ಜಿಲ್ಲಾ ಅಧ್ಯಕ್ಷರಾಗಿ ಶ್ರೀ ಸಂತೋಷ ಬಿದರಗಡ್ಡೆ ಆಯ್ಕೆ

Must Read

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...

ಲೋಳಸೂರ ಹೊಸ ಸೇತುವೆ ನಿರ್ಮಿಸುವಂತೆ ನೂತನ ಸಿಎಂ ಅವರಿಗೆ ಕಡಾಡಿಯವರಿಂದ ಮನವಿ

ಮೂಡಲಗಿ: ಗೋಕಾಕ ನಗರಕ್ಕೆ ಸಂಪರ್ಕ ಕಲ್ಪಿಸುವ ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿ-31 ರ ಲೋಳಸೂರ ಗ್ರಾಮದ ಹತ್ತಿರ ಘಟಪ್ರಭಾ ನದಿಗೆ ಅಡ್ಡಲಾಗಿ ಹೊಸ ಸೇತುವೆ ನಿರ್ಮಿಸುವಂತೆ...

ಭಾರತ ಮಾತೆಯ ಜ್ಞಾನ ಶಕ್ತಿ ಭಾರತೀಯ ಸ್ತ್ರೀಯಲ್ಲಿದೆ

ಪತಿವ್ರತೆಗೂ ಧರ್ಮ ಪತ್ನಿಗಿರುವ ವ್ಯತ್ಯಾಸವಿಷ್ಟೆ. ಪತಿವ್ರತೆ ಪತಿಯ ದಾರಿಯಲ್ಲಿ ತಾನೂ ನಡೆಯೋದು. ಧರ್ಮಪತ್ನಿ ಪತಿಯನ್ನು ಧರ್ಮದ ಹಾದಿಯಲ್ಲಿ ನಡೆಸೋದು. ಭೂಮಿ ಮೇಲೆ ಧರ್ಮ ನೆಲೆಸಬೇಕಾದರೆ ಸ್ತ್ರೀ...

(ಕರ್ನಾಟಕ ರಾಜ್ಯ ಶಿಕ್ಷಕರ ಸಾಹಿತ್ಯ ಪರಿಷತ್ತು ,(ರಿ) ಇದು ಕರ್ನಾಟಕ ರಾಜ್ಯದ ಪ್ರಾಥಮಿಕ, ಪ್ರೌಢ, ಕಾಲೇಜು ಗಳ ಸರ್ಕಾರಿ, ಅನುದಾನಿತ, ಖಾಸಗಿ ಎಲ್ಲಾ ವಲಯಗಳ ಶಿಕ್ಷಕ ಶಿಕ್ಷಕಿಯರ ಸಾಹಿತ್ಯ ಚಟುವಟಿಕೆಗಳಿಗಾಗಿ, ಕತೆ ಕವಿತೆ ಲೇಖನ ಸಾಹಿತ್ಯ ಅಭಿವೃದ್ಧಿಗಾಗಿ, ಮಕ್ಕಳ ಕಲಿಕೆಯಲ್ಲಿ ಸಾಹಿತ್ಯದ ಮಹತ್ವ ಸಾರುವಲ್ಲಿ ಮಹತ್ವಾಕಾಂಕ್ಷೆಯನ್ನು ಹೊಂದಿದ್ದು, ಕೋಲಾರದ ಬಿ ಶಿವಕುಮಾರ್ ಸಂಸ್ಥಾಪಕ ರಾಜ್ಯಾಧ್ಯಕ್ಷರು ಕಳೆದ ವರ್ಷ ಅಂದರೆ 2020 ನೇ ಸಾಲಿನಲ್ಲಿ ಹಾವೇರಿಯಲ್ಲಿ ಮಹತ್ವದ ಸಭೆ ಮಾಡಿದ್ದು, ಸಂಘಟನಾ ಚತುರರೂ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರೂ, ಅತ್ಯಂತ ಸೃಜನಶೀಲ, ಯುವ ಕವಿ ಸಾಹಿತಿಯೂ ಆದ ಶ್ರೀ ಸಂತೋಷ್ ಬಿದರಗಡ್ಡೆ ಅವರನ್ನು ಹಾವೇರಿ ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಶ್ರೀಯುತರು ಹಾವೇರಿ ಜಿಲ್ಲಾ ಘಟಕವನ್ನು ರಚನೆ ಮಾಡಿ ಶೈಕ್ಷಣಿಕ, ಸಾಹಿತ್ಯಿಕ ಚಟುವಟಿಕೆಗಳನ್ನು ಮಾಡಲೆಂದೂ, ತಮ್ಮ ಪವಿತ್ರ ಶಿಕ್ಷಕ ವೃತ್ತಿಯ ಜೊತೆಗೆ ಹಾವೇರಿ ಜಿಲ್ಲೆಯ ಸಾಹಿತ್ಯಿಕ ಗುರುವೃಂದವನ್ನು ಇನ್ನಷ್ಟು ತೊಡಗಿಸಿಕೊಳ್ಳುವಂತೆ ಕಾರ್ಯ ನಿರ್ವಹಿಸಲೆಂಬ ಆಶಯದೊಂದಿಗೆ ಪ್ರಕಟಣೆಯಲ್ಲಿ ಶ್ರೀ ಇಂಗಳಗಿ ದಾವಲಮಲೀಕ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ತಿಳಿಸಿದ್ದಾರೆ.

ಶ್ರೀ ಸಂತೋಷ್ ಬಿದರಗಡ್ಡೆ

ತಂದೆ: ಶ್ರೀ ಪರಮೇಶ್ವರಪ್ಪ ಬಿ ಹೆಚ್
ತಾಯಿ: ಶ್ರೀಮತಿ ದಾಕ್ಷಾಯಿಣಮ್ಮ ಬಿ ಹೆಚ್
ಜನ್ಮಸ್ಥಳ: ಬಿದರಗಡ್ಡೆ, ತಾ:ಹೊನ್ನಾಳಿ ಜಿ:ದಾವಣಗೆರೆ.
ಜನ್ಮ ದಿನಾಂಕ: ಮೇ ೨೦, ೧೯೮೨
ಕಾವ್ಯನಾಮ: ಬಿದರಗಡ್ಡೆ ಮಲ್ಲಿಕಾರ್ಜುನ
ವಿದ್ಯಾರ್ಹತೆ: ಎಂ.ಎ, ಟಿ.ಸಿ.ಎಚ್,
ಉದ್ಯೋಗ: ಶಿಕ್ಷಕರು

ಸ.ಹಿ.ಪ್ರಾ.ಶಾಲೆ.ಹೊಸಪೇಟೆ ತಾ:ಹಾನಗಲ್ಲ, ಜಿ: ಹಾವೇರಿ. ೫೮೧೨೦೩.
ವಾಟ್ಸಪ್ ನಂಬರ್: 8310158542,

- Advertisement -

ಮೇಲ್ ಐಡಿ: bpsantosh1982@gmail.com


ಪ್ರಕಟಿತ ಕೃತಿಗಳು

ಕವನ ಸಂಕಲನಗಳು:

 1. ಎಳ್ಳುಬೆಲ್ಲ (ಕವನ ಸಂಕಲನ) ಜಲಜ ಚಮಚ ಚಲನ ವಚನ ಗಗನ
 2. ಯಶೋಗಾಥರು (ಕವನ ಸಂಕಲನ)
 3. ನವರಾತ್ರಿ ( ದಸರಾ)
 4. ಚಂದಮಾಮ (ಕವನ ಸಂಕಲನ)

ಗದ್ಯ ಕೃತಿಗಳು (ಲೇಖನಮಾಲೆ):

 1. ಕ್ಷಣಹೊತ್ತು ಅನುಭವಮುತ್ತು
 2. ನವರಾತ್ರಿ (ದಸರಾ)

ಸಂಪಾದಿತ ಕೃತಿಗಳು:

 1. ಸೃಜನಶೀಲ ಕಾವ್ಯಸಿರಿ
 2. ವಿವೇಕ ಕಾವ್ಯಸಿರಿ
 3. ಅಪ್ಪ (ಸಂಪಾದಿತ ಕ.ಸಂ)
 4. ಕೊರೊನಾ ಜಾಗೃತ ಗೀತೆಗಳು
 5. ಪಾಪು.. ಒಂದು ನೆನಪು
 6. ಸಾಧನಾ ಪಥದಲ್ಲಿ (ಸೃಜನಶೀಲ ಸಾಹಿತ್ಯ ಬಳಗ ಹಾವೇರಿ)

ಪ್ರಕಟಣೆಗೆ ಸಿದ್ಧಗೊಂಡಿರುವ ಕೃತಿಗಳು:

 1. ಭವ್ಯ ಭಾರತದ ಬೆಳಕುಗಳು
 2. ಕಾವ್ಯ ಕುಸುಮಗಳು

ವಿವಿಧ ಸಂಘ, ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ ಪ್ರಸ್ತುತ ಸೇವೆ

 • ನಾಮ ನಿರ್ದೇಶಿತ ಸದಸ್ಯರು
 • ಕ.ರಾ.ಪ್ರಾ.ಶಾ.ಶಿ.ಸಂಘ. ಹಾನಗಲ್ಲ.
 • ಜಿಲ್ಲಾಧ್ಯಕ್ಷರು , ಭಾರತೀಯ ಸೃಜನಶೀಲ ಕನ್ನಡ ಸಾಹಿತ್ಯ ಬಳಗ(ರಿ) ಹಾವೇರಿ.
 • ಜಿಲ್ಲಾಧ್ಯಕ್ಷರು, ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ಹಾವೇರಿ.
 • ಜಿಲ್ಲಾಧ್ಯಕ್ಷರು, ಕ.ರಾ.ಶಿ.ಸಾ.ಪರಿಷತ್ತು ಹಾವೇರಿ.
 • ಜಿಲ್ಲಾಧ್ಯಕ್ಷರು, ಕ.ರಾ.ಪ್ರಾ.ಶಾ.ಹಿಂ.ಶಿ.ಸಂಘ ಹಾವೇರಿ. ರಾಜ್ಯ ಸಂಘಟನಾ ಕಾರ್ಯದರ್ಶಿ.
 • ಜಿಲ್ಲಾ ಉಸ್ತುವಾರಿ, ಕ.ರಾ.ಶಿ.ಸಾ.ಪ, ಹಾವೇರಿ.
 • ಗೌರವಾಧ್ಯಕ್ಷರು, ಅ.ಕ.ಹ.ರಂ.ಜಾ.ಕಲಾವಿದರ ಸಂಘ, ಹಾನಗಲ್ಲ.
 • ಗೌರವ ಸಲಹೆಗಾರರು: ಕನ್ನಡ ಸಾಹಿತ್ಯ ಸಾಗರ ಬಳಗ ರಾಜ್ಯ ಘಟಕ .ಚಿತ್ರದುರ್ಗ
 • ಗೌರವ ಸಲಹೆಗಾರರು, ಕವಿವೃಕ್ಷ ಬಳಗ ಹಾನಗಲ್ಲ.
 • ಪಾಠಶ್ರೀ, ವಿವೇಕ ಜಾಗೃತ ಬಳಗ, ಹಾನಗಲ್ಲ ತಾಲೂಕ ಘಟಕ.
 • ಸದಸ್ಯರು, ಶರಣ ಸಾಹಿತ್ಯ ಪರಿಷತ್ತು ಹಾನಗಲ್ಲ
 • ಅಜೀವ ಸದಸ್ಯರು, ಕ.ಸಾ.ಪ ಬೆಂಗಳೂರು.
 • ಸದಸ್ಯರು, ಸಾಧನಕೇರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ, ಬೆಂಗಳೂರು.
 • ಸದಸ್ಯರು, ಹೊಸಸಂಪದ ಹಳೆ ವಿದ್ಯಾರ್ಥಿಗಳ ಸಂಘ ಹೊನ್ನಾಳಿ.

ಭಾರತ್ ಸ್ಕೌಟ್ ಅಂಡ್ ಗೈಡ್ ಸಂಸ್ಥೆ ಹಾನಗಲ್ಲ ವತಿಯಿಂದ ರಾಜ್ಯಮಟ್ಟದ ಗೀತ ಗಾಯನ ಸ್ಪರ್ಧೆಗೆ ಮಕ್ಕಳನ್ನು ಭಾಗವಹಿಸಿದ್ದು.
೨೦೨೦-೨೧ ನೇ ಸಾಲಿನ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗಾಗಿ ರಾಜ್ಯ ಸ್ಕೌಟ್ ಸಂಸ್ಥೆಯಿಂದ ಅಭಿನಂದನೆ.

ಚೇತನ ಪ್ರಕಾಶನ ಹುಬ್ಬಳ್ಳಿ ಯವರ “ಕನ್ನಡ ಸಾಹಿತ್ಯ ಸಂಭ್ರಮ” ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ( ಮಾರ್ಚ್ ೨೦೨೦).

ಹಾವೇರಿ ಜಿಲ್ಲಾ ಕ.ಸಾ ಸಮ್ಮೇಳನ, ಹಾನಗಲ್ಲ ತಾಲೂಕ ಸಮ್ಮೇಳನಗಳಲ್ಲಿ ಉಪನ್ಯಾಸ.

ವಿವಿಧ ಸಂಘ ಸಂಸ್ಥೆ, ಶಾಲಾ ಕಾಲೇಜುಗಳಲ್ಲಿ , ಮಠಗಳಲ್ಲಿ ಉಪನ್ಯಾಸ.
ಸಾಹಿತ್ಯ ಕಾರ್ಯಕ್ರಮಗಳಲ್ಲಿ , ರಾಜ್ಯ ರಾಷ್ಟ್ರ ಮಟ್ಟದ ನೂರಾರು ಕವಿಗೋಷ್ಠಿಗಳಲ್ಲಿ ಅತಿಥಿಯಾಗಿ, ಅಧ್ಯಕ್ಷನಾಗಿ, ಕವಿಯಾಗಿ, ಸಂಘಟಕನಾಗಿ ಭಾಗಿ.

ಸ್ಕೌಟ್ ಮಾಸ್ಟರ್ ಆಗಿ ಸೇವೆ:

ಹಾನಗಲ್ಲ ತಾಲೂಕಿನ ಸ್ಕೌಟ್ ಮತ್ತು ಗೈಡ್ ಸಂಸ್ಥೆಯಲ್ಲಿ, ಶಾಲೆಯಲ್ಲಿ ಸ್ಕೌಟ್ ಮಾಸ್ಟರ್ ನಾಗಿ, ಮಕ್ಕಳಿಗೆ ಯೋಗ, ಕ್ರೀಡೆ, ಕ್ಷೇತ್ರ ದರ್ಶನ, ಸ್ಕೌಟ್ ನಡಿಗೆ ಕೃಷಿಯೆಡೆಗೆ, ಪ್ರವಾಸ, ಪ್ರಬಂಧ, ಚಿತ್ರಕಲೆ, ಗಾಯನ, ವಿವಿಧ ಸ್ಪರ್ಧೆ ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸುವುದು.

ಈವರೆಗೆ ಪಡೆದಿರುವ ಪ್ರಶಸ್ತಿ ಪುರಸ್ಕಾರಗಳು:

 1. “ಕರ್ನಾಟಕ ಇತಿಹಾಸ ಪ್ರಶಸ್ತಿ” ೨೦೦೧ ( ಕರ್ನಾಟಕ ಇತಿಹಾಸ ಅಕಾಡೆಮಿ ರಿ.)
 2. “ಹಸಿರೇ ಉಸಿರು ಪರಿಸರ ಪ್ರಶಸ್ತಿ” (೨೦೦೨ರಲ್ಲಿ ಶ್ರೀ ಲಕ್ಷ್ಮಣತೀರ್ಥ ಪರಿಸರ ಸಂರಕ್ಷಣಾ ಸಂಸ್ಥೆ ಮೈಸೂರು)
 3. “ಯುವ ಕವಿ” ಪ್ರಶಸ್ತಿ ( ೨೦೦೩ ರಲ್ಲಿ ಬೆಂಗಳೂರು)
 4. “ಉತ್ತಮ ನಿರೂಪಕ ಪ್ರಶಸ್ತಿ” (೨೦೦೪ರಲ್ಲಿ ಬೆಂಗಳೂರು)
 5. “ಉತ್ತಮ ಮಾರ್ಗದರ್ಶಿ ಶಿಕ್ಷಕ” ಪ್ರಶಸ್ತಿ (೨೦೧೦-೧೧ ಚಿಂತನ ವಿಜ್ಞಾನ ಚಿತ್ರದುರ್ಗ)
 6. “ಸಾಹಿತ್ಯ ಸಿರಿ” ರಾಜ್ಯ ಪ್ರಶಸ್ತಿ ( ೨೦೧೩ ರಲ್ಲಿ ಜನಪ್ರಿಯ ಪ್ರಕಾಶನ ಬೀದರ್)
 7. ಜಿಲ್ಲಾ ಮತ್ತು ರಾಜ್ಯ ಮಟ್ಟದ “ಉತ್ತಮ ಸಂಘಟನಾ ಶಿಕ್ಷಕ ಪ್ರಶಸ್ತಿ (೨೦೧೩, ೨೦೧೪ ರಲ್ಲಿ ನವೋದಯ ಪ್ರಕಾಶನ ಚಿತ್ರದುರ್ಗ)
 8. “ಕವಿವೃಕ್ಷ ರಾಜ್ಯೋತ್ಸವ ಪ್ರಶಸ್ತಿ” ( ೪-೧೧-೨೦೧೮ ರಲ್ಲಿ ಕವಿವೃಕ್ಷ ಬಳಗ ಮತ್ತು ಹೆಚ್.ಎಸ್.ಆರ್.ಎ ಪ್ರಕಾಶನ ಬೆಂಗಳೂರು)
 9. “ಬೆಳಕು ಕನ್ನಡದ ಕಣ್ವ” ರಾಜ್ಯ ಪ್ರಶಸ್ತಿ ( ೧೬-೧೨-೨೦೧೮ ರಲ್ಲಿ ಬೆಳಕು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಬೆಂಗಳೂರು)
 10. “ಸಾಹಿತ್ಯ ಕಲಾ ಸಾಮ್ರಾಟ” ರಾಜ್ಯ ಪ್ರಶಸ್ತಿ ( ೬-೧-೨೦೧೯ರಲ್ಲಿ ಹೆಚ್.ಎಸ್.ಆರ್.ಎ ಪ್ರಕಾಶನ, ಕ.ಸಾ.ಪ ಬೆಂಗಳೂರು)
 11. ಕರ್ನಾಟಕ ರಾಜ್ಯ “ಸೂಪರ್ ಅಚೀವರ್ಸ್ ಅವಾರ್ಡ್” (೧೩-೯-೨೦೧೯ರಲ್ಲಿ ಜನಮನ ಫೌಂಡೇಶನ್ ಹಾವೇರಿ).
 12. “ಕವಿರತ್ನ” ರಾಜ್ಯ ಪ್ರಶಸ್ತಿ ( ೩-೬-೨೦೧೯, ರವೀಂದ್ರಕಲಾಕ್ಷೇತ್ರ ಬೆಂಗಳೂರು, ಅ.ಕ.ಹ.ರಂ.ಸ.ಜಾ.ಕ.ಸಂಘ ಬೆಂಗಳೂರು)
 13. “ಸಾಹಿತ್ಯ ವಿಭೂಷಣ” ರಾಷ್ಟ್ರಮಟ್ಟದ ಪ್ರಶಸ್ತಿ ( 7-7-2019, ಕಸ್ತೂರಿ ಸಿರಿಗನ್ನಡ ವೇದಿಕೆ, ಬೆಳಗಾವಿ).
 14. “ಆದರ್ಶ ಶಿಕ್ಷಕ” ರಾಜ್ಯ ಪ್ರಶಸ್ತಿ ( 13-9-2020, ಕೂಡಲ ಹಾವೇರಿ, ಶ್ರೀ ಆದಿಯೋಗೀಶ್ವರ ಗುರೂಜಿ ಸನಾತನಂ ಪೀಠ ಶಿಗ್ಗಾವಿ )
 15. “ಬಸವ ಜ್ಯೋತಿ” ರಾಜ್ಯಪ್ರಶಸ್ತಿ ( 15-9-2019 ರಂದು ಕ.ಸಾ.ಪ ಬೆಂಗಳೂರು, ಸೃಷ್ಟಿ ಸಂಸ್ಥೆ ಮತ್ತು ಕರ್ನಾಟಕ ಸಾಂಸ್ಕೃತಿಕ ಪರಿಷತ್ತು)
 16. “ಸಾಹಿತ್ಯ ಸೇವಾರತ್ನ” ರಾಜ್ಯಪ್ರಶಸ್ತಿ (೧೯-೧೧-೨೦೧೯, ಮುಧೋಳ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಬಾಗಲಕೋಟ ಮತ್ತು ಅ.ಕ.ಹ.ರಂ.ಸ.ಜಾ.ಕ.ಸಂಘ ಬೆಂಗಳೂರು)
 17. “ಶ್ರೀಗುರು ರಾಘವೇಂದ್ರ ಸದ್ಭಾವನಾ ಪ್ರಶಸ್ತಿ” (೧೭-೯-೨೦೧೯ ಮಂತ್ರಾಲಯ, ಅ.ಕ.ಹ.ರಂ.ಸ.ಜಾ.ಕಲಾವಿದರ ಸಂಘ ಬೆಂಗಳೂರು)
 18. ವಿದ್ಯಾ ಭೂಷಣ” ರಾಷ್ಟ್ರೀಯ ಪ್ರಶಸ್ತಿ ( ೨-೨-೨೦೨೦, ಕರ್ನಾಟಕ ದರ್ಶನ ಸಮಾಜ ಸೇವಾ ಸಂಸ್ಥೆ ಹುಬ್ಬಳ್ಳಿ )
 19. “ಪ್ರೊ.ಆರ್.ರಾಚಪ್ಪ ಸ್ಮರಣ ಪ್ರಶಸ್ತಿ” (ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಕನಕಪುರ ಮತ್ತು ಕರುನಾಡ ಸಾಹಿತ್ಯ ಪರಿಷತ್ತು ಬೆಂಗಳೂರು)
 20. ಕನ್ನಡ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ” ( ೨೪-೧೧- ೨೦೧೯ , ಚೇತನ ಪ್ರಕಾಶನ, ಅ.ಕ.ಚೇ.ಮಹಿಳಾ ಮಹಾ ಸಮ್ಮೇಳನ ಬೆಂಗಳೂರು)
 21. “ಸರ್ವೋತ್ತಮ ಸೇವಾ” ರಾಜ್ಯಪ್ರಶಸ್ತಿ (೩-೩-೨೦೨೦, ಅ.ಕ.ಹ.ರಂ.ಜಾ.ಕ.ಸಂಘ, ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ೨೦೨೦)
 22. “ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ” ( ೫-೯-೨೦೨೦) ಸಾರ್ವಜನಿಕ ಶಿಕ್ಷಣ ಇಲಾಖೆ ಹಾವೇರಿ.
 23. “ಸುವರ್ಣ ಗರಿ” ಪ್ರಶಸ್ತಿ (ನವಿಲುಗರಿ ಸಾ.ಮ.ಸಾಂ.ವೇದಿಕೆ ಧಾರವಾಡ ವತಿಯಿಂದ ಅಗಸ್ಟ್ ೨೦೨೦).
 24. “ಶಿಕ್ಷಕ ಶ್ರೀ” ಪ್ರಶಸ್ತಿ (ರಾಜ್ಯ ಯುವ ಬರಹಗಾರರ ಒಕ್ಕೂಟ ಬೆಂಗಳೂರು ವತಿಯಿಂದ)
 25. ವೀರ ಮದಕರಿ ನಾಯಕ ರಾಜ್ಯ ಪ್ರಶಸ್ತಿ”( ಕನ್ನಡ ಸಾಹಿತ್ಯ ಸಾಗರ ಸಂಸ್ಥೆ ಚಿತ್ರದುರ್ಗ)
 26. “ಬಸವ ಜ್ಯೋತಿ ರಾಜ್ಯ ಪ್ರಶಸ್ತಿ” ( ಅ.ಕ.ಹ.ರಂ.ಸ.ಜಾ.ಕ.ಸಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗ ಕೂಡಲಸಂಗಮ)
 27. “ರಂಗಕಾವ್ಯ ಸಾಹಿತ್ಯ ಸಿರಿ” ರಾಜ್ಯ ಪ್ರಶಸ್ತಿ ( ರಂಗಕುಸುಮ ಪ್ರಕಾಶನ ರಾಣೆಬೆನ್ನೂರ)
 28. ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ (ಅನಿತಾಕೌಲ್ ಸ್ಮರಣಾರ್ಥ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಬೆಂ)
 29. ರಾಜ್ಯ ಕಲಾರತ್ನ ಪ್ರಶಸ್ತಿ (ಸಾಹಿತ್ಯ ಮತ್ತು ಸಂಘಟನೆ)೨೫/೨/೨೦೨೧ ಅ.ಕ.ಹ.ರಂ.ಸ.ಜಾ.ಕ.ಸಂಘ ಬೆಂ.
 30. ಕುದ್ಮಲ್ ರಂಗರಾವ್ ರಾಜ್ಯ ಪ್ರಶಸ್ತಿ ೨೦೨೧ (ರಾಜ್ಯ ಯುವ ಬರಹಗಾರರ ಒಕ್ಕೂಟ ಬೆಂ)
 31. ಕಾಲಜ್ಞಾನಯೋಗಿ ನಾರೇಯಣ ಯತೀಂದ್ರ ಪ್ರಶಸ್ತಿ (ಚಿಕ್ಕಬಳ್ಳಾಪುರ ಕಸಾಪ ಜಿಲ್ಲಾ ಘಟಕದ ರಾಷ್ಟ್ರಮಟ್ಟದ ಕಾರ್ಯಕ್ರಮ)

ಶ್ರೀ ಇಂಗಳಗಿ ದಾವಲಮಲೀಕ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...
- Advertisement -

More Articles Like This

- Advertisement -
close
error: Content is protected !!