಲೆ ಬಿಸಿಯಿಲ್ಲದೆ ಮಿಡಿಯುವ
ಯಾರ ಕಾಳಜಿಗೂ ದಕ್ಕದವ
ಯಾರ ಗಣನೆಗೂ ಸಿಕ್ಕದವ
ಹೆಳವ ಮುಳುವ ಎಡ ಬಲ ಸಪ್ರೇಮ
ಎಗ್ಗಿಲ್ಲದ ಗೌಜಿಲ್ಲದ ಬದುಕಿನ ಮಮ
ತೋಳಬಲ ಸಾಮರ್ಥ್ಮದ ದಿಟ ಬದುಕು
ಕಾಯಕವೆ ಕೈಲಾಸವೆಂದ ನಿಜ...
ಕವನ
ಉತ್ಸವ-ನಿತ್ಯೋತ್ಸವ
ನಮ್ಮ ಹೆಮ್ಮೆಯ ಕರುನಾಡು
ನಿತ್ಯ ಉತ್ಸವಗಳ ಬೀಡು
ಸವಿನುಡಿಯ ಸಾಂಸ್ಕೃತಿಕ ನೆಲೆನಾಡು
ಶಿಲ್ಪಕಲಾ ವೈಭವದಿ ಬೇಲೂರು-ಹಳೇಬೀಡು.
ಬಾದಾಮಿಯಲಿ ಚಾಲುಕ್ಯೋತ್ಸವ
ವಿಜಯನಗರದೊಳು ಹಂಪಿ ಉತ್ಸವ
ಪಟ್ಟದಕಲ್ಲಿನೊಳು ನವರಸಪುರ ಉತ್ಸವ
ಬನವಾಸಿಯೊಳು ಕದಂಬೋತ್ಸವ
ವಿಜಯದುಂಧುಬಿಯ ನವರಾತ್ರಿ ಉತ್ಸವವೀರ ಹೋರಾಟ ಚರಿತೆಯ ಕಿತ್ತೂರು ಉತ್ಸವ
ಸಂಭ್ರಮ ಸಡಗರದೊಳು ರಾಜ್ಯೋತ್ಸವ
ಚಿತ್ರೋತ್ಸವ ನಾಟಕೋತ್ಸವ ಕಾರ್ತಿಕೋತ್ಸವ
ಕವಿ-ಪುಂಗವರ ಹೆಸರೊಳು ಜನ್ಮ ಶತಮಾನೋತ್ಸವ
ದೇವಾಲಯಗಳೊಳು ಲಕ್ಷದೀಪೋತ್ಸವ
ವಿಶ್ವವಿದ್ಯಾಲಯಗಳೊಳು ಘಟಿಕೋತ್ಸವ
ಮನೆ-ಮನಗಳಲಿ ಹಬ್ಬಹರಿದಿನಗಳುತ್ಸವ
ಸಡಗರ ಸಂತಸದಿ ಉತ್ಸವ !
ಭಾಷೆಯ ಹೆಸರೊಳು ಜಾಗೃತಿ ಉತ್ಸವ
ಚೈತನ್ಯ ತುಂಬಿದ ಯಾಂತ್ರಿಕ...
ಕವನ
ಹೆಮ್ಮೆಯ ಕರುನಾಡು
ಕರುನಾಡು ಕರುನಾಡು
ಹೆಮ್ಮೆಯ ಸಿರಿನಾಡು
ಗಿರಿ ಗಂಧದ ಹಸಿರುಸಿರಲಿ
ಮೆರೆಯುವ ಸಿರಿನಾಡು //ಪ//
ನದಿ ಪರ್ವತ ಝರಿ ತೊರೆಗಳು ಹರಿಯುವಾ
ಸುಂದರ ಬೆಟ್ಟ-ಗುಡ್ಡಗಳ ಎಲ್ಲೆಲ್ಲೂ ಹಸಿರು
ಹೊತ್ತು ಮೆರೆಯುವ ಗಂಧದಾ ನಾಡು
ಉಸಿರ ನೀಡುವಾ ನಾಡಿದು ನಮ್ಮದು//
ಕೃಷ್ಣದೇವರಾಯ ಪುಲಿಕೇಶಿ ವಿಷ್ಣುವರ್ಧನ
ಮಯೂರರಂತ ಶೂರ ಧೀರರಾಳಿದ ನಾಡು
ಸಂಪದ್ಭರಿತ ಮುತ್ತುರತ್ನ ಅಳೆದ ಸಿರಿನಾಡು
ಯುಗ ಯುಗದಲ್ಲೂ ಮೆರೆದ ಕನ್ನಡ ನಾಡು//
ಶ್ರೀಗಂಧ ತೇಗು ಹೊನ್ನೆ ಬೀಟೆ
ನೀಲಗಿರಿ ಬೆಟ್ಟಗಳ ಪರಿಮಳ ಹರಡುತ
ಎಲ್ಲರ...
ಕವನ
ಕನ್ನಡ ಕವನ
ಕೈ ಹಿಡಿದ್ ಕರಕೊಂಡ್ ಹೋಗತೈತಿ
ಕನ್ನಡದ ಕವನ |ಎಲ್ಲಿಗಿ ಅಂತೀರಿ |
ವರ್ಣಮಾಲೆ ವ್ಯಾಕರಣ ಪದಸಂಪತ್ತಿನಿಂದ ವೈಭೋವೊಪೇತದೆಡೆಗೆ |
ವೇದಾಂತ ಉಪನಿಷತ್ತಿನ ಹೊಸತನದ ಅರುಣೋದಯದೆಡೆಗೆ
ಕಾಯಕದಿಂದ ಕೈಲಾಸದೆಡೆಗೆ
ಕನವರಿಕೆಯಿಂದ ಕಮಾಯಿವರೆಗೆ |
ಸೃಜನದಿಂದ ಸ್ವೋಪಜ್ಞತೆಯೆಡೆಗೆ
ವಿವೇಕದಿಂದ ವೈಚಾರಿಕತೆಯೆಡೆಗೆ ||
ಕೈಹಿಡಿದ್ ಕರಕೊಂಡ ಹೋಗತೈತಿ
ಕನ್ನಡ ಕವನ ಎಲ್ಲಿಗಿ ಅಂತೀರಿ|
ಕವಿರಾಜಮಾರ್ಗದ ಕಾವೇರಿಯಿಂದ
ಗೋದಾವರಿಯ ವಿಸ್ತಾರದೆಡೆಗೆ
ಶರಣ ಚಳವಳಿಯ ವಚನ ಸಾಹಿತ್ಯದಿಂದ ಮೌಢ್ಯ,ಮೂಢನಂಬಿಕೆಯ ಬದಲಾವಣೆಯದೆಡೆಗೆ ||
ಕೈಹಿಡಿದ್ ಕರಕೊಂಡ್ ಹೋಗತೈತಿ ಕನ್ನಡ ಕವನ...
ಕವನ
ಮುನ್ನ ಮುನ್ನ
ಆಯ್ಕೆಗಳಿಲ್ಲ ಸಾವು ಬಂದಾಗ
ಮನಸ್ಸಿರಲಿ ಶಿವ ಧ್ಶಾನದಾಗ
ಇರಬೇಕ್ಶಾಕ ಖಾಲಿ ವ್ಶಸನದಾಗ
ನಿತ್ಶ ನಡೀಬೇಕು ಮನುಷ್ಶರಾಂಗ
ಸರಳತೆ ಇರಲಿ ಜೀವನದಾಗ
ನಗು ಇರಲಿ ಆಗಾಗ
ಸೇವಾ ಮನಸ್ಸು ಬೇಕು, ಇದ್ದಾಗ
ಹೋದ್ ಗಳಿಗೆ ಹುಗೀತ್ಶಾರ ಮಣ್ಣಾಗ
ಸದ್ಗುಣಗಳು ಮರಿತೀ ಯಾಕ
ತಪ್ಪು ಒಪ್ಪು, ಇದ್ರ ಹೇಳಿಬಿಡಬೇಕಽ
ಒಳ್ಳೆಯದು ಮಾಡಿ ಹೋಗಬೇಕು ಮ್ಶಾಕ
ಇಲ್ಲಾಂದ್ರ ದೇವ್ರು ಕಳಸ್ತಾನ ಮತ್ತೆ ತೆಳಾಕ
ಮತ್ತೆ ಮತ್ತೆ ಸುತ್ತ ಬೇಕಂತಿಯಾ
ಇಲ್ಲೆ ಗುಂಗಿ ಹುಳದಂಗ
ಒಮ್ಮೆ ಹೋಗಿಬಿಡು ಕೈಲಾಸದಾಗ
ನಡೆಯೋದಿಲ್ಲ...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



