ಮೂಡಲಗಿ: ದಲಿತ ಸಂಘರ್ಷ ಸಮಿತಿ-ಕರ್ನಾಟಕ ಸಂಘಟನೆಯ ಬೆಳಗಾವಿ ಜಿಲ್ಲಾ ಘಟಕದಿಂದ ಮೂಡಲಗಿ ಹಾಗೂ ತಾಲೂಕಿನ ಪಟ್ಟಗುಂದಿ ಹಾಗೂ ಗೋಕಾಕ ತಾಲೂಕಿನ ಉದಗಟ್ಟಿ ಗ್ರಾಮ ಘಟಗಳ ಪದಾಧಿಕಾರಿಗಳ ಪ್ರಮಾಣ ಪತ್ರ ಹಾಗೂ ಗುರ್ತಿನ ಚೀಟಿ ವಿತರಣಾ ಸಮಾರಂಭ ತಾಲೂಕಿನ ಗುರ್ಲಾಪುರ ಪ್ರವಾಸಿ ಮಂದಿರದಲ್ಲಿ ಶುಕ್ರವಾರದಂದು ಜರುಗಿತು.
ಸಮಾರಂಭದಲ್ಲಿ ಸಂಘಟನೆಯ ರಾಜ್ಯ ಸಂಘಟನಾ ಸಂಚಾಲಕ ಬಾಳೇಶ ಬನಹಟ್ಟಿ ಮಾತನಾಡಿ, ಡಾ.ಅಂಬೇಡ್ಕರ ಅವರು ಕೊಟ್ಟ ಹಕ್ಕನ್ನು ಸದ್ಬಳಕೆ ಮಾಡಿಕೊಂಡು ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿದರೆ ಸಮಾಜದಲ್ಲಿ ಗೌರವಯುತವಾಗಿ ಬಾಳಲು ಸಾಧ್ಯವಾಗುತ್ತದೆ. ಸಂಘಟನೆ ಪದಾಧಿಕಾರಿಗಳು ತಮ್ಮ ಗ್ರಾಮಗಳಲ್ಲಿ ಎಸ್.ಸಿ/ ಎಸ್.ಟಿ ಹಾಗೂ ಅಲ್ಪ ಸಂಖ್ಯಾತರ ಕುಂದುಕೊರತೆಗಳನ್ನು ಆಲಿಸಿ ಅವರಿಗೆ ನ್ಯಾಯಯುತವಾಗಿ ಸಿಗಬೇಕಾದ ಸೌಲಭ್ಯಗಳನ್ನು ದೊರಕಿಸುವ ಕೆಲಸವನ್ನು ಕೈಗೊಳ್ಳುವದರ ಜೊತೆಗೆ ಗ್ರಾಮಗಳ ಸುಧಾರಣೆಗೆ ಶ್ರಮಿಸಬೇಕೆಂದರು.
ರಾಜ್ಯ ಸಂಘಟನಾ ಸಂಚಾಲಕ ಲಕ್ಕಪ್ಪ ಯ.ತೆಳಗಡೆ ಮಾತನಾಡಿ, ಪ್ರತಿ ಗ್ರಾಮದಲ್ಲಿ ಸಂಘಟನೆ ಘಟಕಗಳನ್ನು ಸ್ಥಾಪಿಸಿ ಸಮಾಜದಲ್ಲಿ ಹಿಂದುಳಿದ ಜನರಿಗೆ ಸರಕಾರದ ಸೌಲಭ್ಯಗಳನ್ನು ದೋರಕಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಕಲ್ಪಿಸಿ ಸಮಾಜದಲ್ಲಿ ಆರ್ಥಿಕವಾಗಿ ಸಬಲರನ್ನಾಗಿಸುವ ಸಂಘಟನೆಯ ಉದ್ಧೇಶವಾಗಿದೆ ಎಂದರು.
ಬೆಳಗಾವಿ ವಿಭಾಗಿಯ ಅಲ್ಪಸಂಖ್ಯಾತರ ಸಂಚಾಲಕ ಅಲ್ಲಭಕ್ಷ ಮುಲ್ಲಾ ಮತ್ತು ಮಹಿಳಾ ಘಟಕದ ಬೆಳಗಾವಿ ವಿಭಾಗಿಯ ಸಂಚಾಲಕಿ ಗೀತಾ ಸಣ್ಣಕ್ಕಿ ಸಂಘಟನೆ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ವಿವಿಧ ಘಟಕದ ಸಂಚಾಲಕ ರಮಜಾನ ಬಿಜಾಪುರ, ಸುರೇಶ ಸಣ್ಣಕ್ಕಿ , ಅಬ್ದುಲ ಮುಲ್ಲಾ, ಮೂಡಲಗಿ ತಾಲೂಕ ವಿವಿಧ ಘಟಕದ ಸಂಚಾಲಕರಾದ ಬಸವರಾಜ ತಳವಾರ, ಬಸಪ್ಪ ತಳವಾರ, ಸೈಯದ ಮಂಟೂರ, ಹಸನಸಾಬ ಮುಗುಟಖಾನ, ಯಲ್ಲಪ್ಪ ಬಾಳವಗೋಳ, ಗೋಕಾಕ ತಾಲೂಕ ಸಂಚಾಲಕರಾದ ಅಬ್ದುಲರೌಫ ಖಾಜಿ, ಉಸಮಾನ ಮದಬಾವಿ ಮತ್ತು ಸೈಯದ ಮಂಟೂರ, ಮದಾರಸಾಬ ಜಕಾತಿ, ಶಮಶುದ್ಧಿನ ಮುಲ್ಲಾ, ಅಹಮದಸಾಬ ಗಡ್ಡೇಕಾರ, ಮಹ್ಮದಯೂಸುಫ್ ಗೂಡವಾಲೆ, ಮಕ್ತುಮ ಮದಭಾಂವಿ, ಮೆಹಬೂಬ ಮನಗೂಳಿ, ಅಲ್ಲಾನೂರ ಬಳಿಗಾರ ಮತ್ತಿತರರು ಇದ್ದರು.