Uncategorized
ಎಣ್ಣೆ ಸುರಿದರೆ ಮಾತ್ರ ನುಣ್ಣಗುರಿವುದು ಬೆಂಕಿ
ಸುರಿಯದಿರೆ ನಂದಿ ಹೋಗುವುದು ಬೇಗ
ಕೋಪಿಗೆದುರುತ್ತರವ ನೀಡದಿರುವುದೆ ಲೇಸು
ಸಹಿಸುವನೆ ಜಯಿಸುವನು - ಎಮ್ಮೆತಮ್ಮಶಬ್ಧಾರ್ಥ
ಎದರುತ್ತರ = ಎದರಾಡು, ವಿರೋಧಿಸಿ ನುಡಿ. ಲೇಸು = ಒಳಿತುತಾತ್ಪರ್ಯ
ಬೆಂಕಿ ಉರಿಯಲಿಕ್ಕೆ ಯಾವುದಾದರು ಇಂಧನ ಬೇಕೇಬೇಕು.
ಇಂಧನ ಇರದಿದ್ದರೆ ಅದು ಉರಿಯುವುದಿಲ್ಲ. ದೀಪಕ್ಕೆ ಎಣ್ಣೆ ಹಾಕಿದರೆ ಮಾತ್ರ ಹತ್ತಿಕೊಂಡು ಚೆನ್ನಾಗಿ ಉರಿಯುತ್ತದೆ.
ಎಣ್ಣೆಯನ್ನು ಹಾಕುವುದು ಬಿಟ್ಟರೆ ತನ್ನಷ್ಟಕ್ಕೆ ತಾನು ಆರುತ್ತದೆ.
ಹಾಗೆ...
Uncategorized
ಮನೆಯೇಕೆ ? ಮಠವೇಕೆ ? ಗಿರಿಶಿಖರಗವಿಯೇಕೆ ?
ಮನದಲಿ ಸಮಾಧಾನವುಳ್ಳವನಿಗೆ
ಜಪವೇಕೆ ? ತಪವೇಕೆ ? ಧ್ಯಾನಮೌನಗಳೇಕೆ ?
ತನ್ನ ತಾನರಿದವಗೆ - ಎಮ್ಮೆತಮ್ಮಶಬ್ಧಾರ್ಥ
ಗಿರಿಶಿಖರ = ಪರ್ವತದ ತುದಿತಾತ್ಪರ್ಯ
ತನ್ನ ಮನದಲ್ಲಿ ಶಾಂತಿಯಿಲ್ಲದವನು ಮನೆಯಲ್ಲಿಯೋ
ಮಠದಲ್ಲಿಯೋ ಪರ್ವತದ ತುದಿಯಲ್ಲಿಯೋ ಅಥವಾ
ಗವಿಯಲ್ಲಿಯೋ ಹೋಗಿ ಸಾಧನೆಗೆ ಕೂಡುತ್ತಾನೆ. ಆದರೆ
ಮನದಲ್ಲಿ ಶಾಂತಿ ಸಮಾಧಾನ ನೆಮ್ಮದಿಯಿರುವವನು
ಎಲ್ಲಿದ್ದರೇನು ಸದಾಕಾಲ ಆನಂದಭರಿತನಾಗಿರುತ್ತಾನೆ.
ಕೆಲವರು ಆನಂದವನ್ನು ಪಡೆಯಲಿಕ್ಕೆ ಮಂತ್ರಜಪ ಮಾಡುತ್ತಾರೆ, ತಪಸ್ಸಿಗೆ ಕೂಡುತ್ತಾರೆ...
Uncategorized
ಮೂರ್ತಿಯನೆ ಪೂಜಿಸುತ ಕಾಲಕಳೆಯುವುದೇಕೆ ?
ಮಣಿಯನೆಣೆಸುತ ವೇಳೆ ವ್ಯಯಿಸಲೇಕೆ ?
ಒಂದರ್ಧ ನಿಮಿಷ ನೀ ನಿಜವ ನೆನೆದರೆ ಸಾಕು
ಕಣ್ಮುಂದೆ ಕೈಲಾಸ - ಎಮ್ಮೆತಮ್ಮಶಬ್ಧಾರ್ಥ
ಮಣಿ = ಜಪಮಣಿ. ವೇಳೆ = ಸಮಯ, ಕಾಲತಾತ್ಪರ್ಯ
ದೇವಾಲಯದಲ್ಲಿ ಪ್ರತಿಷ್ಠಾಪಿಸಿದ ದೇವರ ಮೂರ್ತಿಯನ್ನು
ಬರಿದೆ ಭಕ್ತಿಯಿಲ್ಲದೆ ಪೂಜಿಸಿದರೆ ಫಲವಿಲ್ಲ. ಅದರಿಂದ
ಸಮಯ ವ್ಯರ್ಥವಾಗಿ ಹೋಗುತ್ತದೆ. ಅದಕ್ಕಾಗಿ ಸರ್ವಜ್ಞ
ಚಿತ್ತವಿಲ್ಲದೆ ಗುಡಿಯಯ ಸುತ್ತಿದರೆ ಫಲವೇನು ಎಂದು
ಪ್ರಶ್ನಿಸುತ್ತಾನೆ. ಮತ್ತೆ ಕೈಯಲ್ಲಿ ಜಪಮಣಿ...
Uncategorized
ಪರಮಪುರುಷನೆ ತಂದೆ ಪ್ರಕೃತಿದೇವಿಯೆ ತಾಯಿ
ಲೋಕದಿಹ ಜನರೊಡಹುಟ್ಟಿದವರು
ವಾಸಿಸುವ ವಿಶ್ವವಿದೆ ಪುರುಷಪ್ರಕೃತಿಯರ ಮನೆ
ನರರೊಂದೆ ಕುಲದವರು - ಎಮ್ಮೆತಮ್ಮಶಬ್ಧಾರ್ಥ
ಪರಮಪುರುಷ = ಪರಮಾತ್ಮ, ಪರಬ್ರಹ್ಮ
ಪ್ರಕೃತಿದೇವಿ = ಜೀವಾತ್ಮ, ಪಾರ್ವತಿತಾತ್ಪರ್ಯ
ಈ ಜಗತ್ತು ಪುರುಷ ಮತ್ತು ಪ್ರಕೃತಿಯಿಂದ ಸೃಷ್ಟಿಯಾಗಿದೆ.
ಜೀವರಾಶಿಗಳು ಕೂಡ ಇವರೀರ್ವರಿಂದ ಹುಟ್ಟಿಬಂದಿವೆ.
ಹೀಗಾಗಿ ಈ ಜಗತ್ತಿನ ಜನಕ ಪರಮಪುರುಷ ಮತ್ತು ಜನನಿ
ಪ್ರಕೃತಿಮಾತೆ. ಅವರಿಂದ ಸೃಷ್ಟಿಯಾದ ಮಾನವರೆಲ್ಲ ಅವರ
ಮಕ್ಕಳು. ಆದುದರಿಂದ ಅವರೆಲ್ಲ ಸಹೋದರರು ಮತ್ತು
ಸಹೋದರಿಯರು.ಈ...
Uncategorized
ಸಕ್ಕರೆಯ ಅಕ್ಕರೆಯ ಭವ್ಯ ಊರು ಮಂಡ್ಯ – ಮನಸ್ಸು ಮಲ್ಲಿಗೆ ನವಿರು
ಸಕ್ಕರೆ ಸೀಮೆ ಎಂದು ಹೆಸರಾದ ಮಂಡ್ಯದಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಇಲ್ಲಿಯ ಕವಿ ಮಿತ್ರ ಕಟ್ಟೆ ಎಂ.ಎಸ್.ಕೃಷ್ಣಸ್ವಾಮಿಯವರ ೩ನೇ ಕವನ ಸಂಕಲನ ಮನಸು ಮಲ್ಲಿಗೆ ನವಿರು ಈಗ ಕೈಗೆ ಸಿಕ್ಕಿದೆ.ಕಟ್ಟೆಯವರು ವಿಶ್ವ ವಿಖ್ಯಾತ ಬೃಂದಾವನ ಅಣೆಕಟ್ಟೆ ಇರುವ ಕೃಷ್ಣರಾಜಸಾಗರದಲ್ಲಿ ಹುಟ್ಟಿ ಈಗ ಮಂಡ್ಯದಲ್ಲಿ ಗೂಡು ಕಟ್ಟಿ ಇತ್ತೀಚೆಗೆ ಗೃಹಪ್ರವೇಶಕ್ಕೆ ಕರೆದಿದ್ದರು. ಹೋಗಲಾಗಲಿಲ್ಲ....
Uncategorized
ಏಸುಕ್ರಿಸ್ತನ ಪ್ರೀತಿ ಬುದ್ಧದೇವನ ಕರುಣೆ
ಮಹಮದನ ಸಹಬಾಳ್ವೆ ಸೋದರತ್ವ
ನಾನಕರ ಸಮಬಾಳು ಶಂಕರರ ಸಮಭಾವ
ಅಳವಡಿಸುಕೋ ನೀನು - ಎಮ್ಮೆತಮ್ಮಶಬ್ಧಾರ್ಥ
ಸಮಬಾಳ್ವೆ = ಸಹಜೀವನ. ಸೋದರತ್ವ = ಸಹೋದರತ್ವ
ಸಮಬಾಳು = ಸಮಾನರಾಗಿ ಜೀವಿಸುವುದು
ಸಮಭಾವ = ಸಮಾನತೆಯ ಮನಸ್ಸುತಾತ್ಪರ್ಯ
ಏಸುಕ್ರಿಸ್ತನು ಬಡವ ಬಲ್ಲಿದ ಎನ್ನದೆ ಎಲ್ಲರನ್ನು ಪ್ರೀತಿಸುತ್ತಿದ್ದ.
ಒಬ್ಬ ವೇಶ್ಯೆಯನ್ನು ಜನ ಕಲ್ಲಿನಿಂದ ಹೊಡೆಯುವುದನ್ನು
ನಿಲ್ಲಿಸಿದ. ಆಕೆಯನ್ನು ಆ ವೃತ್ತಿಯನ್ನು ತೊರೆಯುವಂತೆ ಮಾಡ ಅವಳನ್ನು ನಿಷ್ಕಾಮದಿಂದ...
Uncategorized
ನೀನೆತ್ತಕಡೆಯಿಂದ ಬೆಟ್ಟವನ್ನೇರಿದರು
ತುಟ್ಟತುದಿ ಶಿಖರವನು ಮುಟ್ಟಬಹುದು
ಅವರಿವರ ದಾರಿಗಳ ಗೊಡವೆ ನಿನಗೇತಕ್ಕೆ
ನಿನ್ನ ಪಥದಲಿ ಚಲಿಸು - ಎಮ್ಮೆತಮ್ಮಶಬ್ಧಾರ್ಥ
ಬೆಟ್ಟ = ಗುಡ್ಡ. ಶಿಖರ = ಬೆಟ್ಟದ ತುದಿ. ಗೊಡವೆ =ಉಸಾಬರಿ
ಪಥ = ಮಾರ್ಗ, ದಾರಿ, ಹಾದಿತಾತ್ಪರ್ಯ
ಗುಡ್ಡವನ್ನು ಯಾವ ದಿಕ್ಕಿನಿಂದ ಹತ್ತಿದರು ಅದರ ತುದಿಯನ್ನು ಸೇರಬಹುದು. ಏಕೆಂದರೆ ಗುಡ್ಡಕ್ಕೆ ಏರಲು ಸುತ್ತುಕಡೆ ದಾರಿಗಳಿವೆ. ಗುಡ್ಡ ಏರುವಾಗ...
Uncategorized
ಹೆಣ್ಣಿನಲಿ ಹೊನ್ನಿನಲಿ ಮಣ್ಣಿನಲಿ ಮನ್ನಣೆಯೊ-
ಳರಸಿದರೆ ದೊರಕುವುದೆ ಸುಖಶಾಶ್ವತ
ನಿಧಿನಿಧಾನದ ಮೇಲೆ ಬಡವ ಕುಳಿತಂತಾಯ್ತು
ನಿನ್ನೊಳಗೆ ಹುದುಗಿಹುದು - ಎಮ್ಮೆತಮ್ಮಶಬ್ಧಾರ್ಥ
ಮನ್ನಣೆ = ಗೌರವ. ಅರಸು = ಹುಡುಕು.
ನಿಧಿನಿಧಾನ = ಹುದುಗಿಸಿಟ್ಟ ದ್ರವ್ಯತಾತ್ಪರ್ಯ
ಮನುಷ್ಯ ಹೆಣ್ಣು ಹೊನ್ನು ಮತ್ತು ಮಣ್ಣು ಈ ಮೂರನ್ನು
ಆಸೆಪಡುತ್ತಾನೆ. ಅದರ ಜೊತೆಗೆ ಮನ್ನಣೆ ಗೌರವ ಕೀರ್ತಿಗಾಗಿ
ಚಡಪಡಿಸುತ್ತಾನೆ. ಅವುಗಳಿಂದ ಪಡೆದ ಸುಖ ಕ್ಷಣಿಕವಾದದ್ದು. ಅದಕ್ಕಾಗಿ ಅವುಗಳನ್ನು ಮಾಯೆ ಎಂದು...
Uncategorized
ಭಾಗ್ಯವನು ಬಯಸುವೊಡೆ ಮಾಡುತಿಹ ಕೆಲಸದಲಿ
ಮನವಿರಲಿ ತನುವಿರಲಿ ಶ್ರದ್ಧೆಯಿರಲಿ
ದಾರಿದ್ರ್ಯ ದೂರಾಗಿ ದೊರಕುವುದು ಸುಖಶಾಂತಿ
ಕಾಯಕವೆ ಕೈಲಾಸ - ಎಮ್ನೆತಮ್ಮಶಬ್ಧಾರ್ಥ
ಭಾಗ್ಯ = ಸಂಪತ್ತು, ಸಿರಿತನ. ಶ್ರದ್ಧೆ = ಗೌರವ, ನಿಷ್ಠೆ
ದಾರಿದ್ರ್ಯ = ಬಡತನತಾತ್ಪರ್ಯ
ಕಾಯಕದ ಮಹತ್ವವನ್ನು ಈ ಕಗ್ಗ ಸಾರುತ್ತಿದೆ. ನಾವು ಮಾಡುವ ಕೆಲಸವನ್ನು ಅಚ್ಚುಕಟ್ಟಾಗಿ ಶ್ರದ್ಧೆಯಿಂದ ಮಾಡುವುದು ಕಾಯಕವಾಗಿ ಪರಿಣಮಿಸುತ್ತದೆ. ಬೇಕಾಬಿಟ್ಟಿಯಾಗಿ ಮಾಡುವುದು ಕೆಲಸವಾಗುತ್ತದೆ. ಇದು ಕೆಲಸ ಮತ್ತು...
Uncategorized
ಮುಂಜಾನೆ ಹೂವರಳಿ ಸಂಜೆ ನೆಲಕುರುಳಿದರು
ಹಗಲೆಲ್ಲ ನಸುನಗುತ ಜೀವಿಸುವುದು
ನಗುವ ಹೂವಿನ ಹಾಗೆ ದುಃಖವನು ದೂರಿಟ್ಟು
ತುಟಿಬಿಚ್ಚಿ ನಗೆಸೂಸು - ಎಮ್ಮೆತಮ್ಮಶಬ್ಧಾರ್ಥ
ಸೂಸು = ಚಿಮ್ಮುತಾತ್ಪರ್ಯ
ಸೂರ್ಯನ ಕಿರಣ ಬಿದ್ದ ಕೂಡಲೆ ಮುಂಜಾವದಲ್ಲಿ ಹೂವು
ಅರಳುತ್ತದೆ ಮತ್ತು ಸಂಜೆ ಸೂರ್ಯ ಮುಳುಗಿದೊಡನೆ ನೆಲಕ್ಕೆ ಉದುರಿ ಬೀಳುತ್ತದೆ. ಆದರೆ ಆ ಹೂವು ಇಡೀ ದಿನ ಗಿಡದಲ್ಲಿ ನಗುನಗುತ ಕಾಲ ಕಳೆಯುತ್ತದೆ. ಸೌಂದರ್ಯ ಸೌರಭಗಳನ್ನು
ಎಲ್ಲಾ ಕಡೆಗೆ...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



