ಸುದ್ದಿಗಳು

ಶೀಘ್ರದಲ್ಲೇ ನಂದಿನಿ ಹಾಲಿನ ದರ ಪರಿಷ್ಕರಣೆ: ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಬೆಳಗಾವಿ: ಶೀಘ್ರದಲ್ಲೇ ನಂದಿನಿ ಹಾಲಿನ ದರ ಪರಿಷ್ಕರಣೆ ಮಾಡಲಾಗುವುದು, ಪ್ರತಿಲೀಟರ್ ಹಾಲಿಗೆ ೩ ರೂಪಾಯಿ ಹೆಚ್ಚಳ ಮಾಡಲಾಗುವುದು, ಈ ದರ ಏರಿಕೆಯಿಂದ ರೈತರಿಗೆ ವರದಾನವಾಗಲಿದೆ ಎಂದು ಕೆಎಂಎಫ್ ಅಧ್ಯಕ್ಷ, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.‘ಭಾನುವಾರದಂದು ಬೆಳಗಾವಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತದಿಂದ ಚನ್ನಮ್ಮನ ಕಿತ್ತೂರಿನ ಹೂಲಿಕಟ್ಟಿ ಕ್ರಾಸ್‌ನಲ್ಲಿ  ೧೦...

ಜಾತ್ರಾ ಮಹೋತ್ಸವಗಳು ಗ್ರಾಮೀಣ ಸಂಸ್ಕೃತಿಯ ಪ್ರತೀಕ- ಈರಣ್ಣ ಕಡಾಡಿ

ಮೂಡಲಗಿ: ನಮ್ಮ ದೇಶದ ಅಸ್ತಿತ್ವ ಉಳಿಯಲು ನಮ್ಮ ಧಾರ್ಮಿಕ ಪರಂಪರೆ, ಸಂಪ್ರದಾಯಗಳ ಆಚರಣೆ ಅತ್ಯವಶ್ಯಕವಾಗಿದೆ ಎಂದು ರಾಜ್ಯಸಭಾ ಸಂಸದ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಅಭಿಪ್ರಾಯಪಟ್ಟರು.ರವಿವಾರ ಅ.30 ರಂದು ಅರಭಾವಿ ಮತಕ್ಷೇತ್ರದ ಹುಣಶ್ಯಾಳ ಪಿ.ಜಿ ಗ್ರಾಮದ ಶ್ರೀ ವೀರಭದ್ರೇಶ್ವರ ಹಾಗೂ ಶ್ರೀ ಮಾತಾ ಭದ್ರಕಾಳಿದೇವಿಯ ಜಾತ್ರಾ ಮಹೋತ್ಸವದ ನಿಮಿತ್ತ...

ಸ್ವಚ್ಛತಾ ಜಾಗೃತಿ ಹಾಗೂ ಶ್ರಮದಾನ ಕಾರ್ಯಕ್ರಮ

ಮೂಡಲಗಿ :  ಮನುಕುಲದ ಉಳಿವಿಗೆ ಸ್ವಚ್ಛ ಪರಿಸರ ಅತಿ ಅವಶ್ಯಕವಾಗಿದೆ ಎಂದು ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಬೆಳಗಾವಿ ಜಿಲ್ಲಾಧ್ಯಕ್ಷ ಸಿದ್ದಣ್ಣ ದುರದುಂಡಿ ಹೇಳಿದರು.ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನೆಹರು ಯುವ ಕೇಂದ್ರ ಬೆಳಗಾವಿ, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಹಾಗೂ ಪುರಸಭೆ ಮೂಡಲಗಿ ಸಮುದಾಯ ಆರೋಗ್ಯ ಕೇಂದ್ರ, ಜೈ ಕರ್ನಾಟಕ...

ಅಮ್ಮಾ ನಾನು ಶಾಲೆಗೆ ಹೋಗುವೆ ‘ ಕಿರುಚಿತ್ರ  ಚಿತ್ರೀಕರಣಕ್ಕೆ ಶಂಕರ ಹಲಗತ್ತಿ ಚಾಲನೆ

"ಶಾಲೆ ಬಿಟ್ಟ ಮಗುವನ್ನು ಶಾಲಾಭಿವೃದ್ಧಿ ಸಮಿತಿ, ಶಾಲಾ ಪ್ರಧಾನ ಗುರುಗಳು ಹಾಗೂ ಸಿಬ್ಬಂದಿ ಮುಖ್ಯವಾಹಿನಿಗೆ ತರುವ ಶೈಕ್ಷಣಿಕ ಕಳಕಳಿಯುಳ್ಳ ವಿಷಯ ವಸ್ತುವನ್ನು ಆಧರಿಸಿದ ಈ ಕಿರುಚಿತ್ರ ಬಿಡುಗಡೆ ಮಾಡಲು ನನಗೆ ತುಂಬಾ ಸಂತೋಷವಾಗುತ್ತಿದೆ. ಈ ಕಿರುಚಿತ್ರ ಎಲ್ಲರಿಗೂ ಪ್ರೇರಣೆಯಾಗಲಿ,ಈ ಮೂಲಕ ನಮ್ಮ ದೇಶದ ಅಮೂಲ್ಯ ಸಂಪತ್ತಾದ ಹಲವಾರು ಮಕ್ಕಳಿಗೆ ದಾರಿದೀಪವಾಗಲಿ ಎಂದು ಹಾರೈಸುವೆ." ಎಂದು...

ಸಾಂಸ್ಕೃತಿಕ ಉತ್ಸವ ‘ ಸಮಾರಂಭ : ಕನ್ನಡಿಗರಿಂದಲೇ ಕನ್ನಡದ ಅಭಿವೃದ್ಧಿ ಇನ್ನೂ ಆಗಬೇಕು.- ಕ.ಸಾ. ಪ ಅಧ್ಯಕ್ಷೆ ಮಂಗಲಾ ಮೆಟಗುಡ್ಡ

ಕನ್ನಡ ನಾಡಿನಲ್ಲಿ ಕನ್ನಡ ಶ್ರೇಷ್ಠ ಭಾಷೆ, ಕನ್ನಡ ಭಾಷೆ ಸೇರಿದಂತೆ ಕನ್ನಡ ಶಾಲೆಗಳು ಕನ್ನಡಿಗರಿಂದಲೇ ಇನ್ನೂ ಹೆಚ್ಚು ಅಭಿವೃದ್ಧಿ ಆಗಬೇಕಿದೆ.  ನಮ್ಮ ನಾಡಿನ ಮತ್ತು ಭಾಷೆಯ ಶ್ರೇಷ್ಠತೆ ವಿದೇಶದಲ್ಲಿ ಪರಿಚಯಿಸಲು ಸರಕಾರ ಮತ್ತು ಸಹಕಾರ ಸಂಸ್ಥೆಗಳು ಕಾರ್ಯನಿರ್ವಹಿಸಬೇಕಿದೆ  ಎಂದು ಬೆಳಗಾವಿ ಕಸಾಪ ಅಧ್ಯಕ್ಷೆ ಶ್ರೀಮತಿ ಮಂಗಲಾ ಮೆಟಗುಡ್ಡ ಹೇಳಿದರು.ಜಿಲ್ಲಾ ಲೇಖಕಿಯರ ಸಂಘ ಮತ್ತು ಗಡಿ...

ರಾಷ್ಟ್ರ ಮಟ್ಟದ ಕುಸ್ತಿ ಸ್ಪರ್ಧೆಗೆ ಶಿಕ್ಷಕ ಶಿರೊಳೆ ಆಯ್ಕೆ

ಬೆಳಗಾವಿ: ತಾಲೂಕಿನ ಖಾದರವಾಡಿ ಪ್ರೌಢ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಅತುಲ್ ಸುರೇಶ ಶಿರೊಳೆ ಅವರು ಅಂತಾರಾಷ್ಟ್ರೀಯ ಕುಸ್ತಿ ಪಟು ನವಂಬರ್ 1 ರಂದು ನಾಗಾಲ್ಯಾoಡಿಗೆ ತೆರಳಲಿದ್ದಾರೆ.ನಾಗಾಲ್ಯಾಂಡ್ ನಲ್ಲಿ ರಾಷ್ಟ್ರೀಯ ಕುಸ್ತಿ ಚಾಂಪಿಯನಶಿಪ್ -2022 ರಲ್ಲಿ ಪಾಲ್ಗೊಳ್ಳಲು ಶಿರೊಳೆ ಅವರು ತೆರಳುತ್ತಿದ್ದು ಅವರಿಗೆ ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿಗಳಾದ ಸುರೇಶ ಹಂಚಿನಾಳ, ಜೊತೆಗೆ ತಾಲೂಕಿನ ಪ್ರಾಥಮಿಕ...

ವಿದ್ಯಾರ್ಥಿನಿ ಕಾವೇರಿ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

ಮೂಡಲಗಿ: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಮೂಡಲಗಿ ವಲಯದ ಶಿವಾಪೂರ(ಹ). ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತೋಟ ನಂಬರ್.1 ರ ವಿದ್ಯಾರ್ಥಿನಿಯಾದ ಕುಮಾರಿ ಕಾವೇರಿ.ಬಿ.ಪಾಟೀಲ್ ಇವಳು ಜಿಲ್ಲಾ ಮಟ್ಟದ ವೈಯಕ್ತಿಕ ಕ್ರೀಡಾಕೂಟದ ನೂರು ಮೀಟರ್ ಓಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.ಇವಳ ಈ ಸಾಧನೆಗೆ  ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎ.ಸಿ.ಮನ್ನಿಕೇರಿ ಮತ್ತು ಶಾಲೆಯ ಎಸ್.ಡಿ.ಎಂ.ಸಿ  ಅಧ್ಯಕ್ಷರು...

ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಕೆ.ಎಚ್.ವಡ್ಡರ ಅವರ ಸನ್ಮಾನ

ಸಿಂದಗಿ- ದೇಶದ ಅಭಿವೃದ್ದಿಯಲ್ಲಿ ಸಹಕಾರಿ ಕ್ಷೇತ್ರದ ಕೊಡುಗೆ ಅನನ್ಯ. ಸಹಕಾರಿ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ತಾಂತ್ರಿಕತೆ ಬರಬೇಕಾಗಿದೆ ಎಂದು ಸಹಕಾರಿ ಧುರೀಣ ಶಿವಪ್ಪಗೌಡ ಬಿರಾದಾರ ಹೇಳಿದರು.ಪಟ್ಟಣದ ಎಚ್.ಜಿ.ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ನಡೆದ 1992 ಬ್ಯಾಚಿನ ವಿದ್ಯಾರ್ಥಿ ಕೆ.ಎಚ್.ವಡ್ಡರ ಅವರು ಸಹಕಾರಿ ಸಂಘಗಳ ಸಹಾಯಕ ನಿಬಂಧಕರಾದ ಹಿನ್ನೆಲೆಯಲ್ಲಿ ಸನ್ಮಾನವನ್ನು ನೆರವೇರಿಸಿ ಮಾತನಾಡಿ, ಒಂದು ಕಾಲದಲ್ಲಿ...

ಬುಡಕಟ್ಟು ಸಂಸ್ಕೃತಿ ರಕ್ಷಿಸುವ ಕಾರ್ಯವಾಗಬೇಕು – ಡಾ. ಶಾಂತಿಲಾಲ

ಸಿಂದಗಿ- ಬುಡಕಟ್ಟು  ಜನಾಂಗದ ಕಲೆ, ಆಚಾರ ವಿಚಾರ ವೇಷ ಭೂಷಣಗಳು ಸಂಸ್ಕೃತಿಯನ್ನು ಅನಾವರಣಗೊಳಿಸುತ್ತವೆ. ಆ ಜನಾಂಗದ ಕಲೆಗಳು ಇಂದು ಅಳಿವಿನ ಅಂಚಿನಲ್ಲಿದೆ ಅವುಗಳನ್ನು ರಕ್ಷಿಸುವ ಮತ್ತು ಬೆಳೆಸುವ ಕಾರ್ಯವಾಗಬೇಕು ಎಂದು ಸ್ಥಳಿಯ ಎಚ್.ಜಿ.ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಡಾ. ಶಾಂತಿಲಾಲ ಚವ್ಹಾಣ ಅಭಿಪ್ರಾಯ ಪಟ್ಟರು.ಪಟ್ಟಣದ ಪಿ.ಇ.ಎಸ್ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಕನ್ನಡ ಜಾನಪದ ಪರಿಷತ್ತು...

ರಂಗಭೂಮಿ ಕಲಾವಿದರ ಪರಿಸ್ಥಿತಿ ಕಳವಳಕಾರಿ – ಅಶೋಕ ಮನಗೂಳಿ

ಸಿಂದಗಿ: ರಂಗಭೂಮಿಯನ್ನು ಉಳಿಸಿ ಬೆಳೆಸುತ್ತಿರುವ ಗ್ರಾಮೀಣ ಜನತೆಯ ಕಾರ್ಯ ಅಭಿನಂದಾರ್ಹ ಆದರೆ ಗ್ರಾಮೀಣ ಸೊಗಡು ಹಾಗೂ ಧರ್ಮ, ಸಂಸ್ಕೃತಿಯನ್ನು ಬೆಳೆಸುತ್ತಿರುವ ರಂಗಭೂಮಿ ನಾಟಕಗಳ ಕಲಾವಿದರು ಇಂದಿನ ದೃಶ್ಯ ಮಾದ್ಯಮಕ್ಕೆ ಸಿಲುಕಿ ಭಿಕ್ಷೆ ಬೇಡುವ ಪರಿಸ್ಥಿತಿ ಬಂದೊದಗಿದೆ ಎಂದು ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ ಕಳವಳ ವ್ಯಕ್ತಪಡಿಸಿದರು.ತಾಲೂಕಿನ ಸುಕ್ಷೇತ್ರ ಹಿಕ್ಕನಗುತ್ತಿ ಗ್ರಾಮದ ಶ್ರೀ ಸದ್ಗುರು ಪುಂಡಲಿಂಗ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group