Homeಲೇಖನಪ್ರತಿಯೊಬ್ಬರ ಜೀವನವೂ ಚರಿತ್ರೆಯಾಗಿರುತ್ತದೆ

ಪ್ರತಿಯೊಬ್ಬರ ಜೀವನವೂ ಚರಿತ್ರೆಯಾಗಿರುತ್ತದೆ

ಆತ್ಮಕಥೆಯನ್ನು ಮಾನವ ಬದುಕಿರುವಾಗಲೇ ಬರೆದರೆ ಕೆಲವು ಅನುಭವ ಸತ್ಯವನ್ನು ನೇರವಾಗಿ ಹೊರಗೆ ಹಾಕಿ ತಿಳಿಸಬಹುದು. ಹೋದ ಮೇಲೆ ಅವರ ಕಥೆ ಬೇರೆಯವರು ಬರೆಯುವಾಗ ಎಷ್ಟೋ ಸತ್ಯ ಮುಚ್ಚಿಹಾಕೋ ಪ್ರಸಂಗಗಳು ಬರುತ್ತದೆ. ಹೀಗಾಗಿ ಇದ್ದಾಗ ಇಳಿಸುವುದು ಅಗತ್ಯ.

ಇಲ್ಲಿ ನಾವು ದೇವಾನುದೇವತೆಗಳ ಕಥೆ,ಪುರಾಣಗಳನ್ನು ಓದಿಕೊಂಡು ಯುಗಯುಗದಿಂದಲೂ ನಡೆದಿರುವ ಸತ್ಯ ಧರ್ಮವನ್ನು ಸಮಾನವಾಗಿಸೋದು ಕಷ್ಟ. ಸತ್ಯ ಇದ್ದ ಕಡೆ ರಾಜಕೀಯ ಇರೋದಿಲ್ಲ. ಅದರಲ್ಲೂ ಧಾರ್ಮಿಕ ಸತ್ಯ ಅನುಭವದ ಸತ್ಯದಲ್ಲಿ ಧರ್ಮವಿರೋವಾಗ ರಾಜಕೀಯ ಮರೆಯಾಗುತ್ತದೆ.

ಹಿಂದಿನ ಮಹಾರಾಜರಲ್ಲಿದ್ದ ಕ್ಷತ್ರಿಯ ಧರ್ಮಕ್ಕೆ ತಕ್ಕಂತೆ ಅವರ ಜೀವನವಿತ್ತು ಎನ್ನುವ ಹಾಗಿಲ್ಲ. ಅಂದಿನ ವರ್ಣ ಪದ್ದತಿಯಲ್ಲಿ ಅವರವರ ಮೂಲ ಧರ್ಮ ಕರ್ಮಕ್ಕೆ ತಕ್ಕಂತೆ ಶಿಕ್ಷಣವಿದ್ದು ಜೀವನ ನಡೆದಿತ್ತು. ಸಾಮಾನ್ಯವಾಗಿ ಹೆಚ್ಚು ಚರಿತ್ರೆಗಳು ರಾಜರದ್ದಾಗಿದೆ. ರಾಜರ ಚರಿತ್ರೆ ಎಂದರೆ ರಾಜಕೀಯವಿರುತ್ತದೆ.

ಆದರೆ ಅಂದಿನ‌ ಸಾಮಾಜಿಕ ಕಾಲಮಾನ,ಪರಿಸ್ಥಿತಿಗೆ ತಕ್ಕಂತೆ ಹಲವು ಬದಲಾವಣೆಗಳನ್ನು ರಾಜರುಗಳು ಮಾಡಿಕೊಂಡು ರಾಜ್ಯಭಾರ ನಡೆಸಿದ್ದರು. ಈಗ ಪ್ರಜಾಪ್ರಭುತ್ವ ಇಲ್ಲಿ ಪ್ರಜೆಗಳ ಜ್ಞಾನಕ್ಕೆ ತಕ್ಕಂತೆ ಜೀವನ ದೇಶದ ಭವಿಷ್ಯಕ್ಕಾಗಿ ಸ್ವಯಂಸೇವಕರಾಗಿ, ಮಹಾತ್ಮರಾಗಿ, ದೇಶಭಕ್ತರಾಗಿದ್ದ ಜ್ಞಾನಿಗಳ ಜೀವನ ಚರಿತ್ರೆ ನಂತರ ಬಂದವರು ಬರೆದಿಳಿಸಿದ್ದಾರೆ.

ಕೆಲವರಷ್ಟೇ ತಮ್ಮ ಜೀವನ ಚರಿತ್ರೆ ತಾವೇ ಬರೆದಿರೋದು ವಿಶೇಷ. ಅನುಭವ ಗಳಲ್ಲಿ ವ್ಯತ್ಯಾಸವಿದ್ದರೂ ಉದ್ದೇಶ ಗುರಿ ಒಂದೇ ಆಗಿದ್ದ ದೇಶಭಕ್ತರ ಜೀವನ ಚರಿತ್ರೆ ದೇಶದ ಜನತೆಗೆ ತಲುಪಿಸುವ ಕೆಲಸ ಶಿಕ್ಷಣದಲ್ಲಿ ಅಗತ್ಯ ಇತ್ತು. ಹಾಗೆ ಹಿಂದಿನ ಆಧ್ಯಾತ್ಮ ಸಾಧಕರ ವಿಚಾರಗಳು ಧಾರ್ಮಿಕ ಕ್ಷೇತ್ರಕ್ಕೆ ಬಹಳ‌ಮುಖ್ಯವೆ.

ಇವುಗಳನ್ನು ಸ್ವತ: ಅನುಭವದಿಂದ ಬರೆಯುವುದು ಒಂದು ರೀತಿಯಾದರೆ ಊಹಿಸಿಕೊಂಡು ಬರೆಯುವುದು ಮತ್ತೊಂದು ರೀತಿ. ಊಹಾಪೋಹಗಳಿಂದಾದ ಜೀವನ ಚರಿತ್ರೆಗಳಿಂದ ಮೂಲ ಸತ್ಯ ಹಿಂದುಳಿಯುತ್ತದೆ. ಆದರೂ ನಮ್ಮಲ್ಲಿ ಈಗ ಮಹಾಗ್ರಂಥಗಳಾಗಿರುವ ರಾಮಾಯಣ, ಮಹಾಭಾರತವನ್ನೇ‌ ತೆಗೆದುಕೊಂಡರೆ ಇವುಗಳು ನಡೆದುಎಷ್ಟೋ ವರ್ಷದ ನಂತರ ಬರೆದಿರುವುದಾದರೂ ಅಂದಿನ ಮಹಾತ್ಮರೊಳಗಿದ್ದು ಸತ್ಯ ಹೊರ ಹಾಕಿಸಿರೋದು ದೇವತೆಗಳೆ ಪರಮಾತ್ಮರುಗಳೆ.

ಆದರೆ ಇದನ್ನು ಮುಂದಿನ ಯುಗಯುಗ ಕಳೆದಂತೆ ಸಾಮಾಜಿಕ ಸ್ಥಿತಿಗೆ ತಕ್ಕಂತೆ ಊಹಾಪೋಹಗಳಿಂದ ತಿರುಚಿಕೊಂಡು ಪ್ರಚಾರಕರು ಸಮಾಜದnಜನತೆಯ ಮಧ್ಯವರ್ತಿಗಳಾದರು. ಎಷ್ಟೋ ವಿಚಾರಗಳಲ್ಲಿ ಈಗಲೂ ದ್ವಂದ್ವವೇ ಇದೆ.ಹೀಗೆಯೇ ಇಂದಿಗೂ ಎಷ್ಟೋ ಲೇಖಕರು ಅವರವರ ಆತ್ಮಚರಿತ್ರೆ ಬರೆದುಕೊಂಡು ಜನರಿಗೆ ಹಂಚಿ ಹೆಸರು, ಹಣ, ಸ್ಥಾನಮಾನಕ್ಕಾಗಿ ಪ್ರಯತ್ನಪಡುತ್ತಾರೆ.

ಪ್ರತಿಯೊಬ್ಬರ ಜೀವನವೂ ಚರಿತ್ರೆ ಆಗಿರುತ್ತದೆ.ಕಥೆ ಧಾರಾವಾಹಿಗಳು ಬೆಳೆದಿರೋದೆ ಮಾನವನ‌ಕಲ್ಪನೆಯ ವಿಚಾರಗಳಿಂದ, ಸಂಸಾರದ ವಿಚಾರ, ಸಮಾಜದ ವಿಚಾರಗಳಿಗಿರುವ ಬೇಡಿಕೆಗಳು ಇತ್ತೀಚೆಗೆ ಹೆಚ್ಚುತ್ತಿದೆ. ಬೇಡಿಕೆಗೆ ತಕ್ಕಂತೆ ಬರವಣಿಗೆಯಾದರೆ ಇದರಿಂದಾಗಿ ಸಮಾಜದಲ್ಲಿ  ಸತ್ಯ,ಧರ್ಮ ಇರೋದಕ್ಕೆ ಕಷ್ಟ.ಮಹಾತ್ಮರುಗಳಿಗೆ ಹೆಸರು, ಹಣ, ಸ್ಥಾನಮಾನ, ಗೌರವಕ್ಕಾಗಿ ಆತ್ಮವಂಚನೆ ಮಾಡಿಕೊಳ್ಳಲು ಬರೋದೆ ಇಲ್ಲ. ಹೀಗಾಗಿ ತನ್ನೆಲ್ಲಾ ಸೇವೆಯಲ್ಲಿ ಪರಮಾತ್ಮನಿದ್ದಾನೆ ಎಂದು ಯಾವುದೇ ಜೀವನ ಚರಿತ್ರೆ ಬರವಣಿಗೆ ರೂಪಕ್ಕೆ ಇಳಿಸದೆ ಮುಂದೆ ನಡೆದಿದ್ದರು.

ಆದರೆ ಅದನ್ನು ಅವರು ಗತಿಸಿದ ಮೇಲೆ ಬರವಣಿಗೆಯಲ್ಲಿ ಇಳಿಸಿದವರು ಸತ್ಯವನ್ನು ಪೂರ್ಣ ಅನುಭವದಿಂದ ತಿಳಿಯಲಾಗದೆ ಸಮಾಜದೆದುರು ತಂದು ತಮ್ಮ ಹೆಸರನ್ನು ಬೆಳೆಸಿದರು. ಇದರ ಪರಿಣಾಮವೇ ಮಹಾತ್ಮರ‌ ಹೆಸರಿನಲ್ಲಿ ನಡೆಯೋ ವ್ಯವಹಾರವಾಗಿದೆ. ಹಣದ ಲಾಭಕ್ಕಾಗಿ ಅಸತ್ಯವನ್ನು ಅಧರ್ಮವನ್ನು ಬೆಳೆಸಿದರೆ ಭೂಮಿಗೆ ನಷ್ಟ. ಪರಮಾತ್ಮನ l ಇಚ್ಚೆಯಿಲ್ಲದೆ ಏನೂ ನಡೆಯದು ಎಂದಾಗ ಎಲ್ಲವೂ ಪರಮಾತ್ಮನ ಪ್ರೇರಣೆಯೆ.

ನಮ್ಮ ಜೀವನ ಚರಿತ್ರೆ ಅನುಭವ ಇದ್ದಾಗ ಬರೆದರೆ ಸತ್ಯ.ಹೋದಮೇಲೆ ಮಿಥ್ಯ .ಆದರೆ, ತಮ್ಮನ್ನು ತಾವು ಶೋಧಿಸಿಕೊಂಡು ಆತ್ಮಕಥೆಯನ್ನು ಇದ್ದಾಗ ಬರೆದವರು ಹೋದ ಮೇಲೆ ಅವರ ಕಥೆಯನ್ನು ತಿರುಚಿ ಬರೆದು ಹಂಚುವವರೆ ಸಂಶೋಧಕರಾಗಿ ಪ್ರಸಿದ್ದರಾದರೆ ವ್ಯರ್ಥ. ಯಾರ ಕಥೆಯಿಂದ ಯಾರಿಗೆ ಲಾಭ? ಯಾರಿಗೆ ನಷ್ಟ? ಎಲ್ಲಾರೂ ಮಾಡೋದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಎನ್ನುವ ಕಾಲ ಹೋಯಿತು. ಎಲ್ಲಾ ಮಾಡೋದು ನೋಟಿಗಾಗಿ ಓಟು ಸೀಟಿಗಾಗಿ ಎನ್ನುವ ರಾಜಕೀಯವೆ ಆತ್ಮಹತ್ಯೆಗೆ ಕಾರಣವಾಗುತ್ತಿದೆ.


ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

RELATED ARTICLES

Most Popular

error: Content is protected !!
Join WhatsApp Group