ಸುದ್ದಿಗಳು

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರಿಂದ ನೂತನ ಅಂಬ್ಯುಲೆನ್ಸ್ ವಾಹನಗಳ ಸಮರ್ಪಣೆ

ಬೆಟಗೇರಿ: ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ತಮ್ಮ 2021-22ನೇ ಸಾಲಿನ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯ ಸುಮಾರು 18.90 ಲಕ್ಷ ರೂ.ಗಳ ವೆಚ್ಚದಲ್ಲಿ ನೀಡಿರುವ ನೂತನ ಅಂಬ್ಯುಲೆನ್ಸ್ ವಾಹನಗಳ ಸಮರ್ಪಣೆ, ಚಾಲನೆ ನೀಡುವ ಕಾರ್ಯಕ್ರಮವನ್ನು ಅರಭಾಂವಿ ಮತಕ್ಷೇತ್ರ ವ್ಯಾಪ್ತಿಯ ಬೆಟಗೇರಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶನಿವಾರ ಜುಲೈ ೧೭ ರಂದು ಮುಂಜಾನೆ...

ಸಂಭಾವ್ಯ ಪ್ರವಾಹ ಭೀತಿಯನ್ನು ಎದುರಿಸಲು ಸಿದ್ಧರಾಗಿ : ಶಾಸಕ ಬಾಲಚಂದ್ರ ಜಾರಕಿಹೊಳಿ

ಗೋಕಾಕ : ಧಾರಾಕಾರ ಮಳೆಯಿಂದಾಗಿ ಜುಲೈ ಮತ್ತು ಅಗಸ್ಟ್ ತಿಂಗಳಲ್ಲಿ ಪ್ರವಾಹ ಭೀತಿ ಎದುರಾಗಬಹುದು. ಇದನ್ನು ನಿಭಾಯಿಸಲು ಈಗಿಂದಲೇ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುವಂತೆ ಅರಭಾವಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.ಶುಕ್ರವಾರದಂದು ಇಲ್ಲಿಯ ತಾಲೂಕಾ ಪಂಚಾಯತ ಸಭಾಗೃಹದಲ್ಲಿ ಗೋಕಾಕ ಮತ್ತು ಮೂಡಲಗಿ ತಾಲೂಕಾ ಮಟ್ಟದ ಅಧಿಕಾರಿಗಳ...

ನಲಿ ಕಲಿ ಸಾಹಿತ್ಯ ರಚನಾ ಸಮಿತಿಯ ಸದಸ್ಯರಾಗಿ ಮನೋಹರ ಚೀಲದ ಆಯ್ಕೆ

ಸವದತ್ತಿಃ ತಾಲೂಕಿನ ಸತ್ತಿಗೇರಿ ತೋಟದ ಸರಕಾರಿ ಕಿರಿಯ ಶಾಲೆಯ ಶಿಕ್ಷಕರಾದ ಮನೋಹರ ಚೀಲದ ಇವರನ್ನು ನಲಿಕಲಿ ಸೇತುಬಂಧ ಅಭ್ಯಾಸ ಪುಸ್ತಕದ ಸಾಹಿತ್ಯ ರಚನಾ ಸಮಿತಿಯ ಸದಸ್ಯರನ್ನಾಗಿ ಸಮಗ್ರ ಶಿಕ್ಷಣ ಕರ್ನಾಟಕ ಡಿ.ಎಸ್.ಇ.ಆರ್.ಟಿ ಬೆಂಗಳೂರು ಇವರು ಆಯ್ಕೆ ಮಾಡಿದ್ದಾರೆ.ಸದರಿ ಶಿಕ್ಷಕರು ರಾಜ್ಯ ಮಟ್ಟದ ವಿವಿಧ ವಿಷಯಗಳಲ್ಲಿ ಸಂಪನ್ನೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು ಕಳೆದ ವರ್ಷ ಜಿಲ್ಲಾ...

ವಿದ್ಯಾರ್ಥಿಗಳಿಗೆ ಮಾಸ್ಕ್ ವಿತರಿಸಿದ ವೈದ್ಯ

ಬೆಳಗಾವಿ - ರಾಜಲಕ್ಷ್ಮಿ ಚಿಲ್ಡ್ರನ್ ಫೌಂಡೇಶನ್ ಬೆಳಗಾವಿಯ ನಿರ್ದೇಶಕರೂ ಹಾಗೂ ಲೇಕ್ ವ್ಯೂ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ|| ಶಶಿಕಾಂತ ವಾಯ್. ಕುಲಗೋಡರವರು  ಎಸ್ ಎಸ್ ಎಲ್ ಸಿ ಪರೀಕ್ಷಾರ್ಥಿಗಳಿಗೆ ವಿತರಿಸಲು ಐದು ಸಾವಿರ ಮಾಸ್ಕ್ ಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಡಾ. ಎ ಬಿ ಪುಂಡಲೀಕರವರಿಗೆ ಹಸ್ತಾಂತರಿಸಿದರು. ಡಿವಾಯ್ ಪಿ ಸಿ ಬಸವರಾಜ...

ನಲಿಕಲಿ ಸಾಹಿತ್ಯ ರಚನಾ ಸಮಿತಿಯ ಸದಸ್ಯರಾಗಿ ತಿಪ್ಪಾನಾಯ್ಕ ಆಯ್ಕೆ

ಸವದತ್ತಿ: ತಾಲೂಕಿನ ಜನತಾ ಕಾಲೋನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿಜ್ಞಾನ ಶಿಕ್ಷಕರಾದ ತಿಪ್ಪಾನಾಯ್ಕ ಎಲ್ ಇವರನ್ನು ನಲಿಕಲಿ ಸೇತುಬಂಧ ಅಭ್ಯಾಸ ಪುಸ್ತಕದ ಸಾಹಿತ್ಯ ರಚನಾ ಸಮಿತಿಯ ಸದಸ್ಯರನ್ನಾಗಿ ಸಮಗ್ರ ಶಿಕ್ಷಣ ಕರ್ನಾಟಕ ಡಿ ಎಸ್ ಇ ಆರ್ ಟಿ ಬೆಂಗಳೂರು ಇವರು ಆಯ್ಕೆ ಮಾಡಲಾಗಿದೆ.ಸದರಿ ಶಿಕ್ಷಕರು ರಾಜ್ಯಮಟ್ಟದ ವಿವಿಧ ವಿಷಯಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ...

ಅವ್ಯವಸ್ಥೆಯ ತಾಣವಾದ ಸಿಂದಗಿ ಪಟ್ಟಣ ; ಸಾರ್ವಜನಿಕರಿಂದ ಹಿಡಿಶಾಪ

ಸಿಂದಗಿ: ಪಟ್ಟಣದಲ್ಲಿ ಎಲ್ಲೆಂದರಲ್ಲಿ ತಗ್ಗು-ದಿನ್ನೆ ತುಂಬಿದ ರಸ್ತೆಗಳು ಹಾಗೂ ಗಟಾರುಗಳು ತುಂಬಿ ರಸ್ತೆಗಳಲ್ಲಿ ಮಲೀನ ನೀರು ಹರಿದು ಕೆಸರುಗದ್ದೆಯಂತಾಗಿ ಪುರಸಭೆಯ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ.ಪಟ್ಟಣದ ಪ್ರಮುಖ ರಸ್ತೆಗಳು ಎಲ್ಲೆಂದರಲ್ಲಿ ತಗ್ಗುಗಳು ಬಿದ್ದು ರಸ್ತೆ ಹಾಳಾಗಿ ಹೋಗಿವೆ ಅದರಲ್ಲಿ ಕಳೇದ 2-3 ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ನಗರದ ಹೃದಯ ಭಾಗವಾಗಿರುವ ಟಿಪ್ಪು ಸುಲ್ತಾನ ವೃತ್ತದಲ್ಲಿನ ರಸ್ತೆ...

ಮನಸ್ಸನ್ನು ಸತ್ಕರ್ಮಕ್ಕೆ ಹಚ್ಚುವುದರಿಂದ ಬದುಕಿನಲ್ಲಿ ಉನ್ನತಿಯನ್ನು ಕಾಣಬಹುದು – ಅಭಿನವ ನಾಗಲಿಂಗ ಮಹಾಸ್ವಾಮಿಗಳು

ಸವದತ್ತಿ: ಬದುಕಿನಲ್ಲಿ ನಮ್ಮ ಮನಸ್ಸನ್ನು ಸತ್ಕರ್ಮಕ್ಕೆ ಹಚ್ಚುವುದರಿಂದ ಉನ್ನತಿಯನ್ನು ಕಾಣಬಹುದು. ದುರಿತ ಕರ್ಮವನು ಮಾಡಬಾರದು.ಸತ್ಕರ್ಮದಿಂದ ಬದುಕನ್ನು ನಡೆಸಬೇಕು ಕೆಟ್ಟ ಕೆಲಸ ಮಾಡಿದರೆ ಪಾಪಕ್ಕೆ ಗುರಿಯಾಗುತ್ತೇವೆ. ನಮ್ಮ ಮನಸ್ಸಿನಲ್ಲಿ ನಾನೇನು ಬಹಳ ಕೆಟ್ಟದ್ದನ್ನು ಮಾಡಿಲ್ಲ ಬೇರೆಯವರು ನನಗಿಂತ ಹೆಚ್ಚು ಕೆಟ್ಟದ್ದನ್ನು ಮಾಡಿರುವರು ಎಂದು ಭಾವಿಸಿದವರು ಸ್ವಲ್ಪವಾದರೂ ಕೆಟ್ಟ ಕರ್ಮ ಮಾಡಿದ್ದೇನೆಂದು ತಿಳಿದರೆ ಅಲ್ಪವೂ ಕೂಡ ಕೆಟ್ಟದ್ದೇ.ತಿಳಿಯದೇ...

ಸಣ್ಣಪುಟ್ಟ ವ್ಯತ್ಯಾಸಗಳನ್ನು ಬದಿಗಿಟ್ಟು ಗ್ರಾಮದ ಅಭಿವೃದ್ಧಿಗೆ ಪಣ ತೊಡಿ: ಶಾಸಕ ಬಾಲಚಂದ್ರ ಜಾರಕಿಹೊಳಿ

ತುಕ್ಕಾನಟ್ಟಿ ಗ್ರಾಮದಲ್ಲಿ 1.54 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿದ ಬಾಲಚಂದ್ರ ಜಾರಕಿಹೊಳಿ ಮೂಡಲಗಿ : ಚುನಾವಣೆ ಬಂದಾಗ ಮಾತ್ರ ರಾಜಕೀಯ ಮಾಡಿ. ಚುನಾವಣೆ ಮುಗಿದ ಬಳಿಕ ಎಲ್ಲರೂ ಒಂದಾಗಿ-ಒಗ್ಗಟ್ಟಾಗಿ ಗ್ರಾಮದ ಅಭಿವೃದ್ಧಿಗೆ ಪಣತೊಡಿ ಎಂದು ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಗ್ರಾಮಸ್ಥರಿಗೆ ಕಿವಿಮಾತು ಹೇಳಿದರು.ಗುರುವಾರದಂದು ತಾಲೂಕಿನ ತುಕ್ಕಾನಟ್ಟಿ ಗ್ರಾಮಕ್ಕೆ...

ಉದ್ಯೋಗ ಖಾತ್ರಿ ಯೋಜನೆ ಸದುಪಯೋಗಪಡಿಸಿಕೊಳ್ಳಲು ಕರೆ

ಸಿಂದಗಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಕಾಯ್ದೆಯಡಿ ದುಡಿಯುವ ಕೈಗಳಿಗೆ ಒಂದು ಕುಟುಂಬಕ್ಕೆ ಕನಿಷ್ಠ 100 ದಿನಗಳು ಸರಕಾರ ಉದ್ಯೋಗ ಅವಕಾಶ ಕಲ್ಪಿಸಿ ಉತ್ತಮ ವೇತನ ಕೊಡುತ್ತಿದ್ದು, ಗ್ರಾಮದ ನಾಗರಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಾಲೂಕ ಪಂಚಾಯತಿ ಐಇಸಿ ಸಂಯೋಜಕ ಭೀಮರಾಯ ಚೌಧರಿ ಅವರು ಹೇಳಿದರು,ತಾಲೂಕಿನ ಬಳಗಾನೂರು ಗ್ರಾಮದಲ್ಲಿ ಮಹಿಳಾ ಕಾಯಕೋತ್ಸವ ಮತ್ತು...

ದಲಿತ ಅಹವಾಲು ಆಲಿಸಲಿರುವ ಡಿಕೆಶಿ ; ದಿ. ೧೭ ಕ್ಕೆ ಸಿಂದಗಿಗೆ

ಸಿಂದಗಿ: ರಾಜ್ಯದಲ್ಲಿ ದಲಿತರ ಸಮಸ್ಯೆಗಳ ಕುರಿತಾಗಿ ದಲಿತ ಸಮುದಾಯಗಳ ಆರ್ಥಿಕ, ಸಾಮಾಜಿಕ ಸ್ಥಿತಿಗತಿಗಳ ಕುರಿತಾಗಿ ಅಹವಾಲುಗಳನ್ನು ಆಲಿಸಲು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ ಅವರು ಜು. ೧೭ ರಂದು ಬೆಳಿಗ್ಗೆ ೧೧ ಕ್ಕೆ ಸಿಂದಗಿ ನಗರಕ್ಕೆ ಆಗಮಿಸಿ ಸಂವಾದ ನಡೆಸಲಿದ್ದಾರೆ ಎಂದು ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ರಾಜು ಆಲಗೂರ ಹೇಳಿದರು.ಪಟ್ಟಣದ ಎಪಿಎಂಸಿ ಅವರಣದಲ್ಲಿರುವ ಕಾಂಗ್ರೆಸ್ ಸಮಿತಿ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group