spot_img
spot_img

ದಿನಕ್ಕೊಬ್ಬ ಶರಣ ಮಾಲಿಕೆ

Must Read

- Advertisement -

ಕನ್ನದ ಮಾರಿತಂದೆ ; ಒಂದು ವಚನ ಹಾಗೂ ವಚನ ವಿಶ್ಲೇಷಣೆ.

೧.ಇವರ ಮೊದಲ ಹೆಸರು ಮಾರಿ.
೨. ಶರಣನಾದ ಮೇಲೆ ಮಾರಿತಂದೆ.
೩. ಕಾಯಕ ; ಶರಣರಾಗುವುದಕ್ಕಿಂತ ಮುಂಚೆ ಕಳ್ಳತನದ ಕಾಯಕ.
೪. ಕಾಲ. ೧೧೬೦
೫. ವಚನಾಂಕಿತ. ಮಾರನ ವೈರಿ ಮಾರೇಶ್ವರ.
೬. ಉಪಲಬ್ಧ ವಚನಗಳು ೪.

ವಚನ
ಕತ್ತಲೆಯಲ್ಲಿ ಕನ್ನವಿಕ್ಕಿದೆಡೆ
ಎನಗೆ ಕತ್ತಿಯಕೊಟ್ಟ ಕರ್ತುವಿಗೆ ಭಂಗ ಅವರು ಮರದಿರ್ದಲ್ಲಿ ಮನೆಯ ಹೊಕ್ಕೊಡೆ
ಎನ್ನ ಚೋರತನದ ಹರಿಕೆಗೆ ಭಂಗ
ಮರದಿರ್ದವರ ಎಬ್ಬಿಸಿ ಅವರಿಗೆ
ಅವರೊಡವೆಯ ತೋರಿ ಎನ್ನೊಡವೆಯ ತಂದೆ ಮಾರನವೈರಿ ಮಾರೇಶ್ವರ.

- Advertisement -

12ನೇ ಶತಮಾನ ಪರಿವರ್ತನೆಯ ಯುಗ. ಮೋಸ ವಂಚನೆಗಳ ಆಚೆ ಮನುಷ್ಯನನ್ನು ಸನ್ಮಾರ್ಗ ದತ್ತ ಕರೆತರುವಂತಹ ಪ್ರಯತ್ನ ನಡೆದದ್ದೇ 12ನೇ ಶತಮಾನದಲ್ಲಿ. ಸಜ್ಜನರ ಸಂಗ ಹೆಜ್ಜೇನು ಸವಿದಂತೆ ಎಂಬಂತೆ ದುಷ್ಟರು ಶಿಷ್ಟರಾದ ಬಗೆ 12ನೇ ಶತಮಾನದಲ್ಲಿ ಕಾಣಬಹುದು.

ಬಿಜ್ಜಳನ ಅರಮನೆಗೆ ಕನ್ನ ಹಾಕಲು ಬಂದವನು ಮಾರಿ ಎಂಬುವವನು. ಸಿಕ್ಕಿಬಿದ್ದು ಗಲ್ಲು ಶಿಕ್ಷೆಗೆ ಒಳಗಾದಾಗ ಬಸವಣ್ಣನವರು ಬಿಜ್ಜಳ ಮಹಾರಾಜರಿಗೆ ಆ ಕಳ್ಳನ ಜೊತೆಗೆ ಮಾತನಾಡುತ್ತೇನೆ ಎಂದು ಕೇಳಿದರು. ಅದಕ್ಕೆ ಬಿಜ್ಜಳ ಮಹಾರಾಜರು ಒಪ್ಪಿಗೆ ಇತ್ತರು. ಬಸವಣ್ಣನವರ ದರ್ಶನದಿಂದ ಅವರ ಮಾತುಗಳಿಂದ ಮನ ಪರಿವರ್ತನೆಯಾಗಿ ಅವರ ಅನುಗ್ರಹದಿಂದ ಗಲ್ಲು ಶಿಕ್ಷೆಯಿಂದ ಪಾರಾಗಿ ಮನ ಪರಿವರ್ತಿತರಾಗಿ ಮಾರಿ ತಂದೆಯಾಗಿ ವಚನ ಸಾಹಿತ್ಯಕ್ಕೆ ತಮ್ಮದೇ ಆದ ವಚನಗಳನ್ನು ನೀಡಿದವರು ಕನ್ನದ ಮಾರಿತಂದೆ. ಇವರ ಒಟ್ಟು ನಾಲ್ಕು ವಚನಗಳು ಉಪಲಬ್ಧವಾಗಿವೆ. ವಚನ ಸಾಹಿತ್ಯ ಅಮೃತದ ಸಿಂಚನದಂತೆ. ಖಿನ್ನತೆಯತ್ತ ಸಾಗಿದ ಮನಸ್ಸನ್ನು ಆಹ್ಲಾದಗೊಳಿಸುವ ಶರಣರ ವಚನಗಳು ಮರಣದಿಂದ ಹೆದರದ ಹಾಗೆ ನಾಳೆ ಬಪ್ಪುದು ನಮಗಿಂದೇ ಬರಲಿ ಇಂದು ಬಪ್ಪುದು ನಮಗೆ ಈಗಲೇ ಬರಲಿ ಎಂಬ ಧೈರ್ಯವನ್ನು ನೀಡುವ ವಚನ ಸಾಹಿತ್ಯ ಸಮಕಾಲಿನ ಸಂದರ್ಭದಲ್ಲಿ ಅದ್ಭುತವಾದ ಪರಿಣಾಮವನ್ನು ಬೀರುವ ಸಾಹಿತ್ಯವಾಗಿದೆ.

ಕಳ್ಳ ಸುಳ್ಳ ದುಷ್ಟ ಮುಂತಾದವರನ್ನು ಪರಿವರ್ತಿಸಿ ಒಳ್ಳೆಯ ಕಾಯಕಕ್ಕೆ ತೊಡಗಿಸಿ ಸಾಹಿತ್ಯದಲ್ಲಿ ಆಸಕ್ತಿ ಮೂಡಿಸಿ ಶ್ರೀಸಾಮಾನ್ಯರಿಗೂ ಸ್ಥಾನ ಮಾನ್ಯ ನೀಡುವ ಹಾಗೆ ಮಾಡಿದ ವಚನ ಸಾಹಿತ್ಯ ಅದ್ಬುತವಾದ ಸಾಹಿತ್ಯವಾಗಿದೆ. ಇದಕ್ಕೆ ಕನ್ನದ ಮಾರಿ ತಂದೆಯವರೇ ಉದಾಹರಣೆಯಾಗಿದ್ದಾರೆ. ಮಹಿಳೆಯರಿಗೂ ಉನ್ನತ ಸ್ಥಾನ ನೀಡಿದ ಅವರು ಕೂಡ ಸಮಾಜದಲ್ಲಿ ಉತ್ತಮವಾದ ಸ್ಥಾನವನ್ನು ಪಡೆಯುವಂತೆ ಮಾಡಿದ ಸತಿಪತಿಗಳೊಂದಾದ ಭಕ್ತಿ ಹಿತವಪ್ಪುದು ಶಿವಂಗೆ ಎಂದು ಹೇಳಿದ ಶರಣರು ಮಹಿಳೆಯನ್ನು ಮಹಾನ್ ಎಳೆ ಎಂದು ಕರೆದವರು.

- Advertisement -

ಚೋರತನದ ಕಾಯಕ ಜನರ ದುಷ್ಟತನವನ್ನು ಚೋರತನ ಮಾಡಿ ಶಿಷ್ಟತನದ ಸಂಪತ್ತನ್ನು ನೀಡುವ ಸಂಕೇತವನ್ನು ಸೂಚಿಸುವ ಮಾರಿತಂದೆ ಅವರ ವಚನಗಳು ನಾಲ್ಕೇ ವಚನಗಳು ಲಭ್ಯವಾದರೂ ಮಹತ್ವವಾದ ವಚನಗಳಾಗಿವೆ.

ವಚನ ವಿಶ್ಲೇಷಣೆ.

ಇವರ ವೃತ್ತಿ ಚೋರತನದ ವೃತ್ತಿ ಆದ್ದರಿಂದ ಇವರ ವಚನಗಳಲ್ಲಿ ಕತ್ತಿ ಕನ್ನ ಕಳ್ಳತನ ಮುಂತಾದ ಶಬ್ದಗಳನ್ನು ಇವರ ವಚನಗಳಲ್ಲಿ ಗಮನಿಸಬಹುದಾಗಿದೆ ಗಮನಿಸಬಹುದಾಗಿದೆ. ಅವರ ಕಾಯಕವನ್ನು ಸಂಕೇತವನ್ನಾಗಿಸಿ ಇದ್ದವರ ಸಂಪತ್ತನ್ನು ಇಲ್ಲದವರಿಗೆ ಉಪಯೋಗಿಸುತ್ತಾ ನಡೆದ ಕನ್ನದ ಮಾರಿತಂದೆ ಅಧ್ಯಾತ್ಮವನ್ನು ಮರೆತವರಿಗೆ ನೆನಪಿಸುವ ಹಾಗೂ ಅವರಿಗೆ ಅಧ್ಯಾತ್ಮದ ಮಹತ್ವವನ್ನ ತೋರಿಸುವ ಒಂದು ಪ್ರಯತ್ನವನ್ನು ಇವರ ವಚನಗಳಲ್ಲಿ ಕಾಣುತ್ತೇವೆ. ಮರೆತು ಮಲಗಿದ ವರಿಗೆ ಅರಿವಿನ ಹಾದಿಯನ್ನ ತೋರುವ ಒಂದು ಪ್ರಯತ್ನವನ್ನು ಇವರ ಈ ವಚನದಲ್ಲಿ ಕಾಣುತ್ತೇವೆ. ಅಧ್ಯಾತ್ಮ ಎಂಬ ಒಡವೆಯನ್ನು ಸಂಪತ್ತಿನ ಮದದಲ್ಲಿ ಮರೆತವರಿಗೆ ದೊರಕಿಸಿ ಕೊಡುವ ಹಾಗೂ ತಮ್ಮ ಒಡವೆಯನ್ನು ದಕ್ಕಿಸಿಕೊಳ್ಳುವ ಪ್ರಯತ್ನವನ್ನು ಇವರ ವಚನಗಳಲ್ಲಿ ಕಾಣುತ್ತೇವೆ. ನಶ್ವರವಾದ ಬದುಕನ್ನು ಆಧ್ಯಾತ್ಮದ ಅರಿವಿನಲ್ಲಿ ಸಾಗಿಸುವ ಅಜ್ಞಾನವೆಂಬ ಕತ್ತಲೆಯನ್ನು ಕಳೆದು ಸುಜ್ಞಾನವೆಂಬ ಜ್ಯೋತಿಯತ್ತ ಸಾಗಬೇಕೆಂಬುದೇ ಇವರ ವಚನಗಳ ಆಶಯವಾಗಿದೆ.

ಚಿತ್ರ ಕೃಪೆ : ಅಂತರ್ಜಾಲ

ಡಾ. ಸರೋಜಿನಿ ಭಾಂಡಲಕರ.
ಧಾರವಾಡ.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಶಿಕ್ಷಕರಾದ ಮೆಟ್ಯಾಲಮಠ ರವರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ

ಬೆಳಗಾವಿ:-ತಾಲೂಕಿನ ಹಿಂಡಲಗಾ ವಿಜಯನಗರ ದ ಸರಕಾರಿ ಪ್ರಾಥಮಿಕ ಮರಾಠಿ ಶಾಲೆಯ ಕ್ರಿಯಾಶೀಲ ಕನ್ನಡ ಶಿಕ್ಷಕರಾದ ರುದ್ರಯ್ಯ ಈರಯ್ಯ ಮೆಟ್ಯಾಲಮಠ ರವರಿಗೆ ತಾಲೂಕು ಆದರ್ಶ ಶಿಕ್ಷಕ ಪ್ರಶಸ್ತಿ...
- Advertisement -

More Articles Like This

- Advertisement -
close
error: Content is protected !!
Join WhatsApp Group