spot_img
spot_img

ತಾಯ್ತನವುಳ್ಳವರಿಂದ ಮಕ್ಕಳ ಸಾಹಿತ್ಯ ರಚನೆ ಸಾಧ್ಯ

Must Read

- Advertisement -

ಸಿಂದಗಿ: ತಾಯ್ತನವುಳ್ಳವರಿಂದ ಮಾತ್ರ ಮಕ್ಕಳ ಸಾಹಿತ್ಯ ರಚನೆ ಸಾಧ್ಯ. ವಿಜಯಪುರ ಜಿಲ್ಲೆಯಲ್ಲಿ ಮಕ್ಕಳ ಸಾಹಿತ್ಯ ಗಟ್ಟಿಯಾಗಿದೆ. ಜಿಲ್ಲೆ ಮಕ್ಕಳ ಸಾಹಿತ್ಯದ ಕಣಜವಾಗಿದೆ ಎಂದು ಜಾನಪದ ವಿದ್ವಾಂಸ ಡಾ.ಎಂ.ಎಂ. ಪಡಶೆಟ್ಟಿ ಅಭಿಪ್ರಾಯಪಟ್ಟರು.

ಪಟ್ಟಣದ ಸಾರಂಗಮಠದ ಆವರಣದಲ್ಲಿ ವಿದ್ಯಾಚೇತನ ಪ್ರಕಾಶನ ಹಮ್ಮಿಕೊಂಡಿದ್ದ ಐದು ಕೃತಿಗಳ ಲೋಕಾರ್ಪಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಪ.ಗು.ಸಿದ್ದಾಪೂರ ಗಟ್ಟಿಯಾಗಿ ನೆಲೆ ನಿಂತಿದ್ದಾರೆ. ಮಕ್ಕಳ ಸಾಹಿತ್ಯವನ್ನು ಪಠ್ಯಪುಸ್ತಕಗಳಲ್ಲಿ ಸೇರ್ಪಡೆಗೊಳಿಸುವಂತೆ ಸರ್ಕಾರದ ಮೇಲೆ ಒತ್ತಡ ಹಾಕುವ ಜನಾಂದೋಲನ ಪ್ರಾರಂಭಗೊಳ್ಳಬೇಕು ಎಂದು ಅಭಿಮತ ವ್ಯಕ್ತಪಡಿಸಿದರು.

ಮಕ್ಕಳ ಸಾಹಿತಿ ಪ.ಗು. ಸಿದ್ದಾಪೂರ ಮಾತನಾಡಿ, ಸರ್ಕಾರಗಳು ಮಾಡದ ಸಾಹಿತ್ಯ, ಶಿಕ್ಷಣ, ಸಾಂಸ್ಕೃತಿಕ ಕಾರ್ಯಗಳನ್ನು ಮಠಗಳು ಮಾಡುತ್ತಿವೆ. ಬಂಥನಾಳ ಶ್ರೀ ವಿಜಯಪುರದಲ್ಲಿ ಬಿ.ಎಲ್.ಡಿ.ಇ ಶಿಕ್ಷಣ ಸಂಸ್ಥೆ ಸ್ಥಾಪಿಸಿದರೆ, ಬಾಗಲಕೋಟೆಯಲ್ಲಿ ಬೀಳೂರ ಸ್ವಾಮೀಜಿ ಬಸವೇಶ್ವರ ಶಿಕ್ಷಣ ಸಂಸ್ಥೆಯನ್ನು ಸ್ಥಾಪನೆ ಮಾಡುವ ಮೂಲಕ ಈ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ್ದಾರೆ ಎಂದರು.

- Advertisement -

ಈ ಸಂದರ್ಭದಲ್ಲಿ ಮಕ್ಕಳ ಸಾಹಿತಿ ಹ.ಮ. ಪೂಜಾರ ರಚಿತ ಚತುರ ಚಿಣ್ಣರು ಕಥಾ ಸಂಕಲನ, ಕೆಮ್ಮಿನ ಔಷಧಿ  ಉಚಿತ ನಗೆ ಹನಿ ಪುಸ್ತಕ, ಮುಳವಾಡದ ಮಕ್ಕಳ ಸಾಹಿತಿ ಪ.ಗು. ಸಿದ್ದಾಪೂರ ರಚಿತ ಅಕ್ಕರೆ ಅಜ್ಜ ನಾವು ಮತ್ತು ಗಾಂಧಿ ತಾತ ಕವನ ಸಂಕಲನ, ಶಿಕ್ಷಕ ಸಾಹಿತಿ ಎಸ್.ಎಸ್. ಸಾತಿಹಾಳ ರಚಿತ ಏನು ಚಂದವೋ ಮಕ್ಕಳ ಕವನ ಸಂಕಲನವನ್ನು ಸಾರಂಗಮಠ-ಗಚ್ಚಿನಮಠದ ಶ್ರೀ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಲೋಕೋಕಾರ್ಪಣೆ ಮಾಡಿದರು.

ಸ್ಥಳಿ ಎಚ್.ಜಿ. ಪಿಯು ಕಾಲೇಜಿನ ಪ್ರಾಚಾರ್ಯ ಎ.ಆರ್. ಹೆಗ್ಗನದೊಡ್ಡಿ ಅವರು, ಮಕ್ಕಳ ಸಾಹಿತಿ ಹ.ಮ. ಪೂಜಾರ ರಚಿತ ಚತುರ ಚಿಣ್ಣರು ಕಥಾ ಸಂಕಲನ, ಕೆಮ್ಮಿನ ಔಷಧಿ  ಉಚಿತ ನಗೆ ಹನಿ ಪುಸ್ತಕವನ್ನು ಪರಿಚಯಿಸಿದರು.

ಬಬಲೇಶ್ವರದ ಶ್ರೀ ಶಾಂತವೀರ ಪದವಿಪೂರ್ವ ಮಹಾವಿದ್ಯಾಲಯದ ರಾಜ್ಯಪ್ರಶಸ್ತಿ ಪುರಸ್ಕೃತ ಉಪನ್ಯಾಸಕ ಮಹಾದೇವ ರೆಬಿನಾಳ ಅವರು, ಮುಳವಾಡದ ಮಕ್ಕಳ ಸಾಹಿತಿ ಪ.ಗು. ಸಿದ್ದಾಪೂರ ರಚಿತ ಅಕ್ಕರೆ ಅಜ್ಜ ನಾವು ಮತ್ತು ಗಾಂಧಿ ತಾತ ಕವನ ಸಂಕಲನಗಳನ್ನು ಮತ್ತು ಶಿಕ್ಷಕ ಸಾಹಿತಿ ಎಸ್.ಎಸ್. ಸಾತಿಹಾಳ ರಚಿತ ಏನು ಚಂದವೋ ಮಕ್ಕಳ ಕವನ ಸಂಕಲನವನ್ನು ಪರಿಚಯ ಮಾಡಿದರು.

- Advertisement -

ಸಾನ್ನಿಧ್ಯ ವಹಿಸಿದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ವಿದ್ಯಾಚೇತನ ಪ್ರಕಾಶನದ ಹ.ಮ. ಪೂಜಾರ ಅವರು ಮಾತನಾಡಿದರು.

ವೈದ್ಯಕೀಯ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ ವಿಜಯಪುರ ವೈದ್ಯ ಎಸ್.ಬಿ. ಮಿರಜಕರ, ರೇಖಾ, ಚುಕ್ಕಿ ಚಿತ್ರಕಲೆಯಲ್ಲಿ ರಾಜ್ಯಮಟ್ಟದಲ್ಲಿ ಹೆಸರು ಮಾಡಿದ ಚಿತ್ರಕಲಾವಿದ ರಮೇಶ ಸಾಸನೂರ, 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಹಾಗೂ ಮಕ್ಕಳ ಸಾಹಿತಿ ರಾ.ಶಿ. ವಾಡೇದ ಅವರನ್ನು ಶ್ರೀಗಳು ಗೌರವಿಸಿದರು.

ಮಕ್ಕಳ ಸಾಹಿತಿ ಎಸ್.ಎಸ್. ಸಾತಿಹಾಳ ಸ್ವಾಗತಿಸಿದರು. ಎಸ್.ಕೆ. ಗುಗ್ಗರಿ ನಿರೂಪಿಸಿದರು. ರಾಚು ಕೊಪ್ಪಾ ವಂದಿಸಿದರು.

- Advertisement -
- Advertisement -

Latest News

ಮೂಡಲಗಿಯಲ್ಲಿ ಸಂಭ್ರಮದ ಈದ್ ಮಿಲಾದ್ ಆಚರಣೆ ; ಗಮನ ಸೆಳೆದ ಮಕ್ಕಾ ಮದೀನಾ ರೂಪಕಗಳು

ಮೂಡಲಗಿ: ಮಹಾನ್ ಮಾನವತಾವಾದಿ, ಮಹಾನ್ ಚಾರಿತ್ರ್ಯ ವಂತ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನದ ಅಂಗವಾಗಿ ಬಿಟಿಟಿ ಕಮೀಟಿ ಆಯೋಜನೆಯಲ್ಲಿ ಪಟ್ಟಣದ ಸಮಸ್ತ ಮುಸ್ಲಿಂ ಬಾಂಧವರು...
- Advertisement -

More Articles Like This

- Advertisement -
close
error: Content is protected !!
Join WhatsApp Group