ಸುದ್ದಿಗಳು

ಕುಕ್ಕರ್ ಆಯ್ತು, ಸೀರೆ ಆಯ್ತು ಈಗ ಕಾಲುಂಗುರ; 1.05 ಕೋಟಿ ಮೌಲ್ಯದ ಬೆಳ್ಳಿ ಕಾಲುಂಗುರ ಜಪ್ತಿ

ಬೀದರ: ಚುನಾವಣೆಯ ಸಮಯದಲ್ಲಿ ಮನೆ ಮನೆಯ ಹೆಣ್ಣು ಮಕ್ಕಳ ಮತಗಳನ್ನು ಸೆಳೆಯಲು ರಾಜಕೀಯ ಪಕ್ಷಗಳು ಕುಕ್ಕರ್, ಸೀರೆ, ಹಣ ಮುಂತಾದವನ್ನು ಕೊಡುವುದು ಮಾಮೂಲಿಯಾಗಿದ್ದು ಈಗ ಅದು ಹೆಣ್ಣಿನ ಮುತೈದೆಯ ಸಂಕೇತವಾದ ಕಾಲುಂಗುರಕ್ಕೂ ಬಂದು ನಿಂತಿದೆ.ಈ ಅನುಮಾನಕ್ಕೆ ಎಡೆ ಮಾಡಿ ಕೊಟ್ಟಿದ್ದು ದಾಖಲೆ ಇಲ್ಲದ ಹೆಣ್ಣು ಮಕ್ಕಳ ಬೆಳ್ಳಿ ಕಾಲುಂಗುರಗಳು ಔರಾದ ಕ್ಷೇತ್ರದಲ್ಲಿ ಪತ್ತೆಯಾಗಿದ್ದು ಅವುಗಳ ಮೌಲ್ಯ...

ಯಾದವಾಡ: ಚೌಕೇಶ್ವರ ಹಾಗೂ ಘಟ್ಟಗಿ ಬಸವೇಶ್ವರ ರಥೋತ್ಸವ

ಮೂಡಲಗಿ: ತಾಲೂಕಿನ ಯಾದವಾಡದಲ್ಲಿ ಶ್ರೀ ಚೌಕೇಶ್ವರ ಹಾಗೂ ಘಟ್ಟಗಿ ಬಸವೇಶ್ವರ ಜಾತ್ರಾ ಮಹೋತ್ಸವು ಈ ವರ್ಷ ಏ.2 ರಿಂದ 12 ರವರಿಗೆ ಜರುಗುತ್ತಿರುವ ನಿಮಿತ್ತ ಗುರುವಾರದಂದು ಚೌಕಿಮಠದ ಪ.ಪೂ ಶ್ರೀ ಶಿವಯೋಗಿ ದೇವರು ಸಾನ್ನಿಧ್ಯದಲ್ಲಿ ಹಾಗೂ ಶ್ರೀ ಘಟಗಿ ಬಸವೇಶ್ವರ ದೇವಸ್ಥಾನ ಅಭಿವೃದ್ಧಿ ಸೇವಾ ಸಮಿತಿ ಆಶ್ರಯದಲ್ಲಿ ಸಡಗರ ಸಂಭ್ರಮದಿಂದ ಅಪಾರ ಜನಸ್ತೋಮದ ಜಯಘೋಷಣೆಯಲ್ಲಿ...

ಪುಟ್ಟ ಬಾಲಕಿಯಿಂದ ರಂಜಾನ್ ಉಪವಾಸ

ಸಿಂದಗಿ: ಪವಿತ್ರ ರಂಜಾನ್ ಹಬ್ಬದ ಸಂದರ್ಭದಲ್ಲಿ ಒಂದು ಹನಿ ನೀರು ಕುಡಿಯದೆ ಮುಸ್ಲಿಂ ಬಾಂಧವರು  ಕಟ್ಟುನಿಟ್ಟಾದ ಉಪವಾಸ ಪಾಲನೆ ಮಾಡುತ್ತಾರೆ. ಇಂತಹ ಸುಡು ಬಿಸಿಲಲ್ಲಿ ಕಠಿಣ ಉಪವಾಸ ಮಾಡೋದು ದೊಡ್ಡವರಿಗೂ ಸಹ ಕಷ್ಟವಾಗುತ್ತದೆ.ಆದರೆ ಸಿಂದಗಿ ಪಟ್ಟಣದ ರಜಪೂತ ಲೇಔಟ್ ನಿವಾಸಿ ಆರಕ್ಷಕ ನಬಿಲಾಲ ಶೇಖ  ಅವರ ಮಗಳು ಆಶಿಯಾ ಶೇಖ(6) ರಂಜಾನ್ ಉಪವಾಸವನ್ನು ಆಚರಿಸುವ...

ಅಕ್ಕರೆಯ ಅಕ್ಕನ ವಚನದ ಹಿರಿಮೆ ಗರಿಮೆ ನಿತ್ಯ ನೂತನ

ಬದುಕಿನ ಸುತ್ತೆಲ್ಲ ಅಜ್ಞಾನದ ಕಾರ್ಮೋಡ ಕವಿದು ತನ್ನ ಜೀವಂತಿಕೆಯನ್ನು ಕಳೆದುಕೊಂಡ ಸ್ಥಿತಿಯಲ್ಲಿದ್ದಾಗ ಜ್ಞಾನ ಜ್ಯೋತಿಯ ಕಿರಣವೊಂದು ಜನಸಾಮಾನ್ಯರ ಪಾಲಿಗೆ ಒಲಿದು ಬಂದಿತ್ತು. ಅಂತರಂಗದ ಅರಿವಿನ ಸಾಮ್ರಾಜ್ಯದ ಪರದೆಯನ್ನು ಅನಾವರಣಗೊಳಿಸಿತ್ತು. ವಚನಗಳ ಮೂಲಕ ಜನ ಜೀವನದಲ್ಲಿ ಭಕ್ತಿಯ ಬೆಳಕು ಚೆಲ್ಲಲು  ನೂರಾರು ಶರಣ ಚೇತನಗಳು ದಣಿವರಿಯದೇ ಶ್ರಮಿಸಿದ್ದವು.ದಿವ್ಯ ಚೈತನ್ಯ ಅಣ್ಣ ಬಸವಣ್ಣನ ಅನುಭವ ಮಂಟಪದಲ್ಲಿ ಆಧ್ಯಾತ್ಮಿಕ...

ಸಾಹಿತ್ಯ ಚಿಂತಕರ ಚಾವಡಿಯ ವಾರ್ಷಿಕೋತ್ಸವ; ಸಂತಸದಲ್ಲಿ ಸಂಪನ್ನವಾಯಿತು ಈ ದಿನ… ಸಂಭ್ರಮಿಸಿತು ಹೃನ್ಮನ…

ಮೊನ್ನೆ ಭಾನುವಾರ 02.04.23 ರಂದು ಶಿರಸಿಯ ನೆಮ್ಮದಿ ಕುಟೀರದ ನೂತನ ರಂಗಧಾಮದಲ್ಲಿ, ಸಾಹಿತ್ಯ ಚಿಂತಕರ ಚಾವಡಿಯ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ವರ್ಣಮಯ ಸಾಹಿತ್ಯ-ಸಾಂಸ್ಕೃತಿಕ ಸಮಾರಂಭ ಹಲವು ಚಿರಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾಯಿತು.ಸಾಹಿತ್ಯಿಕ ಸಹೃದಯರ ಸಮಾಗಮ, ಅಕ್ಷರಲೋಕದ ದಿಗ್ಗಜರ ಸಂಗಮ, ಕಾವ್ಯಬಂಧುಗಳ ಸಂಭ್ರಮ, ಕೃತಿಗಳ ಲೋಕಾರ್ಪಣೆ, ಕವಿಗೋಷ್ಠಿ, ಗೀತ ಗಾಯನ, ನರ್ತನ ಹೀಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು...

ಅಕ್ಕನ ಕವಿತೆಗಳು

(ಡಾ. ಅನ್ನಪೂರ್ಣ ಹಿರೇಮಠ, ಪುಷ್ಪ ಮುರಗೋಡ, ಮಂಜುಶ್ರೀ, ಸೌಭಾಗ್ಯ ಅಶೋಕ, ಬಸವರಾಜ ಹಾವಣ್ಣವರ )ಅಕ್ಕಮಹಾದೇವಿಯೇ  ನಿನಗೆ ಶರಣು  ಕೇಶಾಂಬರ ಧಾರಿನಿ,ದಿಗಂಬರಾಯಿನಿ ಅಕ್ಕಮಹಾದೇವಿ  ಶಿವನ ಪರಮ ಭಕ್ತೇ, ಇಷ್ಟಲಿಂಗ ಪೂಜೆಗೈವ ಅಕ್ಕಮಹಾದೇವಿ  ವೈರಾಗ್ಯದಾಯಿನಿ,ಸ್ವಾಭಿಮಾನದ ಗಣಿ ಅಕ್ಕಾಮಾದೇವಿ  ಮೊದಲ ಕವಯತ್ರಿ ,ಮೊದಲ ವಚನ ರಚನಾಗಾರ್ತಿ ಅಕ್ಕಮಹಾದೇವಿ  ಮೊದಲ ಸಾಹಿತ್ಯಗಾರ್ತಿ, ಜ್ಞಾನ ಚಿಂತಾಮಣಿ ಅಕ್ಕಮಹಾದೇವಿ  ಸ್ತ್ರೀ ಸ್ವಾತಂತ್ರ್ಯಕ್ಕಾಗಿ ಹೋರಾಡಿದ, ಅಕ್ಕಮಹಾದೇವಿ  ಐಹಿಕ ಸುಖ ಭೋಗವನ್ನು ತೊರೆದ, ವೀರ ಸನ್ಯಾಸಿನಿ ಅಕ್ಕಮಹಾದೇವಿ ಕಾಮವ...

ಬಿಜೆಪಿಯಿಂದ ಅಸಾಂವಿಧಾನಿಕ ಮೀಸಲಾತಿ ನೀತಿ- ದಸ್ತಗೀರ ಮುಲ್ಲಾ

ಸಿಂದಗಿ: ಧರ್ಮ ಮತ್ತು ಜಾತಿಗಳಲ್ಲಿ ವಿಷ ಬೀಜ ಬಿತ್ತಿ  ಎಲ್ಲ ಸಮುದಾಯಗಳಲ್ಲಿ ಕಂದಕ ಸೃಷ್ಟಿಸಿ ಜಾತಿಗಳನ್ನು ಒಡೆದು ಬಿಜೆಪಿ ಪಕ್ಷ ಕಾರ್ಯನಿರ್ವಹಿಸುತ್ತಿದೆ ಎಂದು ಬಿಎಸ್ಪಿ ಅಭ್ಯರ್ಥಿ ಡಾ.ದಸ್ತಗಿರ ಮುಲ್ಲಾ ಆರೋಪಿಸಿದರು.ಪಟ್ಟಣದ ಖಾಸಗಿ ಹೋಟೆಲಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಡಳಿತಾರೂಢ ಬಿಜೆಪಿ ಸರ್ಕಾರ ಒಂದು ಸಮುದಾಯವನ್ನು ಗುರಿಯಾಗಿ ಇಟ್ಟುಕೊಂಡು ಅಸಾಂವಿಧಾನಿಕವಾಗಿ ಮೀಸಲಾತಿಯನ್ನು ಕಿತ್ತೆಸೆಯಲಾಗಿದೆ.ರಾಜ್ಯದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಾದ ಮುಸ್ಲೀಂರು...

ಜೆಡಿಎಸ್ ತಾಲೂಕಾ ಅಧ್ಯಕ್ಷರಾಗಿ ಸಂತೋಷ ಹರನಾಳ ನೇಮಕ

ಸಿಂದಗಿ: ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ  ಹಾಗೂ ರಾಜ್ಯ ನಾಯಕರ ಸೂಚನೆ ಮೇರೆಗೆ  ತಾಲೂಕಿನ ಜನತಾ ದಳ (ಜಾತ್ಯತಿತ) ಪಕ್ಷದ ತಾಲೂಕ ಅಧ್ಯಕ್ಷರನ್ನಾಗಿ ಸಂತೋಷ ಹರನಾಳ ಅವರನ್ನು  ಈ ಕೂಡಲೇ ಜಾರಿಗೆ ಬರುವಂತೆ ಆದೇಶ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ಬಸವರಾಜ ಮಾಡಗಿ ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು,  ಈ ಪಕ್ಷದ ಗುರುತರವಾದ ಜವಾಬ್ದಾರಿಯನ್ನು...

ವಿಕಲಚೇತನರು ಮತದಾನದಿಂದ ವಂಚಿತರಾಗಬಾರದು; ತಾಪಂ ಇಓ ರಾಠೋಡ

ಸಿಂದಗಿ: ವಿಧಾನಸಭೆ ಚುನಾವಣೆಯಲ್ಲಿ ಯಾವ ವಿಕಲಚೇತನ ವ್ಯಕ್ತಿಗಳೂ ಮತದಾನದಿಂದ ವಂಚಿತರಾಗಬಾರದು ಎಂದು ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ  ಸ್ವೀಪ್ ಸಮಿತಿ ಅಧ್ಯಕ್ಷ ಬಾಬು ರಾಠೋಡ ಹೇಳಿದರು.ಪಟ್ಟಣದ ತಾಲೂಕ ಪಂಚಾಯತ ಸಭಾ ಭವನದಲ್ಲಿ  ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಹಾಗೂ  ನಗರ ಪುನರ್ವಸತಿ ಕಾರ್ಯಕರ್ತರ ವಿಕಲಚೇತನ ಮತದಾನ ಜಾಗೃತಿ ಸಭೆಯ ಅದ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇದೇ...

ಮೋರಟಗಿಯಲ್ಲಿ ಮಹಾವೀರ ಜಯಂತ್ಯುತ್ಸವ

ಸಿಂದಗಿ: ಲೋಕ ಕಲ್ಯಾಣಕ್ಕಾಗಿ ಸರ್ವಸಂಗ ಪರಿತ್ಯಾಗ ಮಾಡಿದ ಮಹಾಮುನಿ, ಅಹಿಂಸೆಯೇ ಪರಮ ಧರ್ಮ ಎಂದು ಸಾರಿದ 24ನೇ ಜೈನ ತೀರ್ಥಂಕರರಾದ ಭಗವಾನ್ ವರ್ಧಮಾನ್ ಮಹಾವೀರರ ಜಯಂತಿಯಂದು ಅವರ ತತ್ವ-ಚಿಂತನೆಗಳು, ಬೋಧನೆಗಳು ಸಮಾಜಕ್ಕೆ ದಾರಿ ದೀಪವಾಗಲಿ ಎಂದು ನೂರಂದೇಶ್ವರ ಶಿಕ್ಷಣ ಸಂಸ್ಥೆಯ ಶಿಕ್ಷಕ ಪದ್ಮರಾಜ ಪಾಟೀಲ ಹೇಳಿದರು.ತಾಲೂಕಿನ ಮೋರಟಗಿ ಗ್ರಾಮದ ನೂತನ ಜೈನ್ ಬಸದಿಯಲ್ಲಿ ಏರ್ಪಡಿಸಿದ  ಮಹಾವೀರ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group