spot_img
spot_img

ಏ.29 ರಂದು ಸುನಂದ ರಂಗನಾಥಸ್ವಾಮಿರವರ ಕೃತಿಗಳ ಲೋಕಾರ್ಪಣೆ

Must Read

- Advertisement -

ಶ್ರೀಮತಿ ಸುನಂದ ರಂಗನಾಥಸ್ವಾಮಿರವರು ತೆಲುಗು ಭಾಷೆಯಿಂದ ಕನ್ನಡಕ್ಕೆ ಅನುವಾದಿಸಿರುವ ‘ಶ್ರೀ ಮಹಾಭಾರತ ವೈಶಿಷ್ಟ್ಯ ಮತ್ತು ಶ್ರೀ ಕಾಳಹಸ್ತೀಶ್ವರ ಶತಕ ‘ ಕೃತಿಗಳ ಲೋಕಾರ್ಪಣೆ ಸಮಾರಂಭವನ್ನು ಇದೇ ಏಪ್ರಿಲ್ 29 ಶನಿವಾರ ಬೆಳಗ್ಗೆ 10.00 ಗಂಟೆಗೆ  ನಗರದ  ಎನ್.ಅರ್ ಕಾಲೋನಿಯ ಶ್ರೀರಾಮ ದೇವರ ದೇವಸ್ಥಾನದಲ್ಲಿ ಅಯೋಜಿಸಲಾಗಿದೆ.

ಮಹರ್ಷಿ ವೇದವ್ಯಾಸ ವಿರಚಿತ ಶ್ರೀಮನ್ಮಮಹಾಭಾರತ ವೈಶಿಷ್ಟ್ಯ (ಆದಿಪರ್ವ- ಸ್ವರ್ಗಾರೋಹಣಪರ್ವ) ಮೂಲ ತೆಲುಗು ಭಾಷೆಯಲ್ಲಿ ಉಪ್ಪುಲೂರಿ ಕಾಮೇಶ್ವರರಾವ್ ರಚನೆಯಾಗಿದ್ದು ಅದರ ಕನ್ನಡ ಅನುವಾದ ಮತ್ತು ಹಾಗು ವಿಜಯನಗರ ಸಾಮ್ರಾಜ್ಯದ ರಾಜಾಧಿರಾಜನಾದ ಶ್ರೀಕೃಷ್ಣದೇವರಾಜನ ಆಸ್ಥಾನದಲ್ಲಿದ ಅಷ್ಟದಿಗ್ಗಜರಲ್ಲಿ ಪ್ರಮುಖರಾದ ಮಹಾಕವಿ ಧೂರ್ಜಟಿಯಿಂದ ರಚಿಸಲ್ಪಟ್ಟ ಶ್ರೀ ಕಾಳಹಸ್ತೀಶ್ವರ ಶತಕದ ಅರ್ಥಸಹಿತ ಕನ್ನಡ ಭಾವಾನುವಾದ ಕೃತಿಗಳನ್ನು ಭಾರತ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಾಧೀಶ ಪದ್ಮಭೂಷಣ ನ್ಯಾ|| ಎಂ.ಎನ್.ವೆಂಕಟಾಚಲಯ್ಯನವರು ಲೋಕಾರ್ಪಣೆಗೊಳಿಸುವರು.

- Advertisement -

ಭಾರತ ದರ್ಶನ ಪತ್ರಿಕೆಯ ಸಂಪಾದಕ ಪ್ರೊ.ಟಿ.ಎನ್.ಪ್ರಭಾಕರ ಶ್ರೀಮನ್ಮಮಹಾಭಾರತ ವೈಶಿಷ್ಟ್ಯ ಕೃತಿಯ ಕುರಿತು ಹಾಗೂ ನಿವೃತ್ತ ಕನ್ನಡ ಉಪನ್ಯಾಸಕ ಕೆ.ಎಸ್.ರಾಮಮೂರ್ತಿ ರವರು ಶ್ರೀ ಕಾಳಹಸ್ತೀಶ್ವರ ಶತಕದ ಕೃತಿ ಪರಿಚಯ ಮಾಡಿಕೊಡುವರು. ಸಮಾರಂಭದಲ್ಲಿ ಪಿ.ಕುಣಿಗಲ್ ಶ್ರೀನಿವಾಸ ಶಾಸ್ತ್ರಿಗಳು ಮತ್ತು ಉಪ್ಪುಲೂರಿ ಕಾಮೇಶ್ವರರಾವ್ ಉಪಸ್ಥಿತರಿದ್ದು ಶುಭನುಡಿಗಳನ್ನಾಡುವರು.

ವಿವರಗಳಿಗೆ: 95389 90290

ಕೃತಿಯ ಕುರಿತು:

ಭಾರತೀಯರ ಅಂತಃಸ್ಫೂರ್ತಿಗೆ ಬೆಳಕಾಗಿರುವ ಶ್ರೀಮನ್ಮಹಾಭಾರತವು ಮಹರ್ಷಿ ವೇದವ್ಯಾಸರ ಅಮೋಘ ಕೊಡುಗೆ – ಸುಜ್ಞಾನದ ಗಣಿ. ಇದರ ಪಾತ್ರಗಳು ಸಾರ್ವಕಾಲಿಕ ಸಂದೇಶ ನೀಡುವ ನಿಲುಗನ್ನಡಿ. ಪಂಚಮ ವೇದವೆಂದೇ ಪ್ರಖ್ಯಾತವಾದ ಈ ಕಾವ್ಯಕ್ಕೆ ಸರಿಸಾಟಿಯಿಲ್ಲ. ಇದರಲ್ಲಿ ಇಲ್ಲದ ವಿಷಯ ಬೇರೆಲ್ಲಿಯೂ ಇಲ್ಲವೆಂಬ ಉಲ್ಲೇಖವೇ ಸಾಕು ಇದರ ಹಿರಿಮೆ ತಿಳಿಸಲು. 18 ಪರ್ವಗಳ ಬೃಹದ್ಗ್ರಂಥವನ್ನು ಕಥಾರೂಪವಾಗಿ ಮೂಲ ತೆಲುಗು ಭಾಷೆಯಲ್ಲಿ ಉಪ್ಪುಲೂರಿ ಕಾಮೇಶ್ವರರಾವ್ ರಚಿಸಿದ್ದು ಅದರ 1150 ಪುಟಗಳ ತಿಳಿಗನ್ನಡ ಅನುವಾದವನ್ನು ಶ್ರೀ ಸುನಂದ ರಂಗನಾಥಸ್ವಾಮಿಯವರು ಮಾಡಿರುತ್ತಾರೆ. 

- Advertisement -

ವಿಜಯನಗರ ಸಾಮ್ರಾಜ್ಯದ ರಾಜಾಧಿರಾಜನಾದ ಶ್ರೀಕೃಷ್ಣದೇವರಾಜನ ಆಸ್ಥಾನದಲ್ಲಿದ ಅಷ್ಟದಿಗ್ಗಜರಲ್ಲಿ ಪ್ರಮುಖರಾದ ಮಹಾಕವಿ ಧೂರ್ಜಟಿಯಿಂದ ರಚಿಸಲ್ಪಟ್ಟ ಶ್ರೀ ಕಾಳಹಸ್ತೀಶ್ವರ ಶತಕವು ಈ ಯುಗ ಸರ್ವಶ್ರೇಷ್ಠ ಗ್ರಂಥವಾಗಿದೆ.

100 ಪದ್ಯಗಳ ಚಿಕ್ಕ – ಚೊಕ್ಕ ಗ್ರಂಥವಾಗಿದ್ದು ಇದರಲ್ಲಿ ಕವಿಯು ಜನಸಾಮಾನ್ಯರ ಪರವಾಗಿ ಶ್ರೀ ಕಾಳಹಸ್ತೀಶ್ವರನಲ್ಲಿ ತಮ್ಮಿಂದ ಎಸಗಪಡುತ್ತಿರುವ ಅಪರಾಧಗಳನ್ನು ಹಾಗು ಅವುಗಳನ್ನು ನಿವಾರಿಸು ಎಂಬ ದಿವ್ಯ ಸಂದೇಶವನ್ನು ಹೊತ್ತು ಪದ್ಯ ಮಾಲಿಕೆಯಲ್ಲಿ ಪ್ರಾರ್ಥಿಸಿದ್ದಾರೆ. ಮನೋಹರವಾದ ಪದಪುಂಜಗಳ ಸರಳ ಸುಂದರ ಕನ್ನಡ ಅನುವಾದವನ್ನು ಅನುವಾದ ಶಿರೋಮಣಿ ಶ್ರೀ ಸುನಂದ ರಂಗನಾಥಸ್ವಾಮಿಯವರು ಯಶಸ್ವಿಯಾಗಿ ಮಾಡಿ ಕನ್ನಡ ಓದುಗರಿಗೆ ಸಮರ್ಪಿಸಿದ್ದಾರೆ. 

ಕೃತಿಕಾರರ ಬಗ್ಗೆ:

ಭಾವಾನುವಾದದಲ್ಲಿ ಸಿದ್ಧಹಸ್ತರಾದ ಲೇಖಕಿ ಶ್ರೀಮತಿ ಸುನಂದ ರಂಗನಾಥ ಸ್ವಾಮಿ ಮೂಲತಃ ಆಂಧ್ರಪ್ರದೇಶ, ಚಿತ್ತೂರು ಜಿಲ್ಲೆ ಮದನಪಲ್ಲಿ ಪಿ.ಟಿ.ಎಂ (ಪೆದ್ದ ತಿಪ್ಪ ಸಮುದ್ರಂ) ಗ್ರಾಮದವರು, 1961ರಲ್ಲಿ ಕರ್ನಾಟಕದ ಸೊಸೆಯಾಗಿ ಬಂದು ಕನ್ನಡ ಕಲಿತು ಬರವಣಿಗೆಯಲ್ಲಿ ತೊಡಗಿಸಿಕೊಂಡು ನಾಡಿನ ಪ್ರಸಿದ್ಧ ಪತ್ರಿಕೆಗಳಲ್ಲಿ ಲೇಖನಗಳು ಪ್ರಕಟವಾಗಿದೆ.

ಮಹಾಕವಿ ಪೋತನಾಮಾತ್ಯರ ಜನಪ್ರಿಯ ತೆಲುಗು ಭಾಗವತದ  ಕನ್ನಡ ಅವತರಣಿಕೆಯನ್ನು 3 ಸಂಪುಟಗಳಲ್ಲಿ; ಇಡೀ ರಾಮಾಯಣವನ್ನು ಒಂದೇ ಸಂಪುಟದಲ್ಲಿ ‘ಕನ್ನಡ ರಸಧಾರೆ’ಯಾಗಿ ಹೊರತಂದಿದ್ದಾರೆ. ಖ್ಯಾತ ಕಾದಂಬರಿಕಾರ ಶ್ರೀ ಎಸ್.ಎಲ್.ಭೈರಪ್ಪನವರ ‘ಸಾರ್ಥ’ ಕಾದಂಬರಿಯನ್ನು ತೆಲುಗು ಭಾಷೆಗೆ ಅನುವಾದಿಸಿದ ಹೆಗ್ಗಳಿಕೆ. 

ಮಹಾಕವಿ ಕಾಳಿದಾಸನ ಅಶ್ವಧಾಟಿಯ ಹಾಗು ದೇವಿಭಾಗವತದ ‘ಮಣಿದ್ವೀಪ ವರ್ಣನೆ’ ; 75 ಮಹರ್ಷಿಗಳ ಪರಂಪರೆಯ ಜೀವನ – ಸಾಧನೆಗಳ ‘ತೇಜಃಪುಂಜ’ ತೆಲುಗುವಿನಿಂದ ಕನ್ನಡ ಅನುವಾದವನ್ನು  ಶೃಂಗೇರಿ ಜಗದ್ಗುರುಗಳು ಆದಿಯಾಗಿ ಅನೇಕ ವಿದ್ವನ್ಮಣಿಗಳು ಮೆಚ್ಚಿದ್ದಾರೆ.

ಪತಿ ರಂಗನಾಥಸ್ವಾಮಿಯ ಪ್ರೋತ್ಸಾಹವನ್ನು ಮನದುಂಬಿ ನೆನಯುವ 80ರ ಇಳಿವಯಸ್ಸಿನಲ್ಲೂ ನಿರಂತರವಾಗಿ ಸಾಹಿತ್ಯ ಸೇವೆಯಲ್ಲಿ ತೊಡಿಗಿಸಿಕೊಂಡು ಮುಂಬರುವ ದಿನಗಳಲ್ಲಿ ಅನೇಕ ಮೌಲ್ಯಯುತ ರಚನೆಗಳನ್ನು ಪ್ರಕಟಿಸಲು ಮುಂದಾಗಿದ್ದಾರೆ.

- Advertisement -
- Advertisement -

Latest News

ಕವನ : ಗೊಂಬೆಗಳ ಕಣ್ಣೀರು

ಗೊಂಬೆಗಳ ಕಣ್ಣೀರು ಅಂದು ನಾವು ಅಪ್ಪ ಅವ್ವನನ್ನು ಕಾಡಿ ಬೇಡಿ ಗೊಂಬೆಗಳಿಗಾಗಿ ಅಳುತ್ತಿದ್ದೆವು ಜಾತ್ರೆ ಉತ್ಸವದಲ್ಲಿ ಹಿರಿಯರಿಗೆ ದೇವರ ಮೇಲಿನ ಭಕ್ತಿ ನಮಗೋ ಬಣ್ಣ ಬಣ್ಣದ ಗೊಂಬೆಗಳ ಮೇಲೆ ಆಸಕ್ತಿ ಅವ್ವ ಹೇಗೋ ಮಾಡಿ ಅಪ್ಪನ ತುಡುಗಿನಲಿ ತನ್ನಲಿದ್ದ ದುಡ್ಡು ಕೊಟ್ಟು ತಂದಳು ಗೊಂಬೆಗಳ ಮಿತಿ ಇರಲಿಲ್ಲ...
- Advertisement -

More Articles Like This

- Advertisement -
close
error: Content is protected !!
Join WhatsApp Group