spot_img
spot_img

ದ್ವೇಷ ಬಿಟ್ಟು ಎಲ್ಲರೂ ಒಂದಾಗಿ ಬದುಕಬೇಕು – ಶಾಂತಗಂಗಾಧರ ಸ್ವಾಮೀಜಿ

Must Read

ಸಿಂದಗಿ: ದೇವರು ಎಲ್ಲಾ ಕಡೆ ಇದ್ದಾನೆ ಅವನು ನಿರಾಕಾರ ಎಲ್ಲೆಲ್ಲಿಯು ಇದ್ದಾನೆ ಅದಕ್ಕೆ ನಾವೆಲ್ಲರು ಅನೇಕ ಮೆರವಣಿಗೆಯಲ್ಲಿ ಹಾಗೂ ಕಾರ್ಯಕ್ರಮಗಳಲ್ಲಿ ಬಳಸುವ ಒಂದೊಂದು ಕುರ್ಚಿಗಳು ಒಂದೇ ಆದರೆ ಅಲ್ಲಿ ನಮ್ಮ ಭಾವನೆಗಳು ಬೇರೆ ಆಗಿರುತ್ತವೆ. ಸಹಕಾರವೇ ಜೀವನ ಜನರು ಇನ್ನೊಬ್ಬರ ಮೇಲೆ ದ್ವೇಷ ಬಿಟ್ಟು ನೆಮ್ಮದಿಯಿಂದ ಸಂತೋಷದಿಂದ ಬದುಕಬೇಕು ಎಂದು ಗುರುದೇವಾಶ್ರಮ ಪೂಜ್ಯಶ್ರೀ ಶಾಂತಗಂಗಾಧರ ಸ್ವಾಮಿಗಳು ಹೇಳಿದರು.

ಪಟ್ಟಣದ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡ ದೀಪಾವಳಿಯ ಸಹಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ನಿರ್ದೇಶಕ ಫಾದರ್ ಆಲ್ವಿನ್ ಡಿಸೋಜರವರು ಮಾತನಾಡಿ, ದೀಪಾವಳಿ ಎಂದರೆ ಕುಟುಂಬದ ಹಬ್ಬ. ಎಲ್ಲರು ಸೇರಿ ಆಚರಿಸುವ ಹಬ್ಬವಾಗಿದೆ. ಕರೋನ ಎಂಬ ಮಹಾಮಾರಿ ರೋಗವನ್ನು ಹೋಗಲಾಡಿಸಲು ನಾವು ದೀಪವನ್ನು ಬೆಳಗಬೇಕು ಈ ದೀಪಾವಳಿಯು ಯಾವುದೇ ಧರ್ಮಕ್ಕೆ ಸೀಮಿತವಲ್ಲ ಎಲ್ಲ ಧರ್ಮದವರು ಆಚರಿಸುವ ಹಬ್ಬ ಯಾವುದು ಎಂದರೆ ಅದುವೇ ದೀಪಾವಳಿ ಹಬ್ಬವಾಗಿದೆ ಎಂದರು.

ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ದಲಿಂಗ ಚೌಧರಿ ಮಾತನಾಡಿ, ದಾನದಲ್ಲಿ ಶ್ರೇಷ್ಠ ದಾನ ನೇತ್ರದಾನ ಎಂಬ ನುಡಿಯಂತೆ ತಮ್ಮ ಜೀವಿತಾವಧಿ ನಂತರ ನೇತ್ರವನ್ನು ದಾನ ಮಾಡುತೇನೆ ಎಂದು ಈ ಸಂದರ್ಭದಲ್ಲಿ ಪ್ರಮಾಣ ಮಾಡಿದರು. ಧರ್ಮ ಮತ್ತು ಅಧ್ಯಾತ್ಮ ಕ್ಷೇತ್ರದಲ್ಲಿ ಬದುಕು ಸುಂದರಗೊಳಿಸೋಣ ಎಂದರು.

ಬ್ರದರ್ ರೋನಲ್ಡ್ ಮಾತನಾಡಿ, ಪಾಪದ ಜೀವನ ನಡೆಸುವವರು ಬೆಳಕಿನೆಡೆಗೆ ಬರಲು ಅಂಜುತ್ತಾರೆ ಆದರೆ ಯಾರೆಲ್ಲ ಈ ಬೆಳಕಿನೆಡೆಗೆ ಬಂದರೊ ಅವರಿಗೆ ದೇವರ ಮಕ್ಕಳಾಗುವ ಹಕ್ಕನ್ನು ಅವರು ಕೊಟ್ಟರು ಎನ್ನುವ ಒಂದು ಉದಾಹರಣೆಯ ಮೂಲಕ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಲೋಯೊ ಶಾಲೆಯ ಪ್ರಾಂಶುಪಾಲ ಫಾದರ್ ಸಿರಿಲ್ ಹಾಗೂ ಲೋಯೊ ಶಾಲೆಯ ಸಹಪ್ರಾಂಶುಪಾಲ ಸಿಸ್ಟರ್ ಹೆಲನ್, ಸಿಸ್ಟರ್ ದಿವ್ಯಾ, ಲೋಯೊ¯ ಶಾಲೆಯ ಎಲ್ಲ ಸಿಬ್ಬಂದಿ ವರ್ಗದವರು, ಸಂಗಮ ಸಂಸ್ಥೆಯ ಸಹನಿರ್ದೇಶಕಿ ಸಿಸ್ಟರ್ ಸಿಂತಿಯಾ ಡಿಮೆಲ್ಲೊ, ಬ್ರದರ್ ಪೃಥ್ವಿ, ಕಟ್ಟಡ ಕಾರ್ಮಿಕರು, ಯುವಕರು, ವಿಶಿಷ್ಟ ಚೇತನರು ಮತ್ತು ಸಂಗಮ ಸಂಸ್ಥೆಯ ಸಿಬ್ಬಂದಿಗಳಾದ ಬಸಮ್ಮ, ಶ್ರೀಧರ ಕಡಕೋಳ, ಶ್ರೀಮತಿ ತೇಜಶ್ವಿನಿ ಹಳ್ಳದಕೇರಿ ಉಪಸ್ಥಿತರಿದ್ದರು.

ವಿಜಯ್ ವಿ ಬಂಟನೂರ ನಿರೂಪಿಸಿದರು , ರಾಜೀವ ಕುರಿಮನಿ ಸ್ವಾಗತಿಸಿದರು. ಮಲಕಪ್ಪ ಹಲಗಿ ವಂದಿಸಿದರು.

- Advertisement -
- Advertisement -

Latest News

ಸುಣಧೋಳಿ ಮಹಿಳಾ ಕ್ರೆಡಿಟ್ ಸೌಹಾರ್ದಗೆ ೭೬.೦೭ ಲಕ್ಷ ರೂ ಲಾಭ

ಮೂಡಲಗಿ: ಸುಣಧೋಳಿ ಮಹಿಳಾ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ೨೦೨೩ರ ಮಾರ್ಚ ಅಂತ್ಯಕ್ಕೆ ರೂ.೭೬.೦೭ ಲಕ್ಷ ಲಾಭವನ್ನು ಗಳಿಸಿ ಪ್ರಗತಿಯಲ್ಲಿ  ಸಾಗುತ್ತಿದೆ ಎಂದು ಸಹಕಾರಿಯ ಅಧ್ಯಕ್ಷೆ...
- Advertisement -

More Articles Like This

- Advertisement -
close
error: Content is protected !!