spot_img
spot_img

ಕೊನೆಗೂ ಬೀದರ್ ಜಿಲ್ಲೆಗೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವರು; ಹೀಗೆ ಬಂದು ಹಾಗೆ ಹೋದ ಸಚಿವ

Must Read

ಬೀದರ – ಕೆಲವು ದಿನಗಳಿಂದ ಭಾರೀ ಮಳೆ ಹಾಗೂ ಸೋಯಾ ಬೆಳೆಗೆ ಶಂಕು ಹುಳುವಿನ ಕಾಟದಿಂದ ತತ್ತರಿಸಿದ್ದ ಬೀದರ ಜಿಲ್ಲೆಗೆ ಕೊನೆಗೂ ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೋಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬೀದರ ತಾಲ್ಲೂಕಿನ ದದ್ದಾಪುರ ಗ್ರಾಮಕ್ಕೆ ಭೇಟಿ ನಿಡಿದ ಸಚಿವರು ಮಳೆಯಿಂದ ಬಿದ್ದ ಮನೆಗಳ ವೀಕ್ಷಣೆ ಮಾಡಿ ಗ್ರಾಮಸ್ಥರಿಂದ ಮಾಹಿತಿ ಪಡೆದರು.

ದದ್ದಾಪುರ ಗ್ರಾಮದಲ್ಲಿ ಮಳೆಯಿಂದ ಹಾನಿಗೀಡಾದ ಮನೆಗಳಿಗೆ ಭೇಟಿ ನೀಡಿ ಪ್ರತಿ ಫಲಾನುಭಾವಿಗಳಿಗೆ ರೂ. 10ಸಾವಿರದ ಚೆಕ್ ವಿತರಿಸಿದರು.

ಸಂದರ್ಭದಲ್ಲಿ ಬೀದರ ಶಾಸಕ ರಹೀಂಖಾನ, ಜಿಲ್ಲಾಧಿಕಾರಿ ಗೋವಿಂದ ರಡ್ಡಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಣಾಧಿಕಾರಿ ಶಿಲ್ಪಾ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರ್ ಬಾಬು ಸೇರಿದಂತೆ ಹಲವಾರು ಅಧಿಕಾರಿಗಳು ಸಚಿವರ ಜೊತೆಗಿದ್ದರು.

ಕಾಟಾಚಾರಕ್ಕೆ‌‌ ಮಳೆಹಾನಿ ಪ್ರದೇಶಗಳ ವಿಕ್ಷಣೆ ಮಾಡಿದ ಸಚಿವರು – ಈಶ್ವರ ಖಂಡ್ರೆ

ಉಸ್ತುವಾರಿ ಸಚಿವರೆ ಇದೇನಾ ಬೆಳೆಹಾನಿ ವಿಕ್ಷಣೆ..?

ಇತ್ತ ಜಿಲ್ಲಾ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರ ಭೇಟಿಯನ್ನು ಕಾಟಾಚಾರ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಟೀಕಿಸಿದ್ದು, ಕಾಣೆ ಆಗಿದ್ದ ಬೀದರ್ ಜಿಲ್ಲೆಯ ಉಸ್ತುವಾರಿ ಸಚಿವರು.

30 ನಿಮಿಷಗಳಲ್ಲಿ ಕಾಟಾಚಾರಕ್ಕೆ ಮೂರು ಕಡೆ ಭೇಟಿ ನೀಡಿ ಕೈತೊಳೆದುಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಅವರು ಹೇಳಿದಂತೆ ಉಸ್ತುವಾರಿ ಸಚಿವರು ಮನೆ ಹಾನಿಗೆ 10 ನಿಮಿಷ, ಬೆಳೆ ಹಾನಿಗೆ 10 ನಿಮಿಷ ಹಾಗೂ 10 ನಿಮಿಷಗಳಲ್ಲಿ ಮಾಂಜ್ರಾನದಿ ವೀಕ್ಷಣೆ ಮಾಡಿ ಹೊರಟೇ ಬಿಟ್ಟರು.

ಬೀದರ್ ತಾಲೂಕಿನ ದದ್ದಾಪೂರ ಗ್ರಾಮದಲ್ಲಿ ಮನೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ, ಚಾಂಬೋಳ್ ಗ್ರಾಮದ ಬೆಳೆಹಾನಿ ಪ್ರದೇಶಕ್ಕೆ ಭೇಟಿ ಹಾಗೂ ಕುಂದಗೋಳ ಗ್ರಾಮದ ಬಳಿ ಇರುವ ಮಾಂಜ್ರಾನದಿಗೆ ಭೇಟಿ ನೀಡಿದ ಸಚಿವರು‌..30 ನಿಮಿಷಗಳಲ್ಲಿ ಕಾಟಾಚಾರದ ಪ್ರವಾಸ ಮಾಡಿ ಸಭೆಗೆ ಹೋದರು.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ವಿಶ್ವ ಹಿಂದೂ ಪರಿಷತ್ ಸ್ಥಾಪನಾ ದಿನ ಮತ್ತು ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

ಸಿಂದಗಿ: ಪಟ್ಟಣದ ಭೀಮಾಶಂಕರ ಮಠದಲ್ಲಿ ವಿಶ್ವ ಹಿಂದೂ ಪರಿಷತ್ ಸ್ಥಾಪನಾ ದಿನ ಮತ್ತು ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಮಾಡಲಾಯಿತು. ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿದ್ದ ಕೊಗಟನೂರ ಪೂಜ್ಯಶ್ರೀ...
- Advertisement -

More Articles Like This

- Advertisement -
close
error: Content is protected !!