spot_img
spot_img

ಅಕ್ಕನ ಕವಿತೆಗಳು

Must Read

- Advertisement -

(ಡಾ. ಅನ್ನಪೂರ್ಣ ಹಿರೇಮಠ, ಪುಷ್ಪ ಮುರಗೋಡ, ಮಂಜುಶ್ರೀ, ಸೌಭಾಗ್ಯ ಅಶೋಕ, ಬಸವರಾಜ ಹಾವಣ್ಣವರ )

ಅಕ್ಕಮಹಾದೇವಿಯೇ  ನಿನಗೆ ಶರಣು 

ಕೇಶಾಂಬರ ಧಾರಿನಿ,ದಿಗಂಬರಾಯಿನಿ ಅಕ್ಕಮಹಾದೇವಿ 

ಶಿವನ ಪರಮ ಭಕ್ತೇ, ಇಷ್ಟಲಿಂಗ ಪೂಜೆಗೈವ ಅಕ್ಕಮಹಾದೇವಿ 

- Advertisement -

ವೈರಾಗ್ಯದಾಯಿನಿ,ಸ್ವಾಭಿಮಾನದ ಗಣಿ ಅಕ್ಕಾಮಾದೇವಿ 

ಮೊದಲ ಕವಯತ್ರಿ ,ಮೊದಲ ವಚನ ರಚನಾಗಾರ್ತಿ ಅಕ್ಕಮಹಾದೇವಿ 

ಮೊದಲ ಸಾಹಿತ್ಯಗಾರ್ತಿ, ಜ್ಞಾನ ಚಿಂತಾಮಣಿ ಅಕ್ಕಮಹಾದೇವಿ 

- Advertisement -

ಸ್ತ್ರೀ ಸ್ವಾತಂತ್ರ್ಯಕ್ಕಾಗಿ ಹೋರಾಡಿದ,

ಅಕ್ಕಮಹಾದೇವಿ 

ಐಹಿಕ ಸುಖ ಭೋಗವನ್ನು ತೊರೆದ, ವೀರ ಸನ್ಯಾಸಿನಿ ಅಕ್ಕಮಹಾದೇವಿ

ಕಾಮವ ಅರಿಯದ ಅಪರಂಜಿ 

ಅಕ್ಕಮಹಾದೇವಿ 

ಚೆನ್ನ ಮಲ್ಲಿಕಾರ್ಜುನ ನನ್ನೇ ಪತಿಯೆಂದ ಅಕ್ಕ ಮಹಾದೇವಿ ,ಚೆನ್ನ ಮಲ್ಲಿಕಾರ್ಜುನ ನಿಗೆ ತನ್ನನ್ನೇ ಅರ್ಪಿಸಿಕೊಂಡ ಅಕ್ಕಮಹಾದೇವಿ 

ಅನುಭವ ಮಂಟಪದಲ್ಲಿ ಅಲ್ಲಮ ಪ್ರಭುಗಳು ಕೇಳಿದ ಪ್ರಶ್ನೆಗಳಿಗೆ ಘನವಾಗಿ ಉತ್ತರ ನೀಡಿದ 

ಜ್ಞಾನ ಶಿರೋಮಣಿ ಅಕ್ಕಮಹಾದೇವಿ 

ಅಲ್ಲಮ ದೇವನಿಂದ “ವಿಶ್ವ ಸ್ತ್ರೀ ಕುಲದ ಜ್ಯೋತಿಯೆಂದು” ಬಿರಿದು ಪಡೆದ ಅಕ್ಕಮಹಾದೇವಿ,ಸ್ತ್ರೀ ಕುಲವ ಜಾಗೃತಗೊಳಿಸಿದ ಚೇತನಾ ಅಕ್ಕಮಹಾದೇವಿ 

ಬಸವಣ್ಣರಿಂದ “ಅಕ್ಕನೆಂಬ ಬಿರುದು ಪಡೆದು, ಜಗತ್ತಿಗೇ ಅಕ್ಕನಾದ” ಅಕ್ಕಮಹಾದೇವಿ 

ಕದಳಿಯಲ್ಲಿ ಶ್ರೀಶೈಲದ ಮಲ್ಲಿಕಾರ್ಜುನನಲ್ಲಿ ಲೀನವಾದ ಅಕ್ಕ ಮಹಾದೇವಿ ನಿನಗೆ ಶರಣು ಶರಣಾರ್ಥಿಗಳು

ಶ್ರೀಮತಿ ಸೌಭಾಗ್ಯ ಅಶೋಕ ಕೊಪ್ಪ,ಗೋಕಾಕ


ಅಕ್ಕಮಹಾದೇವಿ

ಕರುನಾಡಿನ ಪುಣ್ಯತಾಣ ಉಡಗಣಿ ಗ್ರಾಮದಲಿ

ನಿರ್ಮಲಶೆಟ್ಟಿ ಸುಮತಿಯರ ಮಗಳಾಗಿ ಹುಟ್ಟಿದಳು

ಚಿಪ್ಪಿನ ಮುತ್ತಂತೆ ಅಂದವಾಗಿ ಮುದ್ದಾಗಿ ಬೆಳೆದಳು

ಪುಟ್ಟ ವಯಸ್ಸಲ್ಲೇ ಲಿಂಗದೀಕ್ಷೆಯು ಗುರುಗಳು ಹೇಳಿದರು

ಇದು ಆಧ್ಯಾತ್ಮಿಕ ಮದುವೆ ಲಿಂಗ ಪತಿಯಾದನಿಂದು ನಿನಗೆ//

ನಿತ್ಯ ಲಿಂಗನಿಷ್ಟ ಪೂಜೆಯೇ ಶಿವನೊಲುಮೆಯ

 ಮಾರ್ಗವೆಂದರು, ಅಂದೇ ಅಕ್ಕ ಶಪಥಗೈದಳು

 ಲಿಂಗದೇವನೇ ಮಲ್ಲಿಕಾರ್ಜುನ ನನ್ನವನೆಂದು

ಅವನ ಕಾಣುವ ದಾರಿಯೊಂದೆ ನನಗೆಂದಳು

ನಿತ್ಯ ಲಿಂಗ ಪೂಜೆಯಲಿ ನಿರತಳಾದಳು//

ತಂದೆ-ತಾಯಿ ಮದುವೆಯೆಂದರು

ಲಿಂಗದೀಕ್ಷೆಯಂದೇ ನನ್ನ ಮದುವೆಯಾಗಿದೆ

ಮಲ್ಲಿಕಾರ್ಜುನ ನನ್ನ ಪತಿಯಾಗಿಹನು ಎಂದಳು

ಅವನಿಗೆ ನಾನೊಲಿದಿರುವೆ ತನುಮನ ಅರ್ಪಿಸಿರುವೆ

ಎಂದು ತನ್ನಿಚ್ಛೆಯ ಸಾವಧಾನದಿ ಅರುಹಿದಳು//

ಅಂದೊಮ್ಮೆ ಉಡಗಣಿ ಮದುವನಗಿತ್ತಿಯಂತೆ

ಶೃಂಗಾರಗೊಂಡಿತ್ತು, ರಾಜ ಕೌಶಿಕನ ವೈಭವದ

ಮೆರವಣಿಗೆ ಬರುತ್ತಿತ್ತು, ನೋಡುತಳಿದ್ದಳು

ಛಾವಣಿ ಮೇಲೆ ನಿಂತು ಸಖಿಯರ  ಜೊತೆಗೆ 

ನಗುತಾ ದಿವ್ಯ ಮನಿ ಮಹಾದೇವಿ ನಿಂತಿದ್ದಳು//

ನೋಡಿದ ಕೌಶಿಕ ಮರುಳಾದ ಸೌಂದರ್ಯಕೆ

ಮಂತ್ರಿಯ ಕಳಿಸಿದ ಮಹದೇವಿಯ ಮದುವೆಯಾಗುವೆನೆಂದ

ಒಪ್ಪದಿದ್ದರೆ ತಂದೆಗೆ ಘೋರ ಶಿಕ್ಷೆಯೆಂದ ಉಪಾಯಗಾನದೆ

ಮೂರು ಸವಾಲು ಹಾಕಿದಳು ಅಕ್ಕಕೌಶಿಕಗೆ ಲಿಂಗವ ಧರಿಸು

ದಾಸೋಹ ಶರಣ ಸೇವೆಗೆ ವಿರೋಧ ಮಾಡಬಾರದೆಂದಳು//

ನನ್ನಿಚ್ಛೆ ಇಲ್ಲದೆ ಮುಟ್ಟದಿರು ನನ್ನನೆಂದು ಹೇಳಿದಳು

ನಿತ್ಯ ಶರಣಸೇವೆ ಲಿಂಗ ಪೂಜೆಯಲಿ ನಿರತಳಾದಳು

ಸೌಂದರ್ಯಕೆ ಮರುಳಾಗಿ ವಚನ ಮುರಿದ ಮುಟ್ಟಿದ ರಾಜ

ಉಗ್ರ ರೂಪ ತಾಳಿ ಬಟ್ಟೆ ಕಿತ್ತೆಸೆದು ನಿಂತಳು

ನೋಡಿಕೋ ಇದರಲ್ಲೇನಿದೆ ಎಂದಳು//

ಮಚ್ಚೆ ಮಾಂಸದ ದುರ್ಗಂಧದ ದೇಹವಿದು

ಮಲಮೂತ್ರದ ಕುಡಿಕೆ ನೋಡಿದು ಎಂದಳು

ಪಾರ್ವತಿಯ ಪ್ರತಿರೂಪ ಮಹಾದೇವಿಯು

ಆಧ್ಯಾತ್ಮಿಕ ಶರಣೆ ತಾಯಿಯೆಂದು ನಮಿಸಿದ ಕೌಶಿಕ

ಅರಮನೆ ಬಿಟ್ಟು ವೈರಾಗ್ಯನಿಧಿ ಹೊರಟಳು//

ತಾಯಿ ಗೆಳತಿಯರು ಉಡು ತಡಿ ಉಡು ತಡಿ

ಎಂದರು ಅಂದಿನಿಂದ ಇದು ಉಡತಡಿಯಾಯಿತು 

ಉಡತಡಿಯಿಂದ ನಿಲ್ಲದೆ ನಡೆದಳು 

ಅಚಲ ಮಾರ್ಗವ ತುಳಿಯುತ ಮಹಾದೇವಿ

ಬೆಚ್ಚದೆ ಬೆದರದೆ ದೃಢಸಂಕಲ್ಪದೊಡನೆ//

ಹೊರಟಳು ಬಸವಕಲ್ಯಾಣಕೆ ಶರಣರ ಅರಸಿ

ಅವರ ದರುಶನದಿ ನನ್ನ ಜನ್ಮ ಪಾವನವೆಂದಳು

ಹಸಿವು ನಿದಿರೆ ತೃಷೆಗೆ ಪ್ರಕೃತಿಯನು ಅವಲಂಬಿಸಿ

ತನ್ನ ರಕ್ಷೆಗೆ ತನ್ನೊಂದಿಗೆ ಮಲ್ಲಿಕಾರ್ಜುನನ ಇರಿಸಿ

ಕೇಶದಿ ದೇಹವ ಮುಚ್ಚಿ ನಡೆದಳು ಅಕ್ಕ ಸತ್ಯದ ದರುಶನಕೆ//

ವೈರಾಗ್ಯದ ನಿಧಿಯು ಸೌಂದರ್ಯದ ಖನಿಯು

ಶರಣ ಚಳುವಳಿಯಲಿ ಸ್ವಾಭಿಮಾನದ ಸುಧೆಯು

ಜಗಕ್ಕೆಲ್ಲ ಅಕ್ಕರೆಯ ಅರಿವಿನ ಅಕ್ಕಳಿವಳು

ಪ್ರಪ್ರಥಮ ಮಹಿಳಾ ಪ್ರಬುದ್ಧ ಕವಿಯಿತ್ರಿಯು

ಯೋಗಾಂಗತ್ರಿವಿಧ, ಸೃಷ್ಟಿವಚನ ,ಮಂತ್ರಗೋಪ್ಯಗಳ ರಚನೆ//

ವೈಚಾರಿಕ ಅನುಭವಪೂರ್ಣ ಜೀವನಕೆ ಸಿಲುಕಿ

ವೈಭವ ಆಡಂಬರ ಭೋಗಲಾಲಸೆಗಳ ತ್ಯಜಿಸಿ

ಬಂಡಾಯದ ಕವಿಯಿತ್ರಿಯಾಗಿ ಮಿಂಚಿ

ಮಹಿಳೆಯರಿಗೆ ದಿಟ್ಟ ಪ್ರತಿನಿಧಿಯಾಗಿ ನಿಂತು

ಬಸವಾದಿ ಪ್ರಮಥರಲಿ ಕಿರಿಯ ವಚನಕಾರಳಾಗಿ

ಜಗದಿ ಬೆಳಗುತಿಹಳು ಮನ ಮನೆಗಳಿಗೆ ಬೆಳಕಾಗಿ//

ಡಾ ಅನ್ನಪೂರ್ಣ ಹಿರೇಮಠ


ವೀರ ವಿರಾಗಿಣಿ ಅಕ್ಕಮಹಾದೇವಿ

ವೀರ ವಿರಕ್ತ ಶಿವಯೋಗಿಣಿ

ಉಡುತಡಿಯ ಅಕ್ಕ ವಿರಾಗಿಣಿ 

ವಚನ ಸಾಹಿತ್ಯ ತರಂಗಿಣಿ

ಶರಣಯರಲಿ  ತತ್ವ ಶಿಖಾಮಣಿ

ಅಕ್ಕಮಹಾದೇವಿ.

ಮಲ್ಲಿಕಾರ್ಜುನನೇ ಎನಗೆ ಗಂಡನೆಂದು

ಲೌಕಿಕದ ಮನೆ ತೊರೆದು

ಅಲೌಕಿಕದ ಮನೆ ಸೇರಿದ

ಅನುಭಾವದ ಆತ್ಮಜ್ಯೋತಿ

ಅಕ್ಕಮಹಾದೇವಿ.

ಪ್ರಜಾ ರಕ್ಷಕನೇ ಭಕ್ಷಕನಾಗಲು

ಕಾಮಿಸಲು ಬಂದ ಕೌಶಿಕನ ತೊರೆದು

ಅನಿತ್ಯ ಕಾಮದ ಮೋಹನಳಿಸಿ

ದಿಗಂಬರವನ್ನೇ ದಿವ್ಯಾಂಬರವಾಗಿಸಿ 

ಹರೆನೊಲುಮಿಗೆ ಹಾತೊರೆದು 

ಹೋದವಳು ಅಕ್ಕಮಹಾದೇವಿ.

ಲೋಕದ ಗಂಡರ ಗೊಡವೆ 

ಎನಗಿಲ್ಲ ಎನ್ನುತ

ಸಾವು ಕೇಡಿಲ್ಲದ 

ಸೀಮೆ ನಿಸ್ಸೀಮೆ ಇಲ್ಲದ

ಭಯವಿಲ್ಲದ ಅಭವ 

ಚೆನ್ನಮಲ್ಲಿಕಾರ್ಜುನನೇ

ಗಂಡನೆಂದು ಕಲ್ಯಾಣದತ್ತ

ಸಾಗಿದವಳು ಅಕ್ಕಮಹಾದೇವಿ.

ಹಸಿವೆಗೆ ಭಿಕ್ಷಾನ್ನಗಳುಂಟು

ತೃಷೆಗೆ ಕೆರೆಬಾವಿಗಳುಂಟು

ಶಯನಕ್ಕೆ ನಿರ್ಜನ ತಾಣ

ಪಾಳು ದೇಗುಲ ವಿಡಿದು

ಆತ್ಮಸಂಗಾತಕೆ ಚನ್ನಮಲ್ಲಿಕಾರ್ಜುನನ

ನೆನೆದು ಧ್ಯಾನಸ್ಥಳಾದಳು

ವೈರಾಗ್ಯ ನಿಧಿ ಅಕ್ಕಮಹಾದೇವಿ.

ಶ್ರೀಮತಿ ಪುಷ್ಪ ಮುರಗೋಡ ಗೋಕಾಕ


 ಅನುಭಾವಿ ಅಕ್ಕ

ಶರಣ ಕುಲದ ಚೇತನ

ನಡೆದ ದಾರಿ ದುರ್ಗಮ

ನುಡಿದಂತೆ ನಡೆದ ಶರಣೆ,

ಭಾವ ದೀವಿಗೆಯ ಅನುಭಾವಿ.

ಅಕ್ಕನಾ ಜನನಾ 

 ದಿನವಿಂದು ಪಾವನಾ

 ಸಾವಿಲ್ಲದವಗೆ ಒಲಿದಾಕೆ

ಭವಿ ಅಲ್ಲ ಅಕ್ಕ ಜಗನ್ಮಾತೆ.

ವ್ಯಾಮೋಹ ತೊರೆದು

ವೈರಾಗ್ಯ ಬಯಸಿ

ವಸ್ತ್ರ ಕಳಚಿ 

ಕೇಶಧೊದಿಕೆ ಹೊತ್ತು,

ನಡೆದಳು ಕಲ್ಯಾಣ ಮಾರ್ಗವರಸಿ.

ಮಾನಾಪಮಾನಗಳ ಮೆಟ್ಟಿ

ನೂರು ಪ್ರಶ್ನೆಗಳಿಗೆ ಉತ್ತರಿಸಿ

ನಂಬಿದ ದೇವನರಸಿ

ನಡೆದು ಬಂದಳು

ಕದಳಿಬನಕೆ

ಭವಹರನ ಕಂಡು

ಬೆರೆತು ಒಂದಾದ ಐಕ್ಯತೆ.


ಮಂಜುಶ್ರೀ ಬಸವರಾಜ ಹಾವಣ್ಣವರ

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ರೇವಣಸಿದ್ದಯ್ಯನವರ ಪುಣ್ಯಸ್ತ್ರೀ ರೇಕಮ್ಮ ಹನ್ನೆರಡನೇ ಶತಮಾನ ಎಂಬುದು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವ ಬಹುಮುಖ್ಯ ಕಾಲಘಟ್ಟ. ಶರಣರು ರಚಿಸಿದ ವಚನಗಳನ್ನು ಕನ್ನಡ ಸಾಹಿತ್ಯದ ಉಪನಿಷತ್ತುಗಳು ಎಂದು...
- Advertisement -

More Articles Like This

- Advertisement -
close
error: Content is protected !!
Join WhatsApp Group