ಕವನ

ಎನ್. ಶರಣಪ್ಪ ಮೆಟ್ರಿ ಚುಟುಕುಗಳು

ದಗ್ಧಪಾದ ಕೆಲವರು ಕಾಲಿಟ್ಟಲ್ಲಿ ಹುಲ್ಲು‌ ಹುಟ್ಟುವುದಿಲ್ಲ ಮತ್ತೆ ಕೆಲವರು ಕಾಲಿಟ್ಟಲ್ಲಿ ಹುಟ್ಟಿದ ಹುಲ್ಲು ಸುಟ್ಟುಹೋಗುತ್ತದೆಜ(ಗ)ದ್ಗುರುಗಳು ಮಠದಲ್ಲಿರುವ ಜಗದ್ಗುರುಗಳು ತಿಂದು ತಿಂದು ಆಗಿದ್ದಾರೆ ಗಜದ್ಗುರುಗಳುಅದೃಷ್ಟ ದುರಾದೃಷ್ಟ ಕೆಲವರು ಮುಟ್ಟಿದ್ದೆಲ್ಲ ಚಿನ್ನವಾಗುತ್ತದೆ ಮತ್ತೆ ಕೆಲವರು ಮುಟ್ಟಿದ್ದೆಲ್ಲ ಮಣ್ಣಾಗುತ್ತದೆದುರಭ್ಯಾಸ ಗೆಳೆಯ ಕೇಳಿದ " ನಿನ್ನ ಹೆಂಡತಿಗೆ ಯಾವ ದುರಭ್ಯಾಸವಿದೆ ?" ಅವನುತ್ತರಿಸಿದ "ಬೈಯ್ಯುವುದು" " ಸರಿ ಹಾಗಾದರೆ ನಿನಗೆ ?" "ಸಹಿಸಿಕೊಳ್ಳುವುದು"ಮೂರು ಕನ್ನಡಿ ಇತಿಹಾಸ ಭೂತಕನ್ನಡಿ ಸಾಹಿತ್ಯ ಕೈಗನ್ನಡಿ ಕಾವ್ಯ ರನ್ನಗನ್ನಡಿಹನಿಗವನಗಳು ಲಕ್ಷ್ಯಕೊಟ್ಟು ಓದಿದರೆ ಹನಿಗವನಗಳು ಸಾಹಿತ್ಯ ಸಮುದ್ರದಲ್ಲಿ ಲಕ್ಷದ್ವೀಪ ಕಾವ್ಯ ಮಂದಿರದಲ್ಲಿ ಲಕ್ಷದೀಪಗದ್ದುಗೆ ಗದ್ದುಗೆಯೇರಿ ಮೆರೆದನು ಉರಿದನು ಕಡೆಗೆ ಕೂತನು ಗದ್ದುಗೆಯಲ್ಲಿಕವಿತೆಗಿವಿತೆ ಮತ್ತೆ ಮತ್ತೆ ಓದಿಸಿಕೊಂಡು ಹೋದರೆ ಅದು ಕವಿತೆ ಓಡಿಸಿಕೊಂಡು ಹೋದರೆ ಅದು ಕವಿತೆಯಲ್ಲ ಗಿವಿತೆಅಮ್ಮಾವ್ರ ಗಂಡ ಅವಳು ಕೆಂಡಾದಾಗ ಹಜಬೆಂಡ ಬೆಂಡಾದ ಥಂಡಾದ ಅವಳ ಕೈಯಾಗಿನ ಗೋಲಿ ಗುಂಡಾದ ಚಿಣಿದಾಂಡಾದಭಗ್ನಪ್ರೇಮಿ ಅವಳಿಗಾಗಿ ಲೈನ್ ಹೊಡೆದ ಸಿಗದ್ದಕ್ಕ ವೈನ್ ಕುಡಿದ ಕುಡಿತ ಹೆಚ್ಚಾಗಿ ಆರೋಗ್ಯ ಕಳಕೊಂಡ ಆಸ್ಪತ್ರೆ ಸೇರಿ ಸಲೈನ್ ಹಚ್ಚಿಸಿಕೊಂಡವೈವಿಧ್ಯ ನೆಲ ಜಲ ಗಾಳಿ ಬಿಸಿಲು ಒಂದೆಯಾದರು ಬೆಳೆವ ನಿಂಬೆ...

ಕವನ: ನಿತ್ಯ ಸತ್ಯ

ನಿತ್ಯ ಸತ್ಯ ಸಮಾರಂಭದಿ ಭರದಿಂದ ಸಾಗುತ್ತಿದ್ದೆ ಮುಂದೆ ನಾಲ್ಕಾರು ಜನ ಜಗ್ಗಿದರೆನ್ನ ಹಿಂದೆ/ ತಿರುಗಿ ನೋಡಿದಾಗ ಅನಿಸಿದ್ದು ನಂಗೆ ನಾನೂ ದೊಡ್ಡ ಕಾರಿನಲ್ಲಿ ಬರಬೇಕಿತ್ತು ಹಿಂಗೆ// ಅಂದುಕೊಂಡಿದ್ದೆ ಆಸ್ತಿಪಾಸ್ತಿ ಏತಕ್ಕೆಂದು ಕಷ್ಟ ತಿಳಿಸಿತು ಹಣದ ಮಹತ್ವವೇನೆಂದು/ ಗೊತ್ತು ಕಾಂಚಾಣವೇನೂ ಜೀವ ಉಳಿಸಲ್ಲವೆಂದು ಆದರೆ ಶುಶ್ರೂಷೆ ಸಿಗಬೇಕಲ್ಲ ಆಸ್ಪತ್ರೆಯಲಿಂದು// ತಿಳಿದಿದ್ದೆ ನಾ ವ್ಯಕ್ತಿತ್ವವೇ ಮುಖ್ಯವೆಂದು ತಿಳಿಸಿತು ಸಮಾಜ ಸಂಪತ್ತೂ ಅಗತ್ಯವೆಂದು/ ಮತಿಯಲಿತ್ತು ಹುದ್ದೆ ಹೆಸರು ನನಗ್ಯಾಕೆಂದು ಜಗತ್ತು ತಿಳಿಸಿತು ಜೀವನದಿ ಎಲ್ಲ ಬೇಕೆಂದು// ಮದ್ದಾನೆಗಳ...

ಕವನ: ಅನ್ನದಾತ ರೈತ

ಅನ್ನದಾತ ರೈತ ಹಗಲಿರುಳು ದುಡಿಯತ್ತಾನೆ ಮಾಡಿಕೂಳ್ಳದೆ ಬೇಸರ ಇವನ ದುಡಿಮೆಗೆ ಜೊತೆಯಾಗಿರುತ್ತಾನೆ ನೇಸರ ಎತ್ತುಗಳ ಜೊತೆಯಾಗಿ ಉಳುತ್ತಾನೆ ಸರಸರ ಇವನ ಮನದಲ್ಲಿ ಎಂದು ಸುಳಿಯದು ಅಹಂಕಾರ‌ ಭೂಮಿತಾಯಿ ಮೇಲೆ ಇದೆ ಇವನಿಗೆ ಮಮಕಾರ ಇವನಿಗೆ ಗೊತ್ತು "ಕೈ ಕೆಸರಾದರೆ ಬಾಯಿ ಮೊಸರ" ದಬ್ಬಾಳಿಕೆ ನಡೆಯುತ್ತಿದೆ ಇವನ ಮೇಲೆ ನಿರಂತರ ಸಮಾಜಕ್ಕೆ ಇಲ್ಲ ಇವನ ಮೇಲೆ ಕನಿಕರ ಸಿಗುತ್ತಿಲ್ಲ ಇವನ ಬೆಳೆದ ಬೆಳೆಗೆ ಪರಿಹಾರ ಅನ್ನದಾತನ ಬಗ್ಗೆ ಮಾಡಬೇಡಿ ತಾತ್ಸಾರ ಇವನು ಬೆಳೆಯದಿದ್ದರೆ ಜಗತ್ತಿಗೆ ಬರುತ್ತೆ ಸಂಚಕಾರ ಅನ್ನದಾತರೆ ನಿಮಗೆ ಬರದಿರಲಿ ಆತ್ಮಹತ್ಯೆ ವಿಚಾರ. ರೈತರಿಗೆ ಹೇಳಿ ಜೈಕಾರ ದೇಶ ಬೆಳೆಯುತ್ತದೆ ಉತ್ತರೊತ್ತರ.ಕಿರಣ.ಯಲಿಗಾರ....

ವೇಣು ಜಾಲಿಬೆಂಚಿ ಗಜಲ್ ಗಳು

ಗಜಲ್-೧ ನನಗೆ ಪ್ರೀತಿಯೂ ಮರಣವೂ ಒಂದೇ ನೀನಿರೆ ನನ್ನಿರುವೂ ಬಲವೂ ಒಲವೂ ಒಂದೇ ನೀನಿರೆ ಕಪಟ ನಾಟಕವಾಡಿ ದೂರ ಮಾಡಲು ಆಗದು ಬಿಡುಗಡೆಯೂ ಬಂಧನವೂ ಒಂದೇ ನೀನಿರೆ ರಕ್ತ ಹೀರಿ ಸೊಳ್ಳೆಗಳು ಜಿಂಯ್ಯೆಂದು ಸಂಭ್ರಮಿಸುತಿವೆ ಕಾಟವೇನೂ ಅಲ್ಲ ಬ್ರಹ್ಮನೋವೂ ಒಂದೇ ನೀನಿರೆ ಹಗಲು ನಿನ್ನ ಧ್ಯಾನ ಇರುಳೂ ನಿನ್ನ ಧ್ಯಾನ ನನ್ನಲ್ಲಿ ನಾ ಇಲ್ಲ ಕನ್ನಡಿಯೂ ಮನಮಂದಿರವೂ‌ ಒಂದೇ ನೀನಿರೆ ನಾ ಏನೆಂದು ಋಜುವಾತಾಗಿರಬೇಕು ನಿನಗೆ "ಜಾಲಿ" ನನ್ನುಸಿರೂ...

ಕವನ: ಮಳೆ.. ಮಳೆ.. ಮಳೆ..!

"ಇಂದಿಗೆ ಸರಿಯಾಗಿ 12 ದಿನಗಳಾಯಿತು ನಾವು ಸೂರ್ಯನ ಮುಖ ನೋಡಿ.." ಈ ತಿಂಗಳ 8 ನೇ ತಾರೀಖಿನಿಂದ ಈ ದಿನದವರೆಗೆ ನಿತ್ಯ ನಿರಂತರ ಸತತ ಸುರಿಯುತ್ತಿರುವ ವರ್ಷಧಾರೆಯ ಚಿತ್ರಣವೇ ಈ ಕವಿತೆ. ಕರಾವಳಿ ತೀರದಲ್ಲಿ, ಸಹ್ಯಾದ್ರಿ ಮಡಿಲಲ್ಲಿರುವ ನಮ್ಮ ಕೈಗಾ ಸುತ್ತಮುತ್ತ ಭೋರ್ಗರೆಯುತ್ತಿರುವ ಮಳೆಹನಿಗಳ ಭಾವಗೀತೆ. ಆರ್ಭಟಿಸಿ ಸುರಿಯುತ್ತಿರುವ ಈ ಮಳೆಯೊಳಗೆ ರಮ್ಯತೆಯಿದೆ, ರೋಚಕತೆಯಿದೆ, ರೌದ್ರತೆಯಿದೆ,...

ಕವನ: ಬದುಕೆಂಬ ಚಲನಚಿತ್ರ…

ಬದುಕೆಂಬ ಚಲನಚಿತ್ರ.. ಬದುಕೆಂಬ ಚಲನಚಿತ್ರದಲಿ ನೀನೊಬ್ಬ ಅಸಾಮಾನ್ಯ ನಟ, ಯಾರಿಗೂ ನಿಲುಕದ ದಿವ್ಯ ಶಕ್ತಿಯೊಂದು ಈ ಚಲನಚಿತ್ರದ ನಿರ್ಮಾಪಕ,ನಿರ್ದೇಶಕ... ತಾತ-ಅಜ್ಜಿ,ಅಪ್ಪ-ಅಮ್ಮರೆಂಬ ಗೌರವ ಪಾತ್ರ ವರ್ಗ.. ಗೆಳೆಯ-ಗೆಳತಿಯರು ಪ್ರೀತಿ-ವಿಶ್ವಾಸಗಳೆಂಬ ಮರದ ರೆಂಬೆ-ಕೊಂಬೆಗಳು... ಹೆಂಡತಿ ಎಂಬ ನಾಯಕಿ, ಮಕ್ಕಳೆಂಬ ಬಾಲನಟ-ನಟಿಯರು.. ಬದುಕೆಂಬ ಚಲನಚಿತ್ರದ ಮೂಲಬೇರುಗಳು... ಇಲ್ಲಿ ನಾಯಕ,ಖಳನಾಯಕ, ನಗೆಮಿಂಚು,ಅಳುಮುಂಜಿ.. ಎಲ್ಲವೂ ವಿಧಿಲಿಖಿತ.... ಆ ದಿವ್ಯ ಶಕ್ತಿಯ ಸೂತ್ರದಲಿ ನಿನ್ನ ಬದುಕೆಂಬ ಗಾಳಿಪಟದ ಆಟ.. ಅವನ ಕರುಣೆಯಿದ್ದರೆ ನಿನ್ನ ಬದುಕ ಚಲನಚಿತ್ರ ಎಂದೆಂದಿಗೂ ಸುಖಾಂತ್ಯ.. ಇಲ್ಲದಿರೆ ಬಾಳು ಸೂತ್ರವಿಲ್ಲದೆ ಲಾಗ ಹೊಡೆಯುವ ಗಾಳಿಪಟ.. ನಿನ್ನ ಬದುಕೆಂಬ ಚಲನಚಿತ್ರಕೆ ಕಣ್ಣೀರ ಕಡಲಿನ ..ದುಃಖಾಂತ್ಯ.. ಸೂತ್ರದಾರ ಅವನು.. ಪಾತ್ರದಾರಿ ನೀನು....!!!ಡಾ.ಭೇರ್ಯ...

ಕವಿತೆ: ಸಂಗೊಳ್ಳಿ ಹುಲಿ

ಸಂಗೊಳ್ಳಿ ಹುಲಿ ಕಿತ್ತೂರ ನಾಡಿನ್ಯಾಗ ಸಂಗೊಳ್ಳಿ ಊರಾಗ ಇತ್ತಪ್ಪ ಒಂದು ಹುಲಿ ಅದರ ಹೆಸರ ಕೇಳಿದರ ಸಾಕ ಎಂಥಾವರಿಗೂ ಮೈಯ್ಯಾಗ ನಡುಕ// ಮಂದೀಯ ಬಾಯಾಗ ರಾಯಣ್ಣ ಅಂದರ ಎಂಟೆದೆಯ ಬಂಟ ಶೂರಾದಿ ಶೂರ ದಾರ್ಯಾಗ ಬರುವಾಗ ವಾರಿಗಿ ಗೆಳೆಯರು ನೆದರ ಬಿಟ್ಟಾರೊ ರಾಯಣ್ಣಗ// ತಾಯಂದಿರೆಲ್ಲ ಎಂತ ಮಗನವ್ವ ಹೆತ್ತವಳು ತಣ್ಣಗಿರಲೆವ್ವ ಎಂದಾರು ನಮಗೊಬ್ಬ ಮಗ ಹಿಂಗಿರಲವ್ವ ಊರಿಗೆ ಮಾದರಿ ಆಗಿರಲವ್ವ ಎಂದು ಬೆಡ್ಯಾರು// ರಾಯಣ್ಣ ನೆಂದರ ಎಲ್ಲರಿಗೂ ಪ್ರೀತಿ ರಾಯಣಿಗೆ ಇಲ್ಲ ಯಾರದು ಭೀತಿ ಚೆನ್ನಮ್ಮ...

ಕವನ: ಸ್ಫೂರ್ತಿ ಚಿಲುಮೆ.!

"ಇದು ಒಲವಿನೊಳಗಿನ ಚೈತನ್ಯದ ಕವಿತೆ. ಅನುರಾಗದೊಳಗಿನ ಅಂತಃಶಕ್ತಿಯ ಭಾವಗೀತೆ. ಸಾಧನೆಯ ಹಾದಿಗೆ ದೀಪ್ತಿಯಾಗುವ, ಸ್ಫೂರ್ತಿಯ ಚಿಲುಮೆಯೊಳಗಿನ ಜೀವಜಲವಾಗಿ, ನಿರಂತರವಾಗಿ ಮುನ್ನಡೆಸುವ ಪ್ರೇಮವೆಂಬ ಅನುಭೂತಿಯ ಮಧುರ ಸ್ವರಗಳ ಹೃದ್ಯಗೀತೆ. ಪ್ರಾಂಜಲ ಪ್ರೀತಿಯೆಂದರೆ ಹೀಗೆ. ಚಿರಂತನ ಚಿಮ್ಮುವ ಚಿಲುಮೆಯ ಹಾಗೆ. ಏನಂತೀರಾ..?" - ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.ಸ್ಫೂರ್ತಿ ಚಿಲುಮೆ.! ಅನನ್ಯ ಕಾಂತಿಯ ನಿನ್ನೊಂದು ನೋಟ ಸಾಕು ಗೆಳತಿ ನಡೆವ ಹಾದಿ ಬೆಳಕಾಗಿಸಲು.! ಅದಮ್ಯ...

ಕವನ: ಅಂತರ…!

"ಮೊನ್ನೆ ಬೆಳಗಾವಿ ಸಾಹಿತ್ಯ ವೇದಿಕೆಯಿಂದ ವೆಬಿನಾರ್ ಮೂಲಕ ನನ್ನಿಂದ ಕವಿತೆ, ಕಾವ್ಯಗಳ ಉಪನ್ಯಾಸ ಏರ್ಪಡಿಸಿದ್ದರು. ಸುಮಾರು ಒಂದುವರೆ ಘಂಟೆಗಳ ಕಾಲ ನಿರರ್ಗಳವಾಗಿ ಹರಿದ ನನ್ನ ಭಾವಲಹರಿಯನ್ನು ಆಲಿಸಿ ಅತೀವ ಸಂತಸದಿಂದ ಅಭಿನಂದಿಸಿದ ಹಾಗೂ ನನ್ನ ಕವಿತೆಗಳಲ್ಲಿನ ಜೀವದ ತಲ್ಲಣಗಳು ಮತ್ತು ಬದುಕಿನ ಸಂವೇದನೆಗಳನ್ನು ಮೆಚ್ಚಿ ಹಾರೈಸಿದ ಹಿರಿಯ ಜಾನಪದ ಸಂಶೋಧಕರು, ವಿದ್ವಾಂಸರು, ಹೆಸರಾಂತ ಸಾಹಿತಿಗಳು...

ಮಿನಿಕವನ: ಬದುಕೆಂಬ ಚಲನಚಿತ್ರ…

ಬದುಕೆಂಬ ಚಲನಚಿತ್ರ.. ಬದುಕೆಂಬ ಚಲನಚಿತ್ರದಲಿ ನೀನೊಬ್ಬ ಅಸಾಮಾನ್ಯ ನಟ, ಯಾರಿಗೂ ನಿಲುಕದ ದಿವ್ಯ ಶಕ್ತಿಯೊಂದು ಈ ಚಲನಚಿತ್ರದ ನಿರ್ಮಾಪಕ,ನಿರ್ದೇಶಕ... ತಾತ-ಅಜ್ಜಿ,ಅಪ್ಪ-ಅಮ್ಮರೆಂಬ ಗೌರವ ಪಾತ್ರ ವರ್ಗ.. ಗೆಳೆಯ-ಗೆಳತಿಯರು ಪ್ರೀತಿ-ವಿಶ್ವಾಸಗಳೆಂಬ ಮರದ ರೆಂಬೆ-ಕೊಂಬೆಗಳು... ಹೆಂಡತಿ ಎಂಬ ನಾಯಕಿ, ಮಕ್ಕಳೆಂಬ ಬಾಲನಟ-ನಟಿಯರು.. ಬದುಕೆಂಬ ಚಲನಚಿತ್ರದ ಮೂಲಬೇರುಗಳು... ಇಲ್ಲಿ ನಾಯಕ,ಖಳನಾಯಕ, ನಗೆಮಿಂಚು,ಅಳುಮುಂಜಿ.. ಎಲ್ಲವೂ ವಿಧಿಲಿಖಿತ.... ಆ ದಿವ್ಯ ಶಕ್ತಿಯ ಸೂತ್ರದಲಿ ನಿನ್ನ ಬದುಕೆಂಬ ಗಾಳಿಪಟದ ಆಟ.. ಅವನ ಕರುಣೆಯಿದ್ದರೆ ನಿನ್ನ ಬದುಕ ಚಲನಚಿತ್ರ ಎಂದೆಂದಿಗೂ ಸುಖಾಂತ್ಯ.. ಇಲ್ಲದಿರೆ ಬಾಳು ಸೂತ್ರವಿಲ್ಲದೆ ಲಾಗ ಹೊಡೆಯುವ ಗಾಳಿಪಟ.. ನಿನ್ನ ಬದುಕೆಂಬ ಚಲನಚಿತ್ರಕೆ ಕಣ್ಣೀರ ಕಡಲಿನ ..ದುಃಖಾಂತ್ಯ.. ಸೂತ್ರದಾರ ಅವನು.. ಪಾತ್ರದಾರಿ ನೀನು....!!!ಡಾ.ಭೇರ್ಯ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group