spot_img
spot_img

ವಚನ ಪಿತಾಮಹ ಡಾ.ಪ.ಗು.ಹಳಕಟ್ಟಿಯವರ ಜಯಂತ್ಯುತ್ಸವ

Must Read

- Advertisement -

ಬೆಳಗಾವಿ – ದಿನಾಂಕ: 7-7-2024 ರಂದು ಡಾ.ಪ.ಗು.ಹಳಕಟ್ಟಿಯವರ ಭವನ ಲಿಂಗಾಯತ ಸಂಘಟನೆ ಮಹಾತೇಂಶ ನಗರ ಬೆಳಗಾವಿಯಲ್ಲಿ ಡಾ.ಪ.ಗು.ಹಳಕಟ್ಟಿಯವರ ಜಯಂತ್ಯುತ್ಸವ ಆಚರಿಸಿಲಾಯಿತು.

ಪ್ರಾರಂಭದಲ್ಲಿ ಮಹಾದೇವಿ ಅರಳಿ ಪ್ರಾಥ೯ನೆ ನಡೆಸಿಕೊಟ್ಟರು, ಸಿದ್ದ ಬಸವದೇವರು ದೇವರು ಉತ್ತರಾಧಿಕಾರಿಗಳು ಜಗದ್ಗುರು ಶೂನ್ಯ ಸಂಪಾದನಾ ಹುಣಸಿಕೂಳ್ಳದ ಮಠದ ಇವರು ಮಾತನಾಡುತ್ತ, ಹರಿದು ಹೋದ ವಚನಗಳನ್ನು ಹುಡುಕಿದರು. ಪ.ಗು.ಹಳಕಟ್ಟಿಯವರು 84 ವರ್ಷ ಬದುಕಿದ್ದರು ಬ್ರಿಟೀಷರು ರಾವ ಬಹಾದ್ದೂರ್ ಪ್ರಶಸ್ತಿ ನೀಡಿದ್ದರು ಆದರೂ ಅವರು ಎಲ್ಲ ಆಸ್ತಿ ಮಾರಾಟ ಮಾಡಿ ತಾಡೋಲೆಗಳನು ಸಂಗ್ರಹಿಸಿ ವಚನ ಸಾಹಿತ್ಯ ಪ್ರಕಟಿಸಿದರು ಧರ್ಮ ಪತ್ನಿ ಭಾಗಿರಥಿ ಕಳೆ ತೆಗೆಯುವ ಮೂಲಕ ಬಂದ ಹಣವನ್ನು ವಚನ ಸಾಹಿತ್ಯಕ್ಕೆ ಧಾರೆ ಎರೆದರು, ಎಕ್ಕಯ್ಯ ಜೋಗಯ್ಯ ಇವರು ಏಕನಾಥ ಜೋಗಿನಾಥ ಸಂತರು, ಹಾನಗಲ್ಲ ಕುಮಾರಸ್ವಾಮಿಯವರು ಮನೆ ಮನೆಗೆ ಬೇಟಿ ನೀಡಿ 250 ಜನ ವಚನಕಾರರ ವಚನಗಳನ್ನು ಸಂಗ್ರಹಿಸಿ ಹಳಕಟ್ಟಿಯವರಿಗೆ ನೀಡಿದರು ಅವರು ತಮ್ಮ ಹಿತಚಿಂತಕ ಮುದ್ರಣಾಲಯದ ಮೂಲಕ ಮುದ್ರಿಸಿ ಪ್ರಕಟಿಸಿದರು ಬಬಲೇಶ್ವರದ ಶಾಂತವೀರ ಮಹಾಸ್ವಾಮಿಗಳು ಕೊನೆಯವರೆಗೂ ಅಭಯ ಹಸ್ತ ನೀಡಿದರು ಎಂದರು.

ಇದೇ ಕಾಯ೯ಕ್ರಮದಲ್ಲಿ ಪೂಜ್ಯರನ್ನೂ ಅಭಿವೃದ್ಧಿ ಪ್ರಾಧಿಕಾರದ ಮಹಾನಗರ ಪಾಲಿಕೆಯ ಪ್ರತಿನಿಧಿಯಾಗಿ ನಿಯುಕ್ತಗೊಂಡ ಹಣಮಂತ ಕೂಂಗಾಲಿ,ರಾಜಶೇಖರ ಡೋಣಿ, ಪ್ರತಿಷ್ಠಿತ ಬಸವೇಶ್ವರ ಸಹಕಾರ ಬ್ಯಾಂಕಿಗೆ ಆಯ್ಕೆಯಾದ ಅಧ್ಯಕ್ಷ ರಮೇಶ ಕಳಸನ್ನವರ ಉಪಾಧ್ಯಕ್ಷ ಗಿರೀಶ ಬಾಗಿ, ದಾಸೋಹ ಸೇವೆ ಸಲ್ಲಿಸಿದ ಶಾಂತಾ ಇಂಚಲ ಇವರನ್ನೆಲ್ಲ ಸತ್ಕರಿಸಲಾಯಿತು

- Advertisement -

ಅಧ್ಯಕ್ಷರಾದ ಈರಣ್ಣ ದೇಯನ್ನವರ ಮಾಜಿ ಶಾಸಕರಾದ ಅನೀಲ ಬೆನಕೆ, ಸದಾಶಿವ ದೇವರಮನಿ, ವಿ.ಕೆ.ಪಾಟೀಲ, ಶಂಕರ ಗುಡಸ ಮಾತನಾಡಿದರು, ಶಶಿಭೂಷಣ ಪಾಟೀಲ, ಶಂಕರಶೆಟ್ಟಿ, ಸತೀಶ ಪಾಟೀಲ,ಆನಂದ ಕರ್ಕಿ,ಬಸವರಾಜ ಕರಡಿಮಠ,ಮಹಾಂತೇಶ ಮೆಣಸಿನಕಾಯಿ,ಶಿವಾನಂದ ಲಾಳಸಂಗಿ,ಬಸವರಾಜ ಬಿಜ್ಜರಗಿ, ವಿರೂಪಾಕ್ಷ ದೊಡ್ಡಮನಿ, ಎಸ್. ಎಸ್.ಪೂಜಾರ, ಬಸವರಾಜ ಚೆಟ್ಟರ,ಪಾಲ್ಗೊಂಡಿದ್ದರು ಕೊನೆಯಲ್ಲಿ ಡೇಂಗೂ ಹಾಗೂ ಚಿಕನ್ ಗೂನ್ಯಾ ಪ್ರತಿರೋಧಕ ಲಸಿಕೆ ಹಾಕಲಾಯಿತು, ಸಂಗಮೇಶ ಅರಳಿ ನಿರೂಪಿಸಿದರು, ಸುರೇಶ ನರಗುಂದ ವಂದಿಸಿದರು

- Advertisement -
- Advertisement -

Latest News

ಶಿವಾನಂದ ಮಹಾವಿದ್ಯಾಲಯದಲ್ಲಿ ವರಕವಿ ಬೇಂದ್ರೆಯವರ ೪೩ನೇ ಪುಣ್ಯಸರಣೆ

ಕಾಗವಾಡ: ನಗರದ ಶಿವಾನಂದ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಪ್ರಾಯೋಜಿತ ಕನ್ನಡ ವಿಭಾಗ ವರಕವಿ ಶಬ್ದಗಾರುಡಿಗ ಡಾ. ದ. ರಾ. ಬೇಂದ್ರೆಯವರ ೪೩ನೇ ಪುಣ್ಯಸ್ಮರಣೆಯನ್ನು ಆಯೋಜಿಸಲಾಗಿತ್ತು. ಈ ಸಮಾರಂಭದ ಮುಖ್ಯ...
- Advertisement -

More Articles Like This

- Advertisement -
close
error: Content is protected !!
Join WhatsApp Group