ಪ್ರಕಾಶಕರಿಗೆ ಮುಳುವಾದ ಹೊಸ ನಿಯಮಗಳು
ವಿಶ್ವದ ಹಲವು ಭಾಷೆಗಳಲ್ಲಿ ಕನ್ನಡವೂ ಒಂದು ಅತ್ಯಂತ ಪುರಾತನ ಭಾಷೆಯಾಗಿದೆ.ಆದರೆ ಇಂದಿನ ಇಂಗ್ಲಿಷ್ ಭಾಷೆ ಸಂಸ್ಕೃತಿ ವ್ಯಾಮೋಹ ಕನ್ನಡದ ಭಾಷೆಗೆ ಕುತ್ತು ತಂದಿದೆ. ಕನ್ನಡವೂ ಜಗತ್ತಿನ ಭಾಷೆಗಳ ಲಿಸ್ಟ್ ನಿಂದ ಕ್ರಮೇಣ ಕಡಿಮೆಯಾಗುತ್ತಿದೆ. ಅಳಿವಿನ ಅಂಚಿಗೆ ತಲುಪಿದೆ. ಒಂದೆಡೆಗೆ ಸರ್ಕಾರ ಇಂಗ್ಲೀಷ್ ಮಾಧ್ಯಮ ಶಾಲೆಗಳಿಗೆ ಬೇಕಾಬಿಟ್ಟಿಯಾಗಿ ಪರವಾನಿಗೆ ನೀಡಿ ಕಾನ್ವೆಂಟ್ ಶಾಲೆಗಳು ಮಿತಿ ಮೀರಿ ಬೆಳೆದಿವೆ .ಇನ್ನೊಂದು ಕಡೆಗೆ ಪ್ರಕಾಶಕರ ಪಾಲಿಗೆ ಪುಸ್ತಕ ಪ್ರಾಧಿಕಾರ ಮತ್ತು ಸಾರ್ವಜನಿಕ ಗ್ರಂಥಾಲಯಗಳು ಮತ್ತು ಸರಕಾರದ ನೀತಿ ನಿಯಮಗಳು ಕಂಟಕವೆನಿಸಿವೆ.
ಕಳೆದ ಎರಡು ಮೂರು ವರ್ಷಗಳ ಬಿಲ್ ಇನ್ನು ಪ್ರಕಾಶಕರಿಗೆ ಬಂದಿಲ್ಲ. ಮೇಲಾಗಿ ಬಿಲ್ ಸಿಗಬೇಕಿದ್ದರೆ ಪ್ರಕಾಶಕರು 40 % ಕಮಿಷನ್ ಕೊಡಬೇಕು. ಸಾಹಿತ್ಯದ ಪುಸ್ತಕಗಳ ವ್ಯವಹಾರದಲ್ಲೂ ಭ್ರಷ್ಟಾಚಾರ ನಿಂತಿಲ್ಲ. ಹಿಂದಿನ ಸರಕಾರದ ಕಮಿಷನ್ ದಂಧೆಯ ಬಗ್ಗೆ ಬೊಬ್ಬೆಯಿಡುತ್ತಿದ್ದ ಇಂದಿನ ಸರ್ಕಾರ ತನ್ನ ಅವಧಿಯಲ್ಲಾದರೂ ಈ ಕಮಿಷನ್ನ ದಂಧೆಯನ್ನು ನಿಲ್ಲಿಸಲಿ.
ಇನ್ನೊಂದು ಅತ್ಯಂತ ಖೇದದ ಸಂಗತಿ ಎಂದರೆ
ಕನ್ನಡ ಸಾಹಿತ್ಯ ಪುಸ್ತಕ ಪ್ರಕಟಣೆಯ ನೀತಿ ನಿಯಮಗಳು ಪ್ರತಿ ಸಲವೂ ಬದಲಾಗುತ್ತಿವೆ. ಈ ಸಲ ನಾಟಕ ಮತ್ತು ಕವನ ಸಂಕಲನಗಳನ್ನು ಪ್ರಕಟಿಸದ ಹಾಗೆ ಸರ್ಕಾರ ಆದೇಶ ಹೊರಡಿಸಿದೆಯಂತೆ. ಮೇಲಾಗಿ ಟೆಕ್ನಿಕಲ್ ಪುಟದ ನಿಯಮಗಳನ್ನು ಬದಲಾಯಿಸುತ್ತಿದೆ. ಒಂದು ಅರ್ಥದಲ್ಲಿ ಲಕ್ಷಗಟ್ಟಲೆ ಕೋಟಿಗಟ್ಟಲೆ ಹಣ ಹೂಡಿಕೆ ಮಾಡಿದ ಪ್ರಕಾಶಕರು ಇಂದು ಬೀದಿಗೆ ಬರುವ ಸ್ಥಿತಿ ತಲುಪಿದ್ದಾರೆ .

ಕನ್ನಡ ಸಂಸ್ಕೃತಿ ಇಲಾಖೆ ಸಾರ್ವಜನಿಕ ಗ್ರಂಥಾಲಯ ಮತ್ತು ಪುಸ್ತಕ ಪ್ರಾಧಿಕಾರ ಇಂತಹ ಅತ್ಯಂತ ಸೂಕ್ಶ್ಮ ವಿಷಯಗಳ ಬಗ್ಗೆ ಗಮನ ಹರಿಸಿ ಸಮಸ್ಯೆಗಳನ್ನು ನಿವಾರಿಸಬೇಕು. ಬರಹಗಾರರನ್ನು ಬೆಳೆಸಿ ಮತ್ತು ಪ್ರಕಾಶಕರನ್ನು ಉಳಿಸಿ. ಕನ್ನಡ ಭಾಷೆ ಅಳಿವು ಉಳಿವು ಈಗ ಸರಕಾರದ ಮುಂದಿದೆ. ಕನ್ನಡ ಸಾಹಿತ್ಯ ಅಕಾಡೆಮಿ, ಕನ್ನಡ ಸಾಹಿತ್ಯ ಪರಿಷತ್ತು ಇತ್ತ ಸ್ವಲ್ಪ ಗಮನ ಹರಿಸಲು ಕೋರಿಕೆ.
ಪುಸ್ತಕ ಪ್ರಕಾಶಕರನ್ನು ಕೊಲ್ಲಬೇಡಿ – ಕನ್ನಡ ಪುಸ್ತಕ ಪ್ರಾಧಿಕಾರದವರೇ
ಪುಸ್ತಕ ಪ್ರಕಾಶಕರನ್ನು ಕೊಲ್ಲಬೇಡಿ – ಕನ್ನಡ ಪುಸ್ತಕ ಪ್ರಾಧಿಕಾರದವರೇ
- Advertisement -
ಡಾ. ಶಶಿಕಾಂತ ಪಟ್ಟಣ ರಾಮದುರ್ಗ