ಮೂಡಲಗಿ: ಪಟ್ಟಣದ ಗಾಂಧಿ ವೃತ್ತದ ಹತ್ತಿರ ಹನುಮಾನ ದೇವಸ್ಥಾನದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಮೂಡಲಗಿ ಘಟಕದಿಂದ ಗಣೇಶ ಚತುರ್ಥಿ ಹಾಗೂ ಸಾವರ್ಕರ್ ಜಯಂತಿ ಆಚರಿಸಿದರು.
ಸಾವರ್ಕರ್ ಅವರು ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿದ ವಿಶ್ವಹಿಂದೂ ಪರಿಷತ್ ನ ಪ್ರಕಾಶ ಮಾದರ ಮಾತನಾಡಿ, ಅನೇಕ ಸ್ವಾತಂತ್ರ ಹೋರಾಟಗಾರರು ತಮ್ಮ ಪ್ರಾಣವನ್ನು ತ್ಯಾಗ ಮಾಡಿ ಭಾರತ ದೇಶಕ್ಕೆ ಸ್ವಾತಂತ್ರ ತಂದು ಕೊಟ್ಟಿದ್ದಾರೆ ಅಂತಹ ಪ್ರಮುಖರಲ್ಲಿ ವಿನಾಯಕ ದಾಮೋದರ ಸಾವರ್ಕರ ಅವರು ಒಬ್ಬರು, ಸಾವರ್ಕರ ಅವರು ಒಬ್ಬ ಸ್ವಾತಂತ್ರ ಯೋಧ ಅಷ್ಟೆ ಅಲ್ಲದೆ ಶ್ರೇಷ್ಠ ಸಾಹಿತಿಗಳು ಸಹಿತ ಆಗಿದ್ದರು.
ಭಾರತ ದೇಶದಲ್ಲಿ ಹಿಂದುತ್ವದ ಜಾಗೃತಿ ಮೂಡಿಸಿ ಹಿಂದೂತ್ವದ ಪ್ರತಿಪಾದಕರಾಗಿ ಅನೇಕ ಹೋರಾಟ ಮಾಡಿದ್ದಾರೆ, ಅವರ ತತ್ವ ಸಿದ್ದಾಂತಗಳನ್ನು ಅಳವಡಿಸಿಕೊಳ್ಳಬೇಕು, ಎಲ್ಲರಿಗೂ ನಮ್ಮ ಧರ್ಮ ಶ್ರೇಷ್ಠ, ಧರ್ಮ ಉಳಿದರೆ ನಮ್ಮ ದೇಶ ಉಳಿದರೆ, ನಾವು ಉಳಿಯುತ್ತೇವೆ ಇವತ್ತು ದೇಶದಲ್ಲಿ ಅನೇಕ ಘಟನೆಗಳು ಹಿಂದುತ್ವ ಹೋಟಗಾರರ ಮೇಲೆ ಅನೇಕ ಅಕ್ರಮಗಳು ನಡೆಯುತ್ತಿವೆ, ಅಂತಹ ಹತ್ಯೆಗಳನ್ನು ಪ್ರತಿಭಟಿಸುವ ಶಕ್ತಿಯನ್ನು ಹಿಂದು ಕಾರ್ಯಕರ್ತರು ಅಳವಡಿಸಿಕೊಂಡು ಹಿಂದೂ ಸಂಘಟನೆಯನ್ನು ಬಲಪಡಿಸಿಕೊಂಡಾಗ ಮಾತ್ರ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕೃಷ್ಣಾ ನಾಶಿ, ಶಿವಾನಂದ ಗೋಟೂರು, ಕೇದಾರಿ ಭಸ್ಮೇ, ಕೃಷ್ಣಾ ಸೋನವಾಲ್ಕರ, ಬಸನಗೌಡ ಪಾಟೀಲ, ಸಚೀನ ಮುಗಳಖೋಡ, ಸುಭಾಸ ರಡೇರಟ್ಟಿ, ಮಾರುತಿ ಶಿಂಧೆ, ಈರಪ್ಪ ತೇರದಾಳ, ಶಾನೂರ ಝಂಡೇಕುರಬರ, ಮಹಾಲಿಂಗಯ್ಯಾ ಹಿರೇಮಠ, ಮಹಾಲಿಂಗ ಒಂಟಗೋಡಿ, ಈರಪ್ಪ ಝಂಡೇಕುರಬರ,ಮಗೆಪ್ಪ ಹಳಸಿ, ನಿಂಗಪ್ಪ ಗಸ್ತಿ, ಸಂಜೀವ ಇಂಗಳೆ ಮತ್ತಿತರರು ಇದ್ದರು.