ಕವನ
ಅಸ್ತಿತ್ವ
ಸತ್ತಹೋಗಿದ್ದ ಆತ್ಮೀಯರೊಬ್ಬರ
ಮೊಬೈಲ್ ಗೆ
ಅಕಸ್ಮಾತ್ ಆಗಿ
ಕರೆ ಮಾಡಿದಾಗ
ದೊರೆತ ಉತ್ತರ
ಈ ಸಂಖ್ಯೆ ಅಸ್ತಿತ್ವದಲ್ಲಿಲ್ಲ..
ಅವರು ಅಸ್ತಿತ್ವ ಕಳೆದುಕೊಂಡಿದ್ದು
(ಅವರ ಮನೆಯವರ ಮನದಲ್ಲಿ)
ಕೇಳಿ,ನೋಡಿ,ಗಮನಿಸಿ
ಕಣ್ಣಲ್ಲಿ ಹನಿ ಜಿನುಗಿತು..
ಸತ್ತವ ತನ್ನ ಅಸ್ತಿತ್ವ
ಕಳೆದುಕೊಳ್ಳುವುದಾದರೆ,
ಬದುಕಿದ್ದಾಗ ಪ್ರೀತಿಯ ನಾಟಕ ಏಕೆ ಬೇಕು.....?
ಸಮಾಜ ನೆನಪಿಸಿಕೊಳ್ಳುವಂಥ
ಏನಾದರೂ ಕೆಲಸ ಮಾಡೋಣ...
ಮನೆಯವರು ಮರೆತರೂ,
ಸಮುದಾಯದ ನೆನಪಲ್ಲಿ
ಚಿರಕಾಲ ಉಳಿದುಬಿಡೋಣ..ಡಾ.ಭೇರ್ಯ ರಾಮಕುಮಾರ್
ಮೈಸೂರು
ಕವನ
ಉತ್ತರ ಸೀಮೆಯ ಚೆಲ್ವರಾಶಿ
ಕವಿ-ಪುಂಗವರು, ದಾಸ-ಶರಣರು
ಉದಿಸಿದ ಮಹಾ ಮಹಿಮೆಯ ನಾಡು
ಮಾರ್ಗಕಾರರು ತೋರಿದ ನೆಲೆವೀಡು
ಆರುಂಕುಸವಿಟ್ಟೊಡಂ ನೆನೆವುದೆನ್ನ ಮನಂ
ಎಂದಕವಿವರ್ಯ, ದಾಸ-ಶರಣರ ಹೆಮ್ಮೆಯ ನೆಲೆಬೀಡು
ದೇವನಾಂಪ್ರಿಯಂಗೆ ಪ್ರಿಯವಾದ ನಾಡು
ವರ್ಷಧಾರೆಗೆ ಮಲೆಗಳ ಸೃಷ್ಟಿ
ಶ್ರಾವಣದ ಮಾಸದ ಸೊಬಗಿನ ಪುಷ್ಠಿ
ಸೊಂಡೂರು ಸಿರಿ ಸವಿಯೋಣ ಬನ್ನಿ
ಐದು ಸುತ್ತಿನ ಕೋಟೆಯದು
ಐತಿಹ್ಶ ಹೊತ್ತ ಜಲದುರ್ಗ
ಕೃಷ್ಣೆ ತೋಳ್ಬಂದಿಯ ಬೃಹತ್ ದ್ವೀಪವದು.
ಗುಹಾಂತರ ಬಸದಿ ಮಂದಿರ
ಅಗಸ್ತ್ಶ ತೀರ್ಥ, ವಾತಾಪಿ ಇಲ್ವಲರು
ಚೆಲ್ವ ಚಾಲುಕ್ಶರ ನಾಡು ಮಿಂಚಿದ್ದು...
ಕವನ
ಲೋಕವಂದಿತ ಮೊದಲ ಪೂಜಿಪ
ಗೌರಿನಂದನ ಗಣಪನೀತ / ಪ
ದುರ್ವಿಷಯ ಭಗ್ನಗೈಸುವ ವಿಘ್ನೇಶ್ವರನಾದೆ
ಗಣಗಳ ನಾಯಕ ಸ್ತುತ್ಯದಿ ವಿಶ್ವಂಭರನಾದೆ
ಭೂತಾಕಾಶಕೆ ನೀ ಅಭಿಮಾನಿ ದೇವತೆಯಾದೆ
ಉದ್ಧಟರನು ದಿಟ್ಟದಿ ಮರ್ದಿಸಿ ಚಾರುದೇಷ್ಣನಾದೆ
ಪಾಶಾಂಕುಶಧರ ಮೊರದಗಲ ಕಿವಿ
ರಕ್ತವರ್ಣದಿ ಶೋಭಿತನೆ
ಸರ್ಪವ ಕಟಿಸೂತ್ರ ಮಾಡಿ ಮೂಷಿಕ ವಾಹನ ಗಮನನೆ
ಧರ್ಮರಾಜ ಪೂಜಿಸಿದ ಏಕದಂತ ವಕ್ರತುಂಡನೆ
ಪ್ರಿಯಕೃಷ್ಣನ ನಂಬಿ ಬರುವ ಭಕ್ತರ ಸಂಕಟಚತುರ್ಥಿಗನೆ
ಪ್ರಿಯಾ ಪ್ರಾಣೇಶ ಹರಿದಾಸ
ವಿಜಯಪುರ
ಕವನ
ಎ.ಎನ್ ರಮೇಶ್, ಯೋಗೇಂದ್ರ ನಾಯ್ಕ, ಶ್ರೀಕಾಂತಯ್ಯ ಮಠ ಕವಿತೆಗಳು
"ಮುದ್ದು ಗಣಪನ ಹಬ್ಬಕೆ ಮುದ್ದು ಮುದ್ದು ಸಾಲುಗಳ ಕವಿತೆ. ಹೃದ್ಯ ಸ್ವರಗಳ ಭಾವಗೀತೆ. ಒಪ್ಪಿಸಿಕೊಳ್ಳಿ.."
-ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.ಜೈ ಹೋ ಗಣೇಶ..!
ಮಾತೃಪ್ರೇಮದ ಮೇರು ನಿದರ್ಶನ
ಆದಿಪೂಜಿತ ಮುದ್ದು ಗಜಾನನ.!
ಬೇಡುವರಿಗೆ ಸಿದ್ದಿ ಬುದ್ದಿ ಪ್ರದಾಯಕ
ಸಕಲ ವಿಘ್ನ ನಿವಾರಕ ವಿನಾಯಕ.!
ರಾವಣನ ಸೋಲಿಸಿದ ಕುಶಾಗ್ರಮತಿ
ಆತ್ಮಲಿಂಗ ರಕ್ಷಿಸಿದ ಮಹಾಗಣಪತಿ.!
ಮಕ್ಕಳಿಗೆ ತಾಯ್ತಂದೆಯೇ ಬ್ರಹ್ಮಾಂಡ
ಎಂದು ನಿರೂಪಿಸಿದ ವಕ್ರತುಂಡ.!
ಜಾತಿಮತಗಳ ಮೀರಿ ಬೆಳೆದ ದೈವ
ಸರ್ವರ ಅಕ್ಕರೆಯ ಮೋದಕಪ್ರಿಯ.!
ಸ್ವಾತಂತ್ರ್ಯ...
ಕವನ
ನಮಿಪೆ ಗಣಪ
ಗ ಣೇಶ ನಿನ್ನಯ ಬರುವಿಕೆಯಿಂದ
ಸಂತಸ ಸಂಭ್ರಮ ಮನೆ ತುಂಬ ||
ಗಾ ಯನ ಲಹರಿಯ ಹರಿಸುತ ಎಲ್ಲ
ಸಿಹಿಯನು ಸವಿಯುತಿಹರು ಮೆಲ್ಲ ||
ಗಿ ಟುಕು ಕೊಬ್ಬರಿಗೆ ಬೆಲ್ಲವ ಸೇರಿಸಿ
ಮೋದಕ ತಯಾರಿ ನಡೆಸಿಹೆವು ||
ಗೀ ತ ಪ್ರೀಯ ನೀ ಗಣಪತಿರಾಯ
ಶಿರವನು ಬಾಗಿಸಿ ಮುಗಿವೆವು ಕೈಯ ||
ಗು ಡಿಯೊಳು ನೀನೇ ಪ್ರಥಮ ಪೂಜಿತನು
ದೇವ ದೇವತೆಗಳ ನಾಯಕನು ||
ಗೂ ಡನು...
ಕವನ
ಅಕ್ಷರ ಲೋಕದ ಚಕ್ರವರ್ತಿ
ಸಾಸಿರ ಅಕ್ಷಿಗಳೊಳ್ ಎನ್ನ ತಿದ್ದಿದ ಸಿದ್ದಾಂತಿ
ವಿದ್ಯೆಯ ಪರ್ವತವನು ಸೀಳಿದ ಬೆಳಕು
ಸಮುದ್ರ ಮಥನದ ಸಿಹಿ ಅಮೃತ ನೀನು
ಕಲಿಸಿದ ಗುರುವಿಗೆ ಸಾವಿರದ ಶರಣು
ಕಾಲಜ್ಞಾನ ಬರೆದ ಮಹಾ ಯೋಗಿ ನೀನು
ಶಬ್ದ ಭಂಡಾರದ ಮಹಾ ಸಂಪುಟ ನೀನು
ಅರಿವು ಹೆಚ್ಚಿಸಿ ಅಜ್ಞಾನ ಅಳಿಸಿದ ಸುಧಾರಕ
ಅಂಧ ಲೋಕದಿ ಬೆಳ್ಳಿ ಕಿರಣ ಕಾಣಿಸಿದವನು
ಸದ್ಗುಣಗಳ ಬಿತ್ತಿ ದೈವತ್ವದ ಹಣ್ಣುಂಡವನು
ಅಕ್ಷರಗಳ ಜೋಡಿಸಿ ಜೀವದ ಹಸಿ...
ಕವನ
ವಿಶ್ವ ಮಾನವ
ಸಮಾಜದ ಭವಿಷ್ಯ ನಿರೂಪಕ,
ಭೂತಕಾಲದ ಅನುಭವಗಳ ಮೂಸೆಯಲಿ,
ವರ್ತಮಾನದ ಆಗುಹೋಗುಗಳ ಹೊಸೆದು,
ಭವಿಷ್ಯತ್ತಿಗೆ ಉತ್ತಮ ಹೊಂಗಿರಣ ನೀಡುವ ನಿರ್ದೇಶಕ,
ನಮ್ಮೆಲ್ಲರ ಬಾಳಿನ ದಾರಿದೀಪ ಈ ಮಾದರಿ ಶಿಕ್ಷಕ...
ಶಾಲೆಗೆ ಬರುವ ಎಲ್ಲ ಮಕ್ಕಳ
ಜಾತಿ-ಮತ-ಧರ್ಮ-ಭಾಷೆಗಳ ಎಣಿಸದೇ,
ತನ್ನ ಮಕ್ಕಳಂತೆ ನೋಡಿಕೊಳ್ಳುವ 'ವಿಶ್ವಮಾನವ'
ಎಲ್ಲಾ ಮಕ್ಕಳಿಗೂ ಮಾದರಿ ಈ ನಮ್ಮ ಶಿಕ್ಷಕ...
ಮುಗ್ಧ ಮಕ್ಕಳಿಗೆ ಅಕ್ಷರ-ಮಗ್ಗಿ-ಕಾಗುಣಿತ ಕಲಿಸಿ,
ಅಶೋಕ-ಬುದ್ಧ-ಗಾಂಧಿ-ಅಂಬೇಡ್ಕರ್-
ಕಲಾಂರಂಥ ಸಾಧಕರ
ಜೀವನ-ಸಾಧನೆ ಬೋಧಿಸಿ,
'ನೀವೂ ಅವರಂತೆ ಬೆಳೆಯಿರಿ' ಎನ್ನುವ
ನಮ್ಮ ಶಿಕ್ಷಕ
ನಿರಂತರ ಉತ್ಸಾಹಿ,ವಾಗ್ಮಿ,...
ಕವನ
ಹೊಟ್ಟೆ ಪಾಡು
ಹೊಟ್ಟೆಯ ಹಸಿವನು | ಶಮನವ ಮಾಡಲು
ಚಿಂದಿಯ ಆಯುವ | ಕೆಲಸವ ಹಿಡಿದೆ
ನಿನ್ನನು ನೋಡಿ | ಕಲಿಯಲೆ ಬೇಕು
ಸ್ವಾಭಿಮಾನದಿ | ಬದುಕಲು ಸಾಕು
ಬಾಗಿದ ಬೆನ್ನಿನ | ಮೇಲಿದೆ ಹೊರೆಯು
ಬಾಳ ಬಂಡೆಯಾ | ಬವಣೆಯ ಭಾರವು
ಜೀವನ ಸಾಗಿಸೆ | ದೇಹಕೆ ಶಕ್ತಿಯ
ತುಂಬಲು ಬೇಕಿದೆ | ತುತ್ತು ಅನ್ನವು
ನೆರೆತ ಕೂದಲು | ಸೊರಗಿದ ದೇಹ
ಆದರೂ ದುಡಿದೇ |...
ಕವನ
ರಾಧಾ ಕೃಷ್ಣ ಪ್ರೇಮ ಕವನಗಳು- Radha Krishna
ಕಾದಿಹಳು ರಾಧೆ
ಮಾಧವ ನಿನ್ನ ಕೊಳಲ ನಾದಕೆ
ಮನಸೋತಳು ಬೃಂದಾವನ ಕನ್ನಿಕೆ
ಗೋಪಾಲ ನಿನ್ನ ಮೋಹಕ ರಾಗಕೆ
ಜಗವ ಮರೆತು ನಿಂತಳು ಗೋಪಿಕೆ//
ಪ್ರೇಮದ ಸುಧೆಯ ನೀ ಬೀರಲು
ತನಿಯಿತು ರಾಧೆಯ ಒಡಲು
ಮುರುಳಿ ಮುಕುಂದ ಗೋಪಾಲಕೃಷ್ಣ
ಹೆಂಗಳೆಯರ ಮನಕದ್ದ ಕಳ್ಳ ಕೃಷ್ಣ//
ರಾಧಾ ಕೃಷ್ಣ ನಿಮ್ಮ ಪ್ರೀತಿ ಅಮರ
ನಿಶ್ಕಲ್ಮಶ ಪ್ರೇಮ ಭಾವ ಸುಮಧುರ
ಇವರ ಪ್ರೇಮದೊಡನಾಟ ನೋಡಲು ಸುಂದರ
ಇವರಿರ್ವರ ನೃತ್ಯ ರಮ್ಯ ಮನೋಹರ//
ತುಳಸಿ ಪ್ರಿಯ ನೀನು ಗೋವಿಂದ
ನವಿಲು...
ಕವನ
ಋಣ
ನವಮಾಸದಿ ಗರ್ಭದಿ ಹೊತ್ತು
ಪ್ರೀತಿಯಲಿ ನಮ್ಮನು ಹೆತ್ತು
ಸಾಕಿ ಸಲುಹಿದೆ ಮೂರು ಹೊತ್ತು
ಹೇಗೆ ತೀರಿಸಲಿ ನಿನ್ನ ಋಣ ಈ ಹೊತ್ತು//
ಸುಂದರ ಬದುಕು ನೀಡಿದೆ ತಂದೆ
ಕಷ್ಟವನೆಂದು ತೋರಲಿಲ್ಲವೆಮಗೆ
ನಮಗಾಗಿ ಮುಡುಪಿಟ್ಟೆ ನಿನ್ನನ್ನೇ
ಹೇಗೆ ತೀರಿಸಲಿ ನಿನ್ನ ಋಣ ಈ ಹೊತ್ತು//
ಹಗಲಿರುಳುಗಳ ಲೆಕ್ಕವಿಲ್ಲ
ರಕ್ಷಿಸುವದೊಂದೆ ಮನದಲೆಲ್ಲ
ಓ ಸೈನಿಕರೆ ನಿಮಗೆ ಸಮನಾರಿಲ್ಲ
ಹೇಗೆ ತೀರಿಸಲಿ ನಿನ್ನ ಋಣ ಈ ಹೊತ್ತು//
ಅಜ್ಞಾನದ ಕೊಳೆಯ ತೊಳೆದೆ
ಸುಜ್ಞಾನದ ಬೆಳಕ ಬೀರಿದೆ
ಸಮಾಜದಿ ಬಾಳಲು...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



